Ad Widget

ಚೈತನ್ಯ ಗೆಳೆಯರ ಬಳಗದ ವತಿಯಿಂದ ಕಜೆ ಬಸ್ ನಿಲ್ದಾಣದ ಸ್ವಚ್ಚತಾ ಕಾರ್ಯ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಚೈತನ್ಯ ಗೆಳೆಯರ ಬಳಗ(ರಿ.) ಶೆಟ್ಟಿಮಜಲು ಇದರ ಆಶ್ರಯದಲ್ಲಿ “ಪಂಚಸಪ್ತತಿ  ಸ್ವಚ್ಛತಾ ಅಭಿಯಾನ-2025(75 ದಿನಗಳ ಸ್ವಚ್ಛತಾ ಅಭಿಯಾನ)” ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ಡಿ.23ರ ಮಂಗಳವಾರ ಬೆಳಿಗ್ಗೆ ಗಂಟೆ 8:00 ರಿಂದ ಮಡಪ್ಪಾಡಿಯ ಕಜೆ ಬಸ್ ನಿಲ್ದಾಣ ಹಾಗೂ ಸುತ್ತಮುತ್ತ ಸ್ವಚ್ಛತಾ ಕಾರ್ಯ ಮಾಡಲಾಯಿತು. ಹಾಗೂ ಸ್ಫಚ್ಛತೆಯ ಬಗ್ಗೆ ಪತ್ರಗಳನ್ನು ಅಂಟಿಸಲಾಯಿತು.           ...

ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಪೋಷಕರ ಕ್ರೀಡಾಕೂಟ

ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಪೋಷಕರ ಕ್ರೀಡಾಕೂಟವು ಡಿ.22 ರಂದು ನಡೆಯಿತು.ಸಭಾಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಜೊತೆ ಕಾರ್ಯದರ್ಶಿ, ರೆ.ಫಾ. ಆಲ್ವಿನ್ ಎಡ್ವರ್ಡ್ ಡಿ' ಕುನ್ಹ ವಹಿಸಿ ಶುಭ ಕೋರಿದರು.ಸುಳ್ಯ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀ ಸೂಫಿ  ಪೆರಾಜೆ ಉದ್ಘಾಟಿಸಿ ಮಾತನಾಡುತ್ತಾ, “ಪೋಷಕರು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳಿಗೆ ಕ್ರೀಡೆಯ ಬಗ್ಗೆ ಪ್ರೇರಣೆ ನೀಡಬೇಕು ಮತ್ತು...
Ad Widget

“ರೈತರು ಕೇವಲ ಸರ್ಕಾರದ ಫಲಾನುಭವಿಯಾಗದೆ  ಆರ್ಥಿಕತೆಯ ಬೆನ್ನೆಲುಬಾಗಬೇಕು” –  ಸಂಸದ ಬ್ರಿಜೇಶ್ ಚೌಟ ; ಸುಳ್ಯದಲ್ಲಿ ರೈತ ದಿನಾಚರಣೆ – 2025 ವಿಜ್ಞಾನಿಗಳು ಮತ್ತು ಪ್ರಗತಿಪರ ರೈತರೊಂದಿಗೆ ಸಂವಾದ

“ರೈತರು ಕೇವಲ ಸರಕಾರದ ಫಲಾನುಭವಿಯಾಗಿ ಉಳಿಯಬಾರದು ಆರ್ಥಿಕತೆಯ ಬೆನ್ಬೆಲುಬು ಆಗಬೇಕು.‌ ಈ ನಿಟ್ಟಿನಲ್ಲಿ ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ” ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಹೇಳಿದರು. ಅವರು ಸುಳ್ಯದಲ್ಲಿ ನಡೆದ ಕೃಷಿ ಇಲಾಖೆ ಸುಳ್ಯ, ಕೃಷಿಕ ಸಮಾಜ ಸುಳ್ಯ, ರೈತ ಉತ್ಪಾದಕರ ಸಂಘ ಸುಳ್ಯ, ತೋಟಗಾರಿಕಾ ಇಲಾಖೆ ಸುಳ್ಯ,...

