ಹರಿಹರ ಪಳ್ಳತ್ತಡ್ಕ : ಸೆ.25 ರಂದು “ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ”

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇವರಿಂದ ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ನ ಸಹಯೋಗದೊಂದಿಗೆ ಸೆ.25 ರಂದು “ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ” ನಡೆಯಲಿದ್ದು, ಲಸಿಕೆ ನೀಡುವ ಸ್ಥಳಗಳ ವಿವರ ಈ ಕೆಳಗಿನಂತಿದೆ...ಪೂರ್ವಾಹ್ನ 10:00 ರಿಂದ 10:15 ರವರೆಗೆ ಹರಿಹರ ಪಳ್ಳತ್ತಡ್ಕ ಗ್ರಾಮ...

ಸುಬ್ರಹ್ಮಣ್ಯ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಪ್ರಾತ್ಯಕ್ಷತೆ ಹಾಗೂ ಅಪೌಷ್ಟಿಕತೆ ನಿವಾರಣೆ ಬಗ್ಗೆ ಮಾಹಿತಿ ಕಾರ್ಯಕ್ರಮ

ಸುಬ್ರಹ್ಮಣ್ಯ ಸೆಪ್ಟೆಂಬರ್ 22 : ಸುಬ್ರಹ್ಮಣ್ಯ ಕಾಶಿಕಟ್ಟೆ ಬಳಿ ಇರುವ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಮಕ್ಕಳು, ಗರ್ಭಿಣಿಯರಿಗೆ ಪೌಷ್ಟಿಕ ಆಹಾರದ ಪ್ರಾತ್ಯಕ್ಷತೆ ಹಾಗೂ ಅಪೌಷ್ಟಿಕತೆ ಬಗ್ಗೆ ಮಾಹಿತಿ ಕಾರ್ಯಕ್ರಮ ಸೋಮವಾರ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸುಬ್ರಹ್ಮಣ್ಯದ ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ಅವರು ಮಾತನಾಡುತ್ತಾ "ಇಂದಿನ ದಿನಗಳಲ್ಲಿ ಪುಟಾಣಿ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ನೀಡಿ...
Ad Widget

ಸುಳ್ಯ : ಸರ್ಕಾರಿ ಆಸ್ಪತ್ರೆಯಲ್ಲಿ ವಿಕಲಚೇತನರ ಗುರುತಿನ ಚೀಟಿ ಕ್ಯಾಂಪ್

ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಸೆ.23 ರಂದು ಆರೋಗ್ಯ ಇಲಾಖೆ ಹಾಗೂ ವಿಕಲಚೇತನರ ಇಲಾಖೆಯ ಸಹಯೋಗದೊಂದಿಗೆ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಹಾಗೂ ರಿನಿವಲ್ ಮಾಡುವ ಕ್ಯಾಂಪ್ ನಡೆಯಿತು.ತಾಲೂಕು ಪಂಚಾಯತ್ ನ ವಿಕಲಚೇತನರ ಇಲಾಖೆಯ ಎಂ.ಆರ್.ಡಬ್ಲ್ಯೂ ಚಂದ್ರಶೇಖರ, ನಗರ ಪಂಚಾಯತ್ ವಿಕಲಚೇತನರ ಇಲಾಖೆಯ ಯು.ಆರ್.ಡಬ್ಲ್ಯೂ ಪ್ರವೀಣ್ ನಾಯಕ್ ಹಾಗೂ ಸುಳ್ಯ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳ...

ಎಲಿಮಲೆ : ಜ್ಞಾನದೀಪ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಕಬಡ್ಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ ಕರ್ನಾಟಕ ಹಾಗೂ ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇದರ ಆಶ್ರಯದಲ್ಲಿ ನಡೆದ ರಾಜ್ಯ ಹಾಗೂ ಕ್ಷೇತ್ರಿಯ ಮಟ್ಟದ ಕಬಡ್ಡಿ ಪಂದ್ಯಾಟದ ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಕಲ್ಲಡ್ಕ ಶ್ರೀರಾಮ ಪ್ರೌಢ ಶಾಲೆಯ ಸದಸ್ಯರಾಗಿ ಉತ್ತಮ ಪ್ರದರ್ಶನವನ್ನು ನೀಡಿ ಬಲಿಷ್ಠ ಬೆಳಗಾವಿ, ತಮಿಳುನಾಡು ತಂಡಗಳನ್ನು ಮಣಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾದ ಜ್ಞಾನದೀಪ ಎಲಿಮಲೆ ಶಾಲೆಯ 10ನೇ ತರಗತಿ...

