Ad Widget

ಐವರ್ನಾಡು : ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಟಾ ವಾರ್ಷಿಕೋತ್ಸವ ಪ್ರಯುಕ್ತ ಗೊನೆ ಮುಹೂರ್ತ

ಐವರ್ನಾಡಿನ ಹಚ್ಚ ಹಸಿರಿನ ಪ್ರಕೃತಿಯ ಮಡಿಲಲ್ಲಿ ಪಂಚಲಿಂಗಗಳಿಂದ ಪ್ರತಿಷ್ಟಾಪನೆಗೊಂಡ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ದಲ್ಲಿ ಫೆ. 8, 9, 10 ರಂದು ನಡೆಯುವ ಪ್ರತಿಷ್ಟಾ ವಾರ್ಷಿಕೋತ್ಸವ ಪ್ರಯುಕ್ತ ಫೆ.2 ರಂದು ಬೆಳಿಗ್ಗೆ ಶ್ರೀ ದೇವರಿಗೆ ಮಹಾಪೂಜೆ, ಮಂಗಳಾರತಿಯ ಬಳಿಕ ಅರ್ಚಕರಾದ ರಾಮಚಂದ್ರ ಪಿ.ಜಿ. ಯವರಿಂದ ಗೊನೆ ಕಡಿಯುವ ಮುಹೂರ್ತ ನೆರವೇರಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ...

ದೆಹಲಿ ವಿಧಾನಸಭಾ ಚುನಾವಣೆ – ಪ್ರಚಾರಕಾರ್ಯದಲ್ಲಿ ಭಾಗಿಯಾದ ದ.ಕ.ಸಂಸದ ಬ್ರಿಜೇಶ್ ಚೌಟ

ಫೆ.05 ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ದ.ಕ.ಸಂಸದ ಕ್ಯಾ.ಬ್ರಿಜೇಶ್ ಚೌಟ ಭಾಗಿಯಾದರು. ಕಸ್ತೂರ್ಬಾ ನಗರದ ಬಿಜೆಪಿ ಅಭ್ಯರ್ಥಿ ನೀರಜ್ ಬಸೋಯಾ ಅವರ ಪರವಾಗಿ ದೆಹಲಿಯ ಸತ್ಯ ಜೀವನ ಲೆಪ್ರಸಿ ಸೊಸೈಟಿಯಲ್ಲಿ ಪ್ರಚಾರ ನಡೆಸಿ ಮತಯಾಚಿಸಿದರು.‌
Ad Widget

ಸುಬ್ರಹ್ಮಣ್ಯ : ರೋವರ‍್ ಮತ್ತು ರೇಂಜರ‍್ ಬೀಳ್ಕೊಡುಗೆ ಸಮಾರಂಭ ; ಸೇವಾ ಮನೋಭಾವನೆಯಿಂದ ಯುವ ಜನಾಂಗದ ಬದುಕಿನಲ್ಲಿ ಶಿಸ್ತಿನ ಔನತ್ಯ – ಪ್ರಾಚಾರ್ಯ ಸೋಮಶೇಖರ್ ನಾಯಕ್ ಅಭಿಮತ

ಸುಬ್ರಹ್ಮಣ್ಯ: ಸಮಾಜಮುಖಿಯಾದ ಸೇವಾ ಮನೋಭಾವನೆಯಿಂದ ಯುವ ಜನಾಂಗದ ಬದುಕಿನಲ್ಲಿ ಶಿಸ್ತಿನ ಔನತ್ಯ ಉಂಟಾಗುತ್ತದೆ.ಯುವ ಮನಸುಗಳು ಸದಾ ಸಾರ್ವಜನಿಕರಿಗೆ ಒಂದಲ್ಲ ಒಂದು ರೀತಿಯಾಗಿ ಸಹಕಾರ ಮಾಡುವ ಅಧಮ್ಯ ಮನಸ್ಥಿತಿಯನ್ನು ಹೊಂದಬೇಕಾದುದು ಅತ್ಯಗತ್ಯ.ವ್ಯಾಸಂಗದ ಅವಧಿಯಲ್ಲಿ ಬದುಕಿನ ಪಾಠವನ್ನು ಕಲಿಯಲು ರೋವರ್ ರೇಂಜರ್‌ನಂತಹ ಸಂಸ್ಥೆಗಳು ಪೂರಕ ವಾತಾವರಣ ಕಲಿಸುತ್ತದೆ.ವಿದ್ಯಾಸಂಸ್ಥೆಯಲ್ಲಿ ರೋವರ್ ರೇಂಜರ್ ಘಟಕದ ವಿದ್ಯಾರ್ಥಿಗಳು ನೆರವೇರಿಸಿದ ಅಪ್ರತಿಮ ಸೇವೆಯು ಸದಾ...

