ಅ. 02 ರಿಂದ ಮೆಟ್ಟಿನಡ್ಕ, ಕಂದ್ರಪ್ಪಾಡಿ ರಸ್ತೆ ಕಾಮಗಾರಿ ಆರಂಭ – ಬದಲಿ ರಸ್ತೆ ಬಳಸಲು ಇಲಾಖೆ ಸೂಚನೆ

ಮೆಟ್ಟಿನಡ್ಕ, ಕಂದ್ರಪ್ಪಾಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಅಕ್ಟೋಬರ್ 2 ರಿಂದ ನಡೆಯಲಿರುವುದರಿಂದ ರಸ್ತೆ ಬಂದ್ ಆಗುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಬದಲಿ ರಸ್ತೆಯನ್ನು ಬಳಸಿ ಸಹಕರಿಸುವಂತೆ ಲೋಕೋಪಯೋಗಿ ಇಲಾಖೆ ಪ್ರಕಟಣೆ ತಿಳಿಸಿದೆ.

ಕೊಡಿಯಾಲ : ಪ್ರಧಾನ ಮಂತ್ರಿಯವರ ಮನ್ ಕೀ ಬಾತ್ ವೀಕ್ಷಣೆ – ಗಿಡ ನಾಟಿ ಕಾರ್ಯಕ್ರಮ

ಮನ್ ಕೀ ಬಾತ್ ಕಾರ್ಯಕ್ರಮ ಕೊಡಿಯಾಲ ಗ್ರಾಮದ ಕಲ್ಪತ್ತಬೈಲು ಬೂತ್ (ಬೂತ್ ಸಂಖ್ಯೆ 80) ಸದಸ್ಯರಾದ ಹಿರಿಯ ಕಾರ್ಯಕರ್ತ ಬೀಯಲು ಮನೆಯಲ್ಲಿ ಇಂದು ನಡೆಯಿತು. ನಂತರ ಗಿಡ ನಾಟಿ ಕಾರ್ಯ ನಡೆಯಿತು. ಕಾರ್ಯಕ್ರಮದಲ್ಲಿ ಲೋಹಿತ್ ಪೆರಿಯಾಣ, ಶಕ್ತಿಕೇಂದ್ರ ಪ್ರಮುಖ್ ಚೇತನ್ ಕೊಡಿಯಾಲ, ಬೂತ್ ಸದಸ್ಯರಾದ ತಾರಾನಾಥ್ ಬೆರ್ಯ , ಗೋಪಾಲ ಎಂ ಮತ್ತು ಮನೆಯವರು ಉಪಸ್ಥಿತರಿದ್ದರು.
Ad Widget

ಇಂದು ವಿಶ್ವ ಹೃದಯ ದಿನ –  ಹೃದಯ ತೊಂದರೆಗಳು ಮತ್ತು ದಂತ ಆರೋಗ್ಯ

ಬರಹ : ಡಾ| ಮುರಲೀ ಮೋಹನ್ ಚೂಂತಾರ್ ಪ್ರತಿ ವರ್ಷ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನ ಎಂದು ಆಚರಿಸಿ ಹೃದಯ ಸಂಬಂಧಿ ರೋಗಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. 2000ನೇ ಇಸವಿಯಲ್ಲಿ ಈ ಆಚರಣೆ “ದೈಹಿಕ ಚಟುವಟಿಕೆ ಮತ್ತು ಹೃದಯದ ಆರೋಗ್ಯ” ಎಂಬ ಧ್ಯೇಯ ವಾಕ್ಯದೊಂದಿಗೆ ಈ ಆಚರಣೆ ಆರಂಭವಾಗಿತ್ತು. 2021ರಲ್ಲಿ ‘ಹೃದಯವನ್ನು ಜೋಡಿಸಿ’...

