- Sunday
- September 6th, 2026
ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ(ರಿ.) ಬೆಂಗಳೂರು ಇದರ ಆಶ್ರಯದಲ್ಲಿ ಆ.23ರಂದು ಬೆಂಗಳೂರಿನ ಜಾಲಹಳ್ಳಿ ಹೆಚ್.ಎಂ.ಟಿ ಗ್ರೌಂಡ್ ನಲ್ಲಿ ನಡೆದ 30 ವರ್ಷದ ಮೇಲಿನ ವಯೋಮಿತಿ ವಿಭಾಗದ ಗುಂಡೆಸೆತ ಸ್ಪರ್ಧೆಯಲ್ಲಿ ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ ಗ್ರಾಮದ ಸಂದೀಪ್ ಕೇವಳ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ದಿ. ದಶರಥ ಗೌಡ ಕೇವಳ ಹಾಗೂ ಮೀನಾಕ್ಷಿ...
ಸುಳ್ಯ : ಮರ್ಕಂಜದ ಗ್ರಾಮದ ದೊಡ್ಡಿತ್ಲು ನಿವಾಸಿ ಅನಿಲ್ ಅಂಬೆಕಲ್ಲು ಹಿಂದಿನ ರಾತ್ರಿಯಿಂದ ಅಸೌಖ್ಯದಿಂದ ಬಳಲುತ್ತಿದ್ದು, ಇಂದು(ಆ.25)ಮುಂಜಾನೆ ಹೃದಯಾಘಾತದಿಂದ ನಿಧನರಾದರೆಂದು ತಿಳಿದುಬಂದಿದೆ. ಅವರಿಗೆ 48 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ರಮ್ಯ, ಪುತ್ರರಾದ ಮೋಕ್ಷಿತ್ ಹಾಗೂ ಕಿಶನ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇದರ ವ್ಯಾಪ್ತಿಯಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕಬ್, ಬುಲ್ ಬುಲ್, ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳ ಎರಡು ದಿನಗಳ ಪಟಾಲಂ ನಾಯಕರ ತರಬೇತಿ ಶಿಬಿರವು ಕೆಪಿಎಸ್ ಪಂಜ ಇದರ ಸಹಯೋಗದೊಂದಿಗೆ ಶ್ರೀ ಸುಬ್ರಾಯ ದೇವಸ್ಥಾನ ಪೈಂದೋಡಿ ಪಂಜ ಇಲ್ಲಿ 22 ಮತ್ತು 23 ಆಗಸ್ಟ್ 2026ರಂದು...
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈದ್-ಮಿಲಾದ್ ಹಬ್ಬವನ್ನು ಆ.26 ಬುಧವಾರದ ಬದಲಾಗಿ ಆ.25 ಮಂಗಳವಾರದಂದು ಆಚರಿಸಲಾಗುತ್ತಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆ.26 ಬುಧವಾರದ ಬದಲಿಗೆ ಆ.25 ಮಂಗಳವಾರದಂದು ಸಾರ್ವತ್ರಿಕ ರಜೆಯನ್ನು ಘೋಷಿಸಿ ದ.ಕ ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ಆ.26ನ್ನು ಕರ್ತವ್ಯದ ದಿನವೆಂದು ಪರಿಗಣಿಸಲು ಸೂಚಿಸಿದ್ದಾರೆ. ಸದ್ರಿ ಆದೇಶವು ಈಗಾಗಲೇ ಪೂರ್ವ ನಿಗದಿತ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪರೀಕ್ಷೆಗಳಿಗೆ...
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ.) ಕಾಸರಗೋಡು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕೇರಳ ರಾಜ್ಯ ಘಟಕ, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ, ಕಾಸರಗೋಡು ನಗರದ ಕನ್ನಡ ಗ್ರಾಮದಲ್ಲಿ ಆ.23ರಂದು ನಡೆದ ಕಾಸರಗೋಡು ಜಿಲ್ಲಾ ಮಕ್ಕಳ ಸಾಹಿತ್ಯೋತ್ಸವ 2026 ಹಾಗೂ ಕಾಸರಗೋಡು ಜಿಲ್ಲಾ ಚುಟುಕು...
