Ad Widget

ತಾಲೂಕು ಮಟ್ಟದ ಅಡುಗೆ ಸ್ಪರ್ಧೆಯಲ್ಲಿ ಪಂಜ ಪ್ರಾಥಮಿಕ ಶಾಲೆ ದ್ವಿತೀಯ

ಸುಬ್ರಹ್ಮಣ್ಯ ಜನವರಿ 5 : ಸುಳ್ಯ ತಾಲೂಕು ಮಟ್ಟದ ಅಕ್ಷರ ದಾಸೋಹ ವಿವಿಧ ಶಾಲೆಗಳ ಅಡುಗೆ ತಯಾರಿಕರಿಗೆ ಏರ್ಪಡಿಸಲಾದ ಅಡುಗೆ ಸ್ಪರ್ಧೆಯಲ್ಲಿ ಪಂಜ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಅಡುಗೆ ತಯಾರಕರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ವೀಣಾವರು ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಸಿ.ಆರ್.ಪಿ ಗಳಾದ ಜಯಂತ ಹಾಗೂ ಮಮತ...

ಗುತ್ತಿಗಾರು : ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಫೆ.08ರಂದು ನಡೆಯಲಿರುವ ರಕ್ತದಾನ ಶಿಬಿರ ಹಾಗೂ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಗ್ರಾಮೀಣ ಪ್ರದೇಶದಲ್ಲಿ ಅಂಬ್ಯುಲೆನ್ಸ್ ಸೇವೆ, ರಕ್ತದಾನ ಶಿಬಿರ, ತುರ್ತು ಸಂದರ್ಭದಲ್ಲಿ ರಕ್ತದ ಪೂರೈಕೆ, ಯೋಗ ತರಬೇತಿ ಕೇಂದ್ರ, ನೃತ್ಯ ತರಬೇತಿ ಕೇಂದ್ರ, ಚೆಸ್ ತರಬೇತಿ ಕೇಂದ್ರ ಹಾಗೂ ಕರಾಟೆ ತರಬೇತಿ ಕೇಂದ್ರ ಸೇರಿದಂತೆ ವಿವಿಧ ರೀತಿಯ ಸೇವಾ ಕಾರ್ಯಗಳನ್ನು ದಾನಿಗಳ ಸಹಕಾರದಿಂದ ನಡೆಸುತ್ತಾ ಬಂದಿರುವ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ತನ್ನ 5ನೇ ವರ್ಷದ...
Ad Widget

ಸುಳ್ಯ-ಚೊಕ್ಕಾಡಿ-ಬೆಳ್ಳಾರೆ ಬಸ್ ಪುನರಾರಂಭಿಸುವಂತೆ ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಲು ದಲಿತ ಮುಖಂಡ ಆನಂದ ಬೆಳ್ಳಾರೆ ಕೋರಿಕೆ

ಅನೇಕ ವರುಷಗಳ ಹಿಂದೆ ಸುಳ್ಯದಿಂದ ಸಂಜೆ 6:30ಕ್ಕೆ ಚೊಕ್ಕಾಡಿ ಮೂಲಕ ರಾತ್ರಿ 7:30ಕ್ಕೆ‌ ಬೆಳ್ಳಾರೆಗೆ ತಲುಪಿ ತಂಗುವ ಬಸ್ಸು ಮರುದಿನ ಬೆಳಿಗ್ಗೆ 6:30ಕ್ಕೆ ಬೆಳ್ಳಾರೆಯಿಂದ ಹೊರಡುತ್ತಿತ್ತು. ಇದು ಜನರಿಗೆ ತುಂಬಾ ಪ್ರಯೋಜನ ಆಗುತ್ತಿತ್ತು. ಆದರೆ ಇದನ್ನು ಸುಳ್ಯ ಡಿಪೋ ಆದ ನಂತರ ನಿಲ್ಲಿಸಲಾಯಿತು. ಆದ್ದರಿಂದ ಕೂಡಲೇ ಈ ಬಸ್ಸನ್ನು ಪುನರಾರಂಭಿಸುವ ವಿಚಾರವಾಗಿ ಸುಳ್ಯ ತಾಲೂಕು ಗ್ಯಾರಂಟಿ...

ನಿಧನ : ಸೋಮಶೇಖರ ಕೆರೆಕ್ಕೋಡಿ

ಹರಿಹರ ಪಳ್ಳತ್ತಡ್ಕ ಗ್ರಾಮದ ಕೆರೆಕ್ಕೋಡಿ ಸೋಮಶೇಖರ ಎಂಬುವವರು ಜ.05 ರಂದು ಮದ್ಯಾಹ್ನ 2:00 ಗಂಟೆಗೆ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ(ಜ.04) ರಾತ್ರಿ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು(ಜ.05) ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.ಮೃತರಿಗೆ 56 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಶ್ರೀಮತಿ ಬೇಬಿ, ಪುತ್ರಿಯರಾದ...

ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ರಚನೆ ಹಾಗೂ ಸಭೆ ; ಏ.24 ರಿಂದ ಮೇ.02ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ

ಐವತ್ತೊಕ್ಲು ಗ್ರಾಮದ ಕರಿಕ್ಕಳ ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಎ.24ರಿಂದ ಮೇ.02 ರವರೆಗೆ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ನಡೆಯಲಿದ್ದು, ಎ.29ರಂದು ಶ್ರೀ ದೇವರ ಪ್ರತಿಷ್ಠೆ ನಡೆಯಲಿದೆ. ಆ ಪ್ರಯುಕ್ತ ಜ.04ರಂದು ಬ್ರಹ್ಮಕಲಶೋತ್ಸವ ಸಮಿತಿ ರಚನೆ ಹಾಗೂ ಸಭೆ ನಡೆಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಯಪ್ರಕಾಶ್ ಕಂಬಳ, ಪಂಜ...

