- Sunday
- March 15th, 2026
ಉಬರಡ್ಕ ರಸ್ತೆಯ ಅಟಲ್ ನಗರದಲ್ಲಿ ಮರ ಬಿದ್ದು ನಾಲ್ಕು ವಿದ್ಯುತ್ ಕಂಬ ಮುರಿದು ಬಿದ್ದ ಘಟನೆ ಮೇ.6 ರಂದು ಮುಂಜಾನೆ ನಡೆದಿದೆ. ಕೆಲಕಾಲ ರಸ್ತೆ ಬಂದ್ ಆಗಿತ್ತು.
ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಅರಣ್ಯ ಸಿಬ್ಬಂದಿಗಳ ಮಧ್ಯೆ ಕಳೆದ ರಾತ್ರಿ (ಮೇ.4) ಮಾತಿನ ಚಕಮಕಿ ನಡೆದು, ತನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆಂದು ಆರೋಪಿಸಿರುವ ಗ್ರಾ.ಪಂ. ಕೋವಿಡ್ ನಿರ್ವಹಣಾ ತಂಡ ತನ್ನ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದ ಘಟನೆ ವರದಿಯಾಗಿದೆ.ಮೇ. 4 ರಂದು ರಾತ್ರಿ ಕೊಲ್ಲಮೊಗ್ರದಲ್ಲಿ ಹೋಮ್ ಐಸೊಲೇಶನ್ ನಲ್ಲಿದ್ದವರಿಗೆ ಆಹಾರ ಸಾಮಾಗ್ರಿ ವಿತರಿಸುತ್ತಿದ್ದ...
ರಾಜ್ಯದಲ್ಲಿ ಕೋವಿಡ್19 ಸೋಂಕಿನ ಪ್ರಸರಣ ಹೆಚ್ಚಳ ಹಿನ್ನೆಲೆಯಲ್ಲಿ ಮೇ 24ರಿಂದ ಆರಂಭವಾಗಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ತಿಳಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ಇದೇ ವೇಳೆ ಮೊದಲ ವರ್ಷದ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ರದ್ದು ಮಾಡಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡುವ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ ಎಂದು...
ಸುಳ್ಯ ತಾಲೂಕಿನಲ್ಲಿ ಇಂದು 42 ಕೊರೋನಾ ಪ್ರಕರಣಗಳು ದೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆ ವರದಿ ನೀಡಿದೆ. ನಿನ್ನೆ 86 ಕ್ಕೇರಿದ ಪ್ರಕರಣ ಇಂದು ಕಡಿಮೆಯಾಗಿ 42 ಮಂದಿಗೆ ಪಾಸಿಟಿವ್ ಬಂದಿದೆ. ಸುಳ್ಯದಲ್ಲಿ ಒಟ್ಟು 329 ಪ್ರಕರಣಗಳಿವೆ. 29 ಜನ ಗುಣಮುಖರಾಗಿದ್ದಾರೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಹಾಕುವುದರ ಜತೆಗೆ ಕೋವಿಡ್ ಮಾರ್ಗಸೂಚಿ ಪಾಲಿಸಬೇಕೆಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಲಸಿಕೆ ಲಭ್ಯವಿಲ್ಲದ ಕಾರಣ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ಕೆವಿಜಿ ಪುರಭವನದಲ್ಲಿ ನಡೆಯುತ್ತಿರುವ ಕೋವಿಡ್ ಲಸಿಕಾ ಕೇಂದ್ರದಲ್ಲಿ ನಾಳೆ(ಮೇ4) ಲಸಿಕಾ ಕಾರ್ಯಕ್ರಮ ಇರುವುದಿಲ್ಲ. ಯಾವುದೇ ಲಸಿಕೆ ಲಭ್ಯವಿಲ್ಲದ ಕಾರಣ ಲಸಿಕಾ ಕಾರ್ಯಕ್ರಮ ನಾಳೆ ಇರುವುದಿಲ್ಲ. ಕೋವಿಡ್ ಲಸಿಕೆ ಬಂದಾಗ ತಿಳಿಸಲಾಗುವುದು ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ. ಕೋವಿಡ್ ಪ್ರತಿರೋಧಕವಾಗಿ ನೀಡುವ ಕೋವ್ಯಾಕ್ಸಿನ್ ಕೆಲವು...