ಡಾ.ನವೀನ್‌ಕುಮಾರ್ ಕೆ ಪೆರುವಾಜೆ ರವರಿಗೆ ವಾಣಿಜ್ಯ ಶಾಸ್ತ್ರದಲ್ಲಿ ಪಿ.ಎಚ್.ಡಿ ಪದವಿ

ಮಂಗಳೂರು ವಿಶ್ವವಿದ್ಯಾಲಯ ಮಂಗಳಗಂಗೋತ್ರಿಯ ವಾಣಿಜ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ನವೀನ್‌ಕುಮಾರ್ ಕೆ ಅವರು ಮಂಡಿಸಿದ ವಾಣಿಜ್ಯ ಶಾಸ್ತ್ರಕ್ಕೆ ಸಂಬಂಧಿಸಿದ "ಫೈನಾನ್ಸಿಯಲ್ ಪರ್ಫಾರ್ಮೆನ್ಸ್ ಅನಾಲಿಸಿಸ್ ಆಫ್ ಸೆಲೆಕ್ಟ್ ಹೆಲ್ತ್ ಇನ್ಸೂರೆನ್ಸ್ ಕಂಪೆನಿಸ್ ಇನ್ ಇಂಡಿಯಾ" ಎಂಬ ಸಂಶೋಧನಾ ವಿಷಯದಲ್ಲಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಈ ಸಂಶೋಧನೆ ಮಂಗಳೂರು ವಿಶ್ವವಿದ್ಯಾಲಯ ಮಂಗಳಗಂಗೋತ್ರಿಯ ವಾಣಿಜ್ಯಶಾಸ್ತ್ರ ವಿಭಾಗದ ಪ್ರೊ. ಈಶ್ವರ...

ಪಂಜ : 2012-13ನೇ ಸಾಲಿನ ಪ.ಪೂ.ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳ ಸಮ್ಮಿಲನ – ಗುರುಗಳಿಗೆ ಸನ್ಮಾನ

ಸ್ನೇಹ ಸಮ್ಮಿಲನ ತಂಡ ಪಂಜ 2012-13ನೇ ಸಾಲಿನ ಪಿಯುಸಿ ಹಳೆ ವಿದ್ಯಾರ್ಥಿಗಳು ಹಮ್ಮಿಕೊಂಡು ಬರುವ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಸೆ.21 ರಂದು ಸರ್ಕಾರಿ ಪದವಿಪೂರ್ವ ಕಾಲೇಜು ಪಂಜ ಇಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪಂಜ ಕಾಲೇಜಿನ ಪ್ರಾಂಶುಪಾಲರಾಗಿದ್ದು ಸೇವಾ ನಿವೃತ್ತಿ ಹೊಂದಿರುವ ಶ್ರೀ ವೆಂಕಪ್ಪ ಗೌಡ.ಕೆ  ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪಂಜ ಪದವಿ ಪೂರ್ವ ಕಾಲೇಜಿನ ಈಗಿನ...

ಸುಬ್ರಹ್ಮಣ್ಯ : ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ “ನದಿ ಪೂಜನ ಕಾರ್ಯಕ್ರಮ”

ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಸೆ.22 ರಂದು ಸುಬ್ರಹ್ಮಣ್ಯದ ಕುಮಾರಧಾರದ ಬಳಿ “ನದಿ ಪೂಜನ ಕಾರ್ಯಕ್ರಮ” ನಡೆಯಿತು.ಶೇಷಪ್ಪ ಅಜಿಲ ಕೋಟೆಬೈಲು ದೀಪ ಪ್ರಜ್ವಲನೆಯ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು.ನಂತರ ಸುಬ್ರಹ್ಮಣ್ಯದ ಶ್ರೀವಲ್ಲಿ ಭಜನಾ ತಂಡ ಹಾಗೂ ಸುಖಪ್ರಧಾ ಭಜನಾ ತಂಡದ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿಯ ಸಂಚಾಲಕರಾದ ಕಿಶೋರ್...

