Ad Widget

ಬಿಳಿಯಾರು ಬಳಿ ಪಾದಚಾರಿಗೆ ಕಾರು ಡಿಕ್ಕಿ ಆಸ್ಪತ್ರೆ ಸಾಗಿಸುವ ಮಧ್ಯೆ ಪಾದಾಚಾರಿ ಮೃತ್ಯು

ವರ್ಷದ ಪ್ರಥಮ ಮಳೆಯ ಆರಂಭದಲ್ಲಿ ಅನಾಹುತ ಸಂಭವಿಸಿ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಅರಂತೋಡು ಬಳಿ ಬಿಳಿಯಾರುನಲ್ಲಿ ನಡೆದಿದೆ. ಮಡಿಕೇರಿ ಕಡೆಯಿಂದ ಸುಳ್ಯ ಬರುತ್ತಿದ್ದ ಕಾರು ಅರಂತೋಡಿನ ಬಿಳಿಯಾರು ಎಂಬಲ್ಲಿ ಪಾದಚಾರಿಯೊಬ್ಬರಿಗೆ ಡಿಕ್ಕಿ ಸಂಭವಿಸಿದೆ.ಅಡ್ಕಾರ್ ನ ವ್ಯಕ್ತಿಯೊಬ್ಬರ ಕಾರು ಇದಾಗಿದ್ದು ಬಿಳಿಯಾರು ಬಳಿ ಬರುತ್ತಿದ್ದಂತೆ ಪಾದಚಾರಿ ರಸ್ತೆ ದಾಟುವಾಗ, ಮಳೆಯ ಕಾರಣದಿಂದಬ್ರೇಕ್ ಸಿಗದೇ ಕಾರು ಪಾದಚಾರಿಗೆ ಗುದ್ದಿ...

ಮಡಪ್ಪಾಡಿ ಐ ಇ ಸಿ ಮತ್ತು ಸ್ವಚ್ಛತಾ ಕಾರ್ಯಕ್ರಮ

ಮಡಪ್ಪಾಡಿ ಗ್ರಾ.ಪಂ ವತಿಯಿಂದ ಯುವಕ ಮಂಡಲ ಮತ್ತು ಗ್ರಾಮಸ್ಥರ ಸಹಯೋಗದೊಂದಿಗೆ ಐ ಇ ಸಿ ಮತ್ತು ಸ್ವಚ್ಛತಾ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದಲ್ಲಿ ಗ್ರಾ. ಪಂ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಪಿಡಿಒ ಸಿಬ್ಬಂದಿ ವರ್ಗದವರು ಯುವಕ ಮಂಡಲ ಸದಸ್ಯರು ಆಶಾ ಕಾರ್ಯಕರ್ತೆಯರು ಗ್ರಾಮಸ್ಥರು ಭಾಗವಹಿಸಿದರು ಶಾಲಾ ಆವರಣ,ಪೇಟೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು
Ad Widget

ಮೇದಿನಡ್ಕ : ಆಹಾರ ಸಾಮಗ್ರಿ ವಿತರಣೆ

ದ.ಕ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯ ರವರ ನೇತೃತ್ವದಲ್ಲಿ ಅಜ್ಜಾವರ ಗ್ರಾಮದ ಮೇದಿನಡ್ಕ ತಮಿಳು ಪುನರ್ವಸತಿ ಕಾಲೊನಿಯಲ್ಲಿ 45 ಮನೆಗಳಿಗೆ ಆಹಾರ ಸಾಮಗ್ರಿಯ ಕಿಟ್ ಗಳನ್ನು ಮೇ 31 ರಂದು ವಿತರಿಸಲಾಯಿತು. ಪಂಚಾಯಿತಿಯ ಮಾಜಿ ಅಧ್ಯಕ್ಷ ಪ್ರಸಾದ್ ರೈ ಮೇನಾಲ ಆಹಾರ ಕಿಟ್ ವಿತರಣೆಗೆ ಚಾಲನೆ ನೀಡಿದರು.ಈ ಸಂದರ್ಭ ದಲ್ಲಿ ಅಜ್ಜಾವರ...

