Ad Widget

ಸಂಪಾಜೆ ಸಾಮಾನ್ಯ ಸಭೆ- ಕ್ರಿಯಾ ಯೋಜನೆ ತಯಾರಿ

ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷರಾದ ಸುಂದರಿ ಮುಂದಡ್ಕ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಬಾಭವನದಲ್ಲಿ ನಡೆಯಿತು. ಈ ಸಭೆಯಲ್ಲಿ 34 ಲಕ್ಷದ 15 ನೇ ಹಣಕಾಸು ಕ್ರಿಯಾ ಯೋಜನೆ, 10 ಲಕ್ಷ ಸ್ವಂತ ನಿಧಿಯ ಕ್ರಿಯಾ ಯೋಜನೆ ಮಾಡಲಾಯಿತು ಗ್ರಾಮದ ಪ್ರಮುಖ ರಸ್ತೆಗಳಿಗೆ ಅನುದಾನ ವಿಂಗಡಿಸಲಾಯಿತು. ಚಟ್ಟೆಕಲ್ಲು ರಸ್ತೆ ,ಗ್ರಾಮ ಪಂಚಯತ್ ರಸ್ತೆ,...

ಕೇಂದ್ರ ಸಚಿವ ಸದಾನಂದ ಗೌಡ ರಿಗೆ ಜಾಲತಾಣದಲ್ಲಿ ಅವಹೇಳನ- ಕ್ರಮಕ್ಕೆ ಒತ್ತಾಯ

ಸಾಮಾಜಿಕ ಜಾಲತಾಣದಲ್ಲಿ ಗೌರವಾನ್ವಿತ ಕೇಂದ್ರ ಮಂತ್ರಿಯವರಾದ ಡಿ.ವಿ. ಸದಾನಂದ ಗೌಡರ ಹೆಸರನ್ನು ಬರೆದು ಅವರ ಹೆಸರಿನ ಜೊತೆ ಇರುವ ಗೌಡ ಜಾತಿಯನ್ನು ಕೀಳು ಮಟ್ಟದ ಅವಹೇಳನಕಾರಿಯಾದ ಪದವನ್ನು ಬಳಸಿ ನಿಂದಿಸಿರುವ ಜೊತೆಗೆ ಗೌಡ ಸಮುದಾಯಕ್ಕೆ ಅವಮಾನ ಮಾಡಿರುವ ಮುಕ್ಕಾಟಿರ ಅಯ್ಯಪ್ಪ ಎಂಬ ಆರೋಪಿ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಮಂಗಳೂರು ಕಮಿಷನರಿಗೆ ದೂರು...
Ad Widget

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿ ಜೊತೆ ವಿಡಿಯೋ ಕಾನ್ಫರೆನ್ಸ್

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಜೊತೆ ವಿಡಿಯೋ ಕಾನ್ಫರೆನ್ಸ್ ಮೇ. ೨೩ ರಂದು ನಡೆಯಿತು . ಸುಳ್ಯ ಬ್ಲಾಕ್ ಕಾಂಗ್ರೆಸ್ ಪರವಾಗಿ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆಯವರು ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.

ಬೈಕ್ ಸ್ಕಿಡ್ : ಸಹೋದರ ಸವಾರರು ಜಖಂ

ಅರಂಬೂರು ಬಳಿ ಟಿವಿಎಸ್ ಅಪಾಚಿ ಬೈಕ್ ಸ್ಕಿಡ್ ಆಗಿ ಸವಾರರಿಬ್ಬರು ಜಖಂಗೊಂಡ ಘಟನೆ ಇಂದು ಸಂಜೆ ನಡೆದಿದೆ. ಗಾಯಗೊಂಡ ಅರುಣ, ಕಿರಣ ಇಬ್ಬರು ಸಹೋದರರಾಗಿದ್ದು ಪೆರಾಜೆ ಪದ್ಮಯ್ಯ ಅವರ ಪುತ್ರರು. ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ. ಪೈಂಟಿಂಗ್ ಕೆಲಸ ಮಾಡುತ್ತಿದ್ದ ಇವರು ಸುಳ್ಯಕ್ಕೆ ಸಾಮಾಗ್ರಿ ಖರೀದಿಗೆ ಬರುತ್ತಿದ್ದರು ಎಂದು ತಿಳಿದುಬಂದಿದೆ.

ಅಕ್ರಮ ಸಕ್ರಮ ಜಮೀನಿನ ಮಾರಾಟಕ್ಕೆ ಅವಕಾಶ ಕಲ್ಪಿಸಿದ ಸರಕಾರ

ಅಕ್ರಮ ಸಕ್ರಮ ಜಮೀನಿನ ಮಾರಾಟಕ್ಕೆ ಇದ್ದ ನಿಷೇಧವನ್ನು ತೆರವು ಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ಈ ಮೂಲಕ ಹಲವರು ತಮ್ಮ ಜಮೀನನ್ನು ಮಾರಾಟ ಮಾಡುವಲ್ಲಿ ಎದುರಿಸುತ್ತಿದ್ದ ಸಮಸ್ಯೆ ದೂರವಾಗಿದೆ

ಮಣಿಕ್ಕಾರ ಟ್ಯಾಪಿಂಗ್ ಕಾರ್ಮಿಕ ಆತ್ಮಹತ್ಯೆ

ಪೆರುವಾಜೆ ಗ್ರಾಮದ ಮಣಿಕ್ಕಾರ ಎಂಬಲ್ಲಿ ವೃದ್ದರೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ.23 ರಂದು ನಡೆದಿದೆ.ಮಣಿಕ್ಕಾರ ಕೋಡಿಯಡ್ಕ ನಿವಾಸಿ ಶಬರಿನಾಥನ್ (70) ಎಂಬವರು ಮನೆಯ ಸಮೀಪದ ಗೇರು ಮರಕ್ಕೆ ಲುಂಗಿಯಿಂದ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದುಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಬ್ಬರ್ ಟ್ಯಾಪಿಂಗ್ ಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದ ಇವರು ಮಾನಸಿಕ ಖಿನ್ನತೆಗೆ ಒಳಪಟ್ಟು...

