ಹರಿಹರ ಪಳ್ಳತ್ತಡ್ಕ : ಜ.31ರಂದು ಎಲ್ಲಪಡ್ಕ ಶ್ರೀ ಗುಳಿಗರಾಜ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ

ಹರಿಹರ ಪಳ್ಳತ್ತಡ್ಕ ಗ್ರಾಮದ ಎಲ್ಲಪಡ್ಕ ಶ್ರೀ ಗುಳಿಗರಾಜ ದೈವಸ್ಥಾನದಲ್ಲಿ ಜ.31ನೇ ಶನಿವಾರದಂದು ಶ್ರೀ ಗುಳಿಗರಾಜ ದೈವದ ವಾರ್ಷಿಕ ನೇಮೋತ್ಸವವು ನಡೆಯಲಿದ್ದು, ಬೆಳಿಗ್ಗೆ 7:00 ಗಂಟೆಗೆ ಗಣಹೋಮ, ಬೆಳಿಗ್ಗೆ 9:00 ಗಂಟೆಗೆ ಭಂಡಾರ ಹೊರಡುವುದು, ಬೆಳಿಗ್ಗೆ 9:30ಕ್ಕೆ ಶಿವಪೂಜೆ, ಬೆಳಿಗ್ಗೆ 10:00 ಗಂಟೆಗೆ ಬ್ರಹ್ಮ ರಾಕ್ಷಸ ಪೂಜೆ ಹಾಗೂ ಕಲಶಪೂಜೆ, ಮದ್ಯಾಹ್ನ 12:00 ಗಂಟೆಗೆ ಮಹಾಪೂಜೆ ಹಾಗೂ...

ಕಳೆದು ಹೋದ ಚಿನ್ನದ ಸರ ಪತ್ತೆ – ಕಾರ್ಣಿಕ ಮೆರೆದ ಉಜಿರಡ್ಕದ ಕೊರಗಜ್ಜ

ನಾಲ್ಕೂರು ಗ್ರಾಮದ ಪಂಜಿಪಳ್ಳ ನಿವಾಸಿ ದಿವ್ಯ ಚಿದ್ಗಲ್ಲು ಎಂಬುವವರ ಚಿನ್ನದ ಸರ ಜ.20ರಂದು ಕಳೆದು ಹೋಗಿತ್ತು. ಕಳೆದು ಸರ ಪತ್ತೆ ಮಾಡಿಕೊಡುವಂತೆ ಉಜಿರಡ್ಕ ಕೊರಗಜ್ಜ ದೈವದಲ್ಲಿ ಪ್ರಾರ್ಥಿಸಿದ ಕೂಡಲೇ ಕಳೆದು ಹೋದ ಚಿನ್ನದ ಸರ ಪತ್ತೆಯಾಗಿದ್ದು, ನಂಬಿದವರಿಗೆ ಕೊರಗಜ್ಜ ದೈವ ತನ್ನ ಕಾರ್ಣಿಕವನ್ನು ತೋರಿಸಿಕೊಟ್ಟಿದೆ.
Ad Widget

ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಡಾ. ಪೀಟರ್ ಪೌಲ್ ಸಾಲ್ದಾನಾ ರವರಿಗೆ ಸುಳ್ಯದಲ್ಲಿ ಸ್ವಾಗತ

ಸುಳ್ಯದ ಸೈಂಟ್ ಬ್ರಿಜಿಡ್ಸ್  ಶಾಲೆಯ ಅಮೃತ ಮಹೋತ್ಸವದಲ್ಲಿ ಭಾಗವಹಿಸಲು ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಡಾ. ಪೀಟರ್ ಪೌಲ್ ಸಾಲ್ದಾನಾ ರವರು ಸುಳ್ಯಕ್ಕೆ  ಆಗಮಿಸಿದ ಸಂದರ್ಭದಲ್ಲಿ ಸುಳ್ಯ ನಗರ ಯೋಜನಾ ಪ್ರಾಧಿಕಾರ(ಸೂಡ) ಅಧ್ಯಕ್ಷರಾದ ಕೆ.ಎಂ. ಮುಸ್ತಫ ಹಾಗೂ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಂ.ವೆಂಕಪ್ಪ ಗೌಡ ರವರು ಹೂಗುಚ್ಛ ನೀಡಿ ಸ್ವಾಗತಿಸಿದರು.

