- Friday
- May 1st, 2026
ಪುತ್ತೂರು ತಾಲೂಕಿನ ತಿಂಗಳಾಡಿಯಲ್ಲಿ ಶಾಫಿ ಪಳ್ಳಿಮಜಲು ಬೆಳ್ಳಾರೆ ಮಾಲಕತ್ವದ ಅಲ್ ಫಝಲ್ ತಟ್ಟುಕಡ ನ 21ರಂದು ಶುಭಾರಂಭಗೊಂಡಿತು.ತಿಂಗಳಾಡಿ ಮಸೀದಿಯ ಖತೀಬರು ದು:ಆ ನೆರವೇರಿಸಿ ಶುಭಾರಂಭ ಮಾಡಿದರು.ಸಲೀಂ ಸಅದಿ ಕಳೆಂಜಿಬೈಲು,ಮುನವ್ವರ್ ಅಹ್ಮದ್ ಕಳೆಂಜಿಬೈಲು,ಮಾಲಕ ಶಾಫಿ ಪಳ್ಳಿಮಜಲು ಬೆಳ್ಳಾರೆ ಉಪಸ್ಥಿತರಿದ್ದರು.ಇಲ್ಲಿ ಚಹಾ,ಕಾಫಿ,ಕರಿದ ತಿಂಡಿಗಳು,ಮೃದು ಪಾನೀಯಗಳು,ಮಧ್ಯಾಹ್ನದ ಗಂಜಿ,ಊಟ ಎಲ್ಲಾ ತರದ ಲೈವ್ ಜ್ಯೂಸ್ ಗಳು ಲಭ್ಯವಿವೆ ಎಂದು ಮಾಲಕರು ತಿಳಿಸಿದ್ದಾರೆ.ವರದಿ-ಎಂ.ಎ.ಮುಸ್ತಫಾ...
ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಆಡಳಿತ ಮಂಡಳಿಗೆ 13 ಸ್ಥಾನ ಅವಿರೋಧವಾಗಿ ಆಯ್ಕೆಯಾಗಿದ್ದು ಬಾಕಿ ಉಳಿದ 6 ಸ್ಥಾನಗಳಿಗೆ ನ.23 ರಂದು ಚುನಾವಣೆ ನಡೆಯಿತು. ಒಟ್ಟು 5651 ಮತದಾರರ ಪೈಕಿ 2573 ಮತದಾರರು ಮತ ಚಲಾಯಿಸಿದ್ದು ಶೇ.45.5% ಮತದಾನವಾಗಿತ್ತು. 6 ಸ್ಥಾನಗಳಿಗೆ 8 ಅಭ್ಯರ್ಥಿಗಳು ಕಣದಲ್ಲಿದ್ದರು. 6 ಜನ ಸಹಕಾರ ಭಾರತಿಯಿಂದ ಮತ್ತು ಇಬ್ಬರು ಸ್ವತಂತ್ರ ಅಭ್ಯರ್ಥಿಗಳಾಗಿ...
ಇಂಪ್ಯಾಕ್ಟ್ ಆರ್ಟ್ಸ್ & ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಹಾಗೂ ದಕ್ಷಿಣ ಕನ್ನಡ ಆರ್ಟ್ಸ್ & ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಚಳ್ಳಂಗಾರು ಸುರೇಶ್ ಹಾಗೂ ಗೀತಾ ದಂಪತಿಗಳ ಪುತ್ರರಾದ ದರ್ಶಿಕ್.ಸಿ.ಎಸ್ ತ್ರಿವಳಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.ಕರಾಟೆಯ ವೈಯಕ್ತಿಕ ಕಟಾ ಕುಮಿಟಿ, ಟೀಮ್ ಕಟಾ...
ಶ್ರೀ ದುರ್ಗಾ ಮಹಿಳಾ ಭಜನಾ ಮಂಡಳಿ ಮರಕತ ನಡುಗಲ್ಲು ಇದರ ವಾರ್ಷಿಕ ಸಭೆ ಇತ್ತೀಚೆಗೆ ಜರುಗಿತು.ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಮಂಡಳಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ಸವಿತಾ ಚಿದಾನಂದ ಹುಲಿಮನೆ, ಕಾರ್ಯದರ್ಶಿಯಾಗಿ ಶ್ರೀಮತಿ ಶ್ರುತಿ ರಘುನಾಥ ಮರಕತ ಆಯ್ಕೆಯಾದರು. ಸಭೆಯಲ್ಲಿಶ್ರೀ ದುರ್ಗಾ ಭಜನಾ ಮಂಡಳಿಯ ಸ್ಥಾಪಕರಾದ ರಾಮಚಂದ್ರ ಭಟ್ ನಡುಗಲ್ಲು, ಮಂಡಳಿಯ ಅಧ್ಯಕ್ಷರಾದ ವಿಜಯಕುಮಾರ್...
