ಚಲನಚಿತ್ರ ನಟಿ ರಕ್ಷಿತಾ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ

ಸುಬ್ರಹ್ಮಣ್ಯ ಜನವರಿ 8 : ಕನ್ನಡ ಚಲನಚಿತ್ರ ರಂಗದ ಖ್ಯಾತ ನಟಿ ರಕ್ಷಿತಾ ಅವರು ಕುಟುಂಬ ಸಮೇತರಾಗಿ ಇಂದು ಗುರುವಾರ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಶ್ರೀ ದೇವಳದಲ್ಲಿ ದೇವರ ದರ್ಶನ ಮಾಡಿ ಮಹಾಪ್ರಸಾದ ಸ್ವೀಕರಿಸಿದರು.ತದನಂತರ ಕ್ಷೇತ್ರದ ದೈವ ಹೊಸಳ್ಳಿಗಮ್ಮ ಗುಡಿಯಲ್ಲಿ ದರ್ಶನ ಮಾಡಿ ಅಲ್ಲಿಂದ ಮುಂದೆ ಶ್ರೀ ದೇವಳದ ಆಡಳಿತ ಕಚೇರಿಗೆ ತೆರಳಿದರು....

ಶಾಸಕರ ಅವಹೇಳನ ಖಂಡಿಸಿ ಸುಳ್ಯದಲ್ಲಿ ನಾಳೆ(ಜ.09) ಬಿಜೆಪಿ ಪ್ರತಿಭಟನೆ

“ಸುಳ್ಯ ಶಾಸಕರಾದ ಕು. ಭಾಗೀರಥಿ ಮುರುಳ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ವಿಕೃತ ಮನೋ ಪ್ರವೃತ್ತಿಯಿಂದ ಅವಹೇಳನಗೈದ ಅಘಾತಕಾರಿ ಘಟನೆ ವಿರುದ್ಧ ಬಿಜೆಪಿ ಸುಳ್ಯ ಮಂಡಲದ ವತಿಯಿಂದ ಜ.09 ರಂದು ಬೆಳಿಗ್ಗೆ ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ಬೃಹತ್  ಪ್ರತಿಭಟನೆ ನಡೆಯಲಿದೆ” ಎಂದು ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ ಹಾಗೂ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ...
Ad Widget

ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಪ್ರಾಥಮಿಕ ವಿಭಾಗಕ್ಕೆ ಸ್ಮಾರ್ಟ್ ಕ್ಲಾಸ್ ಕೊಡುಗೆ

ಕರ್ನಾಟಕ ಪಬ್ಲಿಕ್ ಸ್ಕೂಲ್,  ಬೆಳ್ಳಾರೆಯ ಪ್ರಾಥಮಿಕ ವಿಭಾಗಕ್ಕೆ ಯುವ ಬೆಂಗಳೂರು ಟ್ರಸ್ಟ್ ಇವರು ಕೊಡ ಮಾಡಿರುವ ಸ್ಮಾರ್ಟ್ ಕ್ಲಾಸ್ ಇದರ ಉದ್ಘಾಟನೆಯನ್ನು  ದಿನಾಂಕ 08-01-2026 ರಂದು ನಡೆಸಲಾಯಿತು.  ಯುವ ಬೆಂಗಳೂರು ಟ್ರಸ್ಟ್ ಇದರ ಸ್ಥಾಪಕರು ಮತ್ತು ಟ್ರಸ್ಟಿಯು ಆಗಿರುವಂತಹ ಜಿ.ಕಿರಣ್ ಸಾಗರ್ ಇವರು ದೀಪ ಬೆಳಗಿಸಿ, ಪರದೆ ಸರಿಸುವ ಮೂಲಕ ಸ್ಮಾರ್ಟ್ ಕ್ಲಾಸ್ ಅನ್ನು ಉದ್ಘಾಟಿಸಿ...

