- Monday
- March 16th, 2026
ಸ್ಯಾಂಡಲ್ ವುಡ್ ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ನಿಧನರಾಗಿದ್ದಾರೆ. ಜಿಮ್ ಮಾಡುವ ಸಂದರ್ಭದಲ್ಲಿ ಪುನೀತ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಇವರಿಗೆ 46 ವರ್ಷ ವಯಸ್ಸಾಗಿತ್ತು.ವರನಟ ಡಾ| ರಾಜ್ ಕುಮಾರ್ ಅವರ ಪುತ್ರನಾದ ಪುನೀತ್ ಅವರು 1975ನೇ ಮಾರ್ಚ್ 17...
ಉದಯ ಶಿವಾಲ ಮಾಲಕತ್ವದ ಅರುಣೋದಯ ಜನರಲ್ ಸ್ಟೋರ್ ಕೊಲ್ಲಮೊಗ್ರದ ಎಸ್.ಕೆ ಕಾಂಪ್ಲೆಕ್ಸ್ ನಲ್ಲಿ ಅ.29 ರಂದು ಬೆಳಿಗ್ಗೆ ಗಣಹೋಮದೊಂದಿಗೆ ಶುಭಾರಂಭಗೊಂಡಿತು.ನಮ್ಮಲ್ಲಿ ಎಲ್ಲಾ ರೀತಿಯ ದಿನಸಿ ಸಾಮಾಗ್ರಿಗಳು ಹಾಗೂ ನಂದಿನಿ ಹಾಲು, ಮೊಸರು ಹಾಗೂ ಇತರ ಉತ್ಪನ್ನಗಳು ದೊರೆಯುತ್ತವೆ ಎಂದು ಜನರಲ್ ಸ್ಟೋರ್ ನ ಮಾಲಕರಾದ ಉದಯ ಶಿವಾಲ ತಿಳಿಸಿದ್ದಾರೆ. ವರದಿ :- ಉಲ್ಲಾಸ್ ಕಜ್ಜೋಡಿ
ನೆಲ್ಲೂರು ಕೆಮ್ರಾಜೆ: ಜಿರ್ಮುಕಿ- ಬೊಳ್ಳಾಜೆ ಕೆಸರು ಮಯ ರಸ್ತೆಯ ಕುರಿತ ಅಮರ ಸುದ್ದಿ ವರದಿಗೆ ಪಂಚಾಯತ್ ಉಪಾಧ್ಯಕ್ಷ ಧನಂಜಯ ಕುಮರ್ ಎರ್ಮೆಟ್ಟಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸೇವಾಜೆ ಸೇತುವೆ ದುರಸ್ತಿಯ ಹಿನ್ನಲೆ ಈ ರಸ್ತೆಯ ವಾಹನ ಸಂಚಾರ ದುಪ್ಪಟ್ಟಾದ ಕಾರಣ ರಸ್ತೆ ಕೆಸರುಮಯವಾಗಿತ್ತು. ಇದರ ತಾತ್ಕಾಲಿಕ ದುರಸ್ತಿಯನ್ನು ಅ. 24 ರಂದು ಪಂಚಾಯತ್ ಅಧ್ಯಕ್ಷರು ಹಾಗೂ...
ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಮಾಜಿ ಸದಸ್ಯರೂ ,ಬೆಳ್ಳಾರೆಯ ಉದ್ಯಮಿ ಬಶೀರ್ ಬಿ ಎ ಇವರ ತಂದೆ ಉಸ್ಮಾನ್ ಹಾಜಿ ಮಂಡೇಪು (81) ಅಲ್ಪಕಾಲದ ಅಸೌಖ್ಯದಿಂದ ಅಕ್ಟೋಬರ್ 29 ರಂದು ನಿಧನರಾದರು. ಮೃತರು ಪತ್ನಿ ,ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪಂಜ ಸ್ಥಳೀಯ ಸಂಸ್ಥೆಯ 2021- 22ರ ವಾರ್ಷಿಕ ಮಹಾಸಭೆಯು ಅ.28ರಂದು ಪಂಜ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರುಗಿತು. ಪಂಜ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಾಧವ ಬಿ.ಕೆ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ಸ್ಕೌಟ್ ಆಯುಕ್ತರಾದ ಶ್ರೀ ರಾಮಶೇಷ ಶೆಟ್ಟಿ, ಜಿಲ್ಲಾ ಸಂಸ್ಥೆಯ ಗೈಡ್...
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು "ಕನ್ನಡಕ್ಕಾಗಿ ನಾವು" ಅಭಿಯಾನದ ಭಾಗವಾಗಿ ಸಾರ್ವಜನಿಕರಿಗಾಗಿ ಹಮ್ಮಿಕೊಂಡ ಕನ್ನಡದಲ್ಲಿ ಮಾತನಾಡುವ ರಾಜ್ಯ ಮಟ್ಟದ ಸ್ಪರ್ಧೆಗೆ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಅನುರಾಧಾ ಕುರುಂಜಿಯವರು ಆಯ್ಕೆಯಾಗಿದ್ದಾರೆ. ಇವರು ಆನ್ ಲೈನ್ ಮೂಲಕ ಜಿಲ್ಲಾ ಮಟ್ಟದಲ್ಲಿ ನಡೆಸಿದ ಸ್ಪರ್ಧೆಯಲ್ಲಿ 5000 ನಗದು ಬಹುಮಾನದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದು, ದಿನಾಂಕ 30-10-2021ರಂದು...
