ಬೊಳುಬೈಲು : ನವಚೇತನ ಯುವಕ ಮಂಡಲದ ವತಿಯಿಂದ ಸ್ವಚ್ಛತಾ ಆಂದೋಲನ

ನವಚೇತನ ಯುವಕ ಮಂಡಲ ಮತ್ತು ಜಾಲ್ಸುರು ಗ್ರಾಮ ಪಂಚಾಯತ್ ಸಹಯೋಗದಲ್ಲಿ ಬೊಳುಬೈಲು, ಬೈತಡ್ಕ, ಕೋನಡ್ಕಪದವು, ವಿನೋಬನಗರ, ಮಾವಿನಕಟ್ಟೆ, ಅಡ್ಕಾರು, ಜಾಲ್ಸುರು, ಸೋಣoಗೇರಿ, ಪೈಚಾರು ಬಸ್ಸು ಪ್ರಯಾಣಿಕರ ತಂಗುದಾಣ ಮತ್ತು ರಸ್ತೆ ಸೂಚನಾ ಫಲಕಗಳ ಸ್ವಚ್ಛತೆ ನಡೆಸಿ ಸ್ಯಾನಿಟೈಸ್ ಮಾಡಿ ಸುತ್ತಮುತ್ತ ಕಸಕಡ್ಡಿಗಳನ್ನು ತೆಗೆದು ಸ್ವಚ್ಛತೆ ಕಾರ್ಯಕ್ರಮವನ್ನು ನಡೆಸಲಾಯಿತು.ಬೊಳುಬೈಲು ಕಿರಿಯ ಪ್ರಾಥಮಿಕ ಶಾಲೆಯ ಆವರಣ ಸ್ವಚ್ಛತೆ ನಡೆಸಲಾಯಿತು....

ಚತ್ರಪ್ಪಾಡಿ : ಶ್ರಮದಾನ- ರಸ್ತೆ ದುರಸ್ತಿ

ಗುತ್ತಿಗಾರು ಗಾಮ ಪಂಚಾಯತ್ ಗೆ ಒಳಪಟ್ಟ ಚತ್ರಪ್ಪಾಡಿ - ಹಾಲೆಮಜಲು ರಸ್ತೆಯಿಂದ ಚತ್ರಪ್ಪಾಡಿಯ ಸ್ವಾಮಿ ಕೊರಗಜ್ಜನ ಸನ್ನಿಧಿಗೆ ಹೋಗುವ ರಸ್ತೆಯ ಶ್ರಮದಾನ ಊರವರಿಂದ ಮಾಡಲಾಯಿತು.ಈ ಶ್ರಮದಾನದಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಜತ್ತಪ್ಪ ಚತ್ರಪ್ಪಾಡಿ, ರಾಮ ಚತ್ರಪ್ಪಾಡಿ, ಹಾಗೂ ಚತ್ರಪ್ಪಾಡಿ ಕೊರಗಜ್ಜ ದೈವಸ್ಥಾನದ ಪಾತ್ರಿ ಗಂಗಾಧರ ಚತ್ರಪ್ಪಾಡಿ, ಸ್ಥಳೀಯರಾದ ಉಮೇಶ ಶಿಬಾಜೆ, ಪೊಡಿಯ ಚತ್ರಪ್ಪಾಡಿ,...
Ad Widget

ವಸತಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಆನ್ಲೈನ್ ಪ್ರಕ್ರಿಯೆ ಆರಂಭ

ರಾಜ್ಯದ ವಿವಿಧ ವಸತಿ ಶಾಲೆಗಳಲ್ಲಿ 6 ನೇ ತರಗತಿಗೆ ಪ್ರವೇಶ ಪಡೆಯಲು ಇಲಾಖೆ ಆನ್ಲೈನ್ ಪ್ರಕ್ರಿಯೆ ಆರಂಭಿಸಿದ್ದು ಜು.28 ರಿಂದ ಆಗಸ್ಟ್ 10 ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸೆಪ್ಟೆಂಬರ್16 ರಂದು ಪ್ರವೇಶ ಪರೀಕ್ಷೆ ನಡೆಯಲಿದೆ.