ಸಂಜೀವ ಶೆಟ್ಟಿ ಪಾಂಡೇಲುಗುತ್ತು ನಿಧನ

ಬೆಳ್ಳಾರೆ ಗ್ರಾಮದ ದರ್ಖಾಸ್ತು ನಿವಾಸಿ ಪಾಂಡೇಲು ಗುತ್ತು ಸಂಜೀವ ಶೆಟ್ಟಿಯವರುಜ 20ರಂದು ನಿಧನರಾದರು.ಅವರಿಗೆ 76 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ದಿನೇಶ್ ದರ್ಖಾಸ್ತು, ಪುತ್ರಿಯರಾದ ಶ್ರೀಮತಿ ದೀಪ, ದಿವ್ಯ ಚಂದ್ರಶೇಖರ ನಂಜೆ, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

ಲೀಲಾವತಿ ರೈ ಬೆಳ್ಳಿಪ್ಪಾಡಿ ನಿಧನ

ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ಗುತ್ತು ಮನೆಯ ಹಿರಿಯರಾದ ಲೀಲಾವತಿ ರೈ ಬೆಳ್ಳಿಪ್ಪಾಡಿ ಅವರು ಜ.20ರಂದು ಸಂಜೆ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.ಅವರಿಗೆ 90 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಚಂದ್ರಹಾಸ ರೈ, ಸದಾನಂದ ರೈ, ಜಗದೀಶ ರೈ, ರಾಮಕೃಷ್ಣ ರೈ ಹಾಗೂ ಪುತ್ರಿಯರಾದ ನಳಿನಿ ರೈ, ಜಯಂತಿ ರೈ, ಪವಿತ್ರ ರೈ ಹಾಗೂ ಸೊಸೆಯಂದಿರು, ಬಂಧುಮಿತ್ರರು...

ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಶಾಸಕಿ ಭಾಗೀರಥಿ ಮುರುಳ್ಯ – ಬಾಳುಗೋಡು ಬಸ್ ಸಂಚಾರ ಆರಂಭ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ಇದರ ಪದಾಧಿಕಾರಿಗಳು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ರವರಿಗೆ ಗ್ರಾಮೀಣ ಭಾಗದ ಬಸ್ ಸಮಸ್ಯೆ ಬಗ್ಗೆ ಸಲ್ಲಿಸಿದ ಮನವಿಗೆ ಯಶಸ್ಸು ದೊರಕಿದ್ದು, ಸುಳ್ಯ - ಬಾಳುಗೋಡು ಮಾರ್ಗದಲ್ಲಿ ನೂತನ ಬಸ್ ಸಂಪರ್ಕ ಆರಂಭಗೊಂಡಿದೆ. ಬೆಳಿಗ್ಗೆ 7.05ಕ್ಕೆ ಬಾಳುಗೋಡು - ಸುಳ್ಯ, ಸಂಜೆ 5.20ಕ್ಕೆ...

