- Wednesday
- March 18th, 2026
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಗುತ್ತಿಗಾರು ಗ್ರಾಮಪಂಚಾಯತ್ ಹಾಗೂ ಮಾಹಿತಿ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಹಾಲೆಮಜಲು ಪ್ರಯಾಣಿಕರ ತಂಗುದಾಣದಲ್ಲಿ ಪುಸ್ತಕ ಗೂಡು ಉದ್ಘಾಟನೆ ಡಿ.08 ರಂದು ನಡೆಯಿತು.ಸುಬ್ರಹ್ಮಣ್ಯ ಕೆ.ಎಸ್.ಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕ ಹಾಗೂ ಸಾಹಿತಿಗಳಾದ ಡಾ| ಕೆ.ಎಸ್.ಎನ್ ಉಡುಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.ಈ ಸಂದರ್ಭದಲ್ಲಿ...
ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ವಾರ್ಷಿಕ ಜಾತ್ರಾ ಪ್ರಯುಕ್ತ ಮಾರ್ಗಶಿರ ಶುದ್ದ ಪಂಚಮಿಯ ದಿನವಾದ ಬುಧವಾರ (ಡಿ.8) ತೈಲಾಭ್ಯಂಜನ ಮತ್ತು ಪಂಚಮಿ ರಥೋತ್ಸವ ನೆರವೇರಲಿದೆ. ರಾತ್ರಿ ವಿಶೇಷ ಪಾಲಕಿ ಉತ್ಸವ ಮತ್ತು ಬಂಡಿ ಉತ್ಸವ ದೇವಳದ ಹೊರಾಂಗಣದಲ್ಲಿ ಜರುಗಲಿದೆ. ರಥೋತ್ಸವದ ಬಳಿಕ ಸವಾರಿ ಕಟ್ಟೆಯಲ್ಲಿ ಕಟ್ಟೆ ಪೂಜೆ ಮತ್ತು ಆಕರ್ಷಣೀಯ “ಕುಕ್ಕೆಬೆಡಿ” ಪ್ರದರ್ಶಿತವಾಗಲಿದೆ.ನಾಳೆ (ಡಿ.9) ಪ್ರಾತಃಕಾಲ...
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಮಹೋತ್ಸವದ ಅಂಗವಾಗಿ ಚೌತಿ ದಿನವಾದ ಮಂಗಳವಾರ(ಡಿ.07) ರಾತ್ರಿ ಹೂವಿನ ತೇರಿನ ಉತ್ಸವ ನೆರವೇರಿತು. ವರದಿ :- ಉಲ್ಲಾಸ್ ಕಜ್ಜೋಡಿ
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಚಂಪಾಷಷ್ಠಿ ಮಹೋತ್ಸವದ ಸಂದರ್ಭದಲ್ಲಿ ಎಳೆಯುವ ಎರಡು ರಥಗಳಿಗೆ ಶಿಖರ ಮಹೂರ್ತ ಡಿ.07 ರ ಮಂಗಳವಾರ ನೆರವೇರಿಸಲಾಯಿತು. ದೇವಳದ ಪುರೋಹಿತ ಮಧುಸೂದನ ಕಲ್ಲೂರಾಯ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಬಳಿಕ ಎರಡು ರಥಗಳಿಗೆ ಶಿಖರ ಅಳವಡಿಸಲಾಯಿತು. ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್...
ಶ್ರೀ ಶಾಸ್ತ್ರಾವೇಶ್ವರ ದೇವಸ್ಥಾನ ಕರ್ಲಪ್ಪಾಡಿ ಕಾಲಾವಧಿ ಜಾತ್ರೋತ್ಸವದ ಪ್ರಯುಕ್ತ ಗೊನೆ ಕಡಿಯುವ ಕಾರ್ಯಕ್ರಮವು ಡಿ. 8 ರಂದು ಮುಂಜಾನೆ ಪೂಜೆಯ ಬಳಿಕ ನಡೆಯಿತು. ಈ ಸಂದರ್ಭ ದೇವಳದ ಆಡಳಿತಾಧಿಕಾರಿ ಶರತ್ ಕುಮಾರ್ ಎಸ್, ಉತ್ಸವ ಸಮಿತಿ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಮೇನಾಲ , ಕಾರ್ಯದರ್ಶಿ ರೂಪಾನಂದ ಕರ್ಲಪ್ಪಾಡಿ , ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧನಂಜಯ...
