- Tuesday
- March 4th, 2025

ಹರಿಹರ ಪಳ್ಳತ್ತಡ್ಕ ಗ್ರಾಮದ ಕುಕ್ಕುಂದ್ರಡ್ಕ ನಿವಾಸಿ ಕೃಷ್ಣ ಗೌಡ ವಾಡ್ಯಪ್ಪನ ಮನೆ ರವರು ಇಂದು(ಜ.22) ಸ್ವಗೃಹದಲ್ಲಿ ನಿಧನರಾದರು.ಮೃತರಿಗೆ 75 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಹೊನ್ನಮ್ಮ, ಪುತ್ರ ನವೀನ್, ಪುತ್ರಿಯರಾದ ಯಶೋಮತಿ, ಧನ್ಯ ಹಾಗೂ ಅಳಿಯಂದಿರು, ಸೊಸೆ, ಮೊಮ್ಮಕ್ಕಳು, ಸಹೋದರ, ಸಹೋದರಿ ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.

ಕರ್ನಾಟಕದಾದ್ಯಂತ ಮತ್ತು ಕರಾವಳಿಯಲ್ಲಿ ಸುದ್ದಿ ಮತ್ತು ಮನೋರಂಜನಾ ಕ್ಷೇತ್ರದ ವಿಶೇಷ ಚಾಪನ್ನು ಮೂಡಿಸಿರುವ V4 ನ್ಯೂಸ್ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಎಂಬಿ ಫೌಂಡೇಶನ್‌ನ ಎಂ.ಬಿ. ಸದಾಶಿವ ಸಹಯೋಗದಲ್ಲಿ 'ಅರೆಭಾಷೆ ಕಾಮಿಡಿ' ರಿಯಾಲಿಟಿ ಶೋ ನಡೆಯಲಿದ್ದು ರಿಯಾಲಿಟಿ ಶೋಗೆ ತಂಡಗಳ ಆಯ್ಕೆಗೆ ಫೆ.16ರಂದು ಸುಳ್ಯದ ಲಯನ್ಸ್ ಸಭಾಭವನದಲ್ಲಿ ಆಡಿಷನ್ ನಡೆಯಲಿದೆ...

ಗುತ್ತಿಗಾರಿನ ಮುತ್ತಪ್ಪ ನಗರದಲ್ಲಿ ಆಮ್ಲೆಟ್ ವ್ಯಾಪಾರ ನಡೆಸುತ್ತಿರುವ ಕೇಶವ ಕಡೋಡಿ ಅವರ ಅಂಗಡಿಗೆ ಶನಿವಾರ ರಾತ್ರಿ ಕಳ್ಳರು ಬೀಗ ಒಡೆದು ನುಗ್ಗಿ ಜಾಲಾಡಿದ್ದಾರೆ. ಆದಿತ್ಯವಾರ ಸಂಜೆ ಅಂಗಡಿಗೆ ಬಂದಾಗ ವಿಷಯ ಗೊತ್ತಾಗಿದೆ. ಗೂಡಂಗಡಿಯ ಬಾಗಿಲು, ಬೀಗ ಒಡೆದು ಹಾನಿಯಾಗಿದ್ದು ಕಳ್ಳರು ಸ್ಥಳೀಯರೇ ಇರಬೇಕೆಂಬ ಅನುಮಾನ ಮೂಡುವಂತಾಗಿದೆ..

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಸಮಾಜ ಸೇವಕರು, ಉದ್ಯಮಿಗಳು ಹಾಗೂ ಸೂರು ಇಲ್ಲದವರಿಗೆ ಸೂರು ನಿರ್ಮಾಣದ ರೂವಾರಿ ಮಹಮ್ಮದ್ ಕುಕ್ಕುವಳ್ಳಿ ಅವರು ಇಂದು ಅರಂತೋಡಿಗೆ ಬೇಟಿ ನೀಡಿದರು. ಈ ಸಂದರ್ಭದಲ್ಲಿ ಅವರನ್ನು ಅರಂತೋಡು ಜುಮಾ ಮಸೀದಿ ಅಧ್ಯಕ್ಷರಾದ ಅಶ್ರಫ್ ಗುಂಡಿ ಹಾಗೂ ಎಸ್.ಕೆ.ಎಸ್.ಎಸ್.ಎಫ್ ನ ವಿಖಾಯತಂಡದ ಸದಸ್ಯ ತಾಜುದ್ಧೀನ್ ಅರಂತೋಡು ಶಾಲು ಹೊದಿಸಿ,...

