- Saturday
- April 19th, 2025

ಗುತ್ತಿಗಾರು ಗ್ರಾ.ಪಂ. ಅಧ್ಯಕ್ಷರಾಗಿರುವ ಅಚ್ಚುತ ಗುತ್ತಿಗಾರು ಸುಳ್ಯ ತಾಲೂಕು ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಕಳೆದ ಹಲವು ವರ್ಷಗಳಿಂದ ಪಕ್ಷ ಸಂಘಟನೆ ಹಾಗೂ ಕೊರೊನಾ ಕಾರ್ಯಪಡೆಯ ಸಕ್ರಿಯ ಕಾರ್ಯಗಳು ಮತ್ತು ಪಂಚಾಯತ್ ನ ಅಭಿವೃದ್ಧಿ ಕಾರ್ಯಗಳಲ್ಲಿ ಗಣನೀಯ ಸಾಧನೆಗಾಗಿ ಈ ಅವಕಾಶ ಕಲ್ಪಿಸಲಾಗಿದೆ.

ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಳೆದ 2 ವರುಷಗಳಿಂದ ಉಬರಡ್ಡ ಮಿತ್ತೂರು ಗ್ರಾಮ ವ್ಯಾಪ್ತಿಯ ಎಲ್ಲಾ ವಿದ್ಯುತ್ ಲೈನ್‌ಗಳ ಅಕ್ಕಪಕ್ಕದಲ್ಲಿರುವ ತಡೆಯೊಡ್ಡುವ ಮರದ ಗೆಲ್ಲುಗಳನ್ನು ಕಡಿದು ಸ್ವಚ್ಛಗೊಳಿಸಿದ್ದು , ಈ ಬಾರಿಯು ಮೇ 31 ಆದಿತ್ಯವಾರ ಬೆಳಗ್ಗೆ ಘಂಟೆ 900 ರಿಂದ ಅಪರಾಹ್ನ 3.00 ರ ತನಕ ಉಬರಡ್ಡ ಮಿತ್ತೂರು ಗ್ರಾಮ ವ್ಯಾಪ್ತಿಯ ಎಲ್ಲಾ ವಿದ್ಯುತ್ ಲೈನ್‌ಗಳ...

ಪ್ರತಿ ಮೊಬೈಲ್ ನಂಬರಿನ ಆರಂಭದಲ್ಲಿ 9 ಸೇರಿಸಲು ಟ್ರಾಯ್ ಶಿಫಾರಸು ಮಾಡಿದೆ . ಅದೇ ರೀತಿ ಸ್ಥಿರ ದೂರವಾಣಿಯಿಂದ ಮೊಬೈಲ್ ಗೆ ಕರೆ ಮಾಡುವ ಸಂದರ್ಭದಲ್ಲಿ ಆರಂಭದಲ್ಲಿ ಸೊನ್ನೆ ಸೇರಿಸಲು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ( ಟ್ರಾಯ್ ) ಈ ಸಂಬಂಧ ಶಿಫಾರಸು ಮಾಡಿದೆ . ಇದು ಯಾವಾಗ ಜಾರಿಗೆ ಬರಲಿದೆ ಎಂಬುದು...

ರಾಜ್ಯದಲ್ಲಿ ಕೊರೋನಾ ಸೋಂಕು ನಿತ್ಯವೂ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜನ ಸ್ವಯಂ ನಿಯಂತ್ರಣಕ್ಕೆ ಒಳಗಾಗದಿದ್ದರೆ ಇನ್ನು ಮುಂದೆ ಸರಕಾರವೇ ನಿಯಂತ್ರಣ ವಿಧಿಸಲು ಮುಂದಾಗಿದೆ . ಸರಕಾರದ ನಿರಂತರ ಎಚ್ಚರಿಕೆಯ ಮಧ್ಯಯೂ ಜನ ನಿರ್ಲಕ್ಷ್ಯ ವಹಿಸುತ್ತಿರುವುದು ಸರಕಾರದ ಚಿಂತೆಗೆ ಕಾರಣವಾಗಿದೆ . ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ರಹಿತವಾಗಿ ಸಂಚರಿಸುವುದು ಕಂಡು ಬಂದರೆ ದಂಡ...

ಕರಿಕೆ ಸಮೀಪದ ಚೆತ್ತುಕಾಯ ಎಂಬಲ್ಲಿ ಮೀಸಲು ಅರಣ್ಯದಿಂದ ಕಾಡು ಪ್ರಾಣಿಗಳನ್ನು ಬೇಟೆಯಾಡಿದ ಆರೋಪದ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ನಾಲ್ಕು ಜನ ನುರಿತ ಬೇಟೆಗಾರರನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್ ಮಾರ್ಗದರ್ಶನ ದಲ್ಲಿ ವಲಯ ಅರಣ್ಯ ಅಧಿಕಾರಿ ದೇವರಾಜ್ ನೇತ್ರತ್ವದ ತಂಡ ಖಚಿತ ಮಾಹಿತಿಯ ಮೇರೆಗೆ ದಾಳಿನಡೆಸಿ ಕೆ.ಸಿ.ಸುಂದರ,ಪಿ.ಕೆ.ರಾಮ,ಜೋಷಿ ಜಾರ್ಜ್,...

