Ad Widget

ಪಿರಿಯಾಪಟ್ಟಣದಲ್ಲಿ ಭೀಕರ ರಸ್ತೆ ಅಪಘಾತ ಸುಳ್ಯದ ವ್ಯಕ್ತಿ ಮೃತ್ಯು ಮಕ್ಕಳ ಪರೀಕ್ಷೆಗಾಗಿ ಮೈಸೂರಿಗೆ ಹೋಗಿ ಬರುತ್ತಿದ್ದಾಗ ಘಟನೆ

ಮೈಸೂರಿನ ಪಿರಿಯಾಪಟ್ಟಣ ಬೈಲುಕೊಪ್ಪ ಎಂಬಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸುಳ್ಯ ತಾಲೂಕಿನ ಕೋಲ್ಚಾರು ಸಮೀಪದ ಕುಂಭಕ್ಕೋಡಿನ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಆಲೆಟ್ಟಿ ಗ್ರಾಮದ ಕುಂಭಕ್ಕೋಡಿನ ತೀರ್ಥರಾಮ (60 ವರ್ಷ) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದು, ಅವರು ತಮ್ಮ ಮೂವರು ಮಕ್ಕಳೊಂದಿಗೆ ಮೈಸೂರಿಗೆ ತೆರಳಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ತೀರ್ಥರಾಮ ಅವರು...

ಐವರ್ನಾಡು ಪೋಸ್ಟ್ ಮ್ಯಾನ್ ಆತ್ಮಹತ್ಯೆ

ಐವರ್ನಾಡು ಪೋಸ್ಟ್ ಮೆನ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ.ಪೋಸ್ಟ್ ಮೆನ್ ಆಗಿದ್ದ ಚೆನ್ನಕೇಶವ ಪಾಲೆಪ್ಪಾಡಿ (35) ಎಂಬವರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಆತ್ಮಹತ್ಯೆಗೆ ಕಾರಣ ಬಂದಿಲ್ಲ. ಮೃತರು ಪತ್ನಿ ತಂದೆ,ತಾಯಿ,ಮೂವರು ಸಹೋದರರನ್ನು,ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ.
Ad Widget

ಬಿಜೆಪಿ ವತಿಯಿಂದ ಚೆನ್ನಕೇಶವ ದೇವಸ್ಥಾನದಲ್ಲಿ ಪ್ರಾರ್ಥನೆ

ಅಯೋಧ್ಯೆ ಶ್ರೀ ರಾಮ ಮಂದಿರ ಪುನರ್ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸುವ ಈ ಸುಸಂದರ್ಭದಲ್ಲಿ ಭಾಜಪಾ ಸುಳ್ಯ ಮಂಡಲ ಹಾಗೂ ಭಾಜಪಾ ಯುವ ಮೋರ್ಚಾ ಸುಳ್ಯ ಮಂಡಲದ ವತಿಯಿಂದ ಶ್ರೀ ಚೆನ್ನಕೇಶವ ದೇವರ ಸನ್ನಿಧಿಯಲ್ಲಿ, ಹಾಗೂ ಆಂಜನೇಯ ಗುಡಿಯಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ಬೂಡು ಭಗವತಿ ಕ್ಷೇತ್ರದಲ್ಲಿ ಪ್ರಾರ್ಥಿಸಿ ಕ್ಷೇತ್ರದಲ್ಲಿ ಈ ದಿನದ ಸವಿ ನೆನಪಿಗಾಗಿ...

ಎಸ್ಸೆಸ್ಸೆಫ್ ಗಾಂಧಿನಗರ ಶಾಖೆ ವತಿಯಿಂದ ಪಿಯುಸಿಯಲ್ಲಿ ಉತ್ತಮ ರಾಂಕ್ ಪಡೆದ ವಿದ್ಯಾರ್ಥಿನಿಗೆ ಅಭಿನಂದನೆ

ಕರ್ನಾಟಕದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸಿದ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮಳಾಗಿ ಹೊರಹೊಮ್ಮಿದ ಸುಳ್ಯ ಆಜಾದ್ ವಾಚ್ ವರ್ಕ್ಸ್ ಮಾಲಕ ಕೆಪಿ ಅಬ್ದುಲ್ ರಹಮಾನ್ ಅವರ ಪುತ್ರಿ ಮರಿಯಂ ರಫಾನರಿಗೆ ಎಸ್ಎಸ್ ಎಫ್ ಗಾಂಧಿನಗರ ಶಾಖೆ ವತಿಯಿಂದ ಅವರ ಮನೆಯಲ್ಲಿ ತಂದೆಯವರು ಪಡೆದು ಕೂಳ್ಳುವ ಮೂಲಕ ಅಭಿನಂದಿಸಲಾಯಿತು,ಈಕೆಯು ಮದರಸ ಶಿಕ್ಷಣ +2 ವಿನಲ್ಲೂ...

ಎಸ್ಸೆಸ್ಸೆಫ್ ಬ್ಲಡ್ ಸೈಬೋದ 164ನೇ ರಕ್ತದಾನ ಶಿಬಿರ

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಸಮಿತಿ ವತಿಯಿಂದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ & ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಹಾಗೂ ಸಂಪಾಜೆ ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ ಸಂಪಾಜೆ ಲಯನ್ಸ್ ಕ್ಲಬ್ ಸಹಕಾರದೊಂದಿಗೆ ಕಲ್ಲುಗುಂಡಿಯ ಪಂಚಾಯತ್ ಸಭಾಭವನದಲ್ಲಿ ಆಗಸ್ಟ್ 4ರಂದು ಎಸ್ಸೆಸ್ಸೆಫ್ ದ.ಕ ಜಿಲ್ಲಾ ಬ್ಲಡ್ ಸೈಬೋದ 164ನೇ ರಕ್ತದಾನ...