ಕನಕಮಜಲು ಯುವಕಮಂಡಲ ವತಿಯಿಂದ ದಿ.ಅಶ್ವಿತ್ ಮಳಿ ಶ್ರದ್ಧಾಂಜಲಿ ಸಭೆ

ಮೇ 9 ರಂದು ವಿಧಿಯ ಕ್ರೂರ ಆಟಕ್ಕೆ ಸಿಲುಕಿ ಅಡ್ಕಾರಿನ ಪಯಸ್ವಿನಿ ನದಿಯಲ್ಲಿ ಬಲಿಯಾದ ಕನಕಮಜಲಿನ ಅಶ್ವಿತ್ ಇವರ ಶ್ರದ್ಧಾಂಜಲಿ ಸಭೆಯು ಕನಕಮಜಲಿನ ಯುವಜನ ವಿಕಾಸ ಕೇಂದ್ರ ಯುವಕಮಂಡಲ ಇದರ ವತಿಯಿಂದ ಮೇ 31 ರಂದು ನಡೆಯಿತು. ಈ ಸಂದರ್ಭದಲ್ಲಿ ಯುವಜನ ವಿಕಾಸ ಕೇಂದ್ರ ಯುವಕಮಂಡಲದ ಪೂರ್ವ ಅಧ್ಯಕ್ಷರಾದ ದಾಮೋದರ ಕನಕಮಜಲು ಅವರ ಸ್ಮರಿಸಿ ಗುಣಗಾನ...

ಬಿಜೆಪಿ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳ ಆಯ್ಕೆ

ಭಾರತೀಯ ಜನತಾ ಪಾರ್ಟಿ- ಸುಳ್ಯ ಮಂಡಲದಲ್ಲಿ ಮುಂದಿನ ಮೂರು ವರುಷಗಳ ಅವಧಿಗೆ, ವಿವಿಧ ಮೋರ್ಚಾಗಳ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ಸುಳ್ಯ ಮಂಡಲ ಅಧ್ಯಕ್ಷರಾದ ಶ್ರೀ ಹರೀಶ್ ಕಂಜಿಪಿಲಿಯವರು ಘೋಷಿಸಿದ್ದಾರೆ.ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ ಶ್ರೀಮತಿ ಶುಭದಾ ಎಸ್. ರೈ ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀಮತಿ ತೇಜಸ್ವಿನಿ ಕಟ್ಟಪುಣಿ, ಎಸ್. ಸಿ. ಮೋರ್ಚಾದ ಅಧ್ಯಕ್ಷರಾಗಿ ಶ್ರೀ ಅಚ್ಚುತ...

ಸುಬ್ರಹ್ಮಣ್ಯ ಎಎಸ್‌ಐ ಚಂದಪ್ಪಗೆ ಬೀಳ್ಕೊಡುಗೆ ಸಮಾರಂಭ

ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದಪ್ಪ ಅವರು ಮೇ 31 ರಂದು ನಿವೃತ್ತರಾದರು.ಪೋಲೀಸ್ ಇಲಾಖೆಯಲ್ಲಿ ನಿರಂತರ 33 ವರ್ಷ 7 ತಿಂಗಳು ಸೇವೆ ಸಲ್ಲಿಸಿ ನಿವೃತ್ತರಾದ ಚಂದಪ್ಪ ಅವರನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬೀಳ್ಕೊಡಲಾಯಿತು . ಸುಬ್ರಹ್ಮಣ್ಯ ಠಾಣಾಧಿಕಾರಿ ಓಮನಾ ಎನ್.ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ....

ಎಸ್.ಟಿ. ಮೋರ್ಚಾದ ಅಧ್ಯಕ್ಷರಾಗಿ ಐತ್ತಪ್ಪ ನಾಯ್ಕ ಚೊಕ್ಕಾಡಿ, ಪ್ರಧಾನ ಕಾರ್ಯದರ್ಶಿ ಪೂವಪ್ಪ ನಾಯ್ಕ ಶಾಂತಿಗುರಿ

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಬಿಜೆಪಿ ಎಸ್‌ಟಿ ಮೋರ್ಚಾ ಪದಾಧಿಕಾರಿಗಳ ಪಟ್ಟಿಯನ್ನು ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಬಿಡುಗಡೆಗೊಳಿಸಿದ್ದು, ಎಸ್.ಟಿ. ಮೋರ್ಚಾದ ಅಧ್ಯಕ್ಷರಾಗಿ ಐತ್ತಪ್ಪ ನಾಯ್ಕ ಚೊಕ್ಕಾಡಿ ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಪೂವಪ್ಪ ನಾಯ್ಕ ಶಾಂತಿಗುರಿ ನೇಮಕಗೊಂಡಿದ್ದಾರೆ ,

