ಛತ್ತೀಸ್ ಗಢ ಪ್ರಥಮ ಮುಖ್ಯಮಂತ್ರಿ ಅಜಿತ್ ಜೋಗಿ ನಿಧನ

ಛತ್ತೀಸ್ ಗಢ ಪ್ರಥಮ ಮುಖ್ಯಮಂತ್ರಿ ಅಜಿತ್ ಜೋಗಿ ಅನಾರೋಗ್ಯದಿಂದ ಬಳಲುತ್ತಿದ್ದ ಛತ್ತೀಸ್ ಗಢ ಪ್ರಥಮ ಮುಖ್ಯಮಂತ್ರಿ ಅಜಿತ್ ಜೋಗಿ ಇಂದು ನಿಧನರಾಗಿದ್ದಾರೆ . ಈ ಬಗ್ಗೆ ಅವರ ಪುತ್ರ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ . ಕೆಲ ದಿನಗಳ ಹಿಂದೆ ಅಜಿತ್ ಜೋಗಿ ಹೃದಯಾಘಾತಕ್ಕೊಳಗಾಗಿದ್ದರು . 2000 ದಲ್ಲಿ ಅವರು ಛತ್ತೀಸ್ ಗಢದ ಪ್ರಪ್ರಥಮ ಮುಖ್ಯಮಂತ್ರಿಯಾದರು.

ಕೇರಳದ ಪ್ರಸಿದ್ಧ ಮಾತೃಭೂಮಿ ಪತ್ರಿಕೆಯ ಅಧ್ಯಕ್ಷ ಎಂ.ಪಿ.ವೀರೇಂದ್ರ ಕುಮಾರ್ ನಿಧನ

ಮಾಜಿ ಕೇಂದ್ರ ಸಚಿವ , ಸಮಾಜವಾದಿ ಮುಖಂಡ , ರಾಜ್ಯಸಭಾ ಸದಸ್ಯ ಹಾಗೂ ಲೇಖಕ ಎಂ.ಪಿ.ವೀರೇಂದ್ರ ಕುಮಾರ್ ಮೇ. 28 ರಾತ್ರಿ ನಿಧನರಾದರು . ಅವರಿಗೆ 84 ವರ್ಷ ವಯಸ್ಸಾಗಿತ್ತು . ಅವರು ಅಲ್ಪಕಾಲದಿಂದ ಸಕ್ರಿಯ ರಾಜಕಾರಣದಿಂದ ದೂರವಿದ್ದರು . ಲೋಕತಾಂತ್ರಿಕ ಜನತಾದಳದ ರಾಜ್ಯ ಘಟಕದ ಅಧ್ಯಕ್ಷರೂ ಆಗಿದ್ದ ಅವರು ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು...
Ad Widget

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ರಿಗೆ ಸುಳ್ಯದಲ್ಲಿ ಸನ್ಮಾನ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿ ಆಯ್ಕೆಗೊಂಡು ಪ್ರಥಮ ಬಾರಿಗೆ ಸುಳ್ಯ ಮಾರ್ಗವಾಗಿ -ಮಂಗಳೂರು ತೆರಳುತ್ತಿದ್ದ ಸಲೀಂ ಅಹ್ಮದ್ ರವರನ್ನು ಸುಳ್ಯದ ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಿ ಸನ್ಮಾನಿಸಿದರು. ಜೂನ್ 7ರಂದು ಬೆಂಗಳೂರಿನಲ್ಲಿ ನಡೆಯಲಿರುವ ಡಿಕೆ ಶಿವಕುಮಾರ್ ಅವರ ಕೆಪಿಸಿಸಿ ಅಧ್ಯಕ್ಷ ಪದಗ್ರಹಣದ ಕಾರ್ಯಕ್ರಮದ ಕುರಿತು ಮೈಸೂರಿಗೆ ಭೇಟಿ ನೀಡಿ ಮರಳುವ ಸಂದರ್ಭದಲ್ಲಿ ಸುಳ್ಯದಲ್ಲಿ ಮೇ 28ರಂದು...