ಸುಳ್ಯ : ಅಪರಿಚಿತ ವ್ಯಕ್ತಿಯ ಶವ ಪತ್ತೆ

ಸುಳ್ಯ ಗಾಂಧಿನಗರದಲ್ಲಿರುವ ಅರಣ್ಯ ಇಲಾಖೆ ಕ್ವಾಟ್ರಸ್ ಹಿಂಭಾಗ ಕೊಳೆತ ಸ್ಥಿತಿಯಲ್ಲಿ ಗಂಡಸಿನ ಮೃತ ದೇಹ ಇದೀಗ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಬಂದಿದ್ದು ತನಿಖೆ ಆರಂಭಿಸಿದ್ದಾರೆ. ಕೂಲಿ ಕೆಲಸ ಮಾಡುತ್ತಿದ್ದ ಈಶ್ವರಮಂಗಲ ಮೂಲದ ವ್ಯಕ್ತಿಯ ಶವ ಎಂದು ಹೇಳಲಾಗುತ್ತಿದೆ. (ಚಿತ್ರ : ಅಚ್ಚು ಪ್ರಗತಿ)

ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಕೊಳ್ಳಿ ಮುಹೂರ್ತ

ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.19ರಂದು ಜರುಗಲಿದ್ದು, ಇದರ ಪೂರ್ವಭಾವಿಯಾಗಿ ಕೊಳ್ಳಿ ಮುಹೂರ್ತ ಕಾರ್ಯಕ್ರಮವು ಇಂದು (ಫೆ.01ರಂದು) ನಡೆಯಿತು. ಈ ಸಂದರ್ಭದಲ್ಲಿ ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟಿನ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಭಗವದ್ಭಕ್ತರು ಉಪಸ್ಥಿತರಿದ್ದರು.

ವಳಲಂಬೆ ಜಾತ್ರೋತ್ಸವ – ಹಸಿರುವಾಣಿ ಸಮರ್ಪಣೆ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವದ ಅಂಗವಾಗಿ ಕ್ಷೇತ್ರದ ಭಕ್ತಾಧಿಗಳಿಂದ ಹಸಿರುವಾಣಿ ಸಮರ್ಪಣೆ ನಡೆಯಿತು. ಫೆ.01 ರಂದು ಬೆಳಿಗ್ಗೆ ಗಂಟೆ 8-00ಕ್ಕೆ ಗಣಪತಿ ಹೋಮ, ಮಧ್ಯಾಹ್ನ ಗಂಟೆ 12-00ಕ್ಕೆ ನವ ಕಲಾಶಾಭಿಷೇಕ, ಮಹಾಪೂಜೆ ಮತ್ತು ಅನ್ನಸಂತರ್ಪಣೆ, ಸಂಜೆ 6 ರಿಂದ 7 ರವರೆಗೆ ದೈವಗಳ ಭಂಡಾರ ತೆಗೆಯುವುದು ಮತ್ತು...

ಇಂದು ನಾಳೆ (ಫೆ.1& 2) ವಳಲಂಬೆ ಜಾತ್ರೋತ್ಸವ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವ ಫೆ.1 ಮತ್ತು 2 ರಂದು ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.ಜ. 25 ರಂದು ಶ್ರೀ ದೇವರಿಗೆ ಮತ್ತು ದೈವಗಳಿಗೆ ಗೊನೆ ಮುಹೂರ್ತ ನೆರವೇರಿದ್ದು, ಫೆ. 01 ರಂದು ಬೆಳಿಗ್ಗೆ ಗಂಟೆ 8-00ಕ್ಕೆ ಗಣಪತಿ ಹೋಮ, ಮಧ್ಯಾಹ್ನ ಗಂಟೆ 12-00ಕ್ಕೆ ನವ...

