ಸ್ವಾರ್ಥಕ್ಕಾಗಿ ಸಮಾಜಕ್ಕೆ ಕೇಡು ಬಯಸಿ, ಗುತ್ತಿಗಾರಿನ ಸ್ವಾಭಿಮಾನಕ್ಕೆ ಧಕ್ಕೆ ತರುವವರ ವಿರುದ್ಧ ಒಗ್ಗಟ್ಟಾಗಿ ಹೋರಾಟಕ್ಕೆ ಸಿದ್ಧ : ಭರತ್ ಮುಂಡೋಡಿ

ವೈಯಕ್ತಿಕ ದ್ವೇಷವನ್ನಿಟ್ಟುಕೊಂಡು ತನ್ನ ಸ್ವಾರ್ಥಕ್ಕಾಗಿ ಸಮಾಜಕ್ಕೆ ಊರಿಗೆ ಕೇಡು ಬಯಸುವವರಿಂದ ಗುತ್ತಿಗಾರಿನ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಒಗ್ಗಟ್ಟಾಗಿ ಈ ಮೊದಲು ಹೋರಾಟ ನಡೆಸಿದ್ದೇವೆ. ಇನ್ನೂ ಅಂತಹ ಸಂದರ್ಭ ಬಂದಾಗ ರಾಜಕೀಯ ರಹಿತ ಹೋರಾಟಕ್ಕೆ ಸಿದ್ಧ ಎಂದು ಮಾಜಿ ಜಿ.ಪಂ.ಸದಸ್ಯ ಭರತ್ ಮುಂಡೋಡಿ ಹೇಳಿದರು.ಅವರು ಇಂದು ಗುತ್ತಿಗಾರಿನಲ್ಲಿ ನಡೆದ ನಾಗರಿಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಗುತ್ತಿಗಾರು ಗ್ರಾಮವನ್ನು...

ಸಚಿವ ಎಸ್. ಅಂಗಾರರಿಂದ ಮೇದಿನಡ್ಕದಲ್ಲಿ ನೂತನ ಅಂಗನವಾಡಿ ಉದ್ಘಾಟನೆ

ದೇಶದ ಏಳಿಗೆಗೆ ಜನರ ಸಹಕಾರ ಅಗತ್ಯವಾಗಿದೆ. ಅವಶ್ಯಕವಾಗಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಸರಕಾರದ ಗಮನಕ್ಕೆ ತರಬೇಕು. ಆಗ ಅದನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬುದರ ಕುರಿತು ಕ್ರಮ ಕೈಗೊಳ್ಳಲಾಗುವುದು. ಅಭಿವೃದ್ಧಿಯನ್ನು ಹೇಗೆ ಮಾಡಬೇಕು ಎಂಬುದರ ಸ್ಪಷ್ಟ ಅರಿವು ನಮಗಿದೆ ಎಂದು ಸಚಿವ ಎಸ್.ಅಂಗಾರ ಅವರು ಹೇಳಿದರು.ಅಜ್ಜಾವರದ ಮೇದಿನಡ್ಕದಲ್ಲಿ ಆ. 29 ರಂದು ನೂತನ ಅಂಗನವಾಡಿ ಯನ್ನು...
Ad Widget

ಸಚಿವರಿಂದ ಗೃಹ ರಕ್ಷಕದಳ ಕಛೇರಿಗೆ ಕಂಪ್ಯೂಟರ್ ಹಸ್ತಾಂತರ – ಮುರಲಿಮೋಹನ ಚೂಂತಾರು, ಸಚಿವ ಅಂಗಾರ ಹಾಗೂ ಗಿರೀಶ್ ಭಾರದ್ವಾಜರಿಗೆ ಗೃಹರಕ್ಷಕ ದಳದಿಂದ ಗೌರವಾರ್ಪಣೆ

