Ad Widget

ಕೇರ್ಪಳ ರಸ್ತೆಯ ಗುಂಡಿ ಮುಚ್ಚಲು ಒತ್ತಾಯ

ಬೂಡು ಕೇರ್ಪಳ ಸಂಪರ್ಕಿಸುವ ರಸ್ತೆಯಲ್ಲಿ ದುರ್ಗಾಪರಮೇಶ್ವರಿ ಕಲಾಮಂದಿರ ಎದುರು ಭಾರಿ ಹದಗೆಟ್ಟಿದ್ದು ಮಳೆಗಾಲದಲ್ಲಿ ನಡೆದಾಡಲು ಕಷ್ಟವಾಗಲಿದೆ. ಆದ್ದರಿಂದ ಈ ಕೂಡಲೇ ದುರಸ್ತಿಪಡಿಸಬೇಕೆಂದು ನ.ಪಂ.ಸದಸ್ಯ ರಿಯಾಜ್ ಕಟ್ಟೆಕಾರ್ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಕಾಪುಕಾಡು-ಜಾಲ್ಪಣೆ ರಸ್ತೆ ಮರು ಡಾಮರೀಕರಣ

ಮುಕ್ಕೂರು : ಮಳೆ ಹಾನಿ ಪರಿಹಾರ ಯೋಜನೆಯಡಿ ಪೆರುವಾಜೆ ಗ್ರಾಮದ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಸಂಪರ್ಕ ರಸ್ತೆಯ ಕಾಪುಕಾಡು- ಜಾಲ್ಪಣೆ ತನಕ 17 ಲಕ್ಷ ರೂ.ವೆಚ್ಚದಲ್ಲಿ ಮರು ಡಾಮರೀಕರಣಕ್ಕೆ ಮೇ 28 ರಂದು ಚಾಲನೆ ನೀಡಲಾಯಿತು.ಜಿ.ಪಂ.ಸದಸ್ಯ ಎಸ್.ಎನ್. ಮನ್ಮಥ ಕಾಮಗಾರಿಗೆ ಚಾಲನೆ ನೀಡಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ಉಮೇಶ್ ಕೆಎಂಬಿ,ನ್ಯಾಯವಾದಿ ಗಣಪತಿ ಭಟ್...
Ad Widget

ರೈತರು ಕೃಷಿ ಕಾರ್ಮಿಕರಿಗೆ ಸಹಾಯಧನಕ್ಕೆ ಒತ್ತಾಯಿಸಿ ರೈತ ಸಂಘ ಮತ್ತು ಹಸಿರು ಸೇನೆ ಒತ್ತಾಯ

ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ಮೇ 27 ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ರೈತರು, ಕೃಷಿಕೂಲಿಗಾರರು ಹಾಗೂ ಗ್ರಾಮೀಣ ಕಸುಬುದಾರರ ಸಂಕಷ್ಟದ ತಕ್ಷಣದ ಪರಿಹಾರಕ್ಕೆ ಆಗ್ರಹಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಯೊಂದಿಗೆ ಪ್ರತಿಭಟನಾ ಸಭೆ ನಡೆಸಿ ಸಹಾಯಕ ಕಮೀಷನರ್ ಮೂಲಕ...

ಜೂ 1 ರಿಂದ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಭಾಗ್ಯ

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನವು ಜೂನ್ 1 ರಿಂದ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು. ಸರ್ಕಾರದ ಆದೇಶದಂತೆ ಸ್ವಚ್ಚತೆ , ಸ್ಯಾನಿಟೈಸರ್‌ ಬಳಕೆ , ಥರ್ಮಲ್ ಸ್ಟೀನಿಂಗ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡು ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಅವಕಾಶ ನೀಡಲಾಗುವುದು. ಈ ಎಲ್ಲಾ ವ್ಯವಸ್ಥೆ ಗಳನ್ನು ಮಾಡಿ ಭಕ್ತಾದಿಗಳ ಸ್ವಾಗತಕ್ಕೆ...

ಮೇ ೨೭ ರಿಂದ ಕೊಡಗಿನಲ್ಲಿ ಭಾರಿ ಮಳೆ ಸಾಧ್ಯತೆ

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮೇ 27 ರಿಂದ 29 ವರೆಗೆ ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ (50-75% ಪ್ರದೇಶಗಳಲ್ಲಿ) ಹಾಗೂ ಮೇ 30 ರಿಂದ ಜೂನ್ 1 ರವರೆಗೆ ವ್ಯಾಪಕವಾಗಿ(75% ಗಿಂತ ಹೆಚ್ಚು ಪ್ರದೇಶಗಳಲ್ಲಿ), ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ರೈತರು ಮುಂಗಾರಿನ ಪೂರ್ವದಲ್ಲಿ ಕೈಗೊಳ್ಳಬೇಕಾದ ಕೆಲಸಗಳನ್ನು ಮಳೆಯ ಆಧಾರದ ಮೇಲೆ ಕೈಗೊಳ್ಳಬಹುದಾಗಿದೆ ಎಂದು...