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳ್ಪದ ನೂತನ ಎಸ್.ಡಿ.ಎಂ.ಸಿ ರಚನೆಯು ಬಳ್ಪ ಶಾಲೆಯಲ್ಲಿ ಅ.28 ರಂದು ನಡೆಯಿತು. ಅಧ್ಯಕ್ಷರಾಗಿ ಉಮೆಶ್ ಬುಡೆಂಗಿ ಹಾಗೂ ಉಪಾಧ್ಯಕ್ಷರಾಗಿ ಭವ್ಯ ಆಲ್ಕಬೆ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂಧರ್ಭದ ಮುಖ್ಯ ಶಿಕ್ಷಕಿ ಗಿರಿಜಾ,ಶಿಕ್ಷಕ ವರ್ಗ ಹಾಗೂ ನೂತನ ಎಸ್.ಡಿ.ಎಂ.ಸಿ ಸದಸ್ಯರು ಉಪಸ್ಥಿತರಿದ್ದರು.
ಸುಳ್ಯ : ಅಕ್ಟೋಬರ್ 27 ರಿಂದ 28 ರ ವರೆಗೆ ಸೇವಾಭಾರತಿ ಇದರ ಸೇವಾಧಾಮದ ಸಹಯೋಗದಲ್ಲಿ ರೋಟರಿ ಕ್ಲಬ್, ಸುಳ್ಯ, ಶ್ರೀ ಸಿದ್ಧಿ ವಿನಾಯಕ ಸೇವಾ ಸಮಿತಿ (ರಿ.), ಸುಳ್ಯ, ಕೃಷಿ ಪತ್ತಿನ ಸಹಕಾರಿ ಸಂಘ (ನಿ.), ಸುಳ್ಯ, ನಗರ ಪಂಚಾಯತ್, ಸುಳ್ಯ, ಕೆನರಾ ಸ್ಪೈನ್ ಫೋರಮ್ ಟ್ರಸ್ಟ್, ಮಂಗಳೂರು, ಕೆ. ವಿ. ಜಿಮೆಡಿಕಲ್ ಕಾಲೇಜು...
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಸಂಘ ಹಾಗೂ ಕನ್ನಡ ವಿಭಾಗದ ವತಿಯಿಂದ ಕನ್ನಡ ರಾಜ್ಯೋತ್ಸವ ಸರಣಿ ಕಾರ್ಯಕ್ರಮವನ್ನು ದಿನಾಂಕ ಆ.28ರಿಂದ ಆ.30ರವರೆಗೆ ಹಮ್ಮಿಕೊಂಡಿದ್ದು, ಅದರ ಉದ್ಘಾಟನಾ ಸಮಾರಂಭವು ದಿನಾಂಕ ಆ.28 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಸುಳ್ಯದ ತಹಶೀಲ್ದಾರರಾದ ಕುಮಾರಿ ಅನಿತಾಲಕ್ಷ್ಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ,ಕರ್ನಾಟಕದಲ್ಲಿ ಕನ್ನಡ ವ್ಯವಹಾರ ಭಾಷೆ ಆಗುವುದರ ಜೊತೆಗೆ ಪ್ರತಿಯೊಬ್ಬ...
ವಳಲಂಬೆ ದೇವಸ್ಥಾನದ ಸಮೀಪ ಬಸ್ ನಿಲ್ದಾಣದ ಅಂಗಡಿ ಕಟ್ಟಡದಲ್ಲಿ ಶ್ರೀ ಶಂಖಪಾಲ ಪೂಜಾ ಸಾಮಾಗ್ರಿಗಳ ಅಂಗಡಿ ಅ.28 ರಂದು ಶುಭಾರಂಭಗೊಂಡಿತು ಹಾಗೂ ವಿಶ್ವಬ್ರಾಹ್ಮಣ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ & ಗ್ಲಾಸ್ ಪ್ಲೈವುಡ್ ವರ್ಕ್ಸ್ ಸ್ಥಳಾಂತರಗೊಂಡು ಶುಭಾರಂಭಗೊಂಡಿತು. ಇಲ್ಲಿ ಪೂಜಾ ಸಾಮಾಗ್ರಿಗಳು ಮತ್ತು ಅಲ್ಯೂಮಿನಿಯಂ ಪಾರ್ಟಿಶನ್ ಹಾಗೂ ಎಲ್ಲಾ ತರಹದ ಇಂಟೀರಿಯರ್, ಪ್ಲೈವುಡ್ ಕೆಲಸಗಳನ್ನು ಮಾಡಿಕೊಡಲಾಗುವುದು ಎಂದು ಮಹೇಶ್...
Loading posts...
All posts loaded
No more posts