ಗೃಹರಕ್ಷಕದಳದ ಸಿಬ್ಬಂದಿಗಳ ಸೇವೆಯನ್ನು ಮುಂದುವರಿಸುವಂತೆ ಜೆಡಿಎಸ್ ಆಗ್ರಹ

ರಾಜ್ಯ ಸರ್ಕಾರವು ಆರ್ಥಿಕ ಕಾರಣವೊಡ್ಡಿ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಸೇವೆಸಲ್ಲಿಸುತ್ತಿರುವ ಗೃಹರಕ್ಷಕದಳದ ಸಿಬ್ಬಂದಿಗಳನ್ನು ಜೂನ್ ಒಂದರಿಂದ ಬಿಡುವ ಆದೇಶ ಜಾರಿ ಮಾಡಿದ್ದು ಈ ದಿಢೀರ್ ಘೋಷಣೆ ಅನೇಕ ದುಷ್ಪರಿಣಾಮಗಳಿಗೆ ಕಾರಣವಾಗಲಿದೆ. ರಾಜ್ಯದಲ್ಲಿ ಸುಮಾರು 25 ಸಾವಿರ ಗೃಹರಕ್ಷಕ ಸಿಬ್ಬಂದಿ ಗಳು ಸೇವೆ ಸಲ್ಲಿಸುತ್ತಿದ್ದು ನೆರೆ ಪರಿಹಾರ, ಸಾರಿಗೆ ಸುವ್ಯವಸ್ಥೆ, ಬಂದೋಬಸ್ತು, ಗಣ್ಯರ ರಕ್ಷಣೆ, ಕಾನೂನು ಸುವ್ಯವಸ್ಥೆ,...

ಮುಳ್ಯ- ಕಾಂಗ್ರೆಸ್ ವತಿಯಿಂದ ಆಹಾರ ಸಾಮಗ್ರಿ ವಿತರಣೆ

ದ.ಕ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯ ರವರ ನೇತೃತ್ವದಲ್ಲಿ ಅಜ್ಜಾವರ ಗ್ರಾಮದ ಮುಳ್ಯ ಪ.ಜಾತಿ ಕಾಲನಿಯ 50 ಮನೆಗಳಿಗೆ ಆಹಾರ ಸಾಮಗ್ರಿಯ ಕಿಟ್ ಗಳನ್ನು ಮೇ 31 ರಂದು ವಿತರಿಸಲಾಯಿತು. ಕೃಷಿಕರಾದ ರಾಜೇಶ್ ಭಟ್ ಎಲಿಮಲೆ ಆಹಾರ ಕಿಟ್ ವಿತರಣೆಗೆ ಚಾಲನೆ ನೀಡಿದರು. ಈ ಸಂದರ್ಭ ದಲ್ಲಿ ಅಜ್ಜಾವರ ಗ್ರಾಮ ಪಂಚಾಯಿತಿಯ...

ಬೆಳ್ಳಾರೆ ಪ್ರಾ.ಆ.ಕೇಂದ್ರದ ಕಿರಿಯ ಮಹಿಳಾ ಅರೋಗ್ಯ ಸಹಾಯಕಿ ರೇವತಿ ಬೊಳ್ಳಾಜೆ ಸೇವಾ ನಿವೃತ್ತಿ

ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಅರೋಗ್ಯ ಸಹಾಯಕಿಯಾದ ಶ್ರೀಮತಿ ರೇವತಿ ಐ . ಬೊಳ್ಳಾಜೆಯವರು ವೃತ್ತಿ ಬದುಕಿನಿಂದ ನಿವೃತ್ತರಾಗಿದ್ದಾರೆ . ಐವತ್ತೊಕ್ಲು ಗ್ರಾಮದ ಬೊಳ್ಳಾಜೆಯವರಾಗಿದ್ದು , ಪ್ರಸ್ತುತ ದೇವಚಳ್ಳ ಗ್ರಾಮದ ಅಡ್ಡನಪಾರೆಯಲ್ಲಿ ನೆಲೆಸಿರುವ ಪ್ರಗತಿಪರ ಕೃಷಿಕ ವಸಂತಕುಮಾರ್ ಬೊಳ್ಳಾಜೆಯವರ ಪತ್ನಿಯಾಗಿರುವ ರೇವತಿ ಐ.ಯವರು 1982 ರಲ್ಲಿ ಕಾರ್ಕಳ ತಾಲೂಕಿನ ಬೆಳುವಾಯಿ ಪ್ರಾಥಮಿಕ ಆರೋಗ್ಯ...
Loading posts...

All posts loaded

No more posts

error: Content is protected !!