ಕಲ್ಮಕಾರು : ಶಕ್ತಿನಗರ ಅಯ್ಯಪ್ಪ ಭಜನಾ ಮಂದಿರದ ನೂತನ ಆಡಳಿತ ಸಮಿತಿ ರಚನೆ – ಅಧ್ಯಕ್ಷರಾಗಿ ಸತೀಶ್.ಟಿ.ಯನ್. ಕಾರ್ಯದರ್ಶಿಯಾಗಿ ಗಂಗಾಧರ.ಕೆ.ಯಸ್

ಕಲ್ಮಕಾರು ಶಕ್ತಿನಗರ ಅಯ್ಯಪ್ಪ ಭಜನಾ ಮಂದಿರದ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿಯನ್ನು ಜ.30 ರಂದು ರಚಿಸಲಾಯಿತು.ಸಮಿತಿಯ ಅಧ್ಯಕ್ಷರಾಗಿ ಸತೀಶ್.ಟಿ.ಯನ್, ಕಾರ್ಯದರ್ಶಿಯಾಗಿ ಗಂಗಾಧರ ಕೆ.ಎಸ್, ಖಜಾಂಜಿ ವೀಣಾ.ಬಿ.ಯಸ್, ಗೌರವಾಧ್ಯಕ್ಷರಾಗಿ ಬಾಲಕೃಷ್ಣ ಕೊಪ್ಪಡ್ಕ, ಅರ್ಚಕರಾಗಿ ರಾಮಣ್ಣ ಅಂಜನಕಜೆ ಹಾಗೂ ಸದಸ್ಯರುಗಳಾಗಿ ಡ್ಯಾನಿ ಯಾಲದಾಳು, ಜಯರಾಮ್ ನಾಯರ್, ಶಿವರಾಮ ಪೂಂದ್ರುಕೋಡಿ ಹಾಗೂ ಪೂಜಿತಾ.ಎಂ ಮಾಡಬಾಕಿಲು ಇವರುಗಳನ್ನು...

ಕುಕ್ಕೆ: ಎಸ್‌ಎಸ್‌ಪಿಯುನ ರಾಜ್ಯ ಮಟ್ಟದ ಕ್ರೀಡಾಳುಗಳಿಗೆ ಗೌರವಾರ್ಪಣೆ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಎಸ್.ಎಸ್.ಪಿ.ಯು ಕಾಲೇಜಿನ ನಾಲ್ಕು ಮಂದಿ ವಿದ್ಯಾರ್ಥಿಗಳು ಟೆನ್ನಿಕಾಯ್ಟ್ ಮತ್ತು ಟ್ವೆಕಾಂಡೋ ಟೇಕ್ವಾಂಡೋ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದರು.ಇವರಿಗೆ ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಪದಕ ಮತ್ತು ಪ್ರಮಾಣ ಪತ್ರ ನೀಡಿ ಶುಕ್ರವಾರ ಗೌರವಿಸಿದರು ಮತ್ತು ಆಶೀರ್ವದಿಸಿದರು.ಪದವಿಪೂರ್ವ ಕಾಲೇಜು ಬಾಲಕರ ವಿಭಾಗದ ರಾಜ್ಯ ಮಟ್ಟದ ಟೆನ್ನಿಕಾಯ್ಟ್...

ಆಲೆಟ್ಟಿ ಸಹಕಾರಿ ಸಂಘದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ – ಅಧ್ಯಕ್ಷರಾಗಿ ಜಯಪ್ರಕಾಶ್ ಕುಂಚಡ್ಕ, ಉಪಾಧ್ಯಕ್ಷರಾಗಿ ಹರಿಪ್ರಸಾದ್ ಕಾಪುಮಲೆ ಅವಿರೋಧ ಆಯ್ಕೆ

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಜ.31 ರಂದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದು ನೂತನ ಅಧ್ಯಕ್ಷರಾಗಿ ಜಯಪ್ರಕಾಶ್ ಕುಂಚಡ್ಕ ಹಾಗೂ ಉಪಾಧ್ಯಕ್ಷರಾಗಿ ಹರಿಪ್ರಸಾದ್ ಕಾಪುಮಲೆ ಯವರು ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಶ್ರೀಪತಿ ಭಟ್ ಮಜಿಗುಂಡಿ, ಕರುಣಾಕರ ಹಾಸ್ಪಾರೆ, ಸುಧಾಕರ ಆಲೆಟ್ಟಿ, ಚಿದಾನಂದ ಕೋಲ್ಟಾರು, ಶ್ರೀಮತಿ ವಿದ್ಯಾ ಕುಡೆಕಲ್ಲು,ಶ್ರೀಮತಿ ಉಷಾ...
Loading posts...

All posts loaded

No more posts

error: Content is protected !!
ವಾಟ್ಸ್‌ಆಪ್‌ ಗ್ರೂಪ್‌ಗೆ ಸೇರಿ