ಲಸಿಕೆ ಕೊರತೆಯಾಗಿರುವ ಕಾರಣದಿಂದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ಕೆವಿಜಿ ಪುರಭವನದಲ್ಲಿ ನಡೆಯುತ್ತಿರುವ ಕೋವಿಡ್ ಲಸಿಕಾ ಕೇಂದ್ರದಲ್ಲಿ ನಾಳೆ(ಮೇ4) ಲಸಿಕಾ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಯಾವುದೇ ಲಸಿಕೆ ಲಭ್ಯವಿಲ್ಲದ ಕಾರಣ ಲಸಿಕಾ ಕಾರ್ಯಕ್ರಮ ನಾಳೆ ಇರುವುದಿಲ್ಲ. ಕೋವಿಡ್ ಲಸಿಕೆ ಬಂದಾಗ ತಿಳಿಸಲಾಗುವುದು ಎಂದು ತಾಲೂಕು ಆಡಳಿತ ಪ್ರಕಟಣೆಯಲ್ಲಿ ತಿಳಿಸಿದೆ. ಕೋವಿಡ್ ಪ್ರತಿರೋಧಕವಾಗಿ ನೀಡುವ ಕೋವ್ಯಾಕ್ಸಿನ್...
ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದ ಕೆರೆಯ ಸ್ವಚ್ಛತೆ ಮತ್ತು ಹೂಳೆತ್ತುವ ಕಾರ್ಯವನ್ನು ದೇವಾಲಯದ ಧರ್ಮದರ್ಶಿಗಳಾದ ಪರಮೇಶ್ವರಯ್ಯ ಕಾಂಚೋಡು ಅವರ ಮಾರ್ಗದರ್ಶನದಲ್ಲಿ ಮೇ 2 ರಂದು ಕರಸೇವೆಯ ಮೂಲಕ ನಡೆಸಲಾಯಿತು. ಗೋವಿಂದಯ್ಯ ಕಾಂಚೋಡು, ಸತ್ಯನಾರಾಯಣ ಕಾಂಚೋಡು,ರಾಮಪ್ರಸಾದ ಕಾಂಚೋಡು, ಮಹಾಬಲೇಶ್ವರ ಕಾಂಚೋಡು,ರವಿಶಂಕರ ಕಾಂಚೋಡು, ಅಣ್ಣಪ್ಪ ನಾೖಕ ಅಯ್ಯನಕಟ್ಟೆ, ಗುರುವಪ್ಪ ನಾೖಕ ಚಾಕೊಟೆಡ್ಕ, ಶಿವಪ್ಪ ನಾೖಕ ಚಾಕೊಟೆಡ್ಕ, ಜಾಹ್ನವಿ ಕಾಂಚೋಡು,...
ಕೋವಿಡ್ 19 ಮಹಾಮಾರಿ ವಿಶ್ವವನ್ನೇ ಕಂಗೆಡಿಸಿ ಇದೀಗ ಒಂದು ವರ್ಷ ಕಳೆದಿದ್ದು ಕೋವಿಡ್‌ನ ಎರಡನೇ ಅಲೆ ಬರಸಿಡಿಲಿನಂತೆ ಸಮಾಜಕ್ಕೆ ಅಪ್ಪಳಿಸಿದೆ. ಕಳೆದ ವರ್ಷಕ್ಕಿಂತ ಹೆಚ್ಚು ಭೀಕರತೆ ಕಾಣಿಸುತ್ತಿದೆಯಾದರೂ ಈ ವೈರಸ್ ಅನ್ನು ಸಮರ್ಥವಾಗಿ ಎದುರಿಸಲು ದೇಶದ ವೈದ್ಯರು, ವಿಜ್ಞಾನಿಗಳು, ತಜ್ಞರು ಸದೃಢವಾಗಿ ಸಿದ್ಧರಾಗಿರುವುದು ಆಶಾಸ್ಪದ ಸಂಗತಿ. ಸಾಮಾಜಿಕ ಅಂತರ ಕಾಪಾಡುವುದು ಮತ್ತು ಆದಷ್ಟು ಮನೆಯಲ್ಲೇ ಇದ್ದು...
ಸುಳ್ಯ ತಾಲೂಕಿನಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತ ಹೋಗುತ್ತಿದ್ದು ಇಂದು 86 ಪ್ರಕರಣಗಳು ದೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆ ವರದಿ ನೀಡಿದೆ. ನಿನ್ನೆ 65 ಪ್ರಕರಣ ಪತ್ತೆಯಾಗಿದ್ದು, ಇಂದು 86 ಮಂದಿಗೆ ಪಾಸಿಟಿವ್ ಬಂದಿದ್ದು, ಪ್ರಕರಣದ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಹಾಕುವುದರ ಜತೆಗೆ ಕೋವಿಡ್ ಮಾರ್ಗಸೂಚಿ ಪಾಲಿಸಬೇಕೆಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
Loading posts...
All posts loaded
No more posts