ಸುಳ್ಯ ವನಜ ರಂಗಮನೆ ಪ್ರಶಸ್ತಿಗೆ ಯಕ್ಷವಾಗ್ಮಿ ಜಬ್ಬಾರ್ ಸಮೊ ಸಂಪಾಜೆ ಆಯ್ಕೆ

ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ (ರಿ.) ಸುಳ್ಯ ಇದರ ಆಶ್ರಯದಲ್ಲಿ,ರಂಗನಿರ್ದೇಶಕ ಜೀವನ್ ರಾಂ ಸುಳ್ಯರಮಾತೃಶ್ರೀ ಶ್ರೀಮತಿ ವನಜಾಕ್ಷಿ ಜಯರಾಮ ನೆನಪಿನಲ್ಲಿ ನೀಡುವ 'ವನಜ ರಂಗಮನೆ ಪ್ರಶಸ್ತಿ'ಗೆ ಈ ವರ್ಷ ಹಿರಿಯ ಯಕ್ಷಗಾನ ಅರ್ಥದಾರಿ ಜಬ್ಬಾರ್ ಸಮೊ ಸಂಪಾಜೆ ಅವರನ್ನು ಆಯ್ಕೆ ಮಾಡಲಾಗಿದೆ.ಕಳೆದ 35 ವರ್ಷಗಳಿಂದ ನಿರಂತರವಾಗಿ ಯಕ್ಷಗಾನದ ಅರ್ಥದಾರಿಯಾಗಿ,ವೇಷದಾರಿಯಾಗಿತನ್ನನ್ನು ತಾನು ತೊಡಗಿಸಿಕೊಂಡಿರುವ ಜಬ್ಬಾರ್ ಸಮೊ ಅವರು...

ಪೆರುವಾಜೆ ದೇವಸ್ಥಾನದಲ್ಲಿ ಗಣಪತಿ ಹೋಮ ಮತ್ತು ರಾತ್ರಿ ದುರ್ಗಾ ಪೂಜೆ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಆಷಾಢ ತಿಂಗಳ ಬೆಳಿಗ್ಗೆ ಗಣಪತಿ ಹೋಮ ಮತ್ತು ರಾತ್ರಿ ದುರ್ಗಾ ಪೂಜೆ ಪ್ರಾರಂಭಗೊಂಡಿದ್ದು ಸೆ.2 ರ ತನಕ ಪೂಜೆ ನಡೆಯಲಿದೆ.ಸೇವೆ ಮಾಡಿಸುವ ಭಕ್ತಾದಿಗಳು ದೇವಾಲಯದ ಕಛೇರಿಯಲ್ಲಿ (ಮೊಬೈಲ್: 9902050424) ವಿಚಾರಿಸಬೇಕಾಗಿದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಪದ್ಮನಾಭಶೆಟ್ಟಿ ಪೆರುವಾಜೆ ತಿಳಿಸಿದ್ದಾರೆ.

ಮುಕ್ಕೂರು : ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಅಭಿಯಾನಕ್ಕೆ ಚಾಲನೆ – ಬೆಳೆ ದಾಖಲೀಕರಣ ಅತ್ಯಗತ್ಯ ‌: ಮೋಹನ್ ನಂಗಾರು

ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಕಾಪು ಕೃಷಿ ಕ್ಷೇತ್ರದ ಸಹಯೋಗದಲ್ಲಿ ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಅಭಿಯಾನ ಕಾರ್ಯಕ್ರಮವು ಜು.24 ರಂದು ನಡೆಯಿತು. ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಮೋಹನ್ ನಂಗಾರು ಮಾತನಾಡಿ, ಪಹಣಿ ಪತ್ರದಲ್ಲಿ ಬೆಳೆ ವಿವರ ದಾಖಲಾತಿಯಾಗಿದ್ದರೆ ಮಾತ್ರ ಸರಕಾರದ ಸವಲತ್ತು ಪಡೆಯಲು ಸಾಧ್ಯವಿದೆ. ಈ...

ಜು.28: ಬೆಳ್ಳಾರೆ ರೋಟರಿ ಕ್ಲಬ್ ಪದಗ್ರಹಣ – ಅಧ್ಯಕ್ಷರಾಗಿ ಪದ್ಮನಾಭ ಬೀಡು

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ ನೂತನ ಅಧ್ಯಕ್ಷರಾಗಿ ರೊ|ಪದ್ಮನಾಭ ಬೀಡು ಅಯ್ಕೆಯಾಗಿದ್ದಾರೆ. ನಿಕಟಪೂರ್ವಾಧ್ಯಕ್ಷರಾಗಿ ರೊ| ಮೋನಪ್ಪ ತಂಬಿನಮಕ್ಕಿ, ಕಾರ್ಯದರ್ಶಿಯಾಗಿ ರೊ| ವಿನಯಕುಮಾರ್, ಕೋಶಾಧಿಕಾರಿಯಾಗಿ ರೊ| ಎ.ಕೆ. ಮಣಿಯಾಣಿ, ನಿಯೋಜಿತ ಅಧ್ಯಕ್ಷರಾಗಿ ರೊ| ಕೇಶವಮೂರ್ತಿ, ಸಾರ್ಜೆಂಟ್ ಅಟ್ ಆರ್ಮ್ಸ್ ಆಗಿ ರೊ| ರಾಜಗೋಪಾಲ್, ಸಂಘ ಸೇವೆ ನಿರ್ದೇಶಕರಾಗಿ ರೊ| ಶಶಿಧರ್, ಸಮುದಾಯ ಸೇವೆ ನಿರ್ದೇಶಕರಾಗಿ ರೊ|...

