- Wednesday
- March 18th, 2026
ವಿಧಾನ ಪರಿಷತ್ ಚುನಾವಣೆ ಇಂದು ನಡೆಯುತ್ತಿದ್ದು, ಕಳಂಜ ಗ್ರಾಮ ಪಂಚಾಯತಿನಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಮತದಾನ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಕಿಲಂಗೋಡಿ, ಉಪಾಧ್ಯಕ್ಷ ಗಣೇಶ್ ರೈ ಕಳಂಜ, ಸದಸ್ಯರಾದ ಬಾಲಕೃಷ್ಣ ಬೇರಿಕೆ, ಸುಧಾ ವಾರಣಾಶಿ, ಕಮಲ ಮುಂಡುಗಾರು ಹಾಗೂ ಪ್ರೇಮಲತಾ ಮಣಿಮಜಲು ಉಪಸ್ಥಿತರಿದ್ದು ಮತದಾನಗೈದರು.
ಡಿ.15 ರಂದು ಅರೆಭಾಷೆ ದಿನಾಚರಣೆಯನ್ನಾಗಿ ಆಚರಿಸುತ್ತಾ ಬಂದಿದ್ದೇವೆ. ಈ ವರ್ಷ ದಶ ವರ್ಷದ ಸಂಭ್ರಮದಲ್ಲಿ ಅರೆಭಾಷೆಯ ಅನೇಕ ಪುಸ್ತಕಗಳ ಬಿಡುಗಡೆ ಮಾಡಲಿದ್ದೇವೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ಕಜೆಗದ್ದೆ ಹೇಳಿದರುಅವರು ಪತ್ರಿಕಾ ಗೋಷ್ಠಿ ಉದ್ದೇಶಿಸಿ ಡಿ.10ರಂದು ಮಾತನಾಡಿದರು. ಪ್ರಸ್ತುತ ಸಾಲಿನ ಅರೆಭಾಷೆ ದಿನಾಚರಣೆಯು ಕರ್ನಾಟಕ ರಾಜ್ಯದ ಹಲವು...
ಸುಬ್ರಹ್ಮಣ್ಯ ಗ್ರಾಮಪಂಚಾಯತ್ ನಲ್ಲಿ ಡಿ.10 ರಂದು ವಿಧಾನ ಪರಿಷತ್ ಚುನಾವಣೆಗೆ ಮತದಾನ ನಡೆಯಿತು.ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಅದ್ಯಕ್ಷರಾದ ಲಲಿತಾ ಗುಂಡಡ್ಕ, ಉಪಾಧ್ಯಕ್ಷರಾದ ಸವಿತಾ ಭಟ್, ಸದಸ್ಯರುಗಳಾದ ಗಿರೀಶ್ ಆಚಾರ್ಯ ಪೈಲಾಜೆ, ಭಾರತಿ ಮೂಕಮಲೆ, ರಾಜೇಶ್ ಕುದುರೆಮಜಲು, ಮಲ್ಲಿಕಾ.ಕೆ, ಭರತ್ ಪರ್ವತಮುಖಿ, ವೆಂಕಟೇಶ್.ಎಚ್.ಎಲ್, ದಿನೇಶ್ ರಾವ್, ಜಯಂತಿ ಪರಮಲೆ, ಭವ್ಯ.ಬಿ, ಮೋಹನ್ ಕೋಟಿಗೌಡನ ಮನೆ, ಶಶಿಕಲಾ...
ಜಾಲ್ಸೂರು ಮಹಾಶಕ್ತಿ ಕೇಂದ್ರದ ಐವರ್ನಾಡು ಗ್ರಾಮ ಪಂಚಾಯತ್ ನ ಭಾರತೀಯ ಜನತಾ ಪಾರ್ಟಿ ಬೆಂವಲಿತ 12 ಸದಸ್ಯರುಗಳು ಎಸ್.ಎನ್ ಮನ್ಮಥರ ನೇತೃತ್ವದಲ್ಲಿ ಬಂದು ವಿಧಾನ ಪರಿಷತ್ ನ ಚುನಾವಣೆ ಗೆ ಮತ ಚಲಾವಣೆ ಮಾಡಿದರು.
