- Thursday
- September 17th, 2026
ಹಿಂದೂ ಸಂಗಮ ಗುತ್ತಿಗಾರು ಮಂಡಲದ ವತಿಯಿಂದ ದೇವಚಳ್ಳ, ಮಡಪ್ಪಾಡಿ, ಗುತ್ತಿಗಾರು ಹಾಗೂ ನಾಲ್ಕೂರು ಗ್ರಾಮಗಳ ಒಗ್ಗೂಡಿಕೆಯೊಂದಿಗೆ ಹಿಂದೂ ಸಮಾಜದ ಏಕತೆ, ಸಾಮರಸ್ಯ, ಸಾಮಾಜಿಕ ಪರಿವರ್ತನೆ, ಧಾರ್ಮಿಕ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಇಂದು(ಜ.18) ಅಪರಾಹ್ನ 3:00 ಗಂಟೆಯಿಂದ ಗುತ್ತಿಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ “ಹಿಂದೂ ಸಂಗಮ” ಕಾರ್ಯಕ್ರಮ ನೆರವೇರಲಿದೆ ಎಂದು...
ಕೊಲ್ಲಮೊಗ್ರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಎರಡುವರೆ ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ವೈದ್ಯಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ| ಕುಲದೀಪ್.ಎಂ.ಡಿ ರವರು ಇಂದು(ಡಿ.17) ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಮ್ಮ ಕೊನೆಯ ಕರ್ತವ್ಯ ದಿನವನ್ನು ಪೂರೈಸುತ್ತಿದ್ದು, ಆ ಪ್ರಯುಕ್ತ “ನ್ಯಾಯಕ್ಕಾಗಿ ಒಂದಾಗೋಣ” ಸಮಿತಿಯ ಸದಸ್ಯರಿಂದ ಡಾ| ಕುಲದೀಪ್ ರವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಭಿನಂದನಾ ಸಮಾರಂಭ...
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ನಿರ್ಣಯ ಮಂಡಳಿ, ಬೆಂಗಳೂರು ಇವರು ನಡೆಸುವ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯವು ಶೇಕಡಾ 100 ಫಲಿತಾಂಶ ದಾಖಲಿಸಿದ್ದು, ಸಂಸ್ಥೆಯಿಂದ ಒಟ್ಟು ಲೋವರ್ ಗ್ರೇಡ್ ಪರೀಕ್ಷೆಯಲ್ಲಿ 11 ವಿದ್ಯಾರ್ಥಿಗಳು ಹಾಗೂ ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ 15 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ ಹೈಯರ್ ಗ್ರೇಡ್ ನಲ್ಲಿ ತನ್ವಿ ಪಿ.ಎಸ್...
ಅಜ್ಜಾವರ : ಮೇದಿನಡ್ಕದಲ್ಲಿ ಪೂರ್ವ ಸಂಪ್ರದಾಯದಂತೆ ನಡೆದುಕೊಂಡು ಬಂದ ಪೊಂಗಲ್ ಆಚರಣೆಯು ಶ್ರೀ ರಾಮ ಭಜನಾ ಮಂದಿರದಲ್ಲಿ ಜ.15 ರಂದು ಪೊಂಗಲ್ ಆಚರಣೆಯೊಂದಿಗೆ ವಿಜ್ರಂಭಣೆಯಿಂದ ಸಮಾಪನಗೊಂಡಿತು. ಬೆಳಗ್ಗೆ 8:30ಕ್ಕೆ ಶ್ರೀ ರಾಮಚಂದ್ರನಿಗೆ ವಿಶೇಷ ಅಲಂಕಾರ ಪೂಜೆ, ಪ್ರಸಾದ ವಿತರಣೆ ನಡೆಯಿತು. ತದ ನಂತರ ಮನೆ ಮನೆ ಭಜನಾ ಸಂಕೀರ್ತನೆ, ತ್ರಿಶೂಲ ದೀಪದೊಂದಿಗೆ ಶ್ರೀ ರಾಮ ದೇವರ...