ಬಿಜೆಪಿಯಲ್ಲಿ ಮತ್ತೆ ಭಿನ್ನಮತ-ಯಡಿಯೂರಪ್ಪಗೆ ಹೈಕಮಾಂಡ್ ಬೆಂಬಲ

ಕೊರೋನಾ ವೈರಸ್ ಹಾವಳಿ ಮಧ್ಯೆಯೇ ರಾಜ್ಯ ಬಿಜೆಪಿಯಲ್ಲಿ ದೊಡ್ಡ ಮಟ್ಟದ ಭಿನ್ನಮತ ಭುಗಿಲೆದ್ದಿದ್ದು , ಭಿನ್ನಮತೀಯ ನಾಯಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಫೈನಲ್ ಎಚ್ಚರಿಕೆ ನೀಡಲು ನಿರ್ಧರಿಸಿದ್ದಾರೆ . ಮಾಜಿ ಸಚಿವರಾದ ಉಮೇಶ ಕತ್ತಿ , ಮುರುಗೇಶ ನಿರಾಣಿ , ಬಸವರಾಜ ಪಾಟೀಲ ಯತ್ನಾಳ್ ಮೊದಲಾದವರ ನೇತೃತ್ವದಲ್ಲಿ 25 ಕ್ಕೂ ಹೆಚ್ಚು ಶಾಸಕರು ಈಗಾಗಲೆ 2...

ಜೂನ್ 1ರಿಂದ ದೇವಸ್ಥಾನ, ಮಸೀದಿ, ಚರ್ಚುಗಳಲ್ಲಿ ಆರಾಧನೆಗೆ ಅವಕಾಶ – ಸಿಎಂ

ಕೊರೋನಾ ಮಹಾಮಾರಿ ವೈರಸ್ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳುಗಳಿಂದ ಮುಚ್ಚಲ್ಪಟ್ಟ ಎಲ್ಲಾ ಧಾರ್ಮಿಕ ಕೇಂದ್ರಗಳ ದ್ವಾರಗಳು ತೆರೆಯಲು ಮುಖ್ಯಮಂತ್ರಿ ಯಡಿಯೂರಪ್ಪ ಮನಸ್ಸು ಮಾಡಿದ್ದಾರೆ.ಜೂನ್ 1ರಿಂದ ಪೂಜಾ ಕಾರ್ಯಕ್ರಮಗಳಿಗೆ ದೇವಸ್ಥಾನಗಳಿಗೆ ಅನುಮತಿ ನೀಡಲು ತೀರ್ಮಾನಿಸಲಾಗಿದೆ ಮಸೀದಿ ಚರ್ಚುಗಳನ್ನು ತೆರೆಯುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರದಂದು ಹೇಳಿಕೆಯನ್ನು ನೀಡಿದ್ದರು.ಇದೇ ವಿಷಯಕ್ಕೆ...

ಸೋಂಕು ಪೀಡಿತ ರಾಜ್ಯಗಳಿಂದ ಕರ್ನಾಟಕಕ್ಕೆ ಪ್ರವೇಶ ನಿರ್ಬಂಧಿಸಿ-ಮಹತ್ವದ ಆದೇಶ

ಕರ್ನಾಟಕಕ್ಕೆ ಐದು ರಾಜ್ಯಗಳಿಂದ ಬರುವ ವಿಮಾನ ಹಾಗೂ ಮೂರು ರಾಜ್ಯಗಳ ರಸ್ತೆ ಮತ್ತು ರೈಲು ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಮುಂದಿನ 15 ದಿನಗಳ ಕಾಲ ಜಾರಿಯಲ್ಲಿರುತ್ತದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.ಮುಂದಿನ 15 ದಿನಗಳ ಕಾಲ ಮಹಾರಾಷ್ಟ್ರ, ಮಧ್ಯ ಪ್ರದೇಶ, ರಾಜಸ್ಥಾನ, ತಮಿಳುನಾಡು ಮತ್ತು ಗುಜರಾತ್ ನಿಂದ ಬರುವವರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಮುಖ್ಯಮಂತ್ರಿ...

ಜೂನ್ 15ರವರೆಗೂ ಲಾಕ್​ಡೌನ್​ ವಿಸ್ತರಣೆ ಸಾಧ್ಯತೆ- ಲಾಕ್​ಡೌನ್ 5.O​​ನಲ್ಲಿ ಇರಲಿದೆ ಭಾರೀ ಬದಲಾವಣೆ

ನಾಲ್ಕನೇ ಹಂತದ ಲಾಕ್​ಡೌನ್​ ಇದೇ ಮೇ 31ಕ್ಕೆ ಮುಗಿಯಲಿದ್ದು , ಈ ನಡುವೆಯೂ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ವ್ಯಾಪಕವಾಗಿ ಹೆಚ್ಚುತ್ತಿದೆ. ಹೀಗಾಗಿ ಐದನೇ ಹಂತದಲ್ಲಿ ಜೂನ್ 15ರವರೆಗೂ ಲಾಕ್​ಡೌನ್​ ವಿಸ್ತರಣೆ ಮಾಡುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಮೊದಲ ಬಾರಿ ಲಾಕ್​ಡೌನ್​ ಘೋಷಣೆ ಮಾಡುವಾಗ ಪ್ರಧಾನಿ ಮೋದಿ ಯಾರನ್ನು ಕೇಳಿರಲಿಲ್ಲ.‌ ಏಕಾಏಕಿ ನಾಲ್ಕೇ ನಾಲ್ಕು ಗಂಟೆ...

