Ad Widget

ದೇವಚಳ್ಳ: ಅಚ್ರಪ್ಪಾಡಿ ಶಾಲೆಯಲ್ಲಿ ಸಂವಿಧಾನ ದಿನಾಚರಣೆ

ಸ.ಕಿ.ಪ್ರಾ.ಶಾಲೆ ಅಚ್ರಪ್ಪಾಡಿ ಇಲ್ಲಿ ನ.26 ಶುಕ್ರವಾರದಂದು "ಸಂವಿಧಾನ ದಿನಾಚರಣೆ"ಯನ್ನು ಆಚರಿಸಲಾಯಿತು. ಇದರ ಅಂಗವಾಗಿ ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞೆಯನ್ನು ಶಾಲಾ ಮಕ್ಕಳು, ಶಾಲಾ ಶಿಕ್ಷಕರು ಹಾಗೂ ಶಾಲಾ ಅಡುಗೆ ಸಿಬ್ಬಂದಿಯವರೆಲ್ಲರು ಸೇರಿ ಸ್ವೀಕರಿಸಿದರು. ಸಂವಿಧಾನದ ಮಹತ್ವ ಮತ್ತು ಸಂವಿಧಾನ ಪ್ರಸ್ತಾವನೆಯ ಬಗ್ಗೆ ಹಾಗೂ ಸಂವಿಧಾನ ರಚನೆಯ ವಿಧಿ ವಿಧಾನಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಾಯಿತು. ನಂತರ 11:15ಕ್ಕೆ...

ಬಾಳಿಲ: ವಿದ್ಯಾಬೋಧಿನೀ ಹಿ.ಪ್ರಾ.ಶಾಲೆಯಲ್ಲಿ ಸಂವಿಧಾನ ದಿನಾಚರಣೆ

ನ.26ರಂದು ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದಲ್ಲಿ "ಸಂವಿಧಾನ ದಿನಾಚರಣೆ"ಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯಗುರುಗಳು, ಶಾಲಾಶಿಕ್ಷಕರು, ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಕೃಷ್ಣಮೂರ್ತಿ ಇವರು ಮಕ್ಕಳಿಗೆ ನಮ್ಮ ಸಂವಿಧಾನ ಪ್ರಸ್ತಾವನೆಯ ಮಹತ್ವವನ್ನು ತಿಳಿಸಿದರು.
Ad Widget

ಸುಳ್ಯ: ಶ್ರೀ ಶಾರದಾ ಮಹಿಳಾ ಕಾಲೇಜಿನಲ್ಲಿ ಸಂವಿಧಾನ ದಿನದ ಅಂಗವಾಗಿ ಪ್ರತಿಜ್ಞಾವಿಧಿ ಸ್ವೀಕಾರ

ಶ್ರೀ ಶಾರದಾ ಮಹಿಳಾ ಕಾಲೇಜಿನಿನಲ್ಲಿ ನ. 26 ರಂದು ಸಂವಿಧಾನ ದಿನದ ಅಂಗವಾಗಿ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ನಡೆಯಿತು. ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿನಿಯರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಕೊಲ್ಲಮೊಗ್ರ : ವನಮಹೋತ್ಸವದಂದು ನೆಟ್ಟ ಗಿಡಗಳ ಆರೈಕೆ

ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ಶ್ರೀ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯದ ವತಿಯಿಂದ 2021 ಜುಲೈ 29 ರಂದು ವನಮಹೋತ್ಸವ ದಿನಾಚರಣೆಯ ಅಂಗವಾಗಿ "ಹಸಿರು ಬೆಳೆಸಿ, ಉಸಿರು ಉಳಿಸಿ" ಕಾರ್ಯಕ್ರಮದಲ್ಲಿ ಕಲ್ಮಕಾರು ಭಜನಾ ಮಂದಿರ, ಗಡಿಕಲ್ಲು ರುದ್ರ ಭೂಮಿಯ ಸುತ್ತ, ಕೊಲ್ಲಮೊಗ್ರು ಬಂಗ್ಲೆಗುಡ್ಡೆ ಪ್ರಾಥಮಿಕ ಶಾಲಾ ವಠಾರ, ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರ, ಅರಣ್ಯ...

