Ad Widget

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗೋ ಪೂಜೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.05 ರಂದು ಗೋ ಪೂಜೆ ನಡೆಯಿತು.ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಶೋಭಾ ಗಿರಿಧರ್, ಶ್ರೀವತ್ಸ, ವನಜಾ ಭಟ್ ಹಾಗೂ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಭಜರಂಗದಳದ ಲಕ್ಷ್ಮೀಶ ಇಜ್ಜಿನಡ್ಕ ಮುಂತಾದವರು...

ಕರಂಗಲ್ಲು : ಮೀನು ಹಿಡಿಯಲು ಹೋದ ಯುವಕನಿಗೆ ಕರೆಂಟ್ ಶಾಕ್ ಹೊಡೆದು ಮೃತ್ಯು

ದೇವಚಳ್ಳ ಗ್ರಾಮದ ಕರಂಗಲ್ಲಿನ ದಿ.ಕೇಶವ ಗೌಡರ ಪುತ್ರ ಪ್ರಕಾಶ್ ಎಂಬುವವರು ನ.05 ರಂದು ರಾತ್ರಿ ತನ್ನ ಗೆಳೆಯನೊಂದಿಗೆ ಮಾಡಬಾಕಿಲು ಭಾಗದ ನದಿಗೆ ಬ್ಯಾಟರಿ ಬಳಸಿ ಮೀನು ಹಿಡಿಯಲು ತೆರಳಿದ್ದು, ಈ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಮೃತರಿಗೆ 37 ವರ್ಷ ವಯಸ್ಸಾಗಿದ್ದು, ತಾಯಿ ಭುವನೇಶ್ವರಿ, ಪತ್ನಿ ದಿವ್ಯಾ, ಪುತ್ರಿ ಹಿತಾಶ್ರೀ, ಸಹೋದರ ತೇಜ ಕುಮಾರ್, ಸಹೋದರಿ...
Ad Widget

ಕಲಾಮಾಯೆ ಸಾರಥ್ಯದಲ್ಲಿ ‘ಗೂಡೆ ಉಕ್ಕುಡಲಿ’ ಅರೆಭಾಷೆ ಕಿರುಚಿತ್ರ ಬಿಡುಗಡೆ

ಕಲಾಮಾಯೆ ಸಂಸ್ಥೆಯಿಂದ ಹೊರತರಲಾದ ‘ಗೂಡೆ ಉಕ್ಕುಡಲಿ’ ಅರೆಭಾಷೆ ಕಿರುಚಿತ್ರ ಇಂದು ಬಿಡುಗಡೆಗೊಂಡಿತು. ಸುಳ್ಯ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‌ಕೆರೆ ಹಾಗೂ ಅಮರ ಸುದ್ದಿ ಪತ್ರಿಕೆಯ ಸಂಪಾದಕ ಮುರಳೀಧರ ಅಡ್ಡನಪಾರೆ ಬಿಡುಗಡೆಗೊಳಿಸಿದರು.ಚಿದಾನಂದ ಪರಪ್ಪ ಅವರ ಕಥೆ, ಚಿತ್ರ ಕಥೆ, ನಿರ್ದೇಶನವಿರುವ ಈ ಕಿರುಚಿತ್ರಕ್ಕೆ ಕಲಾಮಾಯೆಯ ಸುಧೀರ್ ಏನೆಕಲ್ ಸಂಭಾಷಣೆ,...

ಶೇಣಿ ಶಾಲೆಯಲ್ಲಿ ವಾಸ್ತವ್ಯವಿದ್ದ ಅಮರಪಡ್ನೂರು ಕೇಶವ ಭಟ್ ರವರನ್ನು ಆಶ್ರಮಕ್ಕೆ ಸೇರಿಸಿದ ಗ್ರಾಮಸ್ಥರು

ಅಮರಪಡ್ನೂರು ಗ್ರಾಮದ ಸ. ಹಿ.ಪ್ರಾಥಮಿಕ ಶಾಲೆ ಶೇಣಿಯಲ್ಲಿ ನಿರಂತರ ಹಲವು ವರ್ಷಗಳಿಂದ ವಾಸ್ತವ್ಯ ಹೊಂದುತ್ತಿದ್ದ ಕೇಶವ ಭಟ್ ರವರಿಂದ ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಚಟುವಟಿಕೆಗಳಿಗೆ ತೊಂದರೆ ಯಾಗುತಿದ್ದು, ಸದರಿ ಕೇಶವ ಭಟ್ ಎಂಬುವವರನ್ನು ಸ್ಥಳಾಂತರಿಸಲು ಶೇಣಿ ಶಾಲಾ ಮುಖ್ಯೋಪಾಧ್ಯಾಯರಾದ ಪ್ರಭಾಕರ ಮಾಡಬಾಕಿಲು ರವರು ಗ್ರಾಮ ಪಂಚಾಯತ್ ಗೆ ಮತ್ತು ಸ್ಥಳೀಯ ಸದಸ್ಯರಾದ ಅಶೋಕ್ ಚೂಂತಾರುರವರಲ್ಲಿ ಮನವಿ...

ಪಂಜ : ದೀಪಾವಳಿ ಪ್ರಯುಕ್ತ ವಾಲಿಬಾಲ್ ಪಂದ್ಯಾಟ – ಶ್ರೀ ಗಣೇಶ್ ಫ್ರೆಂಡ್ಸ್ ಕಲ್ಲೇರಿ ಪ್ರಥಮ , ಶಿವ ಫ್ರೆಂಡ್ಸ್ ನಾಗತೀರ್ಥ ದ್ವಿತೀಯ

ದೀಪಾವಳಿ ಹಬ್ಬದ ಪ್ರಯುಕ್ತ ಶಿವ ಫ್ರೆಂಡ್ಸ್ ಇದರ ಆಶ್ರಯದಲ್ಲಿ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಐದು ತಂಡಗಳ ಅಂಡರ್ -20 ವಾಲಿಬಾಲ್ ಪಂದ್ಯಾಟ ಇಂದು ನಡೆಯಿತು. ಪಂದ್ಯಾಕೂಟವನ್ನು ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ನ ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು ಉದ್ಘಾಟಿಸಿದರು . ಮಿತ್ರ ಮಂಡಲ ನಾಗತೀರ್ಥ ಇದರ ಕಾರ್ಯದರ್ಶಿ ನವೀನ್ ನಾಗತೀರ್ಥ ,ದೈಹಿಕ...

ಲೇಖನ: ದೀಪಾವಳಿ ವೈಶಿಷ್ಟ್ಯತೆ- ಧನಂಜಯ ಕೆ ಕೊಡೆಂಕಿರಿ

ದೀಪಗಳ ಹಬ್ಬ ದೀಪಾವಳಿ ಬಂತೆಂದರೆ ಸಾಕು ಎಲ್ಲೆಲ್ಲೂ ಸಡಗರ ಸಂಭ್ರಮ. ಹಿರಿಯರಿಂದ ಹಿಡಿದು ಚಿಕ್ಕ ಚಿಕ್ಕ ಮಕ್ಕಳವರೆಗೂ ಎಲ್ಲರೂ ಒಟ್ಟಾಗಿ ಆಚರಿಸುವ ಹಬ್ಬ.ಮನೆ-ಮನೆಗಳಲ್ಲಿ ವಿಧವಿಧವಾದ ಖಾದ್ಯಗಳು, ಸಿಹಿ ಖಾರ ತಿನಿಸುಗಳು ಬಗೆಬಗೆಯ ಮಾಂಸದೂಟಗಳು ಒಂದು ಕಡೆಯಾದರೆ ಪಟಾಕಿಯ ಅಬ್ಬರಗಳು ಇನ್ನೊಂದೆಡೆ. ಹಿರಿಯ- ಕಿರಿಯ ಎಲ್ಲರಲ್ಲಿಯೂ ನವ ಚೈತನ್ಯ ತುಂಬುವ ಹಬ್ಬವಿದು. ರೈತರು ತಮ್ಮ ಗದ್ದೆ ಕೆಲಸಗಳನ್ನು...

ದುಷ್ಟತನದ ಮೇಲೆ ಒಳ್ಳೆಯತನದ ವಿಜಯವನ್ನು , ಕತ್ತಲಿನ ಮೇಲೆ ಬೆಳಕಿನ ವಿಜಯವನ್ನು ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಸಾಧಿಸುವುದೇ ದೀಪಾವಳಿ

ಬಂದೇ ಬಿಟ್ಟಿತು ದೀಪಾವಳಿ.ಯಾವುದೋ ಮೂಲೆಯಲ್ಲಿ ಗಂಟುಸೇರಿದ್ದ ಹಣತೆಗಳು ಹೊರಬರಲಾರಂಭಿಸಿವೆ. ದೇಶದಲ್ಲೆಡೆ ದೀಪಾವಳಿ ಸಂಭ್ರಮ ಕಳೆ ಹೆಚ್ಚಿದೆ.ಅಂತರಂಗದಲ್ಲಿರುವ ಕತ್ತಲೆಯನ್ನು ಓಡಿಸಿ , ಬೆಳಕಿನ ದೀಪವ ಬೆಳಗಿಸುವ ಮೂಲಕ ಮನೆ ಮನ ಬೆಳಗುವ ದಿವ್ಯ ಜ್ಯೋತಿಯ ಹಬ್ಬವೇ ದೀಪಾವಳಿ. ದುಷ್ಟತನದ ಮೇಲೆ ಒಳ್ಳೆಯತನದ ವಿಜಯವನ್ನು , ಕತ್ತಲಿನ ಮೇಲೆ ಬೆಳಕಿನ ವಿಜಯವನ್ನು ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು...

