ಕೊಲ್ಲಮೊಗ್ರ: ವಿಪತ್ತು ನಿರ್ವಹಣಾ ಘಟಕದಿಂದ ಕೊರೊನಾ ಬಾಧಿತರ ಮನೆ ಭೇಟಿ

ಕೊರೋನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ನಿರಂತರ ಕೊರೋನಾ ಬಾಧಿತರ ಬೇಟಿ ಮಾಡಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಆದೇ ರೀತಿ ಮೇ.27 ಮತ್ತು 28 ರಂದು ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಕೊಲ್ಲಮೊಗ್ರ ಗ್ರಾಮದ 5 ಮನೆಗಳಿಗೆ...

ಕೃಷಿಕರಿಗೆ 50 ಸಾವಿರದವರೆಗೆ ಬಡ್ಡಿ ರಹಿತ ಸಾಲ ನೀಡಲು ಗುತ್ತಿಗಾರು ಸಹಕಾರಿ ಸಂಘ ತೀರ್ಮಾನ

ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ವತಿಯಿಂದ ಕೊರೊನಾ ಸಂಕಷ್ಟ ದಲ್ಲಿರುವ ಕೃಷಿಕರಿಗೆ 50 ಸಾವಿರದ ವರೆಗೆ ಬಡ್ಡಿರಹಿತ ಸಾಲ ನೀಡಲು ನಿರ್ಧರಿಸಿದೆ ಎಂದು ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ತಿಳಿಸಿದ್ದಾರೆ ಕೊರೋನಾ ಲಾಕ್ ಡೌನ್ ಇದ್ದೂ ಕೃಷಿ ಚಟುವಟಿಕೆಗಳಿಗೆ ರಸಗೊಬ್ಬರ, ಗೊಬ್ಬರ ಹಾಕುವ ಸಮಯವಾಗಿರುವ ಕಾರಣ ಕೃಷಿಕರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಇತ್ತೀಚೆಗೆ ನಡೆದ ಸೊಸೈಟಿಯ ಆಡಳಿತ ಮಂಡಳಿಯ...
Ad Widget

ಕೃಷಿ ಉತ್ಪನ್ನಗಳ ಮೇಲೆ ಅಡಮಾನ ಸಾಲ ಹಾಗೂ ಕೊರೊನಾ ವಾರಿಯರ್ ಗಳಿಗೆ ಕಿಟ್ ವಿತರಣೆಗೆ ಚೊಕ್ಕಾಡಿ ಸಹಕಾರಿ ಸಂಘ ತೀರ್ಮಾನ

ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಸಭೆ ಮೇ.27 ರಂದು ನಡೆಯಿತು. ಕೋವಿಡ್ ತುರ್ತು ಸಂದರ್ಭದ ಹಿನ್ನೆಲೆಯಲ್ಲಿ ಸದಸ್ಯರ ಅನುಕೂಲಕ್ಕಾಗಿ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಅಮರ ಮುಡ್ನೂರು ಮತ್ತು ಅಮರ ಪಡ್ನೂರು ಗ್ರಾಮದಲ್ಲಿ ವಾಸ್ತವ್ಯವಿದ್ದು ಪಡಿತರ ಚೀಟಿ ಹೊಂದಿಲ್ಲದ ಎಲ್ಲಾ ಬಡವರಿಗೆ, ಕೊರೊನಾ ವಾರಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ಆಶಾಕಾರ್ಯಕರ್ತರಿಗೆ, ಶಾಲೆಗಳಲ್ಲಿ...