ಕಲ್ಮಡ್ಕ : ಸ್ಥಳೀಯ ಕಲಾಗ್ರಾಮ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಸರಣಿ ಕಾರ್ಯಕ್ರಮದ 5ನೇ ಕಾರ್ಯಕ್ರಮ 'ತ್ರಯಿ ನಾಟ್ಯ ತಂಡ' ಬೆಂಗಳೂರು ಅಭಿನಯಿಸಿದ ಭರತನಾಟ್ಯ ಸಾಂಸ್ಕೃತಿಕ ಸಂಜೆ ಕಲಾಭಿಮಾನಿಗಳ ಮನಸೂರೆಗೊಳಿಸಿತು. ಕಾರ್ಯಕ್ರಮಕ್ಕೆ ಊರಿನ ಹಿರಿಯರಾದ ಚಂದ್ರಶೇಖರ ಕೊಳಚ್ಚಿಪ್ಪು ಅವರು ದೀಪ ಬೆಳಗಿಸುವ ಮೂಲಕ ದಿವ್ಯ ಚಾಲನೆ ನೀಡಿದರು. ಕಲಾಗ್ರಾಮ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಅಧ್ಯಕ್ಷರಾದ...
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ 2026–27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ರಚನೆ ಯಶಸ್ವಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ತೃತೀಯ ಬಿ.ಕಾಂ ವಿದ್ಯಾರ್ಥಿನಿ ದಿಶಾ.ಎಸ್, ಉಪಾಧ್ಯಕ್ಷರಾಗಿ ತೃತೀಯ ಬಿ.ಎ ವಿದ್ಯಾರ್ಥಿ ಬಿಪಿನ್.ಎ ಹಾಗೂ ಕಾರ್ಯದರ್ಶಿಯಾಗಿ ದ್ವಿತೀಯ ಬಿಬಿಎ ವಿದ್ಯಾರ್ಥಿ ರಿತೀಶ್.ಕೆ ಆಯ್ಕೆಯಾಗಿದ್ದಾರೆ....
ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್(ರಿ.) ಗುತ್ತಿಗಾರು ಇದರ ವತಿಯಿಂದ ಗ್ರಾಮ ಪಂಚಾಯತ್ ಗುತ್ತಿಗಾರು, ಅರೋಗ್ಯ ಕೇಂದ್ರ ಗುತ್ತಿಗಾರು, ಜಿಲ್ಲಾ ಮತ್ತು ತಾಲೂಕು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು, ಸುಳ್ಯ, ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು, ಲಯನ್ಸ್ ಕ್ಲಬ್ ಹಿರಿಯಡ್ಕ, ಲಯನ್ಸ್ ಕ್ಲಬ್ ಲಯನ್ಸ್ ಕ್ಲಬ್ ಜಲದುರ್ಗ ಬೆಳ್ಳಾರೆ, ವೀರಮಾರುತಿ...
ಸುಳ್ಯ : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಗೊಂಡು ಕರಡು ಮತದಾರರ ಪಟ್ಟಿ ಪ್ರಕಟಗೊಂಡಿದೆ. ಈ ಪ್ರಕ್ರಿಯೆಯಲ್ಲಿ 207-ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 196619 ಮತದಾರರಿದ್ದು, 11,868 ಮತದಾರರನ್ನು ASDDO ಪಟ್ಟಿಯಲ್ಲಿ ಗುರುತಿಸಲಾಗಿದೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಜಯಲಕ್ಷ್ಮೀ ರಾಯಕೋಡ ಮಾಧ್ಯಮಗಳಿಗೆ ಮಾಹಿತಿ ನೀಡಿದರು....
ವಿದ್ಯಾ ಭಾರತಿ ಕರ್ನಾಟಕ ಮತ್ತು ವಿವೇಕಾನಂದ ವಿದ್ಯಾ ವರ್ಧಕ ಸಂಘ, ಪುತ್ತೂರು(ರಿ.) ಆಶ್ರಯದಲ್ಲಿ ಪ್ರಾಂತೀಯ ಯೋಗಾಸನ ಸ್ಪರ್ಧೆಯನ್ನು 21 ಮತ್ತು 22 ಆಗಸ್ಟ್ 2026 ಶುಕ್ರವಾರ ಮತ್ತು ಶನಿವಾರ ದಂದು ವಿವೇಕಾನಂದ ಪದವಿ ಪೂರ್ವ ಕಾಲೇಜು ಪುತ್ತೂರು ನಲ್ಲಿ ಆಯೋಜಿಸಲಾಗಿತ್ತು. ಕಲಾತ್ಮಕ ವೈಯಕ್ತಿಕ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಮತ್ತು ಸಾ0ಪ್ರದಾಯಕ ಯೋಗಾಸನ ಸ್ಪರ್ಧೆಯಲ್ಲಿ 14...
Loading posts...
All posts loaded
No more posts