ತಂಟೆಪ್ಪಾಡಿ – ನಾಲ್ಗುತ್ತು ರಸ್ತೆ ಕಾಂಕ್ರೀಟಿಕರಣಗೊಳಿಸುವಂತೆ ನಳಿನ್ ಕುಮಾರ್ ಕಟೀಲು ಅವರಿಗೆ ಮನವಿ

ಸುಳ್ಯ ತಾಲೂಕಿನ ಕಳಂಜ ಗ್ರಾಮದ ತಂಟೆಪ್ಪಾಡಿ - ನಾಲ್ಗುತ್ತು ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸುವಂತೆ ಸಾಮಾಜಿಕ ಕಾರ್ಯಕರ್ತ ಲೋಕೇಶ್ ತಂಟೆಪ್ಪಾಡಿ ಪ್ರಧಾನಮಂತ್ರಿಗಳಿಗೆ 2016ರಲ್ಲಿ ಪತ್ರ ಬರೆದು ಮನವಿ ಮಾಡಿದ್ದರು. ಮಾನ್ಯ ಪ್ರಧಾನಮಂತ್ರಿಯವರಿಗೆ ಸಲ್ಲಿಸಿದ ಮನವಿಗೆ ಕ್ರಮಕೈಗೊಳ್ಳುವಂತೆ ಪ್ರಧಾನಮಂತ್ರಿ ಕಾರ್ಯಾಲಯದಿಂದ ನಿರ್ದೇಶಿಸಲಾಗಿತ್ತು. ಅದರಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಕಾರ್ಯಪಾಲಕ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಮಂಗಳೂರುರವರು ಸ್ಥಳ...

ಸುಬ್ರಹ್ಮಣ್ಯ : ದೀಪಾವಳಿ ಹಬ್ಬದ ಪ್ರಯುಕ್ತ ತುಡರ್ ಕಾರ್ಯಕ್ರಮ

"ಬನ್ನಿ ಸಹೋದರರೇ ವಸುಧ ಕುಟುಂಬ ರಚಿಸೋಣ, ಮೊಳಗಲಿ ತಾಯ ಯಶೋಗಾನ" ಎಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಾಮರಸ್ಯ ವಿಭಾಗ ಸುಬ್ರಹ್ಮಣ್ಯ ಇದರ ಸಹಯೋಗದೊಂದಿಗೆ ನ.03 ರಂದು ತುಡರ್ ಕಾರ್ಯಕ್ರಮದ ಮೂಲಕ ದೀಪಾವಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ದೇವಳದ ಹತ್ತಿರದ ದೇವರಗದ್ದೆಯ ಮಾನಾಡು ಎಂಬಲ್ಲಿ ಆಚರಿಸಲಾಯಿತು.ದೇವಳದ ಪ್ರಧಾನ ಅರ್ಚಕರಾದ ಸೀತಾರಾಮ ಎಡಪಡಿತ್ತಾಯರು ಗರ್ಭಗುಡಿಯ ಎದುರು "ಸಮಾಜದಲ್ಲಿರುವ ಬೇಧ...

ರಾಜ್ಯ ಮಟ್ಟದ ವೈಟ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಜಶ್ವಿತಾ ದಂಬೆಕೋಡಿಗೆ ದ್ವಿತೀಯ ಸ್ಥಾನ

ದಾವಣಗೆರೆಯಲ್ಲಿ ಅ. 31 ಮತ್ತು ನ.1 ರಂದು ನಡೆದ ರಾಜ್ಯ ಮಟ್ಟದ ವೈಟ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಜಶ್ವಿತಾ ದಂಬೆಕೋಡಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಇವರು ಗುತ್ತಿಗಾರು ಗ್ರಾಮದ ದಂಬೆಕೋಡಿ ರಾಘವ ಮತ್ತು ಯಶೋಧ ದಂಪತಿಗಳ ಪುತ್ರಿ. ಉಜಿರೆ ಯಸ್. ಡಿ. ಯಂ. ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಾರೆ. ಸಂಸ್ಥೆಯ ತರಬೇತುದಾರರಾದ ಸಂತೋಷ್ ಕುಮಾರ್ ರವರ...
Loading posts...

All posts loaded

No more posts

error: Content is protected !!