ಬೆಳ್ಳಾರೆ ಫಿದಾ ಫಾತಿಮಳಿಗೆ ಡಿಸ್ಟಿಂಕ್ಷನ್

ಪುತ್ತೂರು: ಮರ್ಕಝುಲ್ ಹುದಾ ವುಮೆನ್ಸ್ ಪಿ.ಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಮಾಡ್ನೂರು ನಿವಾಸಿ ಫಿದಾ ಫಾತಿಮಾ 518 ಅಂಕ ಪಡೆದು ಡಿಸ್ಟಿಂಕ್ಷನ್ ಆಗಿ ಹೊರ ಹೊಮ್ಮಿದ್ದಾಳೆ..ಈಕೆ ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಬೆಳ್ಳಾರೆ ಇವರ ಅಕ್ಕನ ಮಗಳು ಹಾಗೂ ಮಾಡ್ನೂರು ಕೊಳಂಬೆ ಖಾದರ್ ಮತ್ತು ನಸೀಮಾ ಬೆಳ್ಳಾರೆ ದಂಪತಿಗಳ ಪುತ್ರಿ

47 ವರ್ಷಗಳಿಂದ ಕತ್ತಲೆಯಲ್ಲಿದ್ದ ಕುಟುಂಬಕ್ಕೆ ಬೆಳಕು ನೀಡಿದ ಸೆಲ್ಕೋ ಸಂಸ್ಥೆ – ಇದು ಅಮರ ಸುದ್ದಿ ವರದಿಯ ಫಲಶ್ರುತಿ

ಬಳ್ಪ ಗ್ರಾಮ ದೇಶದಲ್ಲೆ ಗುರುತಿಸಿದ ಆದರ್ಶ ಗ್ರಾಮ. ಹೆಸರಿನಂತ ಗ್ರಾಮವಾಗದೇ ಕುಗ್ರಾಮವಾಗಿ ಉಳಿದಿದೆ. ಸಭೆ ಸಮಾರಂಭಗಳಿಗೆ ಸೀಮಿತವಾಯಿತೆ ಹೊರತು ಬಳ್ಪ ಗ್ರಾಮ ಆದರ್ಶ ಗ್ರಾಮವಾಗಿ ಕಾಣಲು ಸಾಧ್ಯವಾಗಿಲ್ಲ. ಸಾಧ್ಯವಾಗಲೂ ಇನ್ನೆಷ್ಟೂ ವರ್ಷ ಬೇಕೋ ?ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಸಿಗದೇ ಕತ್ತಲೆಯಲ್ಲಿದ್ದ ಮನೆಯ ಬಗ್ಗೆ ಅಮರ ಸುದ್ದಿ ಪತ್ರಿಕೆಯಲ್ಲಿ "47 ವರ್ಷಗಳಿಂದ ಕತ್ತಲೆಯಲ್ಲಿ ಬದುಕುತ್ತಿರುವ ಶೋಚನೀಯ ಬದುಕು"...

ಜು.26 : ಬಿಜೆಪಿ ಸುಳ್ಯ ಮಂಡಲದ ವಿಶೇಷ ಕಾರ್ಯಕಾರಣಿ ಸಭೆ

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ವಿಶೇಷ ಕಾರ್ಯಕಾರಣಿ ಸಭೆಯು ಜುಲೈ 26 ರಂದು ಸುಳ್ಯದ ಕೊಡಿಯಾಲಬೈಲು ಗೌಡ ಸಮುದಾಯ ಭವನ ದಲ್ಲಿ ಜರುಗಲಿದೆ. ಈ ಸಭೆಗೆ ಮಂಡಲದ ಪದಾಧಿಕಾರಿಗಳು, ಸದಸ್ಯರು , ವಿಶೇಷ ಆಹ್ವಾನಿತರು, ಮಂಡಲದ ಮೋರ್ಚಾಗಳ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿಗಳು, ಮಂಡಲದ ಪ್ರಕೋಷ್ಠಗಳ ಸಂಚಾಲಕ ಸಹ ಸಂಚಾಲಕರು, ರಾಜ್ಯದ ಪದಾಧಿಕಾರಿಗಳು, ರಾಜ್ಯ ಕಾರ್ಯಕಾರಿಣಿ...
Loading posts...

All posts loaded

No more posts

error: Content is protected !!