ಕಲ್ಮಕಾರು ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ

ಕಲ್ಮಕಾರು ಹಿರಿಯ ಪ್ರಾಥಮಿಕ ಶಾಲೆಗೆ ಯುವ ಉದ್ಯಮಿ ಪ್ರವೀಣ್ ಕೊಪ್ಪಡ್ಕ ಅವರು ಸುಮಾರು ಮೂವತ್ತು ಸಾವಿರ ಮೌಲ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದ್ದು, ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿಯವರಾದ ಹರೀಶ್ ಆರಿಕೋಡಿಯವರು ದೀಪ ಬೆಳಗಿ ಉದ್ಘಾಟಿಸಿ ಶಾಲೆಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಧರ್ಮದರ್ಶಿಯವರು ಶಾಲಾ ಮಕ್ಕಳು ಹಾಗೂ...

ಇಂದಿನಿಂದ ಸುಳ್ಯದಲ್ಲಿ ಮಹಾ ಲಾಭ ಮೇಳ ಆರಂಭ – ಸಾವಿರಾರು ಉತ್ಪನ್ನಗಳು ಒಂದೇ ಸೂರಿನಡಿ

ಸುಳ್ಯದ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕಟ್ಟಡ ಮೇಲಂತಸ್ತಿನಲ್ಲಿ ಮಹಾ ಲಾಭ ಮೇಳ ಜ.4 ರಿಂದ ಆರಂಭವಾಗಿದೆ. ಒಂದೇ ಸೂರಿನಡಿ ಬ್ರಾಂಡೆಡ್ ಉತ್ಪನ್ನಗಳು ಆನ್ ಲೈನ್ ದರಕ್ಕಿಂತಲೂ ಕಡಿಮೆ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಸ್ಟೀಲ್ ಐಟಂಗಳು, ಪ್ಲಾಸ್ಟಿಕ್ ಐಟಂ, ಬಟ್ಟೆಬರೆಗಳು, ಚಪ್ಪಲಿ, ಡೆಕರೇಶನ್ ಐಟಂ, ಹೂವಿನ ಕುಂಡಗಳು, ದಿನನಿತ್ಯ ಉಪಯೋಗಿಸುವ ವಸ್ತುಗಳು ಸೇರಿದಂತೆ ವಿವಿಧ ಬ್ರಾಂಡೆಂಡ್...

ತಾಲೂಕು ಮಟ್ಟದ ಅಡುಗೆ ಸಿಬ್ಬಂದಿಗಳ ಅಡುಗೆ ಸ್ಪರ್ಧೆಯಲ್ಲಿ ವಿದ್ಯಾಬೋಧಿನಿ ವಿದ್ಯಾಸಂಸ್ಥೆಯ ತಂಡ ಪ್ರಥಮ

ಪಿ.ಎಂ ಪೋಷನ್ ಯೋಜನೆಯಡಿ ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಜ.04 ರಂದು ನಡೆದ ಸುಳ್ಯ ತಾಲೂಕು ಮಟ್ಟದ ಅಡುಗೆ ಸಿಬ್ಬಂದಿಗಳ ಅಡುಗೆ ಸ್ಪರ್ಧೆಯಲ್ಲಿ ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಸಿಬ್ಬಂದಿಗಳಾದ ಗಿರಿಜಾ.ಕೆ, ಜಾನಕಿ, ಸಾವಿತ್ರಿ ಇವರು ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ. ಈ ತಂಡ ಕಳೆದ ಮೂರು ವರ್ಷಗಳಿಂದ ಜಿಲ್ಲಾಮಟ್ಟದ...

ಕೊಡಿಯಾಲ : ಕೆರೆಗೆ ಬಿದ್ದು ತಾಯಿ ಹಾಗೂ ಮಗು ಮೃತ್ಯು

ಕೊಡಿಯಾಲ ಗ್ರಾಮದ ಆರ್ವಾರ ಎಂಬಲ್ಲಿ ತಾಯಿ ಹಾಗೂ ಮಗು ಕೆರೆಗೆ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದ್ದು, ಹರೀಶ್ ಆರ್ವಾರ ಎಂಬುವವರ ಪತ್ನಿ ಮಧುಶ್ರೀ ಹಾಗೂ 2 ವರ್ಷದ ಮಗು ಧ್ವನಿ ಮೃತಪಟ್ಟವರು. ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸೇವಾ ನಿವೃತ್ತಿಗೊಂಡ ಯೋಧ ಹರೀಶ್ಚಂದ್ರ ಬೊಳುಗಲ್ಲು ಅವರಿಗೆ ಊರವರಿಂದ ಸ್ವಾಗತ

ಮಂಡೆಕೋಲು ಗ್ರಾಮದ ಬೊಳುಗಲ್ಲು ಹರೀಶ್ಚಂದ್ರ ರವರು ಭಾರತೀಯ ಸೇನೆಯ ವಿವಿಧ ಹುದ್ದೆಗಳಲ್ಲಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದ್ದು ಊರವರು ಅದ್ದೂರಿ ಮೆರವಣಿಗೆಯಲ್ಲಿ ಕರೆದೊಯ್ದು ಹಾರಾರ್ಪಣೆ ಮಾಡಿ ಸ್ವಾಗತಿಸಿದರು.ಗ್ರಾಮ ಪಂಚಾಯತ್, ಸಹಕಾರಿ ಸಂಘ ಹಾಗೂ ಊರವರು ಮಾಲಾರ್ಪಣೆಗೈದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಲ ಉದ್ದಂತಡ್ಕ, ಉಪಾಧ್ಯಕ್ಷೆ ಪ್ರತಿಮಾ,...
Loading posts...

All posts loaded

No more posts

error: Content is protected !!