Ad Widget

ವಳಲಂಬೆ : ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ, ಅಪಾಯದಿಂದ ಪಾರು

ಸುಳ್ಯದಿಂದ ಗುತ್ತಿಗಾರು ಕಡೆಗೆ ಬರುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಹೊಡೆದ ಘಟನೆ ವಳಲಂಬೆ ದೇವಸ್ಥಾನದ ಬಳಿ ಇಂದು ನಡೆದಿದೆ.ಅಪಘಾತ ರಭಸಕ್ಕೆ ಹೆಚ್ ಟಿ ವಿದ್ಯುತ್ ಕಂಬ ಮುರಿದಿದೆ. ಸಮೀಪದಲ್ಲಿ ಹೊಳೆಯಿದ್ದು ಕಾರಿನಲ್ಲಿದ್ದ ಕೊಲ್ಲಮೊಗ್ರ ದ ಪ್ರಯಾಣಿಕರಿಗೆ ಯಾವುದೇ ಹಾನಿಯಾಗದೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಕಳಂಜ : ಕೋವಿಡ್ ತಪಾಸಣಾ ಶಿಬಿರ

ದ.ಕ. ಜಿಲ್ಲಾ ಪಂಚಾಯತ್ ಆದೇಶದಂತೆ ಆರೋಗ್ಯ ಇಲಾಖೆಯ ಸಹಕಾರದಲ್ಲಿ ಕಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಿಗಾಗಿ ವಿಶೇಷ ಕೋವಿಡ್ ತಪಾಸಣಾ ಶಿಬಿರವನ್ನು ಅ.14 ರಂದು ವಿಷ್ಣುನಗರ ಕಳಂಜದ ಅಕ್ಷರ ಕರಾವಳಿ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಯಿತು. ಶಿಬಿರದಲ್ಲಿ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಪಾಲ್ಗೊಂಡಿದ್ದಾರೆ.
Ad Widget

ಕೃಷಿ ಮಾರುಕಟ್ಟೆ

ಕ್ಯಾಂಪ್ಕೋ ನಿಯಮಿತ ಮಂಗಳೂರು ಶಾಖೆ  : ಸುಳ್ಯ (14.10.2020, ಬುಧವಾರ) *ಅಡಿಕೆ ಧಾರಣೆ*ಹೊಸ ಅಡಿಕೆ          235 - 300ಹಳೆ ಅಡಿಕೆ             315 - 380ಡಬಲ್ ಚೋಲ್     315 - 400 ಹೊಸ ಫಠೋರ     175 - 235ಹಳೆ ಫಠೋರ        220 - 315 ಹೊಸ ಉಳ್ಳಿಗಡ್ಡೆ    110 - 175ಹಳೆ ಉಳ್ಳಿಗಡ್ಡೆ       150 - 240 ಹೊಸ...

ಪಂಜ : ವಿಪತ್ತು ನಿರ್ವಹಣಾ ಘಟಕದಿಂದ ಶ್ರಮಸೇವೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ಘಟಕದ ಪಂಜ ವಲಯದ ಯುವಕರ ತಂಡವು ಅ.13 ರಂದು ಕೂತ್ಕುಂಜ ಗ್ರಾಮದ ಬಸ್ತಿಕಾಡು ಎಂಬಲ್ಲಿನ ಕಿಂಡಿ ಅಣೆಕಟ್ಟು ನಡುವೆ ಸಿಲುಕಿದ್ದ ಮರದ ದಿಮ್ಮಿಗಳು ಹಾಗೂ ಕಸವನ್ನು ಶ್ರಮದಾನದ ಮೂಲಕ ತೆಗೆದು ಸ್ವಚ್ಛ ಗೊಳಿಸಿದರು. ಶ್ರಮದಾನದಲ್ಲಿ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ವಿಶ್ವನಾಥ ಸಂಪ, ಆಶಿತ್‌ ಕಲ್ಲಾಜೆ,...

ರಾಜ್ಯ ಮಟ್ಟದ ಕೃತಿ ಪರಿಚಯ ಸ್ಪರ್ಧೆ – ಕಡಬದ ಸಮ್ಯಕ್ತ್ ಜೈನ್ ಪ್ರಥಮ

ಕರೋನಾ ಹಾವಳಿಯಿಂದಾಗಿ ಆದ ಸಮಯ ವ್ಯರ್ಥ ಮಾಡದೇ ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡು ಅಂತರರಾಜ್ಯ ಮಟ್ಟದಲ್ಲಿ ಯುವ ಪ್ರತಿಭೆ ಸಮ್ಯಕ್ತ್ ಜೈನ್ ಸಾಧನೆಗೈಯುತ್ತಿದ್ದಾರೆ ಇದುವರೆಗೆ ಮೂರು ಕವನಸಂಕಲನವನ್ನು ಬರೆದು ಪ್ರಕಟಗೊಳಿಸಿ , ಸಾಹಿತ್ಯಿಕ ಚಟುವಟಿಕೆಯಲ್ಲಿ ತಲ್ಲೀನರಾಗಿರುವ ಸಮ್ಯಕ್ತ್ ಜೈನ್ ಇದೀಗ ಮತ್ತೊಂದು ಸಾಧನೆಯ ಗರಿ ಸೇರ್ಪಡೆಗೊಂಡಿದೆ. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಇತ್ತೀಚೆಗೆ ರಾಜ್ಯ ಮಟ್ಟದ ಮಕ್ಕಳ...

