ಬೆಳ್ಳಾರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೆಳ್ಳಾರೆಯ ದೇವಿ ಹೈಟ್ಸ್‌ನ ಅಮ್ಮು ರೈ ಕಾಂಪ್ಲೆಕ್ಸ್ ನಲ್ಲಿರುವ ಪುತ್ತೂರಿನ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ಶಾಖೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಎ.11ರಂದು ನಡೆಯಿತು. ಥೈರಾಯಿಡ್, ರಕ್ತದೊತ್ತಡ, ಮಧುಮೇಹ‌ ರೋಗಿಗಳ ತಪಾಸಣೆ ನಡೆಯಿತು. ಹಲವಾರು ಮಂದಿ ಫಲಾನುಭವಿಗಳು ಶಿಬಿರದ ಸದುಪಯೋಗ ಪಡೆದುಕೊಂಡರು. (ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ)

ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷರಾಗಿ ಕಿರಣ್ ಬುಡ್ಲೆಗುತ್ತು ಆಯ್ಕೆ

48 ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರವಾದ ಮಂಗಳೂರಿನಲ್ಲಿ ಸ್ಥಾಪನೆಯಾದ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಮಂಗಳೂರು ಇದರ ನೂತನ ಅಧ್ಯಕ್ಷರಾಗಿ ಕಿರಣ್ ಬುಡ್ಲೆಗುತ್ತು ರವರು ಆಯ್ಕೆಯಾಗಿದ್ದಾರೆ.ಏ.14ರಂದು ಮಂಗಳೂರಿನಲ್ಲಿ ನಡೆದ ಸಂಘದ ನೂತನ ನಿರ್ದೇಶಕರ ಸಭೆಯಲ್ಲಿ ಕಿರಣ್ ಬುಡ್ಲೆಗುತ್ತು ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಸಂಘದ ಕಾರ್ಯದರ್ಶಿಯಾಗಿ ನವೀನ್ ಚಂದ್ರ ಭೋಜಾರ, ಉಪಾಧ್ಯಕ್ಷರಾಗಿ...
Ad Widget

ಕಲ್ಮಕಾರು : ಕ್ರಿಮಿನಾಶಕ ಸೇವಿಸಿ ವ್ಯಕ್ತಿ ಆತ್ಮಹತ್ಯೆ

ದೀರ್ಘಕಾಲದ ಅನಾರೋಗ್ಯ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಕ್ರಿಮಿನಾಶಕ ಸೇವಿಸಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಮಕಾರು ಗ್ರಾಮದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಮೃತರನ್ನು ಕಲ್ಮಕಾರು ಗ್ರಾಮದ ನಿವಾಸಿ ತುಕರಾಮ ಗೌಡ(63) ಎಂದು ಗುರುತಿಸಲಾಗಿದೆ. ಕಳೆದ ಕೆಲವು ಸಮಯದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಇದರಿಂದ ತೀವ್ರ ಮಾನಸಿಕ...

ಪೆರುವಾಜೆಯಲ್ಲಿ ಮಕ್ಕಳ ಬೇಸಿಗೆ ಶಿಬಿರ

ಗ್ರಾಮ ಪಂಚಾಯತ್ ಪೆರುವಾಜೆ, ಗ್ರಾಮ ಪಂಚಾಯತ್ ಗ್ರಂಥಾಲಯ ಪೆರುವಾಜೆ ಹಾಗೂ ಜೇಸಿಐ ಬೆಳ್ಳಾರೆ ಮತ್ತು ಸಹೃದಯಿ ದಾನಿಗಳ ಆಶ್ರಯದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವನ್ನು ಏ.15ರಂದು ಬೆಳ್ಳಾರೆ ಜೇಸಿಐ ಪೂರ್ವಾಧ್ಯಕ್ಷ ಪ್ರದೀಪ್ ಕುಮಾರ್ ರೈ ಪನ್ನೆ ಉದ್ಘಾಟನೆ ಮಾಡಿದರು.ಈ ಸಂದರ್ಭದಲ್ಲಿ ಬೆಳ್ಳಾರೆಯ ಜೇಸಿಐ ಅಧ್ಯಕ್ಷರಾದ ಪೂರ್ಣಿಮಾ ಪೆರ್ಲಂಪಾಡಿ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ...

ಬೆಳ್ಳಾರೆಯಲ್ಲಿ ಹೋಟೆಲ್ ಶ್ರೀ ಲಕ್ಷ್ಮೀ ಶುಭಾರಂಭ

ಬೆಳ್ಳಾರೆಯ ಮೇಲಿನಪೇಟೆಯ ಪಂಚಾಯತ್ ಬಿಲ್ಡಿಂಗ್‌ನಲ್ಲಿ ನವೀನ್ ಕೆಯ್ಯೂರು ಮಾಲಕತ್ವದ ಹೋಟೆಲ್ ಶ್ರೀ ಲಕ್ಷ್ಮೀ ಎ.14ರಂದು ಶುಭಾರಂಭಗೊಂಡಿತು. ಇಲ್ಲಿ ಚಹಾ, ಕಾಫಿ, ತಿಂಡಿ,ಊಟ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ. (ವರದಿ-ಎಂ. ಎ. ಮುಸ್ತಫಾ ಬೆಳ್ಳಾರೆ)