ಅಡ್ತಲೆ : ಚಂದನಾ ಮಹಿಳಾ ಮಂಡಲ ಅಸ್ತಿತ್ವಕ್ಕೆ – ಅಧ್ಯಕ್ಷರಾಗಿ ಶ್ರೀಮತಿ ಸರಸ್ವತಿ ಚಿದಾನಂದ ಅಡ್ತಲೆ, ಕಾರ್ಯದರ್ಶಿಯಾಗಿ ರೇಖಾ ಪ್ರವೀಣ್ ಬೆದ್ರುಪಣೆ

ಅಡ್ತಲೆಯಲ್ಲಿ ನೂತನವಾಗಿ ಚಂದನಾ ಮಹಿಳಾ ಮಂಡಲ ಸೆ.21 ಅಸ್ತಿತ್ವಕ್ಕೆ ಬಂದಿದ್ದು ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.‌ನೂತನ ಅಧ್ಯಕ್ಷರಾಗಿ ಶ್ರೀಮತಿ ಸರಸ್ವತಿ ಚಿದಾನಂದ ಅಡ್ತಲೆ, ಉಪಾಧ್ಯಕ್ಷರಾಗಿ ಯಶೋದ ಜಯರಾಮ ಅಡ್ತಲೆ, ಕಾರ್ಯದರ್ಶಿಯಾಗಿ ರೇಖಾ ಪ್ರವೀಣ್ ಬೆದ್ರುಪಣೆ, ಜತೆ ಕಾರ್ಯದರ್ಶಿಯಾಗಿ ಅಶ್ವಿನಿ ಅಜಿತ್ ಪಿಂಡಿಮನೆ, ಕೋಶಾಧಿಕಾರಿಯಾಗಿ ದಿವ್ಯ ಮೋಹನ್ ಅಡ್ತಲೆ ಆಯ್ಕೆಯಾದರು. ನಿರ್ದೇಶಕರಾಗಿ ಶಾಮಲಾ ಹರಿಪ್ರಸಾದ್ ಅಡ್ತಲೆ, ಸುಜಯ...

ಸೆ.25 ರಂದು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಮುಂಭಾಗ “ನ್ಯಾಯಕ್ಕಾಗಿ ಒಂದಾಗೋಣ ಸಮಿತಿ”ಯಿಂದ ಪ್ರತಿಭಟನೆ

ಭ್ರಷ್ಟಾಚಾರದ ವಿರುದ್ಧದ ಕೂಗಿನೊಂದಿಗೆ ಕೊಲ್ಲಮೊಗ್ರು ಹಾಗೂ ಕಲ್ಮಕಾರು ಗ್ರಾಮಗಳ ಜನರುಗಳ ಒಗ್ಗಟ್ಟಿನೊಂದಿಗೆ ರೂಪುಗೊಂಡ “ನ್ಯಾಯಕ್ಕಾಗಿ ಹೋರಾಡೋಣ” ಸಮಿತಿಯ ವತಿಯಿಂದ ಸೆ.25 ರಂದು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಯಲಿರುವುದು ಎಂದು ಹೋರಾಟ ಸಮಿತಿಯವರು ತಿಳಿಸಿದ್ದು, ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಸಿಬ್ಬಂದಿ ಕಳವು ಆರೋಪದ ಬಗ್ಗೆ ಪೋಲೀಸ್ ದೂರು ನೀಡದೇ, ಸೂಕ್ತ ತನಿಖೆಯನ್ನು ನಡೆಸದೇ ಗ್ರಾಮ...

ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆಯವರಿಗೆ ದ.ರಾ. ಬೇಂದ್ರೆ ರಾಷ್ಟ್ರಪ್ರಶಸ್ತಿ ಪ್ರದಾನ

ಬೆಳಕು ಸಾಹಿತ್ಯಿಕ, ಶೈಕ್ಷಣಿಕ, ಸಾಂಸ್ಕೃತಿಕ ಟ್ರಸ್ಟ್ (ರಿ) ರಾಯಚೂರು ಇದರ ರಾಷ್ಟ್ರಮಟ್ಟದ ಬೆಳಕು ಸಮ್ಮೇಳನ ಸೆ:21 ರಂದು ರಾಯಚೂರಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಜರುಗಿತು.. ಇಲ್ಲಿ ನೀಡುವ ದ.ರಾ ಬೇಂದ್ರೆ ರಾಷ್ಟ್ರಮಟ್ಟದ ಪ್ರಶಸ್ತಿಗೆ ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆಯವರ'ಸರಿಯಾಗಲಿ ಸಮಾಜ'ಎಂಬ ಕವನ ಆಯ್ಕೆಯಾಗಿದ್ದು 'ನೆನಪಿನ ಬುತ್ತಿ' ಸಂಪಾದಿತ ಕವನ ಸಂಕಲನದಲ್ಲೂ ಅದು ಸ್ಥಾನ ಪಡೆದಿರುವುದಕ್ಕೆ...
Loading posts...

All posts loaded

No more posts

error: Content is protected !!