ಹಾಸ್ಟೇಲ್ ನಿಂದ ರಸ್ತೆ ಬದಿಗೆ ಹರಿದು ಬರುತ್ತಿರುವ ಕೊಳಚೆ ನೀರು – ಸೊಳ್ಳೆ ಉತ್ಪತ್ತಿಯ ತಾಣವಾಗುವ ಮೊದಲು ಕ್ರಮಕೈಗೊಳ್ಳಲು ಒತ್ತಾಯ

ಸುಳ್ಯ ಕೋರ್ಟ್ ಹಿಂಭಾಗದಲ್ಲಿರುವ ವಿದ್ಯಾರ್ಥಿನಿ ನಿಲಯದಿಂದ ಕೊಳಚೆ ನೀರನ್ನು ರಸ್ತೆ ಪಕ್ಕದ ತೆರೆದ ಚರಂಡಿಗೆ ಬಿಡುತ್ತಿದ್ದಾರೆ. ಚರಂಡಿಯಲ್ಲಿ ನೀರು ಹರಿದು ಹೋಗದೇ ಸೊಳ್ಳೆ ಉತ್ಪತ್ತಿಯ ತಾಣವಾಗಿದೆ. ವಿದ್ಯಾರ್ಥಿನಿಯರಿಗೆ ಸ್ವಚ್ಛತೆಯ ಪಾಠ ಹೇಳಿಕೊಡಬೇಕಾದ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರಿಗೆ ಕೊಳಚೆ ನೀರನ್ನು ರಸ್ತೆಯ ಬದಿಗೆ ಬಿಡಬಾರದು ಎಂಬ ಸಾಮಾನ್ಯ ಜ್ಞಾನವಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ. ಚರಂಡಿಯಲ್ಲಿ ನೀರು ಶೇಖರಣೆಯಾಗಿ...

ಪೆರುವಾಜೆ : ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಕೇಳುವವರಿಲ್ಲವೇ ?

ಪೆರುವಾಜೆ ದೇವಸ್ಥಾನದ ಬಳಿ ನವರಾತ್ರಿ ಉತ್ಸವಕ್ಕೆ ಶುಭಕೋರಿ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಬ್ಯಾನರ್ ಅಳವಡಿಸಿದ್ದು ನೀತಿ ಸಂಹಿತೆ ಉಲ್ಲಂಘನೆ ಅಲ್ಲವೇ, ಸದಸ್ಯರಿಗೆ ಕಾನೂನಿನ ಅರಿವಿಲ್ಲವೇ ಅಥವಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದಾಗ ಪ್ರಶ್ನಿಸುವ ಧೈರ್ಯ ಅಧಿಕಾರಿಗಳಿಲ್ಲವೇ ಎಂದು ಜನ ಪ್ರಶ್ನಿಸುವಂತಾಗಿದೆ.

ಮೋನಪ್ಪ ಗೌಡ ಅಡ್ಡಂತ್ತಡ್ಕ ನಿಧನ

ಅಜ್ಜಾವರ ಗ್ರಾಮದ ಅಡ್ಡಂತ್ತಡ್ಕ ಮೋನಪ್ಪ ಗೌಡ (88) ಅಲ್ಪಕಾಲದ ಅಸೌಖ್ಯದಿಂದ ಮೇನಾಲದಲ್ಲಿರುವ ಸ್ವಗೃಹದಲ್ಲಿ ಸೆ.28 ರಂದು ನಿಧನರಾದರು. ಮೃತರು ಪತ್ನಿ ಮುತ್ತಮ್ಮ, ಪುತ್ರರಾದ ಚಂದ್ರಶೇಖರ, ಗೋಪಾಲಕೃಷ್ಣ ಹಾಗೂ ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಬಾಬು ಗೌಡ ಬಾಳಿಲ ಕುಕ್ಕುತ್ತಡಿ

