Ad Widget

ಹರಿಹರ ಪಲ್ಲತ್ತಡ್ಕ : ಸಂಗಮ ಕ್ಷೇತ್ರದಲ್ಲಿ ತೀರ್ಥೋದ್ಬವ

ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ಸಂಗಮ ಕ್ಷೇತ್ರದಲ್ಲಿ ಅ.17 ರಂದು ತೀರ್ಥೋದ್ಬವ ಹಾಗೂ ತೀರ್ಥ ಸ್ನಾನ ನಡೆಯಿತು.ತುಲಾ ಸಂಕ್ರಮಣದಂದು ಮದ್ಯಾಹ್ನ 1:11 ಕ್ಕೆ ತೀರ್ಥೋದ್ಬವ ಆಗಿದ್ದು, ಹರಿಹರೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್ ನದಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹರಿಹರೇಶ್ವರ ದೇವರ ಭಕ್ತರು ನದಿಗೆ ಬಾಗಿನ ಅರ್ಪಣೆ ಮಾಡಿ ತೀರ್ಥ ಸ್ನಾನ...

ನಿಂತಿಕಲ್ಲು: ಭದ್ರ ಟೆಕ್ ಸಂಸ್ಥೆಯಲ್ಲಿ ಆಯುಧಪೂಜೆ

ನಿಂತಿಕಲ್ಲಿನ ಭದ್ರ ಟೆಕ್ ಸಂಸ್ಥೆಯಲ್ಲಿ ಪುರೋಹಿತ್ ಪ್ರಶಾಂತ್ ಪರ್ಲತ್ತಾಯರ ವೈದಿಕ ಕಾರ್ಯಕ್ರಮದೊಂದಿಗೆ ಅ.14ರಂದು ಆಯಧಪೂಜೆ, ಗಣಪತಿ ಹವನ ನಡೆಯಿತು. ಈ ಕಾರ್ಯಕ್ರಮದಲ್ಲಿ ಭದ್ರ ಟೆಕ್ ಸಂಸ್ಥೆಯ ಮಾಲಕ ದಯಾನಂದ ಮೇಲ್ಮನೆ, ಮಾಲಕರ ತಂದೆ ದಾಸಪ್ಪ ಗೌಡ, ತಾಯಿ ಶ್ರೀಮತಿ ಬಾಲಕಿ ದಾಸಪ್ಪ ಗೌಡ, ಕುಟುಂಬ ಸದಸ್ಯರು, ಸಂಸ್ಥೆಯ ಸಿಬ್ಬಂದಿ ವರ್ಗ, ಸ್ಥಳೀಯರು ಉಪಸ್ಥಿತರಿದ್ದರು.
Ad Widget

ಅ.17 : ತಲಕಾವೇರಿಯಲ್ಲಿ ಮಧ್ಯಾಹ್ನ 1.11 ಕ್ಕೆ ತೀರ್ಥೋದ್ಭವ

ಮಡಿಕೇರಿ:-ನಾಡಿನ ಜೀವನದಿ ‘ಕಾವೇರಿ’ಯ ಉಗಮ ಸ್ಥಾನ ತಲಕಾವೇರಿಯಲ್ಲಿ ಅ.17 ರಂದು ಮಧ್ಯಾಹ್ನ 1.11 ಕ್ಕೆ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಭಕ್ತರಲ್ಲಿ ಸಂಭ್ರಮ ಮನೆಮಾಡಿದೆ.ಪವಿತ್ರ ತೀರ್ಥೋದ್ಭವಕ್ಕಾಗಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ವತಿಯಿಂದ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಕಾವೇರಿ ತುಲಾಸಂಕ್ರಮಣಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ಕೊರೋನಾ ಸಾಂಕ್ರಮಿಕದ ಹಿನ್ನೆಲೆಯಲ್ಲಿ ಪವಿತ್ರ ತೀರ್ಥೋದ್ಭವದ ವೀಕ್ಷಣೆಗೆ...