ಯುವಜನ ವಿಕಾಸ ಕೇಂದ್ರ ಯುವಕ ಮಂಡಲ(ರಿ.) ಕನಕಮಜಲು ಇದರ ವಾರ್ಷಿಕ ಸಭೆಯು 11 ಜನವರಿ 2026ನೇ ಆದಿತ್ಯವಾರದಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.ವಾರ್ಷಿಕ ಮಹಾಸಭೆಯ ಸಭಾಧ್ಯಕ್ಷರಾಗಿ ಯುವಕ ಮಂಡಲ(ರಿ.) ಕನಕಮಜಲು ಇದರ ಅಧ್ಯಕ್ಷರಾದ ಹರ್ಷಿತ್ ಉಗ್ಗಮೂಲೆ ವಹಿಸಿದ್ದರು. ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ರಕ್ಷಿತ್ ಅಕ್ಕಿಮಲೆ, ಕಾರ್ಯದರ್ಶಿ ಅಶ್ವಥ್ ಅಡ್ಕಾರ್ ಉಪಸ್ಥಿತರಿದ್ದರು. ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಅಶ್ವಥ್ ಅಡ್ಕಾರ್...
ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಚಿನ್ನಮ್ಮ ವಳಲಂಬೆ ಇವರಿಂದ ಸೇವೆಯ ಯಕ್ಷಗಾನ “ಶ್ರೀ ದೇವಿ ಮಹಾತ್ಮೆ” ಜ.16 ಶುಕ್ರವಾರ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಶ್ರೀ ದೇವಿಯ ಪೂಜೆಯೊಂದಿಗೆ ಆರಂಭಗೊಂಡಿತು. ಅಮರ ಸುದ್ದಿ ಯೂಟ್ಯೂಬ್ ನಲ್ಲಿ ನೇರ ಪ್ರಸಾರ ನಡೆಯುತ್ತಿದೆ.
ಪಂಜ : ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ನೂತನ ಅರ್ಚಕರಾಗಿ ಸುಬ್ರಹ್ಮಣ್ಯ ಶರ್ಮ ನೇಮಕಗೊಂಡಿದ್ದಾರೆ.ಇವರಿಗೆ ದೇಗುಲದ ವತಿಯಿಂದ ಪ್ರಾರ್ಥನೆ ಮಾಡಿ ಪ್ರಸಾದ ನೀಡಲಾಯಿತು.ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಮಾಯಿಲಪ್ಪ ಗೌಡ ಎಮ್ಮೂರು, ಧರ್ಮಣ್ಣ ನಾಯ್ಕ ಗರಡಿ, ಸಂತೋಷ್ ಕುಮಾರ್ ರೈ ಬಳ್ಳ, ಹಾಗೂ...
ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವವು ಫೆ.08, 09 ಹಾಗೂ 10 ರಂದು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದ್ದು ಆಮಂತ್ರಣ ಪತ್ರಿಕೆ ಬಿಡುಗಡೆಯು ಜ.14 ರಂದು ದೇವಸ್ಥಾನದಲ್ಲಿ ನಡೆಯಿತು.ದೇವಸ್ಥಾನದ ಅರ್ಚಕ ರಾಮಚಂದ್ರ ಪಿ.ಜಿ.ಪೂಜಾ ಕಾರ್ಯ ನೆರವೇರಿಸಿದರು.ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಭಟ್ ಬಾಂಜಿಕೋಡಿ, ವೈದಿಕ ಮುಖ್ಯಸ್ಥ ರಾಜಾರಾಮ...
ಸುಬ್ರಹ್ಮಣ್ಯ : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಕರ ಸಂಕ್ರಮಣದಂದು ನಡೆಯುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಕುಕ್ಕೆಲಿಂಗ ಜಾತ್ರೋತ್ಸವದ ಪ್ರಯುಕ್ತ ಗುರುವಾರ ಬೆಳಗ್ಗೆ ಕುಕ್ಕೆ ಸುಬ್ರಹ್ಮಣ್ಯ ದೇವರ ವೈಭವದ ಸಂಕ್ರಾತಿ ರಥೋತ್ಸವ ಜರುಗಿತು. ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಉತ್ಸವದ ವಿದಿವಿಧಾನ ನೆರವೇರಿಸಿದರು. ಮುಂಜಾನೆ ರಥಬೀದಿಗೆ ಆಗಮಿಸಿದಾಗ...
Loading posts...
All posts loaded
No more posts