ಸುಳ್ಯದಲ್ಲಿ ಇಂದು 48 ಕೊರೊನ ಪಾಸಿಟಿವ್

ಸುಳ್ಯ ತಾಲೂಕಿನಲ್ಲಿ ಕೊರೊನಾ ಇಳಿಕೆ ಕಂಡುಬಂದಿದ್ದು ಇಂದು 48 ಪಾಸಿಟಿವ್ ಕಂಡುಬಂದಿದೆ. ನಿನ್ನೆ 41 ಕ್ಕೆ ಇಳಿಕೆ ಕಂಡುಬಂದಿತ್ತು. ತಾಲೂಕಿನಲ್ಲಿ ಒಟ್ಟು 439 ಪ್ರಕರಣ ಸಕ್ರೀಯವಾಗಿದೆ.

18 ರಿಂದ 44 ವರ್ಷದೊಳಗಿನ ವಿಕಲ ಚೇತನರಿಗೆ ಮೇ 28-29ರಂದು ಕೋವಿ ಶೀಲ್ಡ್ ಲಸಿಕೆ

ತಾಲೂಕಿನ 18 ರಿಂದ 44 ವರ್ಷದೊಳಗಿನ ವಿಕಲ ಚೇತನರಿಗೆ ಮೇ 28 ಮತ್ತು 29ರಂದು ಕೋವಿ ಶೀಲ್ಡ್ ಲಸಿಕೆ ನೀಡಲಾಗುವುದು ಸುಳ್ಯ ತಾಲೂಕು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ತಾಲೂಕಿನ ವಿವಿದೆಡೆ ಆಯ್ದ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು ಫಲಾನುಭವಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಮಾಹಿತಿ ನೀಡಲಾಗಿದೆ. ಅಜ್ಜಾವರ ಮತ್ತು ಮಂಡೆಕೋಲು ಗ್ರಾಮದ...

ಕೊಕ್ಕೋ ರೈತರಿಗಿಂದು ಆಶಾದಾಯಕ ಬೆಳೆ – ಕೃಷಿ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ್ದಾರೆ : ಗದಾಧರ ಮಲ್ಲಾರ

https://youtu.be/TWfQYgfsIvs ಅತೀ ಹೆಚ್ಚು ಕೊಕ್ಕೋ ಬೆಳೆ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಸುಳ್ಯವೂ ಒಂದು. ರೈತರ ಪಾಲಿಗಿಂದು ಒಂದು ಆಶಾದಾಯಕ ಬೆಳೆಯಾಗಿ ನಿರಂತರ ಆದಾಯ ಒದಗಿಸುತ್ತಿದೆ. ಕೊಕ್ಕೋ ಕೃಷಿ ಮೊದಲು ಪ್ರಾರಂಭಿಸಿದವರಲ್ಲಿ ಕೀಲಾರ್ ಗೋಪಾಲಕೃಷ್ಣಯ್ಯ, ಕುರುಂಜಿ ವಿಶ್ವನಾಥ ಗೌಡ, ಎಂ.ಎಂ.ಗಿರಿ ಮಲ್ಲಾರ, ಎಂ.ಎಚ್.ಗೌಡ ಮಲ್ಲಾರ, ಮುಂಡಾಜೆ ಹೂವಪ್ಪ ಮೊದಲಿಗರಾಗಿ ಕಾಣುತ್ತಾರೆ. 1964 ರಲ್ಲಿ ದಿ.ಗಿರಿ ಮಲ್ಲಾರ ಕೃಷಿ ಪ್ರಾರಂಭಿಸಿದಾಗ...

ಸುಳ್ಯ ತಾಲೂಕಿನಲ್ಲಿ ಇಂದು 46 ಪಾಸಿಟಿವ್

ಸುಳ್ಯ ತಾಲೂಕಿನಲ್ಲಿ ಇಂದು 46 ಕೊರೊನಾ ಪಾಸಿಟಿವ್ ಕಂಡುಬಂದಿದೆ. ನಿನ್ನೆ 54 ಕ್ಕೆ ಏರಿಕೆಯಾಗಿತ್ತು. ತಾಲೂಕಿನಲ್ಲಿ ಒಟ್ಟು 424 ಪ್ರಕರಣ ಸಕ್ರೀಯವಾಗಿದೆ.

ಮರ ಬಿದ್ದು ಮಾವಿನಕಟ್ಟೆ- ಕಂದ್ರಪ್ಪಾಡಿ ರಸ್ತೆ ಬಂದ್ – ಸ್ಥಳೀಯರಿಂದ ತೆರವು

ಮಾವಿನಕಟ್ಟೆ ಕಂದ್ರಪ್ಪಾಡಿ ರಸ್ತೆಗೆ ಪಾರೆಪ್ಪಾಡಿ ಬಳಿ ಮೇ. 26 ರಂದು ಸಂಜೆ ವೇಳೆಗೆ ಮರಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಕೂಡ ನೆಲಕ್ಕುರಿದ್ದವು. ರಸ್ತೆ ಸಂಚಾರ ಬಂದ್ ಆಗಿರುವುದನ್ನು ಸ್ಥಳೀಯರು ಸೇರಿ ತೆರವುಗೊಳಿಸಿದರು.

ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಚಿವ ಅಂಗಾರ ಭೇಟಿ -ಗ್ರಾಮೀಣರಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ವಿತರಣೆಗೆ ಕ್ರಮ

ಈ ಹಿಂದೆ ಲಸಿಕೆಗಳು ಅಧಿಕವಿರುವಾಗ ಜನತೆ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕಿದರು.ಇದೀಗ ಅಧಿಕ ಪ್ರಮಾಣದಲ್ಲಿ ಬೇಡಿಕೆ ಇರುವುದರಿಂದ ಪೂರೈಕೆ ಮಾಡುವುದು ಕಷ್ಟವಾಗಿದೆ. ಮುಂದಿನ ಒಂದು ವಾರದ ಒಳಗೆ ಅಧಿಕ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಲಸಿಕೆ ವಿತರಣೆಯಾಗಲಿದೆ. ಈ ಮೂಲಕ ಸರ್ವರಿಗೂ ಲಸಿಕೆ ದೊರಕುವಂತೆ ಮಾಡಲು ಸರಕಾರ ಕಾರ್ಯಪ್ರವೃತ್ತವಾಗಿದೆ. ಸುಳ್ಯ ವಿಧಾನ ಸಭಾ ಕ್ಷೇತ್ರವು ಗ್ರಾಮೀಣ ಪ್ರದೇಶಗಳಿಂದ ಕೂಡಿರುವ...

ಕೊಲ್ಲಮೊಗ್ರ : ತುರ್ತು ಸೇವೆಗೆ ವಾಹನ ಮೀಸಲು – ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಅನುಮತಿ ಪತ್ರ ಹಾಗೂ 10 ಪಿ.ಪಿ.ಇ ಕಿಟ್ ಹಸ್ತಾಂತರ

ಕೋವಿಡ್-19 ವೈರಸ್ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಕೊಲ್ಲಮೊಗ್ರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರ ಕೋವಿಡ್-19 ಹಾಗೂ ಇತರ ವೈಧ್ಯಕೀಯ ತುರ್ತು ಸೇವೆಗಳಿಗಾಗಿ ಕಲ್ಮಕಾರು ಗ್ರಾಮಪಂಚಾಯತ್ ಸದಸ್ಯರಾದ ಪುಷ್ಪರಾಜ್ ಪಡ್ಪು ಅವರ ವಾಹನವನ್ನು ಮೀಸಲಿರಿಸಲಾಗಿದೆ. ಈ ವಾಹನವು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು ಇದರ ನಿರ್ವಹಣೆಯನ್ನು ಸೇವಾಭಾರತಿ ಕೊಲ್ಲಮೊಗ್ರ ಹಾಗೂ ಕೋವಿಡ್-19 ಕಾರ್ಯಪಡೆ ಕೊಲ್ಲಮೊಗ್ರ ನಿರ್ವಹಿಸಲಿದೆ....
Loading posts...

All posts loaded

No more posts

error: Content is protected !!