- Friday
- March 13th, 2026
ಕೋವಿಡ್ 19ರ ರ್ಯಾಪಿಡ್ ಯಾಟಿಜನ್ ಪರೀಕ್ಷೆಗೆ ಸ್ವಯಂ ಒಳಗಾಗಿ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಜಯನಗರ 19 ನೇ ವಾರ್ಡಿನ ವ್ಯಕ್ತಿಯೋರ್ವರು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಯಂ ಕೋರಂಟೈನ್ ಒಳಗಾಗಿದ್ದಾರೆ. ಈ ವಿಷಯ ತಿಳಿದ ಸ್ಥಳೀಯ ವಾರ್ಡ್ ಸದಸ್ಯೆ ಶಿಲ್ಪಾ ಸುದೇವ್ ರೋಗಿಯ ಮನೆಗೆ ಭೇಟಿ ನೀಡಿ ಧೈರ್ಯವನ್ನು ತುಂಬಿದ್ದಾರೆ.ಯಾವುದೇ ಸಮಸ್ಯೆಗಳಿದ್ದಲ್ಲಿ ತನ್ನನ್ನು ದೂರವಾಣಿ ಮೂಲಕ ಸಂಪರ್ಕಿಸುವಂತೆ...
ಮಳೆಗೆ ದಬ್ಬಡ್ಕ ಕಲ್ಲುಗುಂಡಿ ಸಂಪರ್ಕ ಕಲ್ಪಿಸುವ ಸೇತುವೆಯ ಸಂಪರ್ಕ ಕಡಿತಗೊಂಡ ಕಾರಣದಿಂದ ಹೊಳೆಯಲ್ಲಿ ಬಂದ ಮರಗಳನ್ನು ಊರವರ ಮತ್ತು ಗ್ರಾಮ ಪಂಚಾಯತ್ ಚೆಂಬು ಹಾಗೂ ದಬ್ಬಡ್ಕ ಉಪ ವಲಯದ ಸಿಬ್ಬಂದಿಗಳ ಸಹಾಯದಿಂದ ಮರಗಳನ್ನ ತೆರವುಗೊಳಿಸಿ ಸೇತುವೆಯನ್ನು ಸಂಪರ್ಕಕ್ಕೆ ಮುಕ್ತ ಗೊಳಿಸಲಾಯಿತು.
"ಹಲೋ…… ಹಲೋ….. ಎಂಚ ಉಲ್ಲರ್…… ಹಲೋ…. ಕೇನುಜಿ"! ಈ ರೀತಿಯಾದ ನೆಟ್ವರ್ಕ್ ಸಮಸ್ಯೆ ಕಳಂಜ ಗ್ರಾಮದಲ್ಲಿ ಹೇರಳವಾಗಿದೆ. ಸದ್ಯ ಪೋನ್ ಕರೆಮಾಡಲು ಸಾಧ್ಯವಾಗದ ಪರಿಸ್ಥಿತಿ ತಲೆದೋರಿದ್ದು, ಇಂಟರ್ನೆಟ್ ದೂರದ ಮಾತಾಗಿದೆ. ಕೊರೋನಾದ ಸಂಕಟಕಾಲದಲ್ಲಿ ಇಂದು ವಿದ್ಯಾರ್ಥಿಗಳ ಶಿಕ್ಷಣವುಆನ್ ಲೈನ್ ಮುಖಾಂತರ ನಡೆಯುತ್ತಿದ್ದು, ಇಂಟರ್ನೆಟ್ ಕೈಕೊಡುವ ಕಾರಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ತೊಡಕುಂಟಾಗುತ್ತಿದೆ. ಇದರ ಜೊತೆಗೆ ಅನೇಕ...
ಸುಳ್ಯ ಗೂನಡ್ಕ ದರ್ಕಸ್ ಪರಿಸರದಲ್ಲಿ ಭಾರಿ ಮಳೆಗೆ ಮನೆಯ ಹಿಂಬದಿಯ ಮಣ್ಣಿನ ಬರೆ ಕುಸಿದುಬಿದ್ದಿದೆ. ಇದರ ಪರಿಣಾಮವಾಗಿ ಮನೆಯವರು ನೀರಿಗಾಗಿ ಬಳಸುತ್ತಿದ್ದ ಬೋರ್ ಮಣ್ಣಿನಡಿಯಲ್ಲಿ ಮುಚ್ಚಿ ಹೋದ ಘಟನೆ ವರದಿಯಾಗಿದೆ.
ಸುಳ್ಯ ಅನ್ಸಾರಿಯ ನಿರ್ಗತಿಕರ ಕೇಂದ್ರ ಸಂಪರ್ಕಿಸುವ ರಸ್ತೆ ಬಳಿ ಬರೆಯ ಮೇಲಿನಿಂದ ತಂಗಿನಮರ ಒಂದು ಬೀಳುವ ಅಪಾಯದ ಸ್ಥಿತಿಯಲ್ಲಿ ಇರುವುದನ್ನು ಗಮನಿಸಿದ ಸುಳ್ಯ ಎಸ್ ವೈ ಎಸ್ ,ಎಸ್ ಎಸ್ ಎಫ್ ತಂಡದ ಸದಸ್ಯರು ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಿದರು. ಕಾರ್ಯಾಚರಣೆಯಲ್ಲಿ ಆರಿಸ್ ಬೋರುಗುಡ್ಡೆ, ಶರೀಫ್ ಜಯನಗರ , ಶಾಕಿರ್ ಮೊಗರ್ಪಣೆ,...
ಸುಳ್ಯ ನಗರದ ಕೆಲವು ಭಾಗಗಳಲ್ಲಿ ಬರೆಕುಸಿತ ಉಂಟಾಗುತ್ತಿದ್ದು ಜನರು ಆತಂಕದಲ್ಲಿದ್ದಾರೆ. ಕಳೆದ ಮೂರು ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಸುಳ್ಯ ತಾಲೂಕಿನಾದ್ಯಂತ ಜನರಲ್ಲಿ ಆತಂಕದ ಛಾಯೆ ಮೂಡಿದೆ. ಒಂದೆಡೆ ಕೊರೋನಾ ಮಹಾಮಾರಿಯು ಸುಳ್ಯವನ್ನು ಕಾಡುತ್ತಿದ್ದರೆ ಮತ್ತೊಂದೆಡೆ ಮಳೆಯು ತನ್ನ ರುದ್ರ ನರ್ತನದಿಂದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ನಿನ್ನೆ ಸಂಜೆಯಿಂದಲೇ ಸುರಿದ ಭಾರಿ ಮಳೆಯಿಂದ ಸುಳ್ಯ ಕುಂಬರಚ್ಚೋಡು ಬಳಿ ರಾತ್ರಿ ವೇಳೆ ಮನೆ ಮೇಲೆ ಬರೆ ಕುಸಿದುಬಿದ್ದು ಮನೆ ಸಂಪೂರ್ಣ ಹಾನಿಗೊಂಡಿದೆ. ಬರೆ ಜರಿಯುವ ಸಂದರ್ಭದಲ್ಲಿ ಮನೆ ಮಂದಿ ಹೊರಗಡೆ ಬಂದಿದ್ದ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ .
ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಕೌಡಿಚ್ಚಾರ್ ನ ವ್ಯಕ್ತಿಗೆ ಇಂದು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಪಾಸಿಟಿವ್ ಧೃಡಪಟ್ಟಿದೆ.
ಇಂದಿರಾ ಪ್ರಿಯದರ್ಶನಿ ಚಾರಿಟೇಬಲ್ ಟ್ರಸ್ಟ್ ಬೆಳ್ಳಾರೆ ಇದರ ವತಿಯಿಂದ ಪೆರುವಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಅಯುಷ್ಮಾನ್ ಭಾರತ್ ಯೋಜನೆ ನೋಂದಣಿ ಕಾರ್ಯಕ್ರಮವನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಯಪ್ರಕಾಶ್ ರೈ ಉದ್ಘಾಟಿಸಿ ಶುಭಹಾರೈಸಿದರು.ಸಭಾಧ್ಯಕ್ಷತೆಯನ್ನು ಬೆಳ್ಳಾರೆ ಸಹಕಾರಿ ಸಂಘದ ಅಧ್ಯಕ್ಷ ಅನಿಲ್ ರೈ ಚಾವಡಿ ಬಾಗಿಲು ವಹಿಸಿದ್ದರು. ಈ ಸಂದರ್ಭದಲ್ಲಿ ಕೆಪಿಸಿಸಿ ವೀಕ್ಷಕ ಕೃಷ್ಣಪ್ಪ, ಪೆರುವಾಜೆ ಗ್ರಾಮ...
Loading posts...
All posts loaded
No more posts
