ಡಿಸೆಂಬರ್ 21 ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಾಜ್ಯ ಮಟ್ಟದ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ

ಸುಬ್ರಹ್ಮಣ್ಯ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ತುಮಕೂರು ಕೇಂದ್ರ ಕಚೇರಿ, ಮಂಗಳೂರು ಪ್ರಾದೇಶಿಕ ಕಚೇರಿ ಇದರ ವತಿಯಿಂದ ರಾಜ್ಯಮಟ್ಟದ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ ಡಿಸೆಂಬರ್ 21 ರಂದು ರವಿವಾರ ಕುಕ್ಕೆ ಸುಬ್ರಹ್ಮಣ್ಯದ ವಿಶಾಲವಾದ ರಥ ಬೀದಿಯಲ್ಲಿ ನಡೆಯಲಿರುವುದು. ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರು, ಮೈಸೂರು, ದೊಡ್ಡಬಳ್ಳಾಪುರ, ಕೋಲಾರ, ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ,...

ಸುಬ್ರಹ್ಮಣ್ಯ : ನಾಳೆ(ಡಿ.12) ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ “ಬೆಳೆವಿಮೆ ವಂಚಿತ ಕೃಷಿಕರ ಸಮಾಲೋಚನಾ ಸಭೆ”

ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ನಾಳೆ(ಡಿ.12) ಬೆಳಿಗ್ಗೆ 10:30ಕ್ಕೆ ಸುಬ್ರಹ್ಮಣ್ಯದ ಸೊಸೈಟಿಯ ಹತ್ತಿರ “ಬೆಳೆ ವಿಮೆ ವಂಚಿತ ಕೃಷಿಕರ ಸಮಾಲೋಚನಾ ಸಭೆ”ಯು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, “ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕೃಷಿಕರು ಕಳೆದ ಸಾಲಿನಲ್ಲಿ ದಾಖಲಾಗಿರುವ ವಿಪರೀತ ಮಳೆ ಹಾಗೂ...
Ad Widget

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಯುವ ಬರಹಗಾರರ ಚೊಚ್ಚಲ ಕೃತಿಗೆ ಧನಸಹಾಯಕ್ಕಾಗಿ ಅರ್ಜಿ ಆಹ್ವಾನ

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2025-26ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ 50 ಯುವ ಬರಹಗಾರರ ಹಸ್ತಪ್ರತಿಗಳ ಪ್ರಕಟಣೆಗೆ ಮಾತ್ರ ರೂ.15,000/- ಗಳ ಪ್ರೋತ್ಸಾಹಧನ ನೀಡಲಾಗುವುದು. ಅರ್ಜಿದಾರರು 18 ರಿಂದ 40 ವರ್ಷ ವಯೋಮಿತಿಯವರಾಗಿರಬೇಕು. ಸ್ವ-ವಿವರವುಳ್ಳ ಪ್ರಾಧಿಕಾರದ ಅರ್ಜಿ ನಮೂನೆಯೊಂದಿಗೆ ದೃಢೀಕೃತ ಎಸ್.ಎಸ್.ಎಲ್.ಸಿ. ಪ್ರಮಾಣ ಪತ್ರದ...

ಗುತ್ತಿಗಾರು : ಡಿ.07 ರಂದು “ಬೃಹತ್ ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ-2025 ಹಾಗೂ ಸನ್ಮಾನ ಸಮಾರಂಭ”

ಕೆ.ವಿ.ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ(ರಿ.) ಸುಳ್ಯ ಹಾಗೂ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ರಿ.) ಇದರ ನೇತೃತ್ವದಲ್ಲಿ ಕೆ.ವಿ.ಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ, ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಹಾಗೂ ಕೆ.ವಿ.ಜಿ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ ಇವುಗಳ ಸಹಭಾಗಿತ್ವದೊಂದಿಗೆ ಹಾಗೂ...

ಎಐ ಫೋಟೋ ಎಡಿಟಿಂಗ್‌ ಎಂಬ ಮಾರಕ ಕಾಯಿಲೆಗೆ ಬಲಿಯಾಗದಿರಿ! ; ✍️ಧನ್ಯಾ ಬಾಳೆಕಜೆ

ಕಳೆದ ನಾಲ್ಕೈದು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಎಐ ಮುಖಾಂತರ ಎಡಿಟ್‌ ಮಾಡಿರುವುದು ಎನ್ನಲಾದ ಫೋಟೋಗಳು ಹರಿದಾಡುತ್ತಿದ್ದವು. ಬೆಳಗ್ಗೆ ಎದ್ದ ಕೂಡಲೇ ಫೇಸ್ಬುಕ್‌ ತೆರೆದಾಗ ಹರಿದಾಡುತ್ತಿದ್ದ ಇಂತಹ ಫೋಟೋಗಳು ನಿಜವೇ ಆಗಿರಬೇಕು ಎನ್ನುವಷ್ಟು ಸಹಜವಾಗಿದ್ದವು ಮತ್ತು ಈಗಲೂ ಅಂತಹ ಫೋಟೋಗಳು ನಿಜವೇ ಇರಬಹುದಲ್ಲವೇ ಎಂಬಷ್ಟು ಗೊಂದಲಗಳು ಮನಸ್ಸಿನೊಳಗೆ ಕೊರೆಯುವಷ್ಟು ಸಹಜವಾದ ಎಡಿಟ್‌ ಮಾಡಲಾದ ಫೋಟೋಗಳವು. ಆ...

ಸಂವಿಧಾನ ದಿನ – ನವೆಂಬರ್ 26 : ಡಾ| ಮುರಲೀ ಮೋಹನ್ ಚೂಂತಾರು

ಪ್ರತಿ ವರ್ಷ ನವೆಂಬರ್ 26 ರಂದು ದೇಶಾದ್ಯಂತ ಸಂವಿಧಾನ ದಿವಸ ಅಥವಾ ರಾಷ್ಟ್ರೀಯ ಕಾನೂನು ದಿನ ಎಂದು ಆಚರಿಸಲಾಗುತ್ತದೆ. 1949ನೇ ನವೆಂಬರ್ 26 ರಂದು ಭಾರತ ಸರಕಾರದ ಸಂವಿಧಾನ ಸಮಿತಿ ಭಾರತದ ಸಂವಿಧಾನವನ್ನು ಮೊದಲ ಬಾರಿಗೆ ಅನುಮೋದಿಸಿತ್ತು. ಇದರ ಸವಿನೆನಪಿಗಾಗಿ ಈ ದಿನವನ್ನು ಸಂವಿಧಾನ ದಿವಸ ಎಂದು ಆಚರಿಸಲಾಗುತ್ತದೆ. ಆದರೆ ನಮ್ಮ ಸಂವಿಧಾನ ಜನವರಿ 26,...

ಬೆಳ್ಳಾರೆ ಭಾಗದಲ್ಲಿ ನಾಳೆ(ನ.25) ವಿದ್ಯುತ್ ವ್ಯತ್ಯಯ

ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಬೆಳ್ಳಾರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರುಗಳಲ್ಲಿ  ನ.25 ರಂದು ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11ಕೆವಿ ಬೆಳ್ಳಾರೆ-1, ಬೆಳ್ಳಾರೆ -2 ನೆಟ್ಟಾರು, ಕಳಂಜ, ಮುರುಳ್ಯ, ಪೆರ್ಲಂಪಾಡಿ, ಚೊಕ್ಕಾಡಿ ಫೀಡರುಗಳಲ್ಲಿ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 6:00 ರ ತನಕ ವಿದ್ಯುತ್...

ಗುತ್ತಿಗಾರು : ಚತ್ರಪ್ಪಾಡಿ ನೂತನ ಸೇತುವೆ ಕಾಮಗಾರಿ ಹಿನ್ನೆಲೆ ಇಂದಿನಿಂದ ರಸ್ತೆ ಬಂದ್

ಗುತ್ತಿಗಾರು ಬಳ್ಪ ಸಂಪರ್ಕಿಸುವ ರಸ್ತೆ ಚತ್ರಪ್ಪಾಡಿ ಎಂಬಲ್ಲಿ ಹಳೆ ಸೇತುವೆ ತೆಗೆದು ನೂತನ ಸೇತುವ ನಿರ್ಮಾಣ ಕಾಮಗಾರಿ ಕೆಲಸ ಇಂದಿನಿಂದ ನ.19 ರಿಂದ ಪ್ರಾರಂಭವಾಗಲಿದೆ. ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಬದಲಿ ರಸ್ತೆ ಬಳಸುವಂತೆ ಸೂಚಿಸಿದ್ದಾರೆ.

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ಸಾರ್ವಜನಿಕ ಪ್ರಕಟಣೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಪೊಲೀಸ್ ಇಲಾಖೆಯ ಸಹಕಾರ ಹಾಗೂ ಸಹ ಭಾಗಿತ್ವದೊಂದಿಗೆ,ಯಾರೂ ಕೂಡ ತಮ್ಮ ಸಾಕು ಪ್ರಾಣಿಗಳಾದ ದನ, ಕರು, ಎತ್ತು, ಎಮ್ಮೆ, ಕೋಣ, ಬೆಕ್ಕು & ಬೆಕ್ಕು ಮರಿಗಳು ಮತ್ತು ನಾಯಿ & ನಾಯಿ ಮರಿಗಳು ಮುಂತಾದ ಜಾನುವಾರುಗಳನ್ನು  ಸಾರ್ವಜನಿಕ ಸ್ಥಳಗಳಲ್ಲಿ, ಮುಖ್ಯ ರಸ್ತೆಗಳಲ್ಲಿ ಮತ್ತು ರಥ ಬೀದಿಗಳಿಗೆ ಬಿಡದೆ ನಮ್ಮೂರಿನ...

ಕುಕ್ಕೆ ಸುಬ್ರಹ್ಮಣ್ಯ : ನ.14ರಿಂದ ಡಿ.02ರ ತನಕ ಸರ್ಪಸಂಸ್ಕಾರ ಸೇವೆ ಇಲ್ಲ – ಜಾತ್ರಾ ದಿನ ಸೇವೆ ವ್ಯತ್ಯಯ

ಸುಬ್ರಹ್ಮಣ್ಯ : ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ನ.16ರಿಂದ ಡಿ.02ರ ತನಕ ನೆರವೇರಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ನ.14ರಿಂದ ಡಿ.02ರ ತನಕ ಶ್ರೀ ದೇವಳದ ಪ್ರಧಾನ ಸೇವೆಗಳಲ್ಲಿ ಒಂದಾದ ಸರ್ಪಸಂಸ್ಕಾರ ಸೇವೆ ನೆರವೇರುವುದಿಲ್ಲ, ಭಕ್ತರು ಸಹಕರಿಸಬೇಕು ಎಂದು ಶ್ರೀ ದೇವಳದ...
Loading posts...

All posts loaded

No more posts

error: Content is protected !!