ಭಾಗೀರಥಿ ಮುರುಳ್ಯರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ :  ಪ್ರವೀಣ್ ನಾಯಕ್ ಖಂಡನೆ

“ಸುಳ್ಯದ ಜನಪ್ರಿಯ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ್ ಎಂಬಾತ ಅವಮಾನ ಮಾಡಿದ್ದನ್ನು ನಾವು ತೀವ್ರ ವಾಗಿ ಖಂಡಿಸುತ್ತೇವೆ ಸುಳ್ಯ ತಾಲ್ಲೂಕಿನಲ್ಲಿ ಉತ್ತಮ ಜನಪರ ಕೆಲಸ ಮಾಡುತ್ತಿರುವ ಇವರು ಜಾತಿ ಭೇಧ ಇಲ್ಲದೆ ಸುಳ್ಯ ತಾಲೂಕಿಗೆ ಸರ್ಕಾರ ದಿಂದ ಹಲವಾರು ಅನುದಾನ ಗಳನ್ನು ತಂದಿದ್ದಾರೆ ಮತ್ತು ನಮ್ಮ ಕಾರ್ಯಕರ್ತರ ಪರವಾಗಿ ವಿಧಾನ...

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ಚಲನಚಿತ್ರ ನಟಿ ಶ್ರುತಿ

ಸುಬ್ರಹ್ಮಣ್ಯ ಜನವರಿ 8 : ಕನ್ನಡ ಚಲನಚಿತ್ರ ರಂಗದ ಖ್ಯಾತ ನಟಿ ಶ್ರುತಿ ಅವರು ಅಪ್ಪ, ಅಮ್ಮ, ಚಿಕ್ಕಮ್ಮ ಹಾಗೂ ಕುಟುಂಬಸ್ಥರೊಂದಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿದರು.ಶ್ರೀ ದೇವಳದಲ್ಲಿ ಪಂಚಾಮೃತ ಮಹಾಭಿಷೇಕ ಸೇವೆ ಸಲ್ಲಿಸಿದ ಅವರು ಹೊಸಳಿಗಮ್ಮ ದೈವದ ಗುಡಿಗೆ ತೆರಳಿದ ದರುಶನ ಪಡೆದರು.ಸತ್ಯನಾರಾಯಣ ಅಸ್ರಣ್ಣ  ಅವರು ತೀರ್ಥ ಹಾಗೂ ಶ್ರೀ...

ಬಿಟ್ಟುಬಿಡಿ ಪ್ರಾಮಾಣಿಕತೆಯ ಕನಸು – ಇಲ್ಲಿ ನೆಗೆಟಿವ್‌ ಹರಡೋರೇ ಫೇಮಸ್ಸು!

ಇತ್ತೀಚೆಗಷ್ಟೇ ಗಂಡನನ್ನು ತ್ಯಜಿಸಿ ಬೇರೊಬ್ಬನೊಂದಿಗೆ ತೆರಳಿ, ಮರಳಿ ಗಂಡನನ್ನು ಸೇರಿದ ಮಹಿಳೆ ಮತ್ತು ಆಕೆಯೇ ಬೇಕೆಂದು ಅತ್ತೂ ಕರೆದ ಆಕೆಯ ಗಂಡ ಇಬ್ಬರೂ ಸಖತ್‌ ಸುದ್ದಿಯಾದರು. ಕೊನೆಗೂ ಸುದ್ದಿ ವಾಹಿನಿಯೊಂದರ ಮುಂದಾಳತ್ವದಲ್ಲಿ ಅವರಿಬ್ಬರು ಪರಸ್ಪರ ಹಾರ ಬದಲಾಯಿಸಿಕೊಂಡು ಮರು ಮದುವೆಯಾಗಿದ್ದು, ಆನಂತರ ಆಕೆ ಗಂಡನೊಂದಿಗೆ ತೆರಳಿದ್ದು ಎಲ್ಲವೂ ಈಗ ