Ad Widget

ಜಿಲ್ಲಾ ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸನತ್ ಮುಳುಗಾಡು

ದಕ್ಷಿಣ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸನತ್ ಮುಳುಗಾಡು ಅಯ್ಕೆಯಾಗಿದ್ದಾರೆ. ಕಾನೂನು ಪದವೀಧರರಾಗಿ, ಪ್ರಗತಿಪರ ಕೃಷಿಕರಾಗಿ, ಕುಕ್ಕುಟೋದ್ಯಮಿಯಾಗಿರುವ ಇವರು ಗುತ್ತಿಗಾರು ಗ್ರಾ.ಪಂ.ಸದಸ್ಯರಾಗಿ, ಉಪಾಧ್ಯಕ್ಷರಾಗಿ ಗ್ರಾಮಾಭಿವೃದ್ದಿಗೆ ದುಡಿದಿದ್ದಾರೆ. ಮಿತ್ರಬಳಗ ವಳಲಂಬೆ ಇದರ ಅಧ್ಯಕ್ಷರಾಗಿ, ಜಿಲ್ಲಾ ಕುಕ್ಕುಟ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾಗಿ, ಲಯನ್ಸ್ ಸದಸ್ಯರಾಗಿ, ಗೌಡ ಸಂಘದ ತಾಲೂಕು ನಿರ್ದೇಶಕ ರಾಗಿ, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ...

ಮಂಡೆಕೋಲು ಹಣ್ಣಿನ ಗಿಡ ನಾಟಿ ಹಾಗೂ ಸಸಿ ವಿತರಣೆ

ಗ್ರಾಮ ವಿಕಾಸ ಸಮಿತಿ ಮಂಡೆಕೋಲು ಅರಣ್ಯ ಇಲಾಖೆ ಮತ್ತು ಗ್ರಾಮದ ವಿವಿಧ ಸಂಘಟನೆಗಳ ವತಿಯಿಂದ ಸಸಿ ನೆಡುವುದು ಮತ್ತು ವಿತರಣಾ ಕಾರ್ಯಕ್ರಮ ನಡೆಯಿತು.ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷರಾದ ಶ್ರೀ ಉದಯ ಆಚಾರ್ ಅವರು ಭಾಗವಹಿಸಿದ ಎಲ್ಲಾ ಪ್ರಮುಖರನ್ನು ಸ್ವಾಗತಿಸಿದರು ಉಪ ವಲಯ ಅರಣ್ಯಾಧಿಕಾರಿ ಶ್ರೀಯುತ ಯಶೋಧರ ಮತ್ತು ಮಂಡೆಕೋಲು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರ ಶ್ರೀಧರ ಕಣೆಮರಡ್ಕ...
Ad Widget

ಕನಕಮಜಲು ಯುವಕ ಮಂಡಲ- ಪದಗ್ರಹಣ

ಯುವಜನ ವಿಕಾಸ ಕೇಂದ್ರ, ಯುವಕ ಮಂಡಲ ಕನಕಮಜಲು ಇದರ ವತಿಯಿಂದ ವಾರ್ಷಿಕ ಮಹಾಸಭೆ ಮತ್ತು ಪದಗ್ರಹಣ ಸಮಾರಂಭ ಜೂನ್ 14 ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.  ಸಭಾಧ್ಯಕ್ಷತೆಯನ್ನು  ಯುವಕ ಮಂಡಲ ಕನಕಮಜಲು ಇದರ ಅಧ್ಯಕ್ಷ ಜಯಪ್ರಸಾದ್  ಕಾರಿಂಜ ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಪ್ರಾ.ಕೃ.ಪ.ಸ.ಸಂ.ನಿ. ಜಾಲ್ಸೂರ್ ಕನಕಮಜಲು ಇದರ ಅಧ್ಯಕ್ಷ ಡಾ| ಗೋಪಾಲಕೃಷ್ಣ ಭಟ್ ವಲಬೈಲು ಮತ್ತು...