ತುಳುನಾಡಿನ ದೈವಾರಾಧನೆ, ನೇಮ ಧಾರ್ಮಿಕ ಕಾರ್ಯಕ್ಕೆ ಅನುಮತಿ ಸಿಎಂ ಆದೇಶ

ತುಳುನಾಡಿನ ದೈವಾರಾಧನೆ, ನೇಮೋತ್ಸವ, ಮಾರಿ ಪೂಜೆ, ಮೊದಲಾದ ಧಾರ್ಮಿಕ ಕಾರ್ಯಕ್ಕೆ ಅನುಮತಿ ನೀಡಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸರ್ಕಾರದ ಮುಖ್ಯಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ. ಈ ಸಂಬಂಧ ಉಡುಪಿ ಶಾಸಕ ರಘುಪತಿ ಭಟ್ ಈ ಹಿಂದೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದು, ಈ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು 100 ಜನರ ಮಿತಿಯಲ್ಲಿ ತುಳುನಾಡಿನಲ್ಲಿ ಧಾರ್ಮಿಕ ಕಾರ್ಯ ನಡೆಸಲು ಅನುಮತಿ...

ಸಂಪತ್ ಕೊಲೆ ಪ್ರಕರಣ : ಕೋವಿ,ಕಾರು ನೀಡಿದವರಿಗೂ ನ್ಯಾಯಾಂಗ ಬಂಧನ

ಕಳಗಿ ಬಾಲಚಂದ್ರರ ಹತ್ಯೆ ಆರೋಪಿ ಸಂಪತ್ ಕುಮಾರ್ ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಕೊಲೆ ಆರೋಪಿಗಳಿಗೆ ಕೋವಿ ಕೊಟ್ಟ ಇಬ್ಬರು ಹಾಗೂ ಕಾರು ಕೊಟ್ಟ ಒಬ್ಬರನ್ನು ಬಂಧಿಸಿದ ಪೋಲೀಸರು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆ ಮೂವರಿಗೂ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಒಪ್ಪಿಸಿದೆ. ಸಂಪತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಲ್ಲುಗುಂಡಿಯ ಮನು, ಬಿಪಿನ್, ಕಾರ್ತಿಕ್, ಮನೋಜ್,...

ಪೆರುವಾಜೆ : ವಿಪತ್ತು ನಿರ್ವಹಣಾ ಘಟಕದಿಂದ ಶ್ರಮದಾನ

ರಾಷ್ಟ್ರೀಯ ವಿಪತ್ತು ಪರಿಹಾರ ಸೇವಾ ದಿನದ ಅಂಗವಾಗಿ ಬೆಳ್ಳಾರೆ ವಲಯ ವಿಪತ್ತು ನಿರ್ವಹಣಾ ಘಟಕದಿಂದ ಅ.13 ರಂದು ಶ್ರಮದಾನ ನಡೆಯಿತು.ಪೆರುವಾಜೆಯ ಶ್ರೀ ಜಲದುರ್ಗಾದೇವಿ ದೇವಸ್ಥಾನದ ಸುತ್ತಮುತ್ತ ಸ್ವಚ್ಛತಾ ಕಾರ್ಯಗೈಯುವ ಮೂಲಕ ಶ್ರಮದಾನ ನಡೆಸಲಾಯಿತು.

ಸಂಪಾಜೆಯಲ್ಲಿ ಚರಂಡಿ ಕುಸಿತ : ಹೆದ್ದಾರಿ ಹಾಗೂ ಮನೆ ಆವರಣಕ್ಕೆ ಹಾನಿಯಾಗುವ ಮೊದಲೇ ಕ್ರಮಕ್ಕೆ ಜಿ.ಕೆ. ಹಮೀದ್ ಒತ್ತಾಯ

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ ಬಳಿ ಮಳೆಗೆ ಒಳ ಚರಂಡಿ ಕುಸಿದು ಹೆದ್ದಾರಿ ಹಾಗೂ ಮನೆ ಆವರಣ ಕುಸಿಯುವ ಭೀತಿ ಉಂಟಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ತುರ್ತು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಪಾಜೆ ಗ್ರಾ.ಪಂ‌. ಮಾಜಿ ಅಧ್ಯಕ್ಷ ಹಮೀದ್ ಜಿ. ಕೆ. ಒತ್ತಾಯಿಸಿದ್ದಾರೆ.

ಕಟ್ಟ : ವಿಪತ್ತು ನಿರ್ವಹಣೆ ಘಟಕದಿಂದ ಶ್ರಮದಾನ

ರಾಷ್ಟ್ರೀಯ ವಿಪತ್ತು ತಡೆ ದಿನಾಚಣೆಯ ಅಂಗವಾಗಿ ಸುಬ್ರಮಣ್ಯ ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿಪತ್ತು ನಿರ್ವಹಣೆ ಘಟಕದ ಶ್ರಮದಾನ ನಡೆಯಿತು. ಕಟ್ಟ ದೇವಸ್ಥಾನದ ಆವರಣ ಸ್ವಚ್ಛತೆ ಹಾಗೂ ಮಳೆ ನೀರಿಗೆ ಹಾನಿಗೊಳಗಾಗಿದ್ದ ಕಟ್ಟ ಕೊಲ್ಲಮೊಗ್ರು ಸಂಪರ್ಕ ರಸ್ತೆಯ ಮೈಲಾ ಕಿರು ಸೇತುವೆ ಯನ್ನು ಸಂಚಾರ ಯೋಗ್ಯವನ್ನಾಗಿಸುವಲ್ಲಿ ಶ್ರಮಸೇವೆ ನಡೆಸಿದರು. ಸಂಯೋಜಕರಾದ ಸತೀಶ್ ಟಿ.ಎನ್.,...
Loading posts...

All posts loaded

No more posts

error: Content is protected !!