ಗೃಹರಕ್ಷಕ ದಳದ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಮುಖ್ಯ ಕಮಾಂಡರ್ ಮುರಲಿ ಮೋಹನ ಚೋಂತಾರು, ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್ ಹಾಗೂ ದ.ಕ. ಉಸ್ತುವಾರಿ ಸಚಿವ ಎಸ್.ಅಂಗಾರ ಅವರನ್ನು ಗೃಹರಕ್ಷಕ ದಳದ ವತಿಯಿಂದ ಸಮ್ಮಾನಿಸಲಾಯಿತು. ಸಚಿವ ಅಂಗಾರರು ಸುಳ್ಯ ಹಾಗೂ ಸುಬ್ರಹ್ಮಣ್ಯದ ಗೃಹರಕ್ಷಕ ದಳ ಕಚೇರಿಗೆ ಕಂಪ್ಯೂಟರ್ ಹಸ್ತಾಂತರಿಸಿದರು.

ಪೂರ್ಣಚಂದ್ರ ದೇರಪ್ಪಜ್ಜನಮನೆ ನಿಧನ

ನಾಲ್ಕೂರು ಗ್ರಾಮದ ದೇರಪ್ಪಜ್ಜನ ಮನೆ ಡಿ.ಎಚ್. ಪೂರ್ಣಚಂದ್ರ ರವರು ಮೆದುಳಿನ ರಕ್ತಸ್ರಾವದಿಂದ ಆ.27 ರಂದು ಪೂನಾದಲ್ಲಿ ನಿಧನರಾದರು. ಪೂನಾದ ಖಾಸಗಿ ಕಂಪೆನಿಯಲ್ಲಿ ಹಲವಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಲತಾ, ಪುತ್ರ ಶಮಂತ್, ಪುತ್ರಿ ವಿಂಧ್ಯಾ, ಸಹೋದರ, ಸಹೋದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಕಮಿಲ : ಪಂಚಶ್ರೀ ಪ್ರಗತಿಬಂಧು ಸಂಘ ರಚನೆ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸುಳ್ಯ ತಾಲೂಕು ಗುತ್ತಿಗಾರು ವಲಯದ ಕಮಿಲ ಒಕ್ಕೂಟದ ಆಜಡ್ಕ ಎಂಬಲ್ಲಿ ನೂತನವಾಗಿ ಪಂಚಶ್ರೀ ಪ್ರಗತಿಬಂಧು ಸಂಘ ವನ್ನು ಒಕ್ಕೂಟದ ಅಧ್ಯಕ್ಷರಾದ ಕೇಶವ ಗೌಡ ಕಾಂತಿಲ ಉದ್ಘಾಟಿಸಿದರು. ಸಂಘದ ದಾಖಲಾತಿಯನ್ನು ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಶಾರದಾ ಹಾಗೂ ಶ್ರೀಮತಿ ಲತಾ ಕುಮಾರಿ ಹಸ್ತಾಂತರಿಸಿದರು. ಈ ಸಂದರ್ಭ...

ಗೌಡ ಸಂಸ್ಕೃತಿ, ಆಚಾರ-ವಿಚಾರಗಳು ಮುಂದಿನ ಪೀಳಿಗೆಗೆ ರವಾನೆಯಾಗಬೇಕು – ಕಜೆಗದ್ದೆ

ಗೌಡ ಜನಾಂಗದ ಸಂಸ್ಕೃತಿ, ಆಚಾರ -ವಿಚಾರಗಳು ಮುಂದಿನ ಪೀಳಿಗೆಗೆ ರವಾನೆಯಾಗಬೇಕಿದ್ದರೆ ಯುವ ಜನಾಂಗ ಅದರತ್ತ ಆಕರ್ಷಿತವಾಗುವಂತೆ ಆಗಬೇಕು. ಈ ನಿಟ್ಟಿನಲ್ಲಿ ಅಕಾಡೆಮಿಯ ವತಿಯಿಂದ ನಡೆಯುವ ಶಿಬಿರಗಳಲ್ಲಿ ಯುವಕ ಯುವತಿಯರು ಪಾಲ್ಗೊಂಡು ಸಂಸ್ಕೃತಿ ಆಚಾರ ವಿಚಾರಗಳನ್ನು ಕಲಿತುಕೊಳ್ಳಬೇಕು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಹೇಳಿದ್ದಾರೆ‌.  ಅವರು ಮಂಡೆಕೋಲು ಗ್ರಾ.ಪಂ...