ಯುವಕ ಮಂಡಲ ಕನಕಮಜಲು-ಅಧ್ಯಕ್ಷ ಜಯಪ್ರಸಾದ್ ಕಾರಿಂಜ, ಕಾರ್ಯದರ್ಶಿ ಬಾಲಚಂದ್ರ ನೆಡಿಲು,

ಕನಕಮಜಲು ಯುವಕ ಮಂಡಲದ  ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಗೌರವಾಧ್ಯಕ್ಷರಾಗಿ ಹರಿಪ್ರಸಾದ್ ಮಾಣಿಕೊಡಿ ,ನೂತನ  ಅಧ್ಯಕ್ಷರಾಗಿ ಜಯಪ್ರಸಾದ್ ಕಾರಿಂಜ, ಉಪಾಧ್ಯಕ್ಷರಾಗಿ ರಕ್ಷಿತ್ ಅಕ್ಕಿಮಲೆ, ಕಾರ್ಯದರ್ಶಿ ಯಾಗಿ ಬಾಲಚಂದ್ರ ನೆಡಿಲು ಆಯ್ಕೆಯಾದರು. ಜಯಪ್ರಸಾದ್ ಕಾರಿಂಜ ಜೊತೆ ಕಾರ್ಯದರ್ಶಿ ಯಾಗಿ ಹರ್ಷಿತ್ ಉಗ್ಗಮೂಲೆ, ಕ್ರೀಡಾ ಕಾರ್ಯದರ್ಶಿಯಾಗಿ  ಚಂದ್ರಶೇಖರ ನೆಡಿಲು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅಶ್ವಥ್ ಅಡ್ಕಾರ್, ಖಜಾಂಜಿಯಾಗಿ  ಸಂದೀಪ್...

ಅಬ್ದುಲ್ ಲತೀಫ್ ಹತ್ಯೆಗೈದ ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಗೃಹ ಸಚಿವರಿಗೆ ಮನವಿ

ಜೂನ್ 5 ರಂದು ಮುಲ್ಕಿಯಲ್ಲಿ ಇತ್ತಂಡಗಳ ಘರ್ಷಣೆಯಲ್ಲಿ ಹತ್ಯೆಗೊಳಗಾದ ಸುಳ್ಯ ತಾಲೂಕು ಮುರುಳ್ಯ ಗ್ರಾಮದ ಕುಕ್ಕಟ್ಟೆ ನಿವಾಸಿ ಅಬ್ದುಲ್ ಲತೀಫ್ ಅವರನ್ನು ಹಾಡುಹಗಲೇ ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿದ ದುಷ್ಕರ್ಮಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮುರುಳ್ಯ ಗ್ರಾಮದ ಯೂತ್ ಫ್ರೆಂಡ್ಸ್ ಹಾಗೂ ಸ್ಥಳೀಯ ನಾಗರಿಕರು ಕರ್ನಾಟಕ ರಾಜ್ಯ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಮನವಿಯಲ್ಲಿ...

ಗುತ್ತಿಗಾರು ರಿಕ್ಷಾ ನಿಲ್ದಾಣ ರಚನೆಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅನುದಾನ

ಗುತ್ತಿಗಾರು ಪೇಟೆಯ ರಿಕ್ಷಾ ನಿಲ್ದಾಣಕ್ಕೆ ವಿಧಾನ ಪರಿಷತ್ ಸದಸ್ಯರು ಹಾಗೂ ಉಸ್ತುವಾರಿ ಸಚಿವರಾದ ಕೋಟಾ ಶ್ರೀ ನಿವಾಸ ಪೂಜಾರಿಯವರ ಅನುದಾನದಲ್ಲಿ ಶೀಟಿನ ಛಾವಣಿ ನಿರ್ಮಾಣದ ಕಾಮಗಾರಿ ಭರದಿಂದ ನಡೆಯುತ್ತಿದೆ

ಅಪಾಯದ ಸ್ಥಿತಿಯಲ್ಲಿರುವ ಎಚ್ ಟಿ ಲೈನ್ – ಭಯದಿಂದ ವಾಸಿಸುತ್ತಿರುವ ಪೆರಾಜೆ ನಿವಾಸಿಗಳು

ಸುಳ್ಯದಿಂದ ಪೆರಾಜೆ ಗ್ರಾಮದ ಅರಮನೆಪಾರೆ ಮೂಲಕ ಬಿಳಿಯಾರಿಗೆ ಹಾದು ಹೋಗುತ್ತಿರುವ ವಿದ್ಯುತ್ ಎಚ್ ಟಿ ಲೈನ್ ಸ್ಥಳೀಯ ಜನತೆಯಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ. ಕಳೆದ 2 ವರ್ಷಗಳ ಹಿಂದೆ ಈ ವಿದ್ಯುತ್ ತಂತಿಯನ್ನು ಅಳವಡಿಸಲಾಗಿದ್ದು ತಂತಿಯು ಹಾದು ಹೋಗುವ ಸ್ಥಳದಲ್ಲಿ ಅರಮನೆಪಾರೆಯ 15 ಕ್ಕೂ ಹೆಚ್ಚು ಕುಟುಂಬಗಳು ಭಯದಲ್ಲಿದ್ದಾರೆ. ಈ ಪರಿಸರದಲ್ಲಿ ಕಳೆದ 40 ವರ್ಷಗಳಿಂದ...