ದೇವಚಳ್ಳ ಗ್ರಾಮದ ಮುಂಡೋಡಿ ಪದ್ಮಯ್ಯ ಗೌಡ ರವರ ಹಿರಿಯ ಮಗನಾದ ಮುಂಡೋಡಿ ಶಿವಾನಂದ ಗೌಡ ರವರು ಜ.19 ರಂದು ಸ್ವಗೃಹದಲ್ಲಿ ನಿಧನರಾದರು.ಮೃತರಿಗೆ 76 ವರ್ಷ ವಯಸ್ಸಾಗಿತ್ತು. 1984 ರಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ತಮ್ಮ ವೃತ್ತಿಯನ್ನು ಆರಂಭಿಸಿದ ಇವರು ಮೈಸೂರು, ಕಾರ್ಕಳ ಹಾಗೂ ಮಂಗಳೂರು ಕ್ಷೇತ್ರಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದು, ಇವರು ಕೆ.ಇ.ಬಿ ಯಲ್ಲಿ ಕಾನೂನು...

ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ರವಿವಾರ ರಾತ್ರಿ ಭಕ್ತರು ಶ್ರೀದೇವಿಯ ಶಯನೋತ್ಸವಕ್ಕೆ ಸಮರ್ಪಿಸಿದ ರಾಶಿ ರಾಶಿ ಮಲ್ಲಿಗೆ ಹೂವಿನಲ್ಲಿ ಮಹಾಮಾತೆ ಜಲದುರ್ಗಾದೇವಿ ಪವಡಿಸಿದಳು.! ಇಂತಹ ಅಪೂರ್ವ ಕ್ಷಣ ಶ್ರೀ ಕ್ಷೇತ್ರ ಸಾಕ್ಷಿಯಾಯಿತು. ಬ್ರಹ್ಮರಥೋತ್ಸವದ ಬಳಿಕ ಜಲದುರ್ಗಾದೇವಿ ಶಯನೋತ್ಸವ ನಡೆಯಲಿದ್ದ ಕಾರಣ ಮಲ್ಲಿಗೆ ಶಯನೋತ್ಸವ ಎಂಬ ವಿಶಿಷ್ಟ ಸೇವೆಗೆ...

ಕಳಂಜ ಗ್ರಾಮದ ಮುಂಡುಗಾರು ಚಿನ್ನಪ್ಪ ಗೌಡರು ಇಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ನಾಗಪ್ಪ ಗೌಡ ಮುಂಡುಗಾರು, ತಿರುಮಲೇಶ್ವರ ಮುಂಡುಗಾರು ಹಾಗೂ ಪುತ್ರಿ ಶ್ರೀಮತಿ ಲಲಿತಾ ಜನಾರ್ದನ ಗೌಡ ಬಾಳಾಜೆ ಮತ್ತು ಸೊಸೆಯಂದಿರು, ಮೊಮಕ್ಕಳು, ಕುಟುಂಬಸ್ಥರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಆಕರ್ಷಕ ಬೆಡಿ : ಸಾಂಪ್ರದಾಯಿಕ ಉಡುಗೆಯೊಂದಿಗೆ ರಥ ಎಳೆದ ಭಕ್ತರು 10 ಸಾವಿರಕ್ಕೂ ಅಧಿಕ ಭಕ್ತರಿಂದ ಅನ್ನಪ್ರಸಾದ ಸ್ವೀಕಾರ : ದಶ ದಿಕ್ಕಿನಿಂದ ಹರಿದು ಬಂದ ಭಕ್ತ ಸಾಗರ ರಥ ಬೀದಿಯಲ್ಲಿ 650 ಕ್ಕೂ ಅಧಿಕ ಭಜಕರಿಂದ ಏಕಕಾಲದಲ್ಲಿ ಕುಣಿತ ಭಜನೆ ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ...

ಗುತ್ತಿಗಾರು ಗ್ರಾಮದ ಪೈಕ ಶ್ರೀ ಶಂಖಚೂಡ ಕ್ಷೇತ್ರ ಪುರಾಳಬದಿ ಮಣಿಯಾನ ದಲ್ಲಿ (ಕಂಚು ಕಲ್ಲಿಗೆ ತೆಂಗಿನಕಾಯಿ ಒಡೆಯುವ ಸ್ಥಳ) ಜ. 19ರಂದು ಕುಂಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಶಂಖಚೂಡ ದೇವರು ಮತ್ತು ಪರಿವಾರ ಸಾನಿಧ್ಯಗಳಿಗೆ ನೂತನವಾಗಿ ನಿರ್ಮಿಸಿರುವ ಕಟ್ಟೆಗಳಲ್ಲಿ ನವೀಕರಣ ಪುನರ್ ಪ್ರತಿಷ್ಠಾ ಕಲಶೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳು ಆಶ್ವತ್ ಇವರ...

All posts loaded
No more posts