- Tuesday
- June 16th, 2026
ಅನೇಕ ವರುಷಗಳ ಹಿಂದೆ ಸುಳ್ಯದಿಂದ ಸಂಜೆ 6:30ಕ್ಕೆ ಚೊಕ್ಕಾಡಿ ಮೂಲಕ ರಾತ್ರಿ 7:30ಕ್ಕೆ ಬೆಳ್ಳಾರೆಗೆ ತಲುಪಿ ತಂಗುವ ಬಸ್ಸು ಮರುದಿನ ಬೆಳಿಗ್ಗೆ 6:30ಕ್ಕೆ ಬೆಳ್ಳಾರೆಯಿಂದ ಹೊರಡುತ್ತಿತ್ತು. ಇದು ಜನರಿಗೆ ತುಂಬಾ ಪ್ರಯೋಜನ ಆಗುತ್ತಿತ್ತು. ಆದರೆ ಇದನ್ನು ಸುಳ್ಯ ಡಿಪೋ ಆದ ನಂತರ ನಿಲ್ಲಿಸಲಾಯಿತು. ಆದ್ದರಿಂದ ಕೂಡಲೇ ಈ ಬಸ್ಸನ್ನು ಪುನರಾರಂಭಿಸುವ ವಿಚಾರವಾಗಿ ಸುಳ್ಯ ತಾಲೂಕು ಗ್ಯಾರಂಟಿ...
ಹರಿಹರ ಪಳ್ಳತ್ತಡ್ಕ ಗ್ರಾಮದ ಕೆರೆಕ್ಕೋಡಿ ಸೋಮಶೇಖರ ಎಂಬುವವರು ಜ.05 ರಂದು ಮದ್ಯಾಹ್ನ 2:00 ಗಂಟೆಗೆ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ(ಜ.04) ರಾತ್ರಿ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು(ಜ.05) ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.ಮೃತರಿಗೆ 56 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಶ್ರೀಮತಿ ಬೇಬಿ, ಪುತ್ರಿಯರಾದ...
ಐವತ್ತೊಕ್ಲು ಗ್ರಾಮದ ಕರಿಕ್ಕಳ ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಎ.24ರಿಂದ ಮೇ.02 ರವರೆಗೆ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ನಡೆಯಲಿದ್ದು, ಎ.29ರಂದು ಶ್ರೀ ದೇವರ ಪ್ರತಿಷ್ಠೆ ನಡೆಯಲಿದೆ. ಆ ಪ್ರಯುಕ್ತ ಜ.04ರಂದು ಬ್ರಹ್ಮಕಲಶೋತ್ಸವ ಸಮಿತಿ ರಚನೆ ಹಾಗೂ ಸಭೆ ನಡೆಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಯಪ್ರಕಾಶ್ ಕಂಬಳ, ಪಂಜ...
ಕಲ್ಮಕಾರು ಹಿರಿಯ ಪ್ರಾಥಮಿಕ ಶಾಲೆಗೆ ಯುವ ಉದ್ಯಮಿ ಪ್ರವೀಣ್ ಕೊಪ್ಪಡ್ಕ ಅವರು ಸುಮಾರು ಮೂವತ್ತು ಸಾವಿರ ಮೌಲ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಿದ್ದು, ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿಯವರಾದ ಹರೀಶ್ ಆರಿಕೋಡಿಯವರು ದೀಪ ಬೆಳಗಿ ಉದ್ಘಾಟಿಸಿ ಶಾಲೆಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಧರ್ಮದರ್ಶಿಯವರು ಶಾಲಾ ಮಕ್ಕಳು ಹಾಗೂ...
ಸುಳ್ಯದ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಕಟ್ಟಡ ಮೇಲಂತಸ್ತಿನಲ್ಲಿ ಮಹಾ ಲಾಭ ಮೇಳ ಜ.4 ರಿಂದ ಆರಂಭವಾಗಿದೆ. ಒಂದೇ ಸೂರಿನಡಿ ಬ್ರಾಂಡೆಡ್ ಉತ್ಪನ್ನಗಳು ಆನ್ ಲೈನ್ ದರಕ್ಕಿಂತಲೂ ಕಡಿಮೆ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಸ್ಟೀಲ್ ಐಟಂಗಳು, ಪ್ಲಾಸ್ಟಿಕ್ ಐಟಂ, ಬಟ್ಟೆಬರೆಗಳು, ಚಪ್ಪಲಿ, ಡೆಕರೇಶನ್ ಐಟಂ, ಹೂವಿನ ಕುಂಡಗಳು, ದಿನನಿತ್ಯ ಉಪಯೋಗಿಸುವ ವಸ್ತುಗಳು ಸೇರಿದಂತೆ ವಿವಿಧ ಬ್ರಾಂಡೆಂಡ್...