ಏ.18 ಹಾಗೂ 19 ರಂದು ಚೆಡಾವು ಸ್ವಾಮಿ ಕೊರಗಜ್ಜ ದೈವದ ಸನ್ನಿಧಿಯಲ್ಲಿ ನೇಮೋತ್ಸವ

ಸಂಪಾಜೆ ಗ್ರಾಮದ ಚೆಡಾವು ಸ್ವಾಮಿ ಕೊರಗಜ್ಜ ದೈವದ ಸನ್ನಿಧಿಯಲ್ಲಿ ಏ.18 ಮತ್ತು 19 ರಂದು ದೈವಗಳ ವಾರ್ಷಿಕ ನೇಮೋತ್ಸವ ನಡೆಯಲಿದೆ. ಏ.18 ರಂದು ಸಂಜೆ 7:00 ರಿಂದ ಚೌಕಾರು ಮಂತ್ರವಾದಿ ಗುಳಿಗ ದೈವದ ನೇಮ, ರಾತ್ರಿ 8:30 ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 10:30 ರಿಂದ ಕಲ್ಲುರ್ಟಿ ದೈವ ಮತ್ತು ವರ್ಣಾರ ಪಂಜುರ್ಲಿ ದೈವಗಳ ನೇಮ...

ಇಂದಿನ(ಏಪ್ರಿಲ್ 17) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಅಡಿಕೆ, ಕಾಳುಮೆಣಸು ಬೆಲೆಯಲ್ಲಿ ಇಳಿಕೆ..! : ರಬ್ಬರ್ ಬೆಲೆಯಲ್ಲಿ ಚೇತರಿಕೆ..! ; ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 17 ಏಪ್ರಿಲ್ 2026ವಾರ : ಶುಕ್ರವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಏಪ್ರಿಲ್ 17) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 290-445-477/480ಹಳೆ ಅಡಿಕೆ...

ನಾಳೆ (ಏ.18) ಆಸರೆ ಎಲೆಕ್ಟ್ರಾನಿಕ್ಸ್ ನ ಆಸರೆ ಉಳಿತಾಯ ಯೋಜನೆಯ ಪ್ರಥಮ ಡ್ರಾ – ಪ್ರತಿ ವಾರ 10 ಸಾವಿರ ಮೌಲ್ಯದ ಗೃಹೋಪಯೋಗಿ ವಸ್ತು ಗೆಲ್ಲಿ

ಆಸರೆ ಎಲೆಕ್ಟ್ರಾನಿಕ್ಸ್ ಗುತ್ತಿಗಾರು ಸಂಸ್ಥೆಯ ಬಹು‌ನಿರೀಕ್ಷಿತ ಆಸರೆ ಉಳಿತಾಯ ಯೋಜನೆ ಇದರ ಮೊದಲ ಡ್ರಾ ಏ.18 ಶನಿವಾರದಂದು ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ. ಪ್ರತೀ ವಾರ ರೂ 200 ರಂತೆ 50 ವಾರಗಳ ಯೋಜನೆಯಾಗಿದ್ದು ನಿಮ್ಮ ಉಳಿತಾಯಕ್ಕೆ ಶೇ 5 ಪ್ರತಿಶತ ಬಡ್ಡಿಯನ್ನು ನೀಡಲಾಗುವುದು. ಪ್ರತೀ ವಾರ 10,000 ಅದಿಕ ಮೌಲ್ಯದ ವಸ್ತುಗಳನ್ನು ಗೆಲ್ಲುವ ಅವಕಾಶವಿದೆ. ಈ‌...

ಬೆಳ್ಳಾರೆಯಲ್ಲಿ ಸಿಟಿ ಜನರಲ್ ಸ್ಟೋರ್ ಪುನರಾರಂಭ

ಬೆಳ್ಳಾರೆ ಮೇಲಿನಪೇಟೆಯ ಎಂ.ಆರ್. ಕಾಂಪ್ಲೆಕ್ಸಿನಲ್ಲಿ ಅಬ್ದುಲ್ ಕರೀಂ ಅಯ್ಯನಕಟ್ಟೆ ಮಾಲಕತ್ವದ ಸಿಟಿ ಜನರಲ್ ಸ್ಟೋರ್ ನೂತನ ಶೈಲಿಯೊಂದಿಗೆ ಎ.16ರಂದು ಪುನರಾರಂಭಗೊಂಡಿತು. ಇಲ್ಲಿ ದೈನಂದಿನ ಅಗತ್ಯ ವಸ್ತುಗಳು ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.(ವರದಿ-ಎಂ.ಎ. ಮುಸ್ತಫಾ ಬೆಳ್ಳಾರೆ)

ಮಹಾಲಿಂಗ ಗೌಡ ಚೆಮ್ನೂರು ನಿಧನ

ನಾಲ್ಕೂರು ಗ್ರಾಮದ ಹಾಲೆಮಜಲು ಚೆಮ್ನೂರು ಮನೆ ಮಹಾಲಿಂಗ ಗೌಡ ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಏ.16 ರಂದು ನಿಧನರಾದರು.‌ ಮೃತರು ಪತ್ನಿ ಗುತ್ತಿಗಾರು ಗ್ರಾ.ಪಂ ಮಾಜಿ ಅಧ್ಯಕ್ಷೆ ರವಿಕಲಾ ಚೆಮ್ನೂರು, ಪುತ್ರ ಆಶಿಕ್, ಪುತ್ರಿ ಶ್ರೀಮತಿ ಆಶಿತಾ ಸೇರಿದಂತೆ ಅಳಿಯ, ಸೊಸೆ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
Loading posts...

All posts loaded

No more posts

error: Content is protected !!