ಸ್ವಚ್ಛತಾ ಅಭಿಯಾನದ ಅಂಗವಾಗಿ ಮಯೂರಿ ಯುವತಿ ಮಂಡಲದ ಸದಸ್ಯರಿಂದ ಬೀದಿ ನಾಟಕ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಮಯೂರಿ ಯುವತಿ ಮಂಡಲ(ರಿ.) ಚೊಕ್ಕಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ “ಪಂಚ ಸಪ್ತತಿ ಸ್ವಚ್ಛತಾ ಅಭಿಯಾನ – 2025” ಕಾರ್ಯಕ್ರಮದ ಅಂಗವಾಗಿ ಡಿ.21ರಂದು ಸ್ವಚ್ಛತೆಯ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕುಕ್ಕುಜಡ್ಕ ವಠಾರದಲ್ಲಿ ಬೀದಿ ನಾಟಕವನ್ನು ಆಯೋಜಿಸಲಾಯಿತು.ಈ ಬೀದಿ ನಾಟಕವನ್ನು ಮಯೂರಿ ಯುವತಿ ಮಂಡಲದ ನಿರ್ದೇಶಕಿ,...

ಡಿ.24 ರಂದು ಸುಭಿಕ್ಷಾ ೨ ಪುಸ್ತಕ ಬಿಡುಗಡೆ

ಖ್ಯಾತ ವೈದ್ಯ ಸಾಹಿತಿ, ದಂತ ವೈದ್ಯ ಮತ್ತು ಬಾಯಿ ಮುಖ ದವಡೆ ಶಸ್ತ್ರಚಿಕ್ಸಿತಕ ಡಾ|| ಮುರಲೀ ಮೋಹನ್ ಚೂಂತಾರು ಅವರ ೧೭ ನೇ ಕೃತಿ ಸುಭಿಕ್ಷಾ ೨, ಆರೋಗ್ಯ ಮಾರ್ಗದರ್ಶಿ ಇದರ ಬಿಡುಗಡೆ ದಿನಾಂಕ: ೨೪/೧೨/೨೦೨೫ನೇ ಬುಧವಾರದಂದು ಮಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿ ಬೆಳಿಗ್ಗೆ 11.00 ಘಂಟೆಗೆ ಜರಗಲಿದೆ ಎಂದು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಇದರ...

ಸಂಪಾಜೆ ಗ್ರಾಮ ಪಂಚಾಯತ್ ಕೆ.ಡಿ.ಪಿ ಸಭೆ

ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಕೆ.ಡಿ.ಪಿ ತ್ರೈಮಾಸಿಕ ಸಭೆ ನಡೆಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಮಾಹಿತಿಯನ್ನು ನೀಡಿದರು. ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಯಿಂದ ಹೊರಗೆ ಉಳಿದ ಮಕ್ಕಳ ಮಾಹಿತಿ,...

ಡಿ.27 – 29: ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅಮೃತ ಮಹೋತ್ಸವ ಆಚರಣೆ ; 1.05 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ; ಸಚಿವರು – ಸಂಸದರು -ಶಾಸಕರ ಸಹಿತ ಗಣ್ಯರ ಆಗಮನ ; ಅಮೃತಮಹೋತ್ಸವ ಸಮಿತಿ ಅಧ್ಯಕ್ಷ ಸವಣೂರು ಸೀತಾರಾಮ ರೈ ಅವರಿಂದ ಪತ್ರಿಕಾಗೋಷ್ಠಿ

ಅಮೃತ ಮಹೋತ್ಸವದ ಹೊಸ್ತಿಲಿನಲ್ಲಿರುವ ಸುಳ್ಯದ  ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅಮೃತ ಮಹೋತ್ಸವ ಆಚರಣೆಯು  ಡಿ.27 ರಿಂದ ಡಿ.29ರ ವರೆಗೆ ಅದ್ದೂರಿಯಾಗಿ ನಡೆಯಲಿದ್ದು, ಸಚಿವರು, ಸಂಸದರು, ಶಾಸಕರ ಸಹಿತ ಗಣ್ಯಾತಿತ ಗಣ್ಯ ಅತಿಥಿಗಳು ಭಾಗವಹಿಸಲಿದ್ದು, ಕಾರ್ಯಕ್ರಮದ ಪೂರ್ವ ಸಿದ್ಧತಾ ಕೆಲಸ ಕಾರ್ಯಗಳು ಭರದಿಂದ ಸಾಗಿದೆ ಎಂದು ಕಾಲೇಜಿನ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಕೆ. ಸೀತಾರಾಮ ರೈ...