ಬೆಳ್ಳಾರೆಯಲ್ಲಿ ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ಹಾಗೂ ಎಸ್ ಕೆ ಎಸ್ ಎಸ್ ಎಫ್ ಬೆಳ್ಳಾರೆ ವತಿಯಿಂದ ಆಂಬ್ಯುಲೆನ್ಸ್ ಲೋಕಾರ್ಪಣೆ, ಸಭಾ ಕಾರ್ಯಕ್ರಮ

ಬೆಳ್ಳಾರೆಯ ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್(ರಿ.) ಹಾಗೂ ಎಸ್ ಕೆ ಎಸ್ ಎಸ್ ಎಫ್ ಬೆಳ್ಳಾರೆ ವತಿಯಿಂದ ಆಂಬ್ಯುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ಆ.27 ರಂದು ನಡೆಯಿತು. ಬೆಳ್ಳಾರೆ ದರ್ಗಾ ಶರೀಫಿನಲ್ಲಿ ಝಿಯಾರತ್ ನಡೆಸಿ ಆ ಬಳಿಕ ಆಂಬ್ಯುಲೆನ್ಸ್ ಲೋಕಾರ್ಪಣೆಗೊಂಡಿತು. ಟ್ರಸ್ಟ್ ನ ಅಧ್ಯಕ್ಷ ಯು ಹೆಚ್ ಅಬೂಬಕ್ಕರ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಳಲಿ ಕೇಂದ್ರ...

ಸುಬ್ರಹ್ಮಣ್ಯ :- ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಭೆ

ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಭೆಯು ಆ.27 ರಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ಅವರ ನೇತೃತ್ವದಲ್ಲಿ ನಡೆಯಿತು.ಸಭೆಯಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಮುಂದಿನ ಕಾರ್ಯಚಟುವಟಿಕೆಗಳ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಹಾಗೂ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಮಹಿಳಾ ಸಂಚಾಲಕರಾಗಿ ಸೌಜನ್ಯ ಭಟ್ ಅವರನ್ನು...

ಗುತ್ತಿಗಾರು ಬಿ. ಎಂ. ಎಸ್. ಅಟೋ ಘಟಕ ವತಿಯಿಂದ ಮಾದರಿ ಕಾರ್ಯಕ್ರಮ – ಸನ್ಮಾನ, ದಿನಸಿ ಕಿಟ್ ವಿತರಣೆ

ಗುತ್ತಿಗಾರು ಸ. ಪ. ಪೂ. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ಈ ಬಾರಿಯ 10ನೇ ಪರೀಕ್ಷಾ ಫಲಿತಾಂಶದಲ್ಲಿ 623ಅಂಕ ತೆಗೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ನಿಶ್ಮಿತಾ ಕೆ. ಜಿ. ಹಾಗೂ 579 ಅಂಕ ಗಳಿಸಿ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದ ಅನುಷಾ ಎಂ. ವಿ. ಮೋಟ್ನೂರ್ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಅನಾರೋಗ್ಯ ದಿಂದ ಬಳಲುತ್ತಿರುವ...

ಹರಿಹರ ಪಲ್ಲತ್ತಡ್ಕ :- ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ

ದ.ಕ ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇವರ ವತಿಯಿಂದ ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ನ ಸಹಯೋಗದಲ್ಲಿ "ಆಜಾದಿ ಕಾ ಅಮೃತ್ ಮಹೋತ್ಸವ್" ದ ಪ್ರಯುಕ್ತ ನಾಯಿಗಳಿಗೆ "ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ ಹಾಗೂ ಮಾಹಿತಿ ಶಿಬಿರ" ಆ.27 ರಂದು ನಡೆಯಿತು.ಈ ಕಾರ್ಯಕ್ರಮವನ್ನು ಹರಿಹರ ಪಲ್ಲತ್ತಡ್ಕ...
Loading posts...

All posts loaded

No more posts

error: Content is protected !!