Ad Widget

ಜೂ 1 ರಿಂದ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಭಾಗ್ಯ

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನವು ಜೂನ್ 1 ರಿಂದ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು. ಸರ್ಕಾರದ ಆದೇಶದಂತೆ ಸ್ವಚ್ಚತೆ , ಸ್ಯಾನಿಟೈಸರ್‌ ಬಳಕೆ , ಥರ್ಮಲ್ ಸ್ಟೀನಿಂಗ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡು ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಅವಕಾಶ ನೀಡಲಾಗುವುದು. ಈ ಎಲ್ಲಾ ವ್ಯವಸ್ಥೆ ಗಳನ್ನು ಮಾಡಿ ಭಕ್ತಾದಿಗಳ ಸ್ವಾಗತಕ್ಕೆ...

ಮೇ ೨೭ ರಿಂದ ಕೊಡಗಿನಲ್ಲಿ ಭಾರಿ ಮಳೆ ಸಾಧ್ಯತೆ

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮೇ 27 ರಿಂದ 29 ವರೆಗೆ ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ (50-75% ಪ್ರದೇಶಗಳಲ್ಲಿ) ಹಾಗೂ ಮೇ 30 ರಿಂದ ಜೂನ್ 1 ರವರೆಗೆ ವ್ಯಾಪಕವಾಗಿ(75% ಗಿಂತ ಹೆಚ್ಚು ಪ್ರದೇಶಗಳಲ್ಲಿ), ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ರೈತರು ಮುಂಗಾರಿನ ಪೂರ್ವದಲ್ಲಿ ಕೈಗೊಳ್ಳಬೇಕಾದ ಕೆಲಸಗಳನ್ನು ಮಳೆಯ ಆಧಾರದ ಮೇಲೆ ಕೈಗೊಳ್ಳಬಹುದಾಗಿದೆ ಎಂದು...
Ad Widget

ಅಜ್ಜಾವರ – ಸ್ಕೂಟಿ ಮತ್ತು ಕಾರು ಡಿಕ್ಕಿ

ಅಜ್ಜಾವರ ಪೆಲತ್ತಡಿ ಎಂಬಲ್ಲಿ ಕಾರು ಮತ್ತು ಸ್ಕೂಟಿ ಡಿಕ್ಕಿಯಾಗಿದ್ದು ಸ್ಕೂಟಿ ಸವಾರರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.ಅಜ್ಜಾವರದಿಂದ ಅಡ್ಪಂಗಾಯಕ್ಕೆ ಹೋಗುತ್ತಿದ್ದ ಯಾಕುಬ್ ಎಂಬವರ ಕಾರು ಹಾಗೂ ಎದುರಿನಿಂದ ಬಂದ ಸ್ಕೂಟಿ ಡಿಕ್ಕಿಯಾಗಿದೆ. ಸ್ಕೂಟಿಯಲ್ಲಿದ್ದ ಬಂಟ್ರಬೈಲಿನ ಶಾನಿಫ್ ಮತ್ತು ಬಾಸಿತ್ ಗಾಯಗೊಂಡಿದ್ದು ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಮುಂಬೈ ಯಿಂದ ಬಂದ ಕುಟುಂಬದ ಮೂವರಿಗೂ ಸೋಂಕು ದೃಢ

ಸರ್ವೆ ಹಾಸ್ಟೆಲ್ ನಲ್ಲಿ ಕಾರಂಟೈನ್ ನಲ್ಲಿದ್ದ ವ್ಯಕ್ತಿಗಳಲ್ಲಿ ಕೊರೊನ ಸೋಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಮುಂಬೈ ನಿಂದ ಕೆಲ ದಿನಗಳ ಹಿಂದೆ ಬಂದ ಇವರನ್ನು ಹಾಸ್ಟೆಲ್ ನಲ್ಲಿ ಕಾರಂಟೈನ್ ಮಾಡಲಾಗಿತ್ತು.ಒಂದೇ ಕುಟುಂಬದಲ್ಲಿ ಸೋಂಕು ದೃಡಪಟ್ಟಿದ್ದರಿಂದ ಗಂಡ ಹೆಂಡತಿ ಮತ್ತು ಮಗಳನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹಲ್ಲೆ ನಡೆಸಿದ್ದಾರೆಂದು ಮಾವ ಮತ್ತು ಗಂಡನ ಮೇಲೆ ಪೋಲೀಸ್ ದೂರು ನೀಡಿದ ಮಹಿಳೆ

ವರದಕ್ಷಿಣೆ ತರುವಂತೆ ನನ್ನ ಮೇಲೆ ಅತ್ತೆ ಮಾವ ಹಾಗೂ ಗಂಡ ಮಾನಸಿಕ ಕಿರುಕುಳ ನೀಡಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆ ಪೋಲೀಸರಿಗೆ ದೂರು ನೀಡಿದ ಘಟನೆ ಕನಕಮಜಲಿನಲ್ಲಿ ನಡೆದಿದೆ. ಅದಲ್ಲದೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಕೆಳಗಿನ ರೀತಿಯ ಲೇಖನವನ್ನು ಹರಿ ಬಿಟ್ಟಿರುತ್ತಾರೆ.ಕಳೆದ ರಾತ್ರಿ 3 ಗಂಟೆಗೆ ಅತ್ತೆ ಮಾವ ಗಂಡ ಸೇರಿ...