ಚೈತನ್ಯ ಗೆಳೆಯರ ಬಳಗದ ವತಿಯಿಂದ ಶೆಟ್ಟಿಮಜಲು ಬಸ್ ನಿಲ್ದಾಣದ ಸ್ವಚ್ಚತಾ ಕಾರ್ಯ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಚೈತನ್ಯ ಗೆಳೆಯರ ಬಳಗ(ರಿ.) ಶೆಟ್ಟಿಮಜಲು ಇದರ ಆಶ್ರಯದಲ್ಲಿ “ಪಂಚಸಪ್ತತಿ  ಸ್ವಚ್ಛತಾ ಅಭಿಯಾನ-2025(75 ದಿನಗಳ ಸ್ವಚ್ಛತಾ ಅಭಿಯಾನ)” ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ಡಿ.22 ಸೋಮವಾರದಂದು ಬೆಳಿಗ್ಗೆ ಶೆಟ್ಟಿಮಜಲು ಬಳಿಯ ನರ್ಪ ಬಸ್ ನಿಲ್ದಾಣ ಹಾಗೂ ಸುತ್ತಮುತ್ತ ಸ್ವಚ್ಛತಾ ಕಾರ್ಯ ಮಾಡಲಾಯಿತು             ಈ ಸಂದರ್ಭದಲ್ಲಿ ಚೈತನ್ಯ ಗೆಳೆಯರ ಬಳಗ(ರಿ.) ಶೆಟ್ಟಿಮಜಲು...

ಜಾನುವಾರು ಸಾಕಾಣಿಯಲ್ಲಿ ಚಿನ್ನ ಗೆದ್ದ ಮಹಿಳೆ

ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸುಳ್ಯ, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಮಂಗಳೂರು ಮತ್ತು ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರ ಚೊಕ್ಕಾಡಿಯ ಆವರಣದಲ್ಲಿ ಡಿ.22 ರಂದು “ಮಿಶ್ರ ತಳಿ ಹಸುಗಳ ಹಾಲು ಕರೆಯುವ ಸ್ಪರ್ಧೆ”ಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ...

“ಅಮರ ಸುದ್ದಿ ವಿಶೇಷ ವರದಿ” ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕುಂಠಿತವಾಗುತ್ತಿದೆ ಅಡಿಕೆ ಫಸಲು – ಹಂತಹಂತವಾಗಿ ನಾಶವಾಗುತ್ತಿದೆ ಅಡಿಕೆ ಕೃಷಿ…!! ; ಭವಿಷ್ಯದಲ್ಲಿ ಸಂಪೂರ್ಣ ಅಡಿಕೆ ಕೃಷಿ ನಾಶವಾದರೆ ಜಿಲ್ಲೆಯ ಅರ್ಥವ್ಯವಸ್ಥೆಗೆ ಬೀಳಬಹುದೇ ಬಹುದೊಡ್ಡ ಹೊಡೆತ…!? ; ಅಪಾಯ ಸಂಭವಿಸುವ ಮೊದಲೇ ಎಲ್ಲರೂ ಒಂದಾಗಿ ಎಚ್ಚೆತ್ತುಕೊಂಡರೆ ಒಳಿತಲ್ಲವೇ…!? – ✍️ಉಲ್ಲಾಸ್ ಕಜ್ಜೋಡಿ

ನಮ್ಮ ಭಾರತ ದೇಶದಲ್ಲಿ ಸಾವಿರಾರು, ಲಕ್ಷಾಂತರ ಉದ್ಯಮ ಹಾಗೂ ಉದ್ಯೋಗಗಳಿವೆ. ಆದರೂ ದೇಶದ ಅಭಿವೃದ್ಧಿಗೆ ಉದ್ಯಮ ಹಾಗೂ ಉದ್ಯೋಗಗಳು ಎಷ್ಟು ಮುಖ್ಯವೋ ಕೃಷಿಯೂ ಕೂಡ ಅಷ್ಟೇ ಮುಖ್ಯ. ದೇಶದ ಗ್ರಾಮೀಣ ಭಾಗಗಳ ಬಹುತೇಕ ಜನರು ಇಂದಿಗೂ ಕೂಡ ಕೃಷಿಯನ್ನೇ ಅವಲಂಬಿಸಿ ಬದುಕು ನಡೆಸುತ್ತಿದ್ದಾರೆ ಹಾಗೂ ಇಂದು ದೇಶದಲ್ಲಿ ದೊಡ್ಡ ದೊಡ್ಡ ಉದ್ಯಮಗಳನ್ನು ನಡೆಸುತ್ತಿರುವವರೂ ಹಾಗೂ ಉದ್ಯೋಗಗಳನ್ನು...
Loading posts...

All posts loaded

No more posts

error: Content is protected !!