Ad Widget

ನಾಳೆ (ಏ.11) ಕೊಲ್ಲಮೊಗ್ರು- ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣಾ ಫಲಿತಾಂಶ ಘೋಷಣೆ

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಫಲಿತಾಂಶವು ನಾಳೆ(ಏ.11) ಘೋಷಣೆಯಾಗಲಿದೆ ಎಂದು ತಿಳಿದುಬಂದಿದೆ.ಜ.19 ರಂದು ಸೊಸೈಟಿ ನೂತನ ಆಡಳಿತ ಮಂಡಳಿಯ ಚುನಾವಣೆ ನಡೆದಿದ್ದು, ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಫಲಿತಾಂಶ ಘೋಷಣೆಗೆ ತಡೆ ನೀಡಲಾಗಿತ್ತು.ಇದೀಗ ಹೈಕೋರ್ಟ್ ಆದೇಶದಂತೆ ಡಿ.ಆರ್ ರವರು ಫಲಿತಾಂಶ ಘೋಷಣೆ ನಿಗದಿಪಡಿಸಿ ನೋಟೀಸ್ ಕಳಿಸಿರುವುದಾಗಿ ತಿಳಿದುಬಂದಿದೆ.

ಮಲೆನಾಡು ಜನಹಿತರಕ್ಷಣಾ ವೇದಿಕೆ ಹೋರಾಟದ ಫಲಶ್ರುತಿ – ಶೀಘ್ರವೇ ಜಂಟಿ ಸರ್ವೆಗೆ ಸರಕಾರದ ಆದೇಶ – ಆಯಾಯ ಗ್ರಾ.ಪಂ.ಗೆ ಮಾಹಿತಿ ನೀಡಿ ಜಂಟಿಸರ್ವೆ ನಡೆಸುವಂತೆ ಮನವಿ

ಸಂಘಟನೆಯ ಸಂಚಾಲಕ ಕಿಶೋರ್ ಶಿರಾಡಿ ಸುದ್ದಿಗೋಷ್ಠಿ :ನವಂಬರ್ 15 ರಂದು ಮಲೆನಾಡು ಜನಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಶ್ರೀ ಕಿಶೋರ್ ಶಿರಾಡಿ, ಕಸ್ತೂರಿ ರಂಗನ್ ಹೋರಾಟದ ವಿಚಾರವಾಗಿ ಭಾದಿತ ಗ್ರಾಮಗಳ ಜಂಟಿಸರ್ವೆ ನಡೆಸಬೇಕೆಂಬ ವಿಚಾರವನ್ನಿಟ್ಟುಕೊಂಡು ಹೋರಾಟಕ್ಕೆ ಕರೆಕೊಟ್ಟಿದ್ದರು. ಈ ಹಿನ್ನಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷದ ನಾಯಕರು, ಧಾರ್ಮಿಕ ಮುಖಂಡರು ,ಸಂಘಟನೆಗಳ ಪ್ರಮುಖರು ಈ ಹೋರಾಟದಲ್ಲಿ ಸಭೆ ನಡೆಸಿ...
Ad Widget

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯುತ್ತಿರುವ ಹೋರಾಟಗಳಿಗೆ ಕೊಲ್ಲಮೊಗ್ರ ಗ್ರಾಮ ಗೌಡ ತರುಣ ಘಟಕ ಬೆಂಬಲ

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯುತ್ತಿರುವ ಹೋರಾಟಗಳಿಗೆ ಕೊಲ್ಲಮೊಗ್ರ ಗ್ರಾಮ ಗೌಡ ಸಮಿತಿ ಹಾಗೂ ಗೌಡ ಸಮಿತಿಯ ತರುಣ ಘಟಕವು ಸಂಪೂರ್ಣ ಬೆಂಬಲವನ್ನು ಘೋಷಿಸಿದೆ ಎಂದು ತರುಣ ಘಟಕದ ಅಧ್ಯಕ್ಷರಾದ ಸತೀಶ್ ದೋಲನಮನೆ ಹಾಗೂ ತರುಣ ಘಟಕದ ಕಾರ್ಯದರ್ಶಿ ಕೀರ್ತಿಶ್ ಬಾಳೆಬೈಲು ಹೇಳಿಕೆಯಲ್ಲಿ ತಿಳಿಸಿದ್ದಾರೆ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ನವೆಂಬರ್ 15 ಕ್ಕೆ ...

ಬಿಳಿನೆಲೆ ಶ್ರೀ ವೇದವ್ಯಾಸ ವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ

ಕಡಬ ತಾಲೂಕಿನ ಬಿಳಿನೆಲೆ ಶ್ರೀ ವೇದವ್ಯಾಸ ವಿದ್ಯಾಲಯದಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಪ್ರಶಾಂತ್ ಬಿ ಗಿಡ ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಡೆಪ್ಪಾಜೆ ಫಾರ್ಮ್ ಹೌಸ್ ಮತ್ತು ನರ್ಸರಿ ಮರ್ದಾಳ ಇವರ ಸಹಯೋಗದಲ್ಲಿ...

ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ರಾಧಾಕೃಷ್ಣ ರಾವ್, ಶಾಲಾ ಸಂಚಾಲಕರಾದ ಶ್ರೀ ಪಿ ಜಿ ಎಸ್ ಎನ್ ಪ್ರಸಾದ್, ಶಾಲಾ ಮುಖ್ಯ ಗುರು ಉದಯ ಕುಮಾರ್ ರೈ ಎಸ್, ಶಾಲಾ ಎಸ್ಡಿಎಂಸಿ ,ಅಧ್ಯಾಪಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕೃಷಿ ಮಾಹಿತಿ : ಇಂದಿನ ಮಾರುಕಟ್ಟೆ ದರ ಇಲ್ಲಿದೆ

ಕ್ಯಾಂಪ್ಕೋ ಸಂಸ್ಥೆ ಖರೀದಿಸುತ್ತಿರುವ ಅಡಿಕೆ, ಕಾಳುಮೆಣಸು, ಕೊಕ್ಕೋ ಹಾಗೂ ರಬ್ಬರ್ ಉತ್ಪನ್ನಗಳ ಇಂದಿನ ಧಾರಣೆ ಈ ಕೆಳಗಿನಂತಿದೆ. Dt-22.03. 2024 ಅಡಿಕೆD C - 420.00 - 435.00CHOLL- 390.00-427.00NEW- 320.00-345.00/353.00 ಕಾಳುಮೆಣಸು-435.00 - 480.00ಕೊಕ್ಕೋ ಹಸಿ ಬೀಜ - 155.00-170.00 ರಬ್ಬರ್ ಧಾರಣೆ ( Campco)RSS 4 - 180.00RSS 5 - 167.00RSS...

ಹಳದಿರೋಗದಿಂದ ಅಡಿಕೆ ಕೃಷಿಕರ ಸಮಸ್ಯೆ ಕುರಿತು ಸರಕಾರದ ಗಮನ ಸೆಳೆದ ಶಾಸಕಿ ಭಾಗೀರಥಿ ಮುರುಳ್ಯರವರಿಗೆ ಸ್ಪಂದಿಸಿದ ತೋಟಗಾರಿಕಾ ಸಚಿವ

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಸುಳ್ಯದ ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಶಾಸಕಿ ಭಾಗೀರಥಿ ಮುರುಳ್ಯ ಪ್ರಶ್ನೆ ಮಾಡಿ ಸರಕಾರದ ಗಮನ ಸೆಳೆದಿದ್ದಾರೆ. ಈ ಭಾಗದಲ್ಲಿ ಅಡಿಕೆ ಕೃಷಿಗೆ ಹಳದಿರೋಗ ಭಾದೆಯಿಂದ ಕೃಷಿಕರು ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಕೈಗೊಳ್ಳಲು ಮನವಿ ಮಾಡಿದ್ದಾರು. ಏನು ಹೇಳಿದರು ತೋಟಗಾರಿಕಾ ಸಚಿವರು ? ರೋಗ ಬಾಧೆಯ...

“ಅಮರ ಸುಳ್ಯ ಸುದ್ದಿ” ದೀಪಾವಳಿ ವಿಶೇಷಾಂಕಕ್ಕೆ ಮಕ್ಕಳ ಫೋಟೋ ಸ್ಪರ್ಧೆ ಹಾಗೂ ಲೇಖನಗಳಿಗೆ ಆಹ್ವಾನ

ಸುಳ್ಯದ ಅಮರ ಸುಳ್ಯ ಸುದ್ದಿ ವಾರಪತ್ರಿಕೆ 6 ನೇ ಬಾರಿಗೆ ದೀಪಾವಳಿ ವಿಶೇಷಾಂಕ ಹೊರ ತರಲು ತಯಾರಿ ಆರಂಭಗೊಂಡಿದೆ. ಮುದ್ದು ಮಕ್ಕಳ ಫೋಟೋ ಸ್ಪರ್ಧೆ , ವಿವಿಧ ಅಂಕಣಗಳು, ಕಥೆ,ಕವನ ಗಳಿಗೆ ಆಹ್ವಾನ ನೀಡಲಾಗಿದೆ. ಆಸಕ್ತ ಬರಹಗಾರರು ಕಥೆ, ಕವನ ಲೇಖನಗಳನ್ನು ಅಕ್ಟೋಬರ್ 15 ರ ಒಳಗೆ ಕಳಿಸಬಹುದು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ 9449387044ಕಳುಹಿಸಬೇಕಾದ ವಿಳಾಸ...

ಚೆಂಬು ವನಮಹೋತ್ಸವ ಕಾರ್ಯಕ್ರಮ.

ಮಡಿಕೇರಿ ವಿಭಾಗದ ಸಂಪಾಜೆ ಪ್ರಾದೇಶಿಕ ವಲಯದ ವತಿಯಿಂದ ಚೆಂಬು ಗ್ರಾಮದ ಕೂಡಡ್ಕ,ಹಿರಿಯ ಪ್ರಾಥಮಿಕ ಶಾಲೆ ಇವರ ಸಹಭಾಗಿತ್ವದಲ್ಲಿ, ಕೋಟಿ ವೃಕ್ಷ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ವನಮಹೋತ್ಸವ ಕಾರ್ಯಕ್ರಮ ಜು.4 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಪರಿಸರದ ಮಹತ್ವದ ಬಗ್ಗೆ ತಿಳಿಸಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು, ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿಗಳಾದ ಮಧುಸೂದನ್. ಯಂ. ಕೆ, ಶಾಲೆ...

ಅರಂತೋಡು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಧ್ವಜ ವಿತರಣೆ

ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಆ.12 ರಂದು ಧ್ವಜ ವಿತರಣೆ ನಡೆಯಿತು. ಸಂಘದ ನಿರ್ದೇಶಕರುಗಳಿಗೆ ಹಾಗೂ ಸಿಬ್ಬಂದಿಗಳಿಗೆ ಧ್ವಜ ವಿತರಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಉಪಾಧ್ಯಕ್ಷ ದಯಾನಂದ ಕುರುಂಜಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್, ನಿರ್ದೇಶಕರು, ಸೊಸೈಟಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
Loading posts...

All posts loaded

No more posts

error: Content is protected !!