ಸೆ.13 : ವಳಲಂಬೆ ದೇವಸ್ಥಾನದಲ್ಲಿ ಸಾಮೂಹಿಕ ಶನಿಪೂಜೆ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆ.13  ಶನಿವಾರದಂದು ಸಾಮೂಹಿಕ ಶನಿಪೂಜೆ ಹಾಗೂ ಬಲಿವಾಡು ಕೂಟ ಜರುಗಲಿದೆ. ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ  ಮಿತ್ರದೇವ ಮಡಪ್ಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಸಮೀಕ್ಷೆಯಲ್ಲಿ ಅರೆಭಾಷೆ ಎಂದು ನಮೂದಿಸಿ” : ಸದಾನಂದ ಮಾವಜಿ

ರಾಜ್ಯ ಸರ್ಕಾರ ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025ರ ವೇಳೆ ಅರೆಭಾಷೆ ಮಾತನಾಡುವವರು ಮಾತೃಭಾಷೆ ಕಾಲಂನಲ್ಲಿ ಅರೆಭಾಷೆ ಎಂಬುದಾಗಿ ನಮೂದಿಸಬೇಕು, ಇದರಿಂದ ಅರೆಭಾಷೆ ಮಾತನಾಡುವವರ ಸಂಖ್ಯೆ ಹಾಗೂ ನಿಖರ ಮಾಹಿತಿ ಪಡೆಯಲು ಸಾಧ್ಯ ಎಂಬುದಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ಸದಾನಂದ ಮಾವಜಿ ತಿಳಿಸಿದರು. ಅವರು ಇತ್ತೀಚೆಗೆ ಅಕಾಡೆಮಿ...
Ad Widget

ಎಲಿಮಲೆ ಜಾನದೀಪ ವಿದ್ಯಾ ಸಂಸ್ಥೆಯ ಐವರು ವಿದ್ಯಾರ್ಥಿಗಳು ಕಬಡ್ಡಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸುಳ್ಯ ಹಾಗೂ ಸೈಂಟ್ ಬ್ರಿಜಿಡ್ಸ್, ಸುಳ್ಯ ಇವುಗಳ ಆಶ್ರಯದಲ್ಲಿ ಸೆ. 10 ರಂದು ಸೈಂಟ್ ಬ್ರಿಜಿಡ್ಸ್, ಸುಳ್ಯ ಇದರ ಕ್ರೀಡಾಂಗಣ ದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಜ್ಞಾನದೀಪ ವಿದ್ಯಾ ಸಂಸ್ಥೆ ಎಲಿಮಲೆಯ 14...

ಕೊಲ್ಲಮೊಗ್ರು : ಸೆ.14 ರಂದು ಆಧಾರ್ ತಿದ್ದುಪಡಿ ಮತ್ತು ಅಂಚೆ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ಮತ್ತು ನೋಂದಣಿ ಕಾರ್ಯಕ್ರಮ

ಸೆ.14 ಆದಿತ್ಯವಾರದಂದು ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ನಡೆಯಲಿದ್ದು, ಈ ಸಂದರ್ಭದಲ್ಲಿ ಸೊಸೈಟಿ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ಇವುಗಳ ಸಹಯೋಗದೊಂದಿಗೆ ಕೊಲ್ಲಮೊಗ್ರದ ಮಯೂರ ಕಲಾಮಂದಿರದಲ್ಲಿ ಭಾರತೀಯ ಅಂಚೆ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ಮತ್ತು ಆಧಾರ್ ತಿದ್ದುಪಡಿ ಹಾಗೂ ನೋಂದಣಿ ಕಾರ್ಯಕ್ರಮ ನಡೆಯಲಿದೆ.ಹಾಗೆಯೇ ಸೆ.15 ಮತ್ತು...

ತಾಲೂಕು ಮಟ್ಟದ ಪಿಯು ವಿಭಾಗದ ಕಬಡ್ಡಿ ಪಂದ್ಯಾಟ ; ಸುಳ್ಯ ಎನ್.ಎಂ.ಪಿ.ಯು.ಸಿ ಹುಡುಗರ ತಂಡ ಚಾಂಪಿಯನ್

ಶಾಲಾ ಶಿಕ್ಷಣ ಇಲಾಖೆ(ಪ.ಪೂ)ಮತ್ತು ಎನ್.ಎಂ.ಪಿ.ಯು ಕಾಲೇಜು ಅರಂತೋಡು ಇವರ ಸಹಯೋಗದಲ್ಲಿ ನಡೆದ ಹುಡುಗರ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜು ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಸರ್ವಾಂಗೀಣ ಆಟಗಾರನಾಗಿ ಪ್ರಥಮ ಕಲಾ ವಿಭಾಗದ ಪ್ರಮೋದ್ ಎಂ.ಯು, ಉತ್ತಮ ಹಿಡಿತಗಾರನಾಗಿ ಪ್ರ.ವಾಣಿಜ್ಯ ವಿಭಾಗದ ಪ್ರೀತಮ್ ಮುಗದೂರ್ ಆಯ್ಕೆಯಾಗಿದ್ದಾರೆ. ಇವರಿಗೆ...

ಕರ್ನಾಟಕ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ – 2025 ಬಗ್ಗೆ ಜಿಲ್ಲಾ ಮಟ್ಟದ ಮಾಹಿತಿ ಕಾರ್ಯಾಗಾರ

ಕರ್ನಾಟಕ  ಅರೆಭಾಷೆ  ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕರ್ನಾಟಕ ಸರ್ಕಾರದ ಸಾಮಾಜಿಕ, ಶೈಕ್ಷಣಿಕ  ಮತ್ತು ಆರ್ಥಿಕ ಸಮೀಕ್ಷೆ 2025ರ ಬಗ್ಗೆ ಜಿಲ್ಲಾ ಮಟ್ಟದ ಮಾಹಿತಿ ಕಾರ್ಯಗಾರದ ಸಭೆಯು ಪುತ್ತೂರಿನ ಒಕ್ಕಲಿಗ ಸಭಾಭವನದ ಚುಂಚಶ್ರೀಯಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ರೇಣುಕಾ ಪ್ರಸಾದ್ ಕೆ.ವಿ.ಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಭಾ ಅಧ್ಯಕ್ಷತೆಯನ್ನು...