ಅಜ್ಜಾವರ – ಸ್ಕೂಟಿ ಮತ್ತು ಕಾರು ಡಿಕ್ಕಿ

ಅಜ್ಜಾವರ ಪೆಲತ್ತಡಿ ಎಂಬಲ್ಲಿ ಕಾರು ಮತ್ತು ಸ್ಕೂಟಿ ಡಿಕ್ಕಿಯಾಗಿದ್ದು ಸ್ಕೂಟಿ ಸವಾರರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.ಅಜ್ಜಾವರದಿಂದ ಅಡ್ಪಂಗಾಯಕ್ಕೆ ಹೋಗುತ್ತಿದ್ದ ಯಾಕುಬ್ ಎಂಬವರ ಕಾರು ಹಾಗೂ ಎದುರಿನಿಂದ ಬಂದ ಸ್ಕೂಟಿ ಡಿಕ್ಕಿಯಾಗಿದೆ. ಸ್ಕೂಟಿಯಲ್ಲಿದ್ದ ಬಂಟ್ರಬೈಲಿನ ಶಾನಿಫ್ ಮತ್ತು ಬಾಸಿತ್ ಗಾಯಗೊಂಡಿದ್ದು ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಮುಂಬೈ ಯಿಂದ ಬಂದ ಕುಟುಂಬದ ಮೂವರಿಗೂ ಸೋಂಕು ದೃಢ

ಸರ್ವೆ ಹಾಸ್ಟೆಲ್ ನಲ್ಲಿ ಕಾರಂಟೈನ್ ನಲ್ಲಿದ್ದ ವ್ಯಕ್ತಿಗಳಲ್ಲಿ ಕೊರೊನ ಸೋಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಮುಂಬೈ ನಿಂದ ಕೆಲ ದಿನಗಳ ಹಿಂದೆ ಬಂದ ಇವರನ್ನು ಹಾಸ್ಟೆಲ್ ನಲ್ಲಿ ಕಾರಂಟೈನ್ ಮಾಡಲಾಗಿತ್ತು.ಒಂದೇ ಕುಟುಂಬದಲ್ಲಿ ಸೋಂಕು ದೃಡಪಟ್ಟಿದ್ದರಿಂದ ಗಂಡ ಹೆಂಡತಿ ಮತ್ತು ಮಗಳನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹಲ್ಲೆ ನಡೆಸಿದ್ದಾರೆಂದು ಮಾವ ಮತ್ತು ಗಂಡನ ಮೇಲೆ ಪೋಲೀಸ್ ದೂರು ನೀಡಿದ ಮಹಿಳೆ

ವರದಕ್ಷಿಣೆ ತರುವಂತೆ ನನ್ನ ಮೇಲೆ ಅತ್ತೆ ಮಾವ ಹಾಗೂ ಗಂಡ ಮಾನಸಿಕ ಕಿರುಕುಳ ನೀಡಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆ ಪೋಲೀಸರಿಗೆ ದೂರು ನೀಡಿದ ಘಟನೆ ಕನಕಮಜಲಿನಲ್ಲಿ ನಡೆದಿದೆ. ಅದಲ್ಲದೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಕೆಳಗಿನ ರೀತಿಯ ಲೇಖನವನ್ನು ಹರಿ ಬಿಟ್ಟಿರುತ್ತಾರೆ.ಕಳೆದ ರಾತ್ರಿ 3 ಗಂಟೆಗೆ ಅತ್ತೆ ಮಾವ ಗಂಡ ಸೇರಿ...

ದೇವ ವಿದ್ಯುತ್ ಲೈನ್ ಸ್ವಚ್ಛತೆಗೆ ಶ್ರಮದಾನ

ದೇವ ಹೆಚ್ ಟಿ ವಿದ್ಯುತ್ ಲೈನ್ ಸ್ವಚ್ಛತಾ ಕಾರ್ಯ ಇಂದು ಮೇ ೨೬ ರಂದು ನಡೆಯಿತು.ಈ ಸಂದರ್ಭದಲ್ಲಿ ಮೆಸ್ಕಾಂ ಸಿಬ್ಬಂದಿಗಳು, ಗೆಳೆಯರ ಬಳಗದ ಸದಸ್ಯರು ಊರವರು ಭಾಗವಹಿಸಿ ಶ್ರಮಸೇವೆಗೈದರು.

ಅಡ್ಡನಪಾರೆ ಹೆಚ್ ಟಿ ಲೈನ್ ಸ್ವಚ್ಛತಾ ಕಾರ್ಯ

ವಳಲಂಬೆ,ಅಡ್ಡನಪಾರೆ,ದೇವ ಹೆಚ್ ಟಿ ವಿದ್ಯುತ್ ಲೈನ್ ಗೆ ತಾಗುವ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯ ಇಂದು (ಮೇ.೨೬) ರಂದು ನಡೆಯಿತು.ಹಾಗೂ ತಂತಿ ಬದಲಾವಣೆ ಕಾರ್ಯ ಕೂಡ ನಡೆಯಿತು. ಮೆಸ್ಕಾಂ ಸಿಬ್ಬಂದಿಗಳು, ಊರವರು ಭಾಗವಹಿಸಿದ್ದರು.
Loading posts...

All posts loaded

No more posts

error: Content is protected !!