ಕರ್ನಾಟಕ ರಾಜ್ಯ ರೈತಸಂಘ ಸುಳ್ಯ ತಾಲೂಕು ಘಟಕದ ವತಿಯಿಂದ ವಾರಕ್ಕೊಂದು ಗ್ರಾಮಭೇಟಿ ಅಭಿಯಾನದ ಮುಂದುವರೆದ ಭಾಗವಾಗಿ ಮರ್ಕಂಜ ಗ್ರಾಮವನ್ನು ಡಿ.5 ರಂದು ಭೇಟಿ ಮಾಡಲಾಯಿತು. ಮರ್ಕಂಜ ಗ್ರಾಮದಲ್ಲಿ ಅಡಿಕೆ ಎಲೆ ಹಳದಿರೋಗ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರದ ಆಯ ಜಿಲ್ಲೆಯ ಇತರ ಸಮಸ್ಯೆಗಳ ಬಗ್ಗೆ ವಿಚಾರ ಸಂಕೀರ್ಣ ಹಾಗೂ ಗ್ರಾಮ ಘಟಕದ ಪುನರ್ ರಚನೆಯ ಸಭೆಯು...
ಸಂಘದ ಸದಸ್ಯರ ಅಕೌಂಟ್ ಗೆ ನೇರ ಹಣ ವರ್ಗಾವಣೆ ಕಾರ್ಯಕ್ರಮ ಡಿ.07 ರಂದು ಕೊಲ್ಲಮೊಗ್ರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಕೇಂದ್ರದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಕೊಲ್ಲಮೊಗ್ರು ಬ್ಯಾಂಕ್ ಆಫ್ ಬರೋಡಾದ ಮ್ಯಾನೇಜರ್ ಗಜಾನನ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೊಲ್ಲಮೊಗ್ರು ಒಕ್ಕೂಟ ಕಾರ್ಯದರ್ಶಿ ರಾಜಣ್ಣ ವಿಜಯಕುಮಾರ್,...
ಶ್ರೀ ಕುಕ್ಕೆ ಸುಬ್ರಹ್ಮಣ್ಯ ವಾರ್ಷಿಕ ಚಂಪಾ ಷಷ್ಠಿ ಜಾತ್ರೆ ಪ್ರಯುಕ್ತ ದಿನಾಂಕ 08-12-2021 ರಂದು ಮಧ್ಯಾಹ್ನ 02 00 ಗಂಟೆಯಿಂದ ದಿನಾಂಕ 09-12-2021 ರಂದು ಸಂಜೆ 04-00 ಗಂಟೆಯ ವರೆಗೆ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಈ ಕೆಳಗಿನಂತೆ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಭಕ್ತಾಧಿಗಳು ಸಹಕರಿಸಬೇಕೆಂದು ಸುಬ್ರಹ್ಮಣ್ಯ ಪೋಲೀಸ್ ಉಪನಿರೀಕ್ಷಕ ಜಂಬುರಾಜ್ ಮಹಾಜನ್ ಪತ್ರಿಕಾ ಪ್ರಕಟಣೆಯಲ್ಲಿ...
ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಶ್ರೀ ವಿಷ್ಣುಮೂರ್ತಿ ಒತ್ತೆಕೋಲವು ಮಾರ್ಚ್ 26 ಮತ್ತು 27 ರಂದು ನಡೆಯಲಿದ್ದು ಕೊಳ್ಳಿಮುಹೂರ್ತವು ಡಿ.05 ರಂದು ನಡೆಯಿತು.
ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿ.16 ಗುರುವಾರದಿಂದ ಮೊದಲ್ಗೊಂಡು ಜ.14 ಶುಕ್ರವಾರದ ತನಕ ಧನುಪೂಜೆ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 05.15 ಕ್ಕೆ ಸರಿಯಾಗಿ ಧನುಪೂಜೆ ಆರಂಭಗೊಳ್ಳಲಿದೆ. ಧನುಪೂಜೆ ಮಾಡಿಸುವ ಭಕ್ತಾದಿಗಳು ದೇವಾಲಯದ ಕಚೇರಿಯಿಂದ ರೂ.250 ರ ರಶೀದಿ ಪಡೆದು ಸಮಯಕ್ಕೆ ಸರಿಯಾಗಿ ಹಾಜರಿರುವಂತೆ ದೇವಸ್ಥಾನದ ಆಡಳಿತಾಧಿಕಾರಿಗಳಾದ ಸುಹಾನ.ಪಿ ತಿಳಿಸಿದ್ದಾರೆ.
Loading posts...
All posts loaded
No more posts