ಸುಳ್ಯ: ಶೌರ್ಯ ಶ್ರೀ ವಿಪತ್ತು ನಿರ್ವಹಣಾ ಘಟಕ ಸುಳ್ಯ ತಾಲೂಕು ಸಮಿತಿ ರಚನೆ,
ತಾಲೂಕು ಸಮಿತಿ ಕ್ಯಾಪ್ಟನ್ ಆಗಿ ಜಯರಾಮ್.ಪಿ.ಜಿ ಹಾಗೂ ಸಹ ಕ್ಯಾಪ್ಟನ್ ಆಗಿ ಸತೀಶ್ ಹಾಲೆಮಜಲು

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಧರ್ಮಸ್ಥಳ ಇದರ ಕಾರ್ಯಕ್ರಮದಡಿಯಲ್ಲಿ ಶೌರ್ಯ ಶ್ರೀ ವಿಪತ್ತು ನಿರ್ವಹಣಾ ಘಟಕವು ರಾಜ್ಯದ 34 ತಾಲೂಕುಗಳಲ್ಲಿ ಕಾರ್ಯನಿರ್ವಾಹಹಿಸುತ್ತಿದೆ. ಇದರ ಸುಳ್ಯ ತಾಲೂಕು ಸಮಿತಿಯು ನವೆಂಬರ್ 25 ರ ಗುರುವಾರದಂದು ಸುಳ್ಯ ತಾಲ್ಲೂಕಿನ ಯೋಜನಾ ಕಚೇರಿ ಸುಳ್ಯದಲ್ಲಿ ರಚನೆಗೊಂಡಿದ್ದು, ಸುಳ್ಯ ಘಟಕದ ಜಯರಾಮ್.ಪಿ.ಜಿ. ಅವರು ತಾಲೂಕು ಕ್ಯಾಪ್ಟನ್ ಆಗಿ ಹಾಗೂ ಸಹ ಕ್ಯಾಪ್ಟನ್...

ಡಿ.13ರಂದು ವಿಹಿಂಪ ಬಜರಂಗದಳ ವತಿಯಿಂದ ಸುಳ್ಯದಲ್ಲಿ ಶೌರ್ಯ ಸಂಚಲನ ಕಾರ್ಯಕ್ರಮ – ಬೆಳ್ಳಾರೆ ವಾಲ್ಮೀಕಿ ಶಾಖೆಯಿಂದ ಇಂದು ಕರಪತ್ರ ಬಿಡುಗಡೆ

ವಿಶ್ವಹಿಂದೂ ಪರಿಷದ್ ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿಸುಳ್ಯ ಪ್ರಖಂಡ ವತಿಯಿಂದ ಗೀತಾ ಜಯಂತಿ ಅಂಗವಾಗಿ ಐತಿಹಾಸಿಕ ಹಿಂದುತ್ವದ ಭದ್ರಕೋಟೆ ಸುಳ್ಯದಲ್ಲಿ ಡಿ.13ರಂದು ಜರುಗಲಿರುವ ಶೌರ್ಯ ಸಂಚಲನ ಕಾರ್ಯಕ್ರಮದ ಕರಪತ್ರ ಬಿಡುಗಡೆ ಕಾರ್ಯಕ್ರಮವು ಬೆಳ್ಳಾರೆಯ ವಾಲ್ಮೀಕಿ ಶಾಖೆ ವತಿಯಿಂದ ಇಂದು(ನ.25) ನಡೆಯಿತು. ಕಾರ್ಯಕ್ರಮವು ಸಂಜೆ 7 ಗಂಟೆಗೆ ಸರಿಯಾಗಿ ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ನಡೆಯಿತು. ಉದ್ಯಮಿ ರಾಜೇಶ್...