ರೈತರು ಕೃಷಿ ಕಾರ್ಮಿಕರಿಗೆ ಸಹಾಯಧನಕ್ಕೆ ಒತ್ತಾಯಿಸಿ ರೈತ ಸಂಘ ಮತ್ತು ಹಸಿರು ಸೇನೆ ಒತ್ತಾಯ

ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ಮೇ 27 ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ರೈತರು, ಕೃಷಿಕೂಲಿಗಾರರು ಹಾಗೂ ಗ್ರಾಮೀಣ ಕಸುಬುದಾರರ ಸಂಕಷ್ಟದ ತಕ್ಷಣದ ಪರಿಹಾರಕ್ಕೆ ಆಗ್ರಹಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಯೊಂದಿಗೆ ಪ್ರತಿಭಟನಾ ಸಭೆ ನಡೆಸಿ ಸಹಾಯಕ ಕಮೀಷನರ್ ಮೂಲಕ...

ದೇಶದಲ್ಲಿ ಮಾರಕ ಮಿಡತೆ ಕಾಟ ಉಲ್ಬಣ: ರಾಜ್ಯದ ರೈತರಲ್ಲೂ ಆತಂಕ ಸುರು

ಮಾರಕ ಕೊರೊನಾ ಜಗತ್ತಿನಾದ್ಯಂತ ಜೀವ ಹಿಂಡುತಿದ್ದು ಅದರ ನಡುವೆ ಭಾರತದಲ್ಲಿ ಮರುಭೂಮಿ ಮಿಡತೆಯ ಕಾಟ ಶುರುವಾಗಿದೆ. ಕೊರನಾ ದಿಂದ ರೈತಾಪಿ ವರ್ಗದವರು ಹೆಚ್ಚು ಕಂಗೆಟ್ಟಿಲ್ಲವಾದರೂ ಆಕಸ್ಮಿಕವಾಗಿ ಬಂದ ಮಿಡತೆ ಹಾವಳಿಯಿಂದ ಅನ್ನದಾತರು ಹೆಚ್ಚು ಚಿಂತೆಪಡುವಂತಾಗಿದೆ. ಮರುಭೂಮಿ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವ ಕೃಷಿ ಬೆಳೆಗಳಿಗೆ ಮಾರಕವಾಗಿರುವ ಈ ಮಿಡತೆಗಳ ಹಾವಳಿಗೆ ಉತ್ತರಭಾರತದ ಹಲವು ರಾಜ್ಯಗಳು ಈಗಾಗಲೇ ತತ್ತರಿಸಿದ್ದು...

ಚೀನಾಕ್ಕೆ ಸಡ್ಡು ಹೊಡೆದ ಭಾರತ-ಸೇನೆ ಸನ್ನದ್ಧ- ಅಮೇರಿಕಾ ಬೆಂಬಲ

ಭಾರತ ತನ್ನ ಭೂಭಾಗದೊಳಗೆ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಯನ್ನೇ ನೆಪವಾಗಿಟ್ಟುಕೊಂಡು ಗಡಿಯಲ್ಲಿ ಸೇನಾ ಜಮಾವಣೆ ಮಾಡಿ ಬೆದರಿಕೆಯೊಡ್ಡುತ್ತಿರುವ ಚೀನಾಕ್ಕೆ ಸಡ್ಡು ಹೊಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ . ಗಡಿಯುದ್ದಕ್ಕೂ ಚೀನಾ ಎಲ್ಲೆಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ಜಮಾವಣೆ ಮಾಡಿದೆಯೋ ಅಲ್ಲೆಲ್ಲಾ ಸಮಬಲ ರೀತಿಯಲ್ಲಿ ಸೈನಿಕರ ನಿಯೋಜನೆ ಮಾಡಲು ಹಾಗೂ ಚೀನಾ ಆಕ್ಷೇಪಿಸುತ್ತಿರುವ ರಸ್ತೆ ಕಾಮಗಾರಿ ಮುಂದುವರಿಸಲು ನಿರ್ಧರಿಸಿದೆ...
Loading posts...

All posts loaded

No more posts

error: Content is protected !!