ಹರಿಹರ ಪಲ್ಲತ್ತಡ್ಕ : ಶಿವ ಡಿಜಿಟಲ್ಸ್ ಸ್ಥಳಾಂತರಗೊಂಡು ಶುಭಾರಂಭ

ಹರಿಹರ ಪಲ್ಲತ್ತಡ್ಕದಲ್ಲಿ ಸುಮಾರು 18 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ದಿವಾಕರ ಮುಂಡಾಜೆ ಅವರ ಮಾಲಕತ್ವದ ಶಿವ ಡಿಜಿಟಲ್ಸ್ ಅ.15 ರಂದು ಸ್ಥಳಾಂತರಗೊಂಡು ಶ್ರೀ ದುರ್ಗಾ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು. ಹಾಗೂ ಸ್ಥಳಾಂತರದ ಪ್ರಯುಕ್ತ ಗಣಹೋಮ ನಡೆಸಲಾಯಿತು. ವರದಿ :- ಉಲ್ಲಾಸ್ ಕಜ್ಜೋಡಿ

ಪೆರುವಾಜೆ ಶ್ರೀ ಜಲದುರ್ಗಾ ದೇವಸ್ಥಾನಕ್ಕೆ ಯತೀಶ್ ಕಾನಾವುಜಾಲು ಅವರಿಂದ ಪ್ರಿಂಟರ್ ಕೊಡುಗೆ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿ ಉದ್ಯೋಗದಲ್ಲಿರುವ ಯತೀಶ್ ಕಾನಾವುಜಾಲು ಅವರು ಶ್ರೀ ಕ್ಷೇತ್ರಕ್ಕೆ ಪ್ರಿಂಟರ್ ಕೊಡುಗೆಯಾಗಿ ನೀಡಿದರು. ಹಸ್ತಾಂತರ ಸಂದರ್ಭದಲ್ಲಿ ಪೆರುವಾಜೆ ಶ್ರೀ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಸದಸ್ಯರಾದ ನಾರಾಯಣ ಕೊಂಡೆಪ್ಪಾಡಿ, ಜಗನ್ನಾಥ ರೈ ಪೆರುವಾಜೆ, ಕಾರ್ಯದರ್ಶಿ ವಸಂತ ಪೆರುವಾಜೆ, ಯಶವಂತ...

ಪಂಜ: ಶ್ರೀ ಗಾಯತ್ರಿ ಅಲ್ಯುಮಿನಿಯಂ ಫ್ಯಾಬ್ರಿಕೇಶನ್ ಮತ್ತು ಫ್ಲೈವುಡ್ ಹಾಗೂ ವೆಲ್ಡಿಂಗ್ ವರ್ಕ್ಸ್ ನಲ್ಲಿ ಆಯುಧಪೂಜೆ

ಪಂಜದ ಜಿ.ಕೆ.ರೆಸಿಡೆನ್ಸಿಯಲ್ಲಿರುವ ಶ್ರೀ ಗಾಯತ್ರಿಅಲ್ಯುಮಿನಿಯಂ ಫ್ಯಾಬ್ರಿಕೇಶನ್ ಮತ್ತು ಫ್ಲೈವುಡ್ ಹಾಗೂ ವೆಲ್ಡಿಂಗ್ ವರ್ಕ್ಸ್ ಸಂಸ್ಥೆಯಲ್ಲಿ ಆಯುಧಪೂಜೆ ಕಾರ್ಯಕ್ರಮವು ಅ.13ರಂದು ಜರುಗಿತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಲಕ ತೇಜೇಶ್ ಆಚಾರ್ಯ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮೂಲಭೂತ ಸೌಕರ್ಯಕ್ಕೆ ಗ್ರಾಮಸ್ಥರ ಒಕ್ಕೊರಲ‌ ಒತ್ತಾಯ – ಡಿ.ಸಿ ಗ್ರಾಮ ವಾಸ್ತವ್ಯದ ಬಳಿಕ ಗ್ರಾಮಸ್ಥರ ಸಮಸ್ಯೆಗಳಿಗೆ ಸಿಗುವುದೇ ಸ್ಪಂದನೆ ?

ಅಮರ ಮುಡ್ನೂರು ಗ್ರಾಮದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರ ಬಳಿ ಮೂಲಭೂತ ಸೌಕರ್ಯಗಳಾದ ರಸ್ತೆ, ವಿದ್ಯುತ್, ಬೋರ್ ವೇಲ್ ಮತ್ತಿತರ ಸಮಸ್ಯೆಗಳನ್ನು ಬಗೆಹರಿಸಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.ಜಿಲ್ಲಾಧಿಕಾರಿ ಅವರ ಗ್ರಾಮ ವಾಸ್ತವ್ಯದ ಸಂದರ್ಭ ಅಹವಾಲು ಸ್ವೀಕರಿಸಿದ ಸಂದರ್ಭ ಜನರು ಡಿ.ಸಿ ಅವರನ್ನು ಆಗ್ರಹಿಸಿದರು.ಕೆಲ ಸಮಸ್ಯೆಗಳು ಇನ್ನೂ ಪರಿಹಾರವಾಗದಕ್ಕೆ ತಾಲೂಕು ಅಧಿಕಾರಿಗಳನ್ನು ಡಿಸಿ ಅವರು...

ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ – ಜನರ ಅಹವಾಲು ಸ್ವೀಕರಿಸಲು ಗ್ರಾಮ ವಾಸ್ತವ್ಯ ಸಹಕಾರಿ- ಅಂಗಾರ

ಅಮರ ಪಡ್ನೂರು ಹಾಗೂ ಅಮರ ಮುಡ್ನೂರು ಗ್ರಾಮದ ಜನರಿಗಿರುವ ಸಮಸ್ಯೆಗಳನ್ನು ಆಯಾ ಇಲಾಖೆಗಳ ಮೂಲಕ ಸರಿ ಮಾಡಲಾಗುವುದು. ಜನರು ಈ ಗ್ರಾಮ ವಾಸ್ತವ್ಯದ ಸಂಪೂರ್ಣ ಸದುಪಯೋಗವನ್ನು ಮಾಡಿಕೊಡಬೇಕು ಎಂದು ಸಚಿವ ಎಸ್ ಅಂಗಾರ ಅವರು ಹೇಳಿದರು. ಅಮರ ಮುಡ್ನೂರು ಗ್ರಾ.ಪಂ. ನಲ್ಲಿ ನಡೆದ ಜಿಲ್ಲಾಧಿಕಾರಿ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾಧಿಕಾರಿ...

ಸುಬ್ರಹ್ಮಣ್ಯ : ಕಡವೆ ಗುದ್ದಿ ಹವ್ಯಾಸಿ ಭಾಗವತ ರಾಮಚಂದ್ರ ಅರ್ಬಿತ್ತಾಯ ಮೃತ್ಯು

ಸುಮಾರು 16 ವರ್ಷಗಳಿಂದ ಸುಬ್ರಹ್ಮಣ್ಯದ ಅನುಗ್ರಹ ಎಜ್ಯುಕೇಶನ್ ಟ್ರಸ್ಟ್ ನ ಆಶ್ರಯದಲ್ಲಿರುವ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಹೆಡ್ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದ ರಾಮಚಂದ್ರ ಅರ್ಬಿತ್ತಾಯರು ಇಂದು ಬೆಳಿಗ್ಗೆ 5:45 ರ ಸುಮಾರಿಗೆ ತಮ್ಮ ಸಹೋದರ ರವಿ ಅರ್ಬಿತ್ತಾಯರೊಂದಿಗೆ ಕುಲ್ಕುಂದದ ಸೋಮಶೇಖರ್ ಎಂಬವವರ ಮನೆಗೆ ಬ್ಯಾಡ್ಮಿಂಟನ್ ಆಟವಾಡಲು ತೆರಳುತ್ತಿದ್ದ ಸಂದರ್ಭದಲ್ಲಿ ಅವರು ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ...

ಸುಬ್ರಹ್ಮಣ್ಯ : ಕಡವೆ ಗುದ್ದಿ ಹವ್ಯಾಸಿ ಭಾಗವತ ರಾಮಚಂದ್ರ ಅರ್ಬಿತ್ತಾಯ ವಿಧಿವಶ

ಸುಮಾರು 16 ವರ್ಷಗಳಿಂದ ಸುಬ್ರಹ್ಮಣ್ಯದ ಅನುಗ್ರಹ ಎಜ್ಯುಕೇಶನ್ ಟ್ರಸ್ಟ್ ನ ಆಶ್ರಯದಲ್ಲಿರುವ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಹೆಡ್ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದ ರಾಮಚಂದ್ರ ಅರ್ಬಿತ್ತಾಯರು ಇಂದು ಬೆಳಿಗ್ಗೆ ತಮ್ಮ ಸಹೋದರ ರವಿ ಅರ್ಬಿತ್ತಾಯರೊಂದಿಗೆ ಕುಲ್ಕುಂದದ ಸೋಮಶೇಖರ್ ಎಂಬವವರ ಮನೆಗೆ ಬ್ಯಾಡ್ಮಿಂಟನ್ ಆಟವಾಡಲು ತೆರಳುತ್ತಿದ್ದ ಸಂದರ್ಭದಲ್ಲಿ ಅವರು ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಹತ್ತಿರದ ಗುಡ್ಡದಿಂದ ಕಡವೆ...
Loading posts...

All posts loaded

No more posts

error: Content is protected !!