ಕಲ್ಮಡ್ಕ : ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಠಮಿ ಸಮಿತಿ ಪುನರ್ ರಚನೆ – ಅಧ್ಯಕ್ಷರಾಗಿ ಸಚಿತ್ ಕಲ್ಮಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಪುನೀತ್ ಮೂಲೆಮನೆ, ಕೋಶಾಧಿಕಾರಿಯಾಗಿ ಅಶ್ವಥ್ ಕುಳ್ಸಿಗೆ

ಕಲ್ಮಡ್ಕದ ಯುವಸ್ಪೂರ್ತಿ ಸೇವಾ ಸಂಘದ ವಾರ್ಷಿಕ ಮಹಾಸಭೆ ಹಾಗೂ 2026 -27ನೇ ಸಾಲಿನ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಠಮಿ ಸಮಿತಿ ರಚನೆಯು ಸೆ.05 ರಂದು ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಶಿವರಾಮ ಕೊಳೆಂಜಿಕೋಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಂಘದ ಕಾರ್ಯ ಚಟುವಟಿಕೆ ಹಾಗೂ ಲೆಕ್ಕ ಪತ್ರ ಮಂಡನೆ ಬಳಿಕ ನೂತನ ಕಾರ್ಯಕಾರಿ ಸಮಿತಿಯ ರಚನೆಯು...

ಐವರ್ನಾಡು :  ನೇಣು ಬಿಗಿದು ಯುವಕ ಆತ್ಮಹತ್ಯೆ

ಐವರ್ನಾಡು ಗ್ರಾಮದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.11 ನಡೆದಿದೆ. ಕುಳ್ಳಂಪಾಡಿ ಕುಂಚಣ್ಣ ಗೌಡರ ಪುತ್ರ ತೀರ್ಥಪ್ರಸಾದ್ ಕುಳ್ಳಂಪಾಡಿ (30)ಎಂಬವರು ಮನೆಯ ಹಿಂಬದಿಯಲ್ಲಿ ಸೀರೆಯನ್ನು ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳ್ಳಾರೆ ಪೊಲೀಸರು ಮಹಜರು ನಡೆಸಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಇವರು ಕೆಲ ಸಮಯದ ಹಿಂದೆ ಬೆಳ್ಳಾರೆಯಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು. ಇತ್ತೀಚೆಗೆ...

ಸುಳ್ಯ ಸೈoಟ್ ಜೋಸೆಫ್ ಸ್ಕೂಲ್ ನಲ್ಲಿ ಈದ್ ಮಿಲಾದ್ ಆಚರಣೆ – ಮಕ್ಕಳಲ್ಲಿ ಎಲ್ಲಾ ಧರ್ಮಗಳ ಆದರ್ಶಗಳನ್ನು ಬಿತ್ತಿದಾಗ ಪರಸ್ಪರ ಸಹೋದರತೆ ನೆಲೆ ಗೊಳ್ಳುತ್ತದೆ: ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ

ಸುಳ್ಯದ ಸೈoಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫ ( ಸ. ಅ.) ರವರ ಜನ್ಮ ದಿನಾಚರಣೆ ಅಂಗವಾಗಿ ಈದ್ ಮಿಲಾದ್ ಕಾರ್ಯಕ್ರಮ ಜರಗಿತುಪ್ರಾಸ್ತಾವಿಕ ವಾಗಿ ಮಾತನಾಡಿದ ಮುಖ್ಯ ಶಿಕ್ಷಕಿ ಸಿಸ್ಟರ್ ಮೇರಿ ಸ್ಟೆಲ್ಲಾ ಮಾತನಾಡಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಪ್ರತೀ ವರ್ಷ ದೀಪಾವಳಿ, ಕ್ರಿಸ್ಮಸ್ ಮತ್ತು ಈದ್ ಹಬ್ಬಗಳನ್ನು ಆಯಾ ಯ...

ಸಾವಯವ ಕೃಷಿ ಯೋಜನೆಯಲ್ಲಿ ಕೃಷಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ಬಯಸುವವರಿಗೆ ನಾಳೆ (ಸೆ.12) ಸಂದರ್ಶನ ಹಾಗೂ ತರಬೇತಿ

ಕರ್ನಾಟಕ ಸಾವಯವ ಕೃಷಿ ಯೋಜನೆ ಮಂಗಳೂರು ವಿಭಾಗದಲ್ಲಿ ಕೃಷಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ ಹಾಗೂ ಅರ್ಜಿ ಸಲ್ಲಿಸಲು ಬಯಸುವವರಿಗೆ ನಾಳೆ ( ಸೆ.12 ರಂದು ) ನೇಮಕಾತಿ ಆದೇಶ ಹಾಗೂ ತರಬೇತಿ ಬಗ್ಗೆ ಬೆಳಗ್ಗೆ 10 ಗಂಟೆಗೆ ಸುಳ್ಯದ ಹೋಟೆಲ್ ಸದರ್ನ್ ರೆಸಿಡೆನ್ಸಿ ಯಲ್ಲಿ ನೇರ ಸಂದರ್ಶನ ಮಾಹಿತಿ...
Loading posts...

All posts loaded

No more posts

error: Content is protected !!