ಸ್ವಾತಂತ್ರ ದಿನಾಚರಣೆ ಆಚರಣೆ ಕುರಿತು ತಹಶೀಲ್ದಾರ್ ಅನಂತ ಶಂಕರ್ ರವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ

ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತಾಲೂಕು ಆಡಳಿತ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಸ್ವಾತಂತ್ರ್ಯ ದಿನಾಚರಣೆ ಕುರಿತು ತಹಶೀಲ್ದಾರ್ ಅನಂತ ಶಂಕರ್ ರವರ ನೇತೃತ್ವದಲ್ಲಿ ಇಂದು ತಾಲೂಕು ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಕಾರ್ಯಕ್ರಮ ಈ ವರ್ಷ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ.ಕೋವಿಡ್ 19 ರ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದ್ದು ಸುಳ್ಯ...

ಸುಳ್ಯ ಬ್ಲಾಕ್ ಕಾಂಗ್ರೆಸ್ ಹಾಗೂ ನಗರ ಕಾಂಗ್ರೆಸ್ ಸಮಿತಿಯಿಂದ ಶ್ರೀರಾಮನ ಭವ್ಯ ಮಂದಿರದ ಭೂಮಿಪೂಜೆ ಪ್ರಯುಕ್ತ ವಿಶೇಷ ಪ್ರಾರ್ಥನೆ

ಇಂದು ಅಯೋಧ್ಯೆಯ ಶ್ರೀರಾಮನ ಜನ್ಮ ಸ್ಥಳದಲ್ಲಿಶ್ರೀರಾಮನ ಭವ್ಯ ಮಂದಿರದ ಭೂಮಿಪೂಜೆ ಕಾರ್ಯ ನಡೆಯುತ್ತಿದ್ದು ಆ ಭೂಮಿ ಪೂಜೆ ಪ್ರಯುಕ್ತ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗು ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ವಿಶೇಷ ಪ್ರಾರ್ಥನೆಯನ್ನು ಶ್ರೀ ಚೆನ್ನಕೇಶವ ದೇವಸ್ಥಾನದ ಮೊಕ್ತೇಸರರಾದ ಹರಪ್ರಸಾದ ತುದಿಯಡ್ಕ ರವರ ಸಮ್ಮುಖದಲ್ಲಿ ಸಲ್ಲಿಸಲಾಯಿತು ....

ನಗರ ಪರಿಸರದ ಜನತೆಗೆ ಕೋವಿಡ್-೧೯ ಆಂಟಿಜನ್ ರ್‍ಯಾಪಿಡ್ ಪರೀಕ್ಷೆ ಇಂದು ಚಾಲನೆ

ಕೋವಿಡ್ ೧೯ರ ಹಿನ್ನಲೆಯಲ್ಲಿ ಸುಳ್ಯ ಪರಿಸರದ ಜನತೆಗೆ ಆಂಟಿಜನ್ ರ್‍ಯಾಪಿಡ್ ಪರೀಕ್ಷೆ ಆ.೫ ಮತ್ತು ೬ ರಂದು ನಡೆಸಲು ಈ ಮೊದಲು ತೀರ್ಮಾನಿಸಿದ್ದು ಅದರಂತೆ ಸುಳ್ಯ ರೋಟರಿ ಶಾಲೆಯಲ್ಲಿ ಸುಳ್ಯ ತಹಶೀಲ್ದಾರ್ ಅನಂತ ಶಂಕರ ಇಂದು ಚಾಲನೆ ನೀಡಿದರು. ಈ ಕಾರ್ಯಕ್ರಮವು ವರ್ತಕರ ಸಂಘ ಸುಳ್ಯ, ರೋಟರಿ ಮತ್ತು ಲಯನ್ಸ್ ಕ್ಲಬ್ ಸುಳ್ಯ, ತಾಲೂಕು ಆಡಳಿತ,...

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ

ವಿಶ್ವ ಹಿಂದೂ ಪರಿಷತ್ ಭಜರಂಗದಳ ವಾಲ್ಮೀಕಿ ಶಾಖೆ ಬೆಳ್ಳಾರೆ ಇದರ ವತಿಯಿಂದ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪುಣ್ಯಭೂಮಿ ಅಯೋಧ್ಯೆಯಲ್ಲಿ ಇಂದು ನೆರವೇರಲಿರುವ ಪ್ರಭು ಶ್ರೀರಾಮಚಂದ್ರನ ಭವ್ಯಮಂದಿರದ ಭೂಮಿಪೂಜೆಯ ಅಂಗವಾಗಿ ನೆರವೇರಿದ ಈ ವಿಶೇಷ ಪೂಜೆಯ ಸಂದರ್ಭದಲ್ಲಿ ಶಾಖೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ದ.ಕ.ಇಂದು ಭಾರಿ ಮಳೆ – ರೆಡ್ ಅಲರ್ಟ್ ಘೋಷಣೆ

 ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇನ್ನೆರಡು ದಿನ ಭಾರಿ ಮಳೆಯಾಗಲಿರುವುದರಿಂದ ಜಿಲ್ಲಾಧಿಕಾರಿ ರೆಡ್ ಅಲರ್ಟ್ ಘೋಷಣೆ ಮಾಡಿದ್ದಾರೆ.ಆ.5ರಂದು ಭಾರಿ ಮಳೆಯ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಹಾಗೂ ಆ.6 ರಿಂದ 8ರವರೆಗೆ ಆರೆಂಜ್ ಅಲರ್ಟ್ ಘೋಷಣೆಯಾಗಿದೆ. ಹವಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
Loading posts...

All posts loaded

No more posts

error: Content is protected !!