ಅನ್ಲೈನ್ ಪೂಜೆಯಿಂದ ನಮ್ಮ ಸಂಸ್ಕೃತಿಗೆ ಧಕ್ಕೆ

ದೇವಸ್ಥಾನದ ಪೂಜೆಯನ್ನು ಆನ್ ಲೈನ್ ಮೂಲಕ ಅವಕಾಶ ಕಲ್ಪಿಸುವ ಕೆಲಸ ಖಂಡಿತವಾಗಿಯೂ ಸರಿಯಲ್ಲ ಮತ್ತು ನಮ್ಮ ತುಳುನಾಡಿನ ಸಂಸ್ಕೃತಿಗಳಿಗೆ ಧಕ್ಕೆ ತರುವ ವಿಷಯ. ಎಲ್ಲಾ ಕ್ಷೇತ್ರದಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಇದೆ ಹೊರತು ಪೋಟೋ ತೆಗೆಯುವ ಮತ್ತು ವಿಡಿಯೋ ಮಾಡುವ ಅವಕಾಶವನ್ನು ನಿರ್ಬಂಧಿಸಲಾಗಿದೆ ಆದರೆ ಈಗ ದೇವರ ಪೂಜೆಯನ್ನು ವೀಡಿಯೋ ಮೂಲಕ ಆನ್ ಲೈನ್...

ಶೂನ್ಯ ಬಡ್ಡಿಯಲ್ಲಿ ೩ ಲಕ್ಷ ಸಾಲ-ಆದೇಶ

ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಕೃಷಿ ಚಟುವಟಿಕೆಗಳನ್ನ ನಡೆೆೆೆಸಲು 3 ಲಕ್ಷ ದ ವರೆಗೆ ಸಾಲ ನೀಡಲು ಆದೇಶ ಸರಕಾರ ಆದೇಶ ಮಾಡಿದೆ. ಈ ಸಾಲ ನೀಡಲು ಕೆಲವು ಷರತ್ತುಗಳನ್ನು ವಿಧಿಸಲಾಗಿದೆ . ಹೆಚ್ಚಿನ ವಿವರಗಳಿಗೆ ತಮ್ಮ ತಮ್ಮ ಸಹಕಾರಿ ಸಂಘಗಳಲ್ಲಿ ವಿಚಾರಿಸಬಹುದಾಗಿದೆ.

ಜಯನಗರ ಕಾಮತ್ ಸ್ಟೋರ್ ನವೀಕೃತಗೊಂಡ ಶುಭಾರಂಭ

ಜಯನಗರ ದಲ್ಲಿ ಹಲವು ವರ್ಷಗಳಿಂದ ಕಾರ್ಯಚರಿಸುತ್ತಿರುವ ಕಾಮತ್ ಸ್ಟೋರ್ ನವೀಕೃತಗೊಂಡ ಇಂದು ಶುಭಾರಂಭಗೊಂಡಿತು. ವಿಶಾಲವಾದ ಮಳಿಗೆ ಹಾಗೂ ಆಹಾರ ಸಾಮಾಗ್ರಿಗಳ ಹೆಚ್ಚಿನ ಶೇಖರಣೆ, ನಮ್ಮ ಗ್ರಾಹಕರ ಬೇಡಿಕೆ ಯಾಗಿತ್ತು.ಈ ನಿಟ್ಟಿನಲ್ಲಿ ಗ್ರಾಹಕರ ಸೌಲಭ್ಯಕ್ಕಾಗಿ , ಅನುಕೂಲವಾಗಿ ಉತ್ತಮ ಸೇವೆಯನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ , ಗ್ರಾಹಕರು ಎಂದಿನಂತೆ ಸಹಕರಿಸುವಂತೆ ಸಂಸ್ಥೆಯ ಮಾಲಕರು ತಿಳಿಸಿರುತ್ತಾರೆ.

ರಂಜಾನ್ ಹಬ್ಬವಿರುವುದರಿಂದ ವಿದ್ಯುತ್ ಕಡಿತಗೊಳಿಸದಂತೆ ಮನವಿ- ಸ್ಪಂದಿಸಿದ ಕಾರ್ಯನಿರ್ವಾಹಕ ಇಂಜಿನಿಯರ್ ನರಸಿಂಹ

ಮೆಸ್ಕಾಂ ಇಲಾಖೆಯಿಂದ ಮೇ 23 ಶನಿವಾರದಂದು ಸುಳ್ಯ ಹಾಗೂ ಪುತ್ತೂರು ಭಾಗಗಳಲ್ಲಿ ವಿದ್ಯುತ್ ಲೈನ್ ಗಳಲ್ಲಿ ಕೆಲಸಕಾರ್ಯಗಳು ನಡೆಯುವ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ ಉಂಟಾಗುವ ಸಂಭವವಿತ್ತು. ಈ ಮಾಹಿತಿಯನ್ನು ಆಧರಿಸಿ ಮುಸಲ್ಮಾನ ಬಾಂಧವರ ಪವಿತ್ರ ರಂಜಾನ್ ಹಬ್ಬದ ಒಂದು ದಿನ ಮೊದಲು ಈ ರೀತಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾದಲ್ಲಿ ಹಲವಾರು ಸಮಸ್ಯೆಗಳು ಮುಸಲ್ಮಾನ...
Loading posts...

All posts loaded

No more posts

error: Content is protected !!