- Wednesday
- September 30th, 2026
ಕೊಡಿಯಾಲ ಬೈಲು ಬ್ರಹ್ಮರಗಯದ ಬ್ರಹ್ಮರ ಗುಂಡಿ ಶ್ರೀ ಅಯ್ಯಪ್ಪ ದೇವಸ್ಥಾನದ ಮೂರು ಕಾಣಿಕೆ ಡಬ್ಬಿಯ ಬೀಗ ಮುರಿದು ಹಣ ಕಳವು ಗೈಯಲಾಗಿದೆಇಂದು ಮುಂಜಾನೆ ದೇವಸ್ಥಾನದ ಅರ್ಚಕರು ಸುಮಾರು 6.00ಗಂಟೆಗೆ ಆಗಮಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ ಸ್ಥಳಕ್ಕೆ ಆಡಳಿತ ಸಮಿತಿಯವರು ಆಗಮಿಸಿ ಹಣ ಕಳವು ಖಚಿತಪಡಿಸಿದ್ದು ಸುಮಾರು 5000 ದಷ್ಟು ಹಣ ಇದ್ದಿರಬಹುದು ಎಂದು ಸಮಿತಿಯವರು...
ಪೆರುವಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವಿರುದ್ದ ಸ್ಥಳೀಯ ಮೂರು ವ್ಯಕ್ತಿಗಳ ಹೆಸರಿನಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ಸಲ್ಲಿಕೆ ಮಾಡಲಾಗಿದ್ದು, ಇದೀಗ ಈ ದೂರು ಅರ್ಜಿಯ ಬಗ್ಗೆಯೇ ಸಂಶಯ ಮೂಡಿದ್ದು, ಗ್ರಾಮದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆ.27 ರಂದು ಪಿಡಿಓ ಜಯಪ್ರಕಾಶ್ ವಿರುದ್ಧ ನೀಡಿದ ದೂರು ಅರ್ಜಿಗೆ ನಕಲಿ ಸಹಿ ಹಾಕಿದ್ದಾರೆಂಬ...
ಭಾರತೀಯ ಜನತಾ ಪಾರ್ಟಿಯ ಸದಸ್ಯತನ ಅಭಿಯಾನ ರಾಷ್ಟ್ರವ್ಯಾಪ್ತಿಯಲ್ಲಿ ನಡೆಯುತಿದ್ದು ಈ ಹಿನ್ನೆಲೆಯಲ್ಲಿ ಇಂದು ಪೆರುವಾಜೆಯ ಬೂತ್ ಸಂಖ್ಯೆ 76 ರಲ್ಲಿ ಮಹಾ ಸದಸ್ಯತನ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಬೂತ್ ಅಧ್ಯಕ್ಷ ರಮೇಶ್ ಮಠತಡ್ಕ, ಮಂಡಲ ಸಮಿತಿ ಸದಸ್ಯ ಪದ್ಮನಾಭ ಶೆಟ್ಟಿ, ಯುವಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಹರ್ಷಿತ್ ಪೆರುವಾಜೆ, ಜಯಪ್ರಕಾಶ್ ರೈ, ವಾಸುದೇವ ಪೆರುವಾಜೆ, ಶಿವಪ್ರಸಾದ್,...
ಯಕ್ಷಪ್ರತಿಮೆ ಲೋಕಾರ್ಪಣೆ- ಪ್ರಶಸ್ತಿ ಪ್ರದಾನ- ಮಹಿರಾವಣ ಯಕ್ಷಗಾನ ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಸಹಯೋಗದೊಂದಿಗೆ ಅ.06 ರಂದು ಸಂಜೆ 5.45 ರಿಂದ ರಾತ್ರಿ 9.30 ರ ವರೆಗೆ ಯಕ್ಷ ಸಂಭ್ರಮವನ್ನು ಏರ್ಪಡಿಸಲಾಗಿದೆ. ಯಕ್ಷಪ್ರತಿಮೆ ಲೋಕಾರ್ಪಣೆ- ಚೆಂಡೆ ನಿನಾದ ಸಂಜೆ 5.45 ಕ್ಕೆ ಹಿಮ್ಮೇಳ ಗುರು...