ನಾಲ್ಕೂರು ಗ್ರಾಮದ ಹೊಸಹಳ್ಳಿ ನಿವಾಸಿ ಬಾಬುಗೌಡ ಬಾಳಿಲ ಕುಕ್ಕುತಡಿ ಇಂದು ಮುಂಜಾನೆ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಚಂದ್ರಾವತಿ, ಮಗ ಸುರೇಶ್ ಬಾಳಿಲ, ಪುತ್ರಿ ನವೀನ ಮೋಹನ್ ದೇರಾಜೆ, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಸುಳ್ಯ :  AIKMCC ಮೀಡಿಯಾ ವಿಂಗ್ ಕಾರ್ಯದರ್ಶಿಯಾಗಿ ತಸ್ಲೀಮ್ ಟರ್ಲಿ

ಸುಳ್ಯ AIKMCC ಮೀಡಿಯಾ ವಿಂಗ್ ಕಾರ್ಯದರ್ಶಿ ಯಾಗಿ ಸಂಪಾಜೆಯ ತಸ್ಲೀಮ್ ಟರ್ಲಿ ಯವರನ್ನು  ನೇಮಕ ಮಾಡಲಾಗಿದೆ ಎಂದು ಜಿಲ್ಲಾ AIKMCC ಪ್ರದಾನ ಕಾರ್ಯದರ್ಶಿ ಸಯ್ಯದ್ ಅಫ್ಹಾಂ ಅಲೀ ತಂಙಳ್ ಹಾಗೂ ಸುಳ್ಯ AIKMCC ಅಧ್ಯಕ್ಷರಾದ ಖಲಂದರ್ ಎಲಿಮಲೆ ಯವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಾಳೆ ( ಸೆ.29) ಐವರ್ನಾಡಿನಲ್ಲಿ ರಕ್ತದಾನ, ಮಧುಮೇಹ ತಪಾಸಣೆ ಹಾಗೂ ಪ್ರಥಮ ಚಿಕಿತ್ಸೆ ಸಿ.ಪಿ.ಆರ್. ತರಬೇತಿ ಶಿಬಿರ

ರೋಟರಿ ಕ್ಲಬ್ ಬೆಳ್ಳಾರೆ ಟೌನ್, ಗ್ರಾಮ ಪಂಚಾಯತ್ ಐವರ್ನಾಡು, ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ, ‌ ಮಿತ್ರವೃಂದ ಬಾಂಜಿಕೋಡಿ, ಗೆಳೆಯರ ಬಳಗ ದೇರಾಜೆ, ಮಂಜುಶ್ರೀ ಗೆಳೆಯರ ಬಳಗ ಪಾಲೆಪ್ಪಾಡಿ, ಸ್ಪೋರ್ಟ್ಸ್ ಕ್ಲಬ್ ಮಾಡತ್ತಕಾನ, ಯುವಶಕ್ತಿ ಸಂಘ ಐವರ್ನಾಡು, ಚಾಲಕ-ಮಾಲಕರ ಸಂಘ ಐವರ್ನಾಡು, ವರ್ತಕರ ಸಂಘ ಐವರ್ನಾಡು ಇವುಗಳ...

ಸುಳ್ಯ ನಗರದ ವಿವಿಧೆಡೆ ಬಿಜೆಪಿ ಸದಸ್ಯತ್ವ ಅಭಿಯಾನ

ಸುಳ್ಯ ನಗರದ ಶ್ರೀರಾಂ ಪೇಟೆಯಿಂದ ಖಾಸಗಿ ಬಸ್ ನಿಲ್ದಾಣ ತನಕ ಅಂಗಡಿಗಳಿಗೆ ತೆರಳಿ ಬಿಜೆಪಿ ಸದಸ್ಯತನ ಅಭಿಯಾನ ಸೆ.28 ರಂದು ನಡೆಯಿತು. ಈ ಸಂದರ್ಭದಲ್ಲಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ. ಎ. ಟಿ.,  ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ., ಮಂಡಲ ಕೋಶಾಧಿಕಾರಿ ಸುಬೋದ್ ಶೆಟ್ಟಿ ಮೇನಾಲ, ಕಾಯರ್ತೋಡಿ ಬೂತ್ ಅಧ್ಯಕ್ಷ ಶೀನಪ್ಪ ಪಡ್ರೆ,...
Loading posts...

All posts loaded

No more posts

error: Content is protected !!