ಸುಳ್ಯ ಸಾಮಾಜಿಕ ಅರಣ್ಯ ವಲಯದ ವ್ಯಾಪ್ತಿಗೆ ಬರುವ ಅಲೆಟ್ಟಿ ಮೇದಿನಡ್ಕ ಸಸ್ಯಕ್ಷೇತ್ರದಲ್ಲಿ 2020 ರ ಮಳೆಗಾಲದಲ್ಲಿ ಸಾರ್ವಜನಿಕರಿಗೆ ಸಂಘ- ಸಂಸ್ಥೆಗಳಿಗೆ ಮತ್ತು ಕೃಷಿ ವಿತರಣೆ ಮಾಡುವ ಸಲುವಾಗಿ ವಿವಿಧ ರೀತಿಯ ಒಟ್ಟು 25500 ಸಸಿಗಳನ್ನು ಬೆಳೆಸಲಾಗಿದೆ . ಅಲ್ಲದೆ ನೆಡುತೋಪಿನಲ್ಲಿ ನೆಡಲು 17820 ಸಸಿಗಳನ್ನು ಮತ್ತು ರಸ್ತೆ ಬದಿ ನೆಡುತೋಪು ನಿರ್ಮಾಣಕ್ಕಾಗಿ 3515 ಸಸಿಗಳನ್ನು ,...

ಕಳೆದ ಎರಡು ವರ್ಷಗಳ ಹಿಂದೆ ಕೊಡಗಿನ ಹಾಗೂ ದಕ್ಷಿಣಕನ್ನಡ ಜಿಲ್ಲೆ ಕೇರಳದ ಕೆಲವು ಭಾಗಗಳಲ್ಲಿ ಭಾರಿ ಮಳೆ ಉಂಟಾಗಿದ್ದು ಹಲವಾರು ಕಡೆಗಳಲ್ಲಿ ಭೂಕುಸಿತ ಉಂಟಾಗಿ ಮನೆಗಳನ್ನು ಕಳೆದುಕೊಂಡು ಹಲವಾರು ಕುಟುಂಬಸ್ಥರು ನಿರಾಶ್ರಿತರಾಗಿದ್ದರು.ಈ ಸಂದರ್ಭದಲ್ಲಿ ನಿರಾಶ್ರಿತರಿಗೆ ಸೂರು ಕಲ್ಪಿಸುವ ಅಡಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕೊಡಗಿನ ಕೆಲವು ಕಡೆಗಳಲ್ಲಿ ನಿರಾಶ್ರಿತರಿಗೆ ಮನೆಗಳನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಿಕೊಂಡು ಮನೆ...

ಜೂನ್ ಜುಲೈನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ನಡೆಸುವ ದೂರಶಿಕ್ಷಣ ಕಾರ್ಯದ ಮತ್ತು ಪದವಿ ಕೋರ್ಸ್‌ಗಳ ಪರೀಕ್ಷಾ ಪ್ರಕಟಣೆ ಮತ್ತು ಪರೀಕ್ಷಾ ವೇಳಾಪಟ್ಟಿಯನ್ನು ಅನಿವಾರ್ಯ ಕಾರಣಗಳಿಂದ ತಡೆಹಿಡಿಯಲಾಗಿದೆ. ಪರೀಕ್ಷಾ ಪ್ರಕಟಣೆ ಮತ್ತು ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ವಿಶ್ವವಿದ್ಯಾನಿಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಂಚಾಯತ್ ಚುನಾವಣೆ ನಡೆಸದೆ ಆಡಳಿತ ಸದಸ್ಯರನ್ನು ನೇಮಿಸಲು ಹೊರಟಿರುವ ಸರಕಾರದ ತೀರ್ಮಾನ ಸರಿಯಲ್ಲ, ಚುನಾವಣಾ ಆಯೋಗ ಈ ಬಗ್ಗೆ ಕೂಡಲೇ ಚುನಾವಣೆ ನಡೆಸಿ ಆಡಳಿತರೂಡ ಪಕ್ಷದ ಕೈ ಗೊಂಬೆ ಆಗದೇ ಪಂಚಾಯತ್ ಚುನಾವಣೆ ನಡೆಸಬೇಕು ಮತ್ತು ಆಡಳಿತ ಅಧಿಕಾರಿಗಳನ್ನು ನೇಮಿಸಿ, ಆದರೆ ಧಾರ್ಮಿಕ ದತ್ತಿ ಇಲಾಖೆ ರೀತಿಯಲ್ಲಿ ಸದಸ್ಯರನ್ನು ನೇಮಿಸುವುದು ಬೇಡ. ಚುನಾವಣೆ ನಡೆದರೆ ಗೆಲ್ಲಲು...

All posts loaded
No more posts