ಏನೆಕಲ್ಲು ಗ್ರಾಮದ ಪೂಜಾರಿಮನೆ ದಿ. ದೇವರಾಜ ಪೂಜಾರಿಮನೆಯವರ ಪುತ್ರ ವಿನೋದ್‌ರವರು ಇಂದು ಬೆಳಿಗ್ಗೆ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 36 ವರ್ಷ ವಯಸ್ಸಾಗಿತ್ತು. ಅವಿವಾಹಿತರಾಗಿದ್ದ ಇವರು ತಾಯಿ, ಓರ್ವ ಸಹೋದರ, ಇಬ್ಬರು ಸಹೋದರಿಯರು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲೆಯ ಅಸಂಘಟಿತ ಪ್ರಕೋಷ್ಠದ ಜಿಲ್ಲಾ ಸದಸ್ಯರನ್ನಾಗಿ ವಿನುತಾ ಪಾತಿಕಲ್ಲು ಅವರನ್ನು ನೇಮಕ ಮಾಡಲಾಗಿದೆ. ಇವರು ಮಂಡೆಕೋಲು ಗ್ರಾಮದ ಹರಿಶ್ಚಂದ್ರ ಪಾತಿಕಲ್ಲು ಅವರ ಪತ್ನಿ. ಮಂಡೆಕೋಲು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾಗಿ, ಹಾಲಿ ಸದಸ್ಯರಾಗಿ, ಯುವಜನ ಸಂಯುಕ್ತ ಮಂಡಳಿ ನಿರ್ದೇಶಕಿಯಾಗಿ , ತಾಲೂಕು ಗೌಡ ಮಹಿಳಾ ಘಟಕದ ಅಧ್ಯಕ್ಷೆಯಾಗಿ,...
ತಾಲೂಕು ಕಾನೂನು ಸೇವೆಗಳ ಸಮಿತಿ, ಸುಳ್ಯ, ವಕೀಲರ ಸಂಘ ಸುಳ್ಯ, ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಸುಳ್ಯ,ಇವುಗಳ ಸಂಯುಕ್ತ ಆಶ್ರಯದಲ್ಲಿ ಮೋಟಾರು ವಾಹನ ಕಾಯ್ದೆ ಮತ್ತು ಮಾದಕ ವ್ಯಸನದ ದುಷ್ಪರಿಣಾಮದ ಕುರಿತು ಕಾನೂನು ಅರಿವು ಕಾರ್ಯಕ್ರಮ ಸೆಪ್ಟೆಂಬರ್ 23ರಂದು ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಆಲೆಟ್ಟಿ ಮಿತ್ತಡ್ಕ ಸುಳ್ಯ ಇಲ್ಲಿ ನಡೆಯಲಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ.ಬಿ.ಮೋಹನ್ ಬಾಬು,...
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ 19 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಮಡಿಕೇರಿ ಇದರ ಆಶ್ರಯದಲ್ಲಿ RDC-II ಮತ್ತು CATC ಶಿಬಿರವು ಸೆಪ್ಟೆಂಬರ್ 21ರಿಂದ ಸೆಪ್ಟೆಂಬರ್ 30ರ ವರೆಗೆ ನಡೆಯಲಿದೆ. ಮಂಗಳೂರು, ಉಡುಪಿ, ಕೊಡಗು, ಶಿವಮೊಗ್ಗ ಜಿಲ್ಲೆಯ 600 ಎನ್ ಸಿ ಸಿ ಕೆಡೆಟ್ ಗಳು ಈ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಈ ಶಿಬಿರದಲ್ಲಿ ದೆಹಲಿಯ ಗಣರಾಜ್ಯೋತ್ಸವ ಪೆರೇಡ್...
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯ, ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹಯೋಗದೊಂದಿಗೆ ಇತಿಹಾಸ ವಿಭಾಗದಿಂದ ಸೆ. 20ರಂದು ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮವನ್ನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ ಪಿ ಟಿ ತಾಳೆಯ ಹಿಂಗಾರವನ್ನು ಬಿಡಿಸುವುದರ ಮೂಲಕ ಉದ್ಘಾಟಿಸಿದರು.ಮುಖ್ಯ ಅತಿಥಿಯಾದ ನಿವೃತ್ತ ಪ್ರಾಂಶುಪಾಲ ಡಾ. ನಾರಾಯಣ ಶೇಡಿಕಜೆ ಅವರು ಇತಿಹಾಸ...
Loading posts...
All posts loaded
No more posts