ಕೊಲ್ಲಮೊಗ್ರ ಗ್ರಾಮದ ಪನ್ನೆ ಕೃಷ್ಣ ಎಂಬವರ ತೆಂಗಿನ ಮರಕ್ಕೆ ಹತ್ತಿದ್ದ ಕೇರಳ ಗುರುವಾಯುರು ಮೂಲದ ಮೂರ್ತೆದಾರ ಆರ್ ಸಾಮೀ ಎಂಬವರು ಮೃತಪಟ್ಟ ಘಟನೆ ನಡೆದಿದೆ. ತೆಂಗಿನ ಮರ ಹತ್ತಿ ಸ್ವಲ್ಪ ಹೊತ್ತಿನಲ್ಲಿ ಕೂಗು ಕೇಳಿಸಿದ ಹಿನ್ನೆಲೆಯಲ್ಲಿ ಸಮಸ್ಯೆಯಾಗಿರುವುದು ಗೊತ್ತಾಗಿದೆ. ಆ ಬಳಿಕ ಸ್ಥಳೀಯರು ಸೇರಿ ಅವರನ್ನು ಕೆಳಗಿಳಿಸಿ 108 ಅಂಬ್ಯುಲೆನ್ಸ್ ಮುಖಾಂತರ ಸುಳ್ಯ ಸರಕಾರಿ ಆಸ್ಪತ್ರೆಗೆ...
ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವದ ಪ್ರಯುಕ್ತ ನ.24 ರಂದು ಅಂಗಡಿಗುಡ್ಡೆಯಲ್ಲಿ ನಡೆದ ಭೋಜನ ವ್ಯವಸ್ಥೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಏನೇಕಲ್ಲು ಒಕ್ಕೂಟದ ಸದಸ್ಯರುಗಳು ಸ್ವಯಂ ಸೇವಕರಾಗಿ ಭಾಗವಹಿಸಿದರು.
ಸುಬ್ರಹ್ಮಣ್ಯ ನ.24 : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾ ಷಷ್ಠಿ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಎಳೆಯುವ ಪಂಚಮಿ ರಥ ಹಾಗೂ ಬುಧವಾರ ಬೆಳಗ್ಗೆ ಎಳೆಯುವ ಬ್ರಹ್ಮರಥ ಗಳಿಗೆ ಜೋಡಿಸುವ ಶಿಖರ(ಕಳಶ)ದ ಪೂಜೆಯನ್ನು ಈ ದಿನ ಸೋಮವಾರ ಶ್ರೀ ದೇವಳದ ಕ್ಷೇತ್ರ ಪುರೋಹಿತ ಮಧುಸೂದನ ಕಲ್ಲೂರಾಯರು ಕಳಶ ಪೂಜೆ ನೆರವೇರಿಸಿದರು. ತದನಂತರ ಮನೆ ಕುಡಿಯ...
ಸುಬ್ರಹ್ಮಣ್ಯ ನ.24 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠಿ ಜಾತ್ರಾ ಮಹೋತ್ಸವದ ಪ್ರಯುಕ್ತ ಕಾರ್ತಿಕ ಶುದ್ಧ ಚೌತಿಯ ದಿನವಾದ ಸೋಮವಾರ ಶ್ರೀ ದೇವಳದಲ್ಲಿ ಪಲ್ಲಪೂಜೆ ನೆರವೇರಿತು.ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿ ತಾಯರು ಒಳಾಂಗಣದಲ್ಲಿ ಪಲ್ಲಪೂಜೆ ನೆರವೇರಿಸಿದರು. ಬಳಿಕ ಅಕ್ಷಯಪಾತ್ರೆಗೆ ಪೂಜೆ ಸಲ್ಲಿಸಿದರು. ಕುಕ್ಕೆಯಲ್ಲಿ ನಿರಂತರ ಅನ್ನದಾನ ನಡೆಯುವುದು ಪ್ರಧಾನವಾಗಿದ್ದು,...
ಸುಬ್ರಹ್ಮಣ್ಯ ನ.24 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾ ಷಷ್ಟಿ ಜಾತ್ರಾ ಮಹೋತ್ಸವದ ಮೂರು ದಿನಗಳಲ್ಲಿ(ಚೌತಿ, ಪಂಚಮಿ, ಷಷ್ಟಿ) ಸೋಮವಾರ ಚೌತಿಯಂದು ದೇವಳದ ಹೊರಾಂಗಣದಲ್ಲಿ ಸುತ್ತಲು ಹಾಕಿದ ಬಾಳೆ ಎಲೆ ಅದಕ್ಕೆ ಬಡಿಸಿದ ದೇವರ ನೈವೇದ್ಯ, ಅವುಗಳನ್ನು ಗೋವುಗಳಿಂದ ತಿನ್ನಿಸಿ ಬಳಿಕ ಹರಕೆ ಹೊತ್ತ 110 ಸೇವಾರ್ಥಿಗಳು ಎಡೆಸ್ನಾನ ಉರುಳು ಸೇವೆಯನ್ನು ನೆರವೇರಿಸಿದರು. ಅದಕ್ಕೂ ಮೊದಲು...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಸುಳ್ಯ ವತಿಯಿಂದ ಅಜ್ಜಾವರ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು 24-11-2025 ರಂದು ನಡೆಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಪ್ರಕಾಶ್ ಕಣೆಮರಡ್ಕರವರು ವಹಿಸಿದ್ದರು. ಕಾರ್ಯಕ್ರಮವನ್ನು ಅಜ್ಜಾವರ ವಲಯದ ಜನ ಜಾಗೃತಿ ಅಧ್ಯಕ್ಷರಾದ ಶಿವಪ್ರಕಾಶ್ ಅಡ್ಪಂಗಾಯರವರು ಉದ್ಘಾಟನೆ ಮಾಡಿ ಪ್ರಾಸ್ತಾವಿಕವಾಗಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು. ...
Loading posts...
All posts loaded
No more posts