ಕರಿಕ್ಕಳ: ಪುರಿಯಶ್ರೀ ಜನರಲ್ ಸ್ಟೋರ್ ಶುಭಾರಂಭ

ಪಂಜ ಸಮೀಪದ ಕರಿಕ್ಕಳ ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಮುಖ್ಯ ದ್ವಾರದ ಬಳಿ ಹರೀಶ್ ಪುರಿಯ ಮಾಲಕತ್ವದ ಪುರಿಯಶ್ರೀ ಜನರಲ್ ಸ್ಟೋರ್ ನ.25ರಂದು ಶುಭಾರಂಭಗೊಂಡಿತು. ಈ ಸಂದರ್ಭದಲ್ಲಿ ಮಾಲಕರಾದ ಶ್ರೀ ಹರೀಶ್ , ಶ್ರೀಮತಿ ಶ್ವೇತ, ಶ್ರೀ ಪುಟ್ಟಣ್ಣ ಗೌಡ, ಶ್ರೀಮತಿ ಪದ್ಮಾವತಿ ಮತ್ತಿತರರು ಉಪಸ್ಥಿತರಿದ್ದರು. ಇಲ್ಲಿ ಗೃಹಬಳಕೆಯ ದಿನಸಿ ವಸ್ತುಗಳು ದೊರೆಯುತ್ತದೆ ಎಂದು ಮಾಲಕರು...

ಇನ್ಫೋಸಿಸ್ ಅಧ್ಯಕ್ಷೆ ಸುಧಾ ಮೂರ್ತಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಮಠಕ್ಕೆ ಭೇಟಿ

ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷರಾದ ಡಾ| ನಾರಾಯಣ ಮೂರ್ತಿಯವರ ಧರ್ಮಪತ್ನಿ ಶ್ರೀಮತಿ ಸುಧಾ ಮೂರ್ತಿಯವರು ನ.23 ರಂದು ಸಾಯಂಕಾಲ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ನ.24 ರಂದು ಶ್ರೀ ಮಠದಲ್ಲಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸುದರ್ಶನ್ ಜೋಯಿಸ್, ಗುರು ಭಟ್, ರವೀಂದ್ರ ಭಟ್, ಗ್ರಾಮ ಪಂಚಾಯತ್ ಸದಸ್ಯರಾದ...

ಡಿ.4 : ಪೆರಾಜೆಯಲ್ಲಿ ಮಧುಮೇಹ, ರಕ್ತದೊತ್ತಡ ತಪಾಸಣಾ ಶಿಬಿರ- ಉಪನ್ಯಾಸ

ಚಿಗುರು ಯುವಕ ಮಂಡಲ ಪೆರಾಜೆ ಮತ್ತು ಜ್ಯೋತಿ ಪ್ರೌಢಶಾಲೆ ಪೆರಾಜೆ ಕೊಡಗು ಇವರ ಜಂಟಿ ಆಶ್ರಯದಲ್ಲಿ ಮಧುಮೇಹ ಮತ್ತು ರಕ್ತದೊತ್ತಡ ಉಚಿತ ತಪಾಸಣಾ ಶಿಬಿರ ಹಾಗೂ ಮಧುಮೇಹ ಮತ್ತು ರಕ್ತದೊತ್ತಡ ಬರದಂತೆ ತಡೆಯುವ ಮಾರ್ಗಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮವು ಡಿ.4 ರಂದು ಶನಿವಾರ ದಂದು ಜ್ಯೋತಿ ಪ್ರೌಢಶಾಲೆ ಪೆರಾಜೆ ಇಲ್ಲಿ ನಡೆಯಲಿದೆ. ಈ...

ಸುಬ್ರಹ್ಮಣ್ಯ :-ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರವರಿಗೆ ಸನ್ಮಾನ – ರವಿ ಕಕ್ಕೆಪದವು ಕುರಿತ “ಬೆಂಕಿಯಲ್ಲಿ ಅರಳಿದ ಹೂವು” ಕೃತಿ ಬಿಡುಗಡೆ

ಸಮಾಜ ಸೇವಕ, ರಾಷ್ಟ್ರ ಪ್ರಶಸ್ತಿ ವಿಜೇತ ರವಿ ಕಕ್ಕೆಪದವು ಅವರ ಕುರಿತು ಡಾ| ರಾಜೇಶ್ವರಿ ಗೌತಮ್ ರವರು ಬರೆದ "ಬೆಂಕಿಯಲ್ಲಿ ಅರಳಿದ ಹೂವು" ಕೃತಿ ಬಿಡುಗಡೆ ಹಾಗೂ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರವರಿಗೆ ಅಭಿನಂದನಾ ಸಮಾರಂಭವು ನ.24 ರ ಬುಧವಾರದಂದು ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ನಡೆಯಿತು.ಜೇಸಿಐ ಸುಬ್ರಹ್ಮಣ್ಯ ಕುಕ್ಕೇಶ್ರೀ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಜೇಸಿಐ...
Loading posts...

All posts loaded

No more posts

error: Content is protected !!