ದೇವ ವಿದ್ಯುತ್ ಲೈನ್ ಸ್ವಚ್ಛತೆಗೆ ಶ್ರಮದಾನ

ದೇವ ಹೆಚ್ ಟಿ ವಿದ್ಯುತ್ ಲೈನ್ ಸ್ವಚ್ಛತಾ ಕಾರ್ಯ ಇಂದು ಮೇ ೨೬ ರಂದು ನಡೆಯಿತು.ಈ ಸಂದರ್ಭದಲ್ಲಿ ಮೆಸ್ಕಾಂ ಸಿಬ್ಬಂದಿಗಳು, ಗೆಳೆಯರ ಬಳಗದ ಸದಸ್ಯರು ಊರವರು ಭಾಗವಹಿಸಿ ಶ್ರಮಸೇವೆಗೈದರು.

ಅಡ್ಡನಪಾರೆ ಹೆಚ್ ಟಿ ಲೈನ್ ಸ್ವಚ್ಛತಾ ಕಾರ್ಯ

ವಳಲಂಬೆ,ಅಡ್ಡನಪಾರೆ,ದೇವ ಹೆಚ್ ಟಿ ವಿದ್ಯುತ್ ಲೈನ್ ಗೆ ತಾಗುವ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯ ಇಂದು (ಮೇ.೨೬) ರಂದು ನಡೆಯಿತು.ಹಾಗೂ ತಂತಿ ಬದಲಾವಣೆ ಕಾರ್ಯ ಕೂಡ ನಡೆಯಿತು. ಮೆಸ್ಕಾಂ ಸಿಬ್ಬಂದಿಗಳು, ಊರವರು ಭಾಗವಹಿಸಿದ್ದರು.

ವೆಂಕಟರಮಣ ಸೊಸೈಟಿಯ ನಿತ್ಯ ನಿಧಿ ಸಂಗ್ರಹಕಾರರಿಗೆ ಧನಸಹಾಯ

ಸುಳ್ಯವೆಂಕಟರಮಣ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಯಲ್ಲಿ ನಿತ್ಯನಿಧಿ ಸಂಗ್ರಹಿಸುತ್ತಿರುವ ಎಲ್ಲಾ ನಿತ್ಯನಿಧಿ ಸಂಗ್ರಹಕರಿಗೆ ಆಡಳಿತ ಮಂಡಳಿ ವತಿಯಿಂದ ಇಂದು ಧನ ಸಹಾಯ ನೀಡಿ ಸಹಕರಿಸಿದ್ದರು.ಲಾಕ್ ಡೌನ್ ಸಂದರ್ಭದಲ್ಲಿ ನಿತ್ಯನಿಧಿ BBC ಸಂಗ್ರಹಿಸಲು ಸಾಧ್ಯವಾಗದ ಕಾರಣ ಆರ್ಥಿಕ ಸಂಕಷ್ಟಕ್ಕೆ ತುತ್ತಾದನ್ನು ಮನಗಂಡು ಸಂಸ್ಥೆಯ ಆಡಳಿತ ಮಂಡಳಿಯವರು ಎಲ್ಲಾ ನಿತ್ಯನಿಧಿ ಸಂಗ್ರಹಕರಿಗೆ ಸಂಸ್ಥೆಯ ವತಿಯಿಂದ ಈ ಆರ್ಥಿಕ ಸಹಕಾರವನ್ನು...

ಭರದಿಂದ ನಡೆಯುತ್ತಿರುವ ಗಡಿಕಲ್ಲು ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ

ಕೊಲ್ಲಮೊಗ್ರ ಗ್ರಾಮದ ಗಡಿಕಲ್ಲು ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ನಡೆಯುತ್ತಿದ್ದು, ಶಿಲೆಯಿಂದ ಗುಡಿಯ ಗೋಡೆ ರಚನೆ ಕೆಲಸ ಪೂರ್ಣಗೊಂಡಿದೆ. ಮುಂದಿನ ಫೆಬ್ರವರಿಯಲ್ಲಿ ಬ್ರಹ್ಮಕಲಶ ನಡೆಯಲು ತೀರ್ಮಾನಿಸಲಾಗಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಜಯಪ್ರಕಾಶ್ ಕಟ್ಟ ಹಾಗೂ ಆಡಳಿತ ಸಮಿತಿ ಅಧ್ಯಕ್ಷ ದಿನೇಶ್ ಕುಮಾರ್ ಮಡ್ತಿಲ ತಿಳಿಸಿದ್ದಾರೆ. ಭಕ್ತಾಧಿಗಳು ಈ ಸೇವಾ ಕಾರ್ಯದಲ್ಲಿ ತೊಡಗಿಕೊಳ್ಳಲು ವಿನಂತಿಸಿದ್ದಾರೆ.

ಜೂನ್ 1 ರಿಂದ ದೇವರ ದರ್ಶನ ಭಾಗ್ಯ

ಲಾಕ್ಡೌನ್ ಬಳಿಕ ಸುಮಾರು ಎರಡು ತಿಂಗಳಿಂದ ಬಂದಾಗಿದ್ದ ಧಾರ್ಮಿಕ ಕೇಂದ್ರಗಳು ಜೂನ್ 1 ರಿಂದ ತೆರೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ನಿಯಮಾನುಸಾರ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹಲವು ನಿಯಮಗಳನ್ನು ಪಾಲಿಸುವ ಮೂಲಕ ಭಕ್ತರು ದೇವರ...
Loading posts...

All posts loaded

No more posts

error: Content is protected !!