ಪಿ.ಎಂ ಪೋಷನ್ ಯೋಜನೆಯಡಿ ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಜ.04 ರಂದು ನಡೆದ ಸುಳ್ಯ ತಾಲೂಕು ಮಟ್ಟದ ಅಡುಗೆ ಸಿಬ್ಬಂದಿಗಳ ಅಡುಗೆ ಸ್ಪರ್ಧೆಯಲ್ಲಿ ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಸಿಬ್ಬಂದಿಗಳಾದ ಗಿರಿಜಾ.ಕೆ, ಜಾನಕಿ, ಸಾವಿತ್ರಿ ಇವರು ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ. ಈ ತಂಡ ಕಳೆದ ಮೂರು ವರ್ಷಗಳಿಂದ ಜಿಲ್ಲಾಮಟ್ಟದ...
ಕೊಡಿಯಾಲ ಗ್ರಾಮದ ಆರ್ವಾರ ಎಂಬಲ್ಲಿ ತಾಯಿ ಹಾಗೂ ಮಗು ಕೆರೆಗೆ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದ್ದು, ಹರೀಶ್ ಆರ್ವಾರ ಎಂಬುವವರ ಪತ್ನಿ ಮಧುಶ್ರೀ ಹಾಗೂ 2 ವರ್ಷದ ಮಗು ಧ್ವನಿ ಮೃತಪಟ್ಟವರು. ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಂಡೆಕೋಲು ಗ್ರಾಮದ ಬೊಳುಗಲ್ಲು ಹರೀಶ್ಚಂದ್ರ ರವರು ಭಾರತೀಯ ಸೇನೆಯ ವಿವಿಧ ಹುದ್ದೆಗಳಲ್ಲಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದ್ದು ಊರವರು ಅದ್ದೂರಿ ಮೆರವಣಿಗೆಯಲ್ಲಿ ಕರೆದೊಯ್ದು ಹಾರಾರ್ಪಣೆ ಮಾಡಿ ಸ್ವಾಗತಿಸಿದರು.ಗ್ರಾಮ ಪಂಚಾಯತ್, ಸಹಕಾರಿ ಸಂಘ ಹಾಗೂ ಊರವರು ಮಾಲಾರ್ಪಣೆಗೈದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಲ ಉದ್ದಂತಡ್ಕ, ಉಪಾಧ್ಯಕ್ಷೆ ಪ್ರತಿಮಾ,...
ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅರಂತೋಡು ಗ್ರಾಮದ ಉಳುವಾರು ಮನೆಯ ಶರತ್.ಯು.ಪಿ ರವರ ಪತ್ನಿ ಶ್ರೀಮತಿ ಸಂಧ್ಯಾ ಶರತ್ ರವರು ತೇರ್ಗಡೆ ಹೊಂದಿದ್ದಾರೆ.ಇವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯನಾಡು ಇಲ್ಲಿ ಅತಿಥಿ ಶಿಕ್ಷಕರಾಗಿ ಮೂರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸುಳ್ಯದ ಜೂನಿಯರ್ ಕಾಲೇಜ್ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ನಲ್ಲಿ ಆರಂಭಗೊಂಡಿರುವ ನ್ಯೂ ಚೆನ್ನೈ ಶಾಪಿಂಗ್ ನಲ್ಲಿ ಕ್ರಿಸ್‌ಮಸ್ ಮತ್ತು ಹೊಸ ವರ್ಷ ಹಾಗೂ ಸುಳ್ಯ ಜಾತ್ರೋತ್ಸವದ ಪ್ರಯಕ್ತ ವಿಶೇಷ ರಿಯಾಯಿತಿ ಮಾರಾಟ ನಡೆಯುತ್ತಿದೆ. ಕೇವಲ ರೂ. 149 ಕ್ಕೆ ಮಕ್ಕಳು, ಮಹಿಳೆಯರು ಮತ್ತು ಪುರುಷರ ಬಟ್ಟೆ ಖರೀದಿಸಬಹುದು.ಇಲ್ಲಿ ಲಾಂಗ್ ಟಾಪ್ಸ್, ವೆಸ್ಟರ್ನ್ ಟಾಪ್ಸ್, ಟಿ-ಶರ್ಟ್, ದುಪ್ಪಟಗಳು,...
Loading posts...
All posts loaded
No more posts