ಕೊಲ್ಲಮೊಗ್ರು ಗ್ರಾಮಪಂಚಾಯತ್ ನಲ್ಲಿ ಡಿ.10 ರಂದು ವಿಧಾನ ಪರಿಷತ್ ಚುನಾವಣೆಗೆ ಮತದಾನ ನಡೆಯಿತು.ಈ ಸಂದರ್ಭದಲ್ಲಿ ಕೊಲ್ಲಮೊಗ್ರು ಗ್ರಾಮಪಂಚಾಯತ್ ಅದ್ಯಕ್ಷರಾದ ಉದಯ ಕೊಪ್ಪಡ್ಕ, ಉಪಾಧ್ಯಕ್ಷರಾದ ಜಯಶ್ರೀ ಚಾಂತಾಳ ಹಾಗೂ ಗ್ರಾಮಪಂಚಾಯತ್ ಸದಸ್ಯರುಗಳಾದ ಮಾಧವ ಚಾಂತಾಳ, ಅಶ್ವಥ್ ಯಾಲದಾಳು, ಪುಷ್ಪರಾಜ್ ಪಡ್ಪು, ಶಿವಮ್ಮ, ಮೋಹಿನಿ, ಶುಭಲತಾ ಇವರುಗಳು ಉಪಸ್ಥಿತರಿದ್ದು ಮತದಾನ ಮಾಡಿದರು. ವರದಿ :- ಉಲ್ಲಾಸ್ ಕಜ್ಜೋಡಿ
ಒಂದಿಷ್ಟು ಸಮಾಜಕ್ಕಾಗಿ ಎಂಬ ಧ್ಯೇಯ ವಾಕ್ಯದೊಂದಿಗೆ ಸುಮಾರು 5 ವರ್ಷಗಳ ಹಿಂದೆ ಆರಂಭವಾದ ಯುವ ತೇಜಸ್ಸು ಟ್ರಸ್ಟ್ ಸುಬ್ರಹ್ಮಣ್ಯಕ್ಕೊಂದು ಆಂಬ್ಯುಲೆನ್ಸ್ ಸೇವೆ ನೀಡುವ ಉದ್ದೇಶದೊಂದಿಗೆ ದಾನಿಗಳಿಂದ ಹಣ ಸಂಗ್ರಹಿಸಿ ಡಿ.09 ರಂದು ಆಂಬುಲೆನ್ಸ್ ಅನ್ನು ಲೋಕಾರ್ಪಣೆ ಮಾಡಿದೆ.ಅವಧೂತ ವಿನಯ್ ಗುರೂಜಿ ಆಂಬ್ಯುಲೆನ್ಸ್ ಚಲಾಯಿಸಿ ಆಶೀರ್ವಾದ ಮಾಡಿದರು.ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಡಾ|...
ಸುಳ್ಯದ ಹಳೆಗೇಟಿನಲ್ಲಿ ಸ್ಥಗಿತಗೊಂಡಿದ್ದ ಶ್ರೀ ಆರ್ಟ್ಸ್ ಡಿ.10 ರಿಂದ ಪುನರಾರಂಭಗೊಂಡಿದೆ. ಇಲ್ಲಿ ಕಂಪ್ಯೂಟರ್ ಸ್ಟಿಕ್ಕರ್ ಕಟ್ಟಿಂಗ್, ನಂಬರ್ ಪ್ಲೇಟ್ , ಎಲ್ ಇ ಡಿ ಬೋರ್ಡ್, ನೇಮ್ ಬೋರ್ಡ್, ವಿಸಿಟಿಂಗ್ ಕಾರ್ಡ್, ಬ್ಯಾನರ್, ಥರ್ಮಕೋಲ್ ಕಟ್ಟಿಂಗ್, ಮೊಮೆಂಟೊ, ವೆಡ್ಡಿಂಗ್ ಕಾರ್ಡ್ ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು. ಹೆಚ್ಚಿನ ಮಾಹಿತಿಗೆ 7349350916, 7019578744, 7090400308 ಮೊಬೈಲ್ ಸಂಖ್ಯೆಗೆ ಕರೆ...
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ 2021-22ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಚ್ಚುತ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ, ಸರ್ವಾಂಗೀಣ ಬೆಳವಣಿಗೆಗೆ ಸಹಪಠ್ಯ ಚಟುವಟಿಕೆ ಪೂರಕ. ನಿಮ್ಮ...
ಹಿರಿಯ ದಲಿತಪರ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ, ಕಾಂಗ್ರೆಸ್ ನಾಯಕ, ಉತ್ತಮ ಚಿಂತಕರು, ಮಾರ್ಗದರ್ಶಕರು, ಸಾಹಿತಿ, ನಾಟಕರಂಗ ಹಾಗೂ ಸಿನಿಮಾರಂಗದಲ್ಲೂ ಹೆಸರು ಮಾಡಿರುವ ನಿವೃತ್ತ ಅಂಚೆಪಾಲಕರಾದ ನಂದರಾಜ್ ಸಂಕೇಶ್ ರವರು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯಿಂದ ನೀಡಲಾಗುವ ಮಹಾತ್ಮ ಜ್ಯೋತಿಬಾ ಪುಲೆ ರಾಷ್ಟ್ರೀಯ ಪ್ರಶಸ್ತಿ 2021 ಕ್ಕೆ ಆಯ್ಕೆಯಾಗಿದ್ದು, ಡಿ.11 ರಂದು ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ...
ಸಮಾಜ ಸೇವೆಯ ಉದ್ದೇಶವಿಟ್ಟುಕೊಂಡು ಹುಟ್ಟಿಕೊಂಡ ಯುವ ತೇಜಸ್ಸು ವತಿಯಿಂದ ಸುಬ್ರಹ್ಮಣ್ಯದಲ್ಲಿ ಅಂಬ್ಯುಲೆನ್ಸ್ ಸೇವೆ ಡಿ.9 ರಂದು ಲೋಕಾರ್ಪಣೆಗೊಳ್ಳಲಿದೆ. ಯುವ ತೇಜಸ್ಸು ಬಳಗ ನೂರಾರು ಜನರ ನೋವಿಗೆ ಸ್ಪಂದಿಸಿ ಅನಾರೋಗ್ಯಕ್ಕೊಳಗಾದವರ ಚಿಕಿತ್ಸೆಗೆ ನೆರವಾಗುವ ಮೂಲಕ ಸಮಾಜ ಸೇವೆ ಮಾಡುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಅಂಬ್ಯುಲೆನ್ಸ್ ಖರೀದಿಗೆ ಬೇಕಾದ ಧನ ಸಹಾಯ ಸಂಗ್ರಹವಾಗಲು ಜನತೆ...
Loading posts...
All posts loaded
No more posts