ದೇರಣ್ಣ ಗೌಡ ಕನ್ನಡ್ಕ ನಿಧನ

ಗುತ್ತಿಗಾರು ಗ್ರಾಮದ ಪೈಕ ದೇರಣ್ಣ ಗೌಡ ಕನ್ನಡ್ಕ ರವರು ಅಲ್ಪಕಾಲದ ಅಸೌಖ್ಯದಿಂದ ಜ.18 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಬಾಲಕಿ, ಪುತ್ರರಾದ ಚಿದಾನಂದ ಕನ್ನಡ್ಕ, ದಯಾನಂದ ಕನ್ನಡ್ಕ, ಪುತ್ರಿ ಶ್ರೀಮತಿ ನೇತ್ರಾವತಿ ಪುರುಷೋತ್ತಮ ಸೋಣಂಗೇರಿ ಕಲ್ಲಾಜೆ, ಸೊಸೆಯಂದಿರು ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನಕ್ಕೆ ರಾಜ್ಯ ಧಾರ್ಮಿಕ‌ ಪರಿಷತ್ ಸದಸ್ಯೆ ಮಲ್ಲಿಕ ಪಕ್ಕಳ ಭೇಟಿ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಜಾತ್ರೋತ್ಸವವು ನಡೆಯುತ್ತಿದ್ದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕ ಪಕ್ಕಳ ರವರು ಜ.18 ರಂದು ಭೇಟಿ ನೀಡಿದರು.ಕಾರ್ತಿಕ್ ತಂತ್ರಿಗಳು ವಿಶೇಷ ಪೂಜೆಯ ಪ್ರಸಾದ ನೀಡಿದರು. ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಪ್ರವೀಣ್ ಕುಮಾರ್ ಸಿ.ವಿ, ಸುನಿಲ್ ರೈ ಪೆರುವಾಜೆ, ದೀಪಕ್ ಶೆಟ್ಟಿ ಪೆರುವಾಜೆ, ಪದ್ಮನಾಭ ಶೆಟ್ಟಿ ಪೆರುವಾಜೆ, ದೇವಸ್ಥಾನದ ಕಚೇರಿ ನಿರ್ವಾಹಕ...

ಕುಕ್ಕೆ ಸುಬ್ರಹ್ಮಣ್ಯ : ಕುಮಾರಧಾರ ಸೇತುವೆ ತಡೆಬೇಲಿ ಲೋಕಾರ್ಪಣೆ ; “ಪರಿಸರ ಹಾಗೂ ಸ್ವಚ್ಛತೆಗೆ ನೀಡುವ ದೊಡ್ಡ ಸೇವೆ ಇದಾಗಿದೆ” : ಲ| ಕುಡುಪಿ ಅರವಿಂದ ಶೆಣೈ

ಸುಬ್ರಹ್ಮಣ್ಯ ಜನವರಿ 19 : ಲಯನ್ಸ್ ಜಿಲ್ಲೆ 317 ಡಿ ಇದರ ಪ್ರಾಂತೀಯ 8ರ ವತಿಯಿಂದ ವಿವಿದ ದಾನಿಗಳು ಹಾಗೂ ಸಂಘ ಸಂಸ್ಥೆಗಳ ನೆರವಿನೊಂದಿಗೆ ಕುಮಾರಧಾರ ಸೇತುವೆ ಮೇಲೆ ಎರಡು ಬದಿಗಳಲ್ಲಿ ಸುಮಾರು 9 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಿಸಲಾದ ತಡೆ ಬೇಲಿಯನ್ನು ರವಿವಾರ ಲಯನ್ಸ್ ಜಿಲ್ಲಾ 317 ಡಿ ಯ  ಗವರ್ನರ್ ಕುಡುಪಿ ಅರವಿಂದ...

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಗೆ ಎಂ.ಎಲ್.ಸಿ ಮಂಜುನಾಥ್ ಭಂಡಾರಿ ಭೇಟಿ

ಸುಬ್ರಹ್ಮಣ್ಯ ಜನವರಿ 20 : ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕಚೇರಿಗೆ ಕರ್ನಾಟಕ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಸೋಮವಾರ ಸಂಜೆ ಭೇಟಿ ನೀಡಿ ಸದಸ್ಯರುಗಳು, ಅಧಿಕಾರಿ ವರ್ಗದವರನ್ನು ಹಾಗೂ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು. “ಗ್ರಾಮ ಪಂಚಾಯತ್ ನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳ ಜವಾಬ್ದಾರಿಗಳನ್ನು” ವಿವರವಾಗಿ ತಿಳಿಸಿದರು‌‌. ಅಲ್ಲದೆ “ಪಂಚಾಯತ್ ಅಭಿವೃದ್ಧಿ...
Loading posts...

All posts loaded

No more posts

error: Content is protected !!