ಐವರ್ನಾಡು : ಹೋಮ್ ಪ್ರಾಡಕ್ಟ್ *ಸ್ವರ್ಗ* ಬಿಡುಗಡೆ

ಐವರ್ನಾಡಿನ ಶ್ರೀ ಕ್ಷೇತ್ರ ಬರೆಮೇಲಿನಲ್ಲಿ ಬೂಸ್ಟಮ್ ಹೋಮ್ ಇಂಡಸ್ಟ್ರೀಸ್ ಸಂಸ್ಥೆಯ ಯ ನೂತನ ಉತ್ಪನ್ನ ,"ಸ್ವರ್ಗ" ವನ್ನು ಶ್ರೀ ಮೋನಪ್ಪ ಗೌಡ ಪಾಲ್ತಾಡಿ ಮಾರುಕಟ್ಟೆಗೆಬಿಡುಗಡೆ ಗೊಳಿಸಿದರು, ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ರಾದ ಗೋಪಾಲಕೃಷ್ಣ ಪೈಲಾಜೆ, ಕಾರ್ಯದರ್ಶಿ ಜಯರಾಂ ಪಿಂಡಿಬನ, ಖಜಾಂಚಿ ಪ್ರಮೋದ್ ಮಲ್ಲಾರ, ಸದಸ್ಯರಾದ ಸನತ್ ಬರೆಮೇಲು, ಮತ್ತು ಬರೆಮೇಲು...

ಜೂನ್ 27 ರವರೆಗೆ ಅನುಮತಿ ಪಡೆದ ತುರ್ತು ಪ್ರಕರಣಗಳಿಗೆ ಮಾತ್ರ ಸುಳ್ಯ ನ್ಯಾಯಾಲಯದಲ್ಲಿ ಅವಕಾಶ – ವಕೀಲರ ಸಂಘ

ಕೊವಿಡ್ 19 ಹಿನ್ನೆಲೆಯಲ್ಲಿ ಮುಂದಿನ 15 ದಿನಗಳ ತನಕ ಅಂದರೆ ಜೂನ್ 27 ರ ತನಕ ಈ ಹಿಂದಿನಂತೆ ಅತೀ ಅಗತ್ಯದ ಪ್ರಕರಣಗಳನ್ನು ನಡೆಸುವಂತೆ ಮತ್ತು ಒಂದು ದಿನದಲ್ಲಿ ಕೇವಲ 20 ಪ್ರಕರಣಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಲಾಗಿದೆ .ಆದರಂತೆ ಪೂರ್ವಾನುಮತಿಯಿಲ್ಲದೆ ವಕೀಲರ , ಕೋರ್ಟು ನೌಕರರ ಹೊರತು ಬೇರೆ ಯಾರಿಗೂ ಕೂಡ ಪ್ರವೇಶ ಇರುವುದಿಲ್ಲ .ಒಳಪ್ರವೇಶ ಮಾಡುವ...

ಕನಕಮಜಲು ಬಳಿ ಬೈಕ್ ಮತ್ತು ಕಾರು ಅಪಘಾತ

ಕನಕಮಜಲು ಬಳಿ ಇಂಡಿಕಾಕಾರು ಮತ್ತು ಬೈಕ್ ಪರಸ್ಪರ ಡಿಕ್ಕಿಯಾಗಿ ಬೈಕ್ ಸವಾರ ತೀವ್ರ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಸುಳ್ಯ ಕಡೆಯಿಂದ ಮಂಗಳೂರಿಗೆ ಹೋಗುತ್ತಿದ್ದ ಕಾರು ಪುತ್ತೂರು ಕಡೆಯಿಂದ ಕನಕಮಜಲು ಬರುತ್ತಿದ್ದ ಬೈಕ್ ಇದಾಗಿದ್ದು ಸ್ಥಳೀಯರು ಬೈಕು ಸವಾರರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೈಕ್ ಸವಾರ ಸ್ಥಳೀಯ ಕನಕಮಜಲು ನಿವಾಸಿಯಾಗಿದ್ದಾರೆ ಎಂದು ತಿಳಿದು ಬಂದಿದೆ .
Loading posts...

All posts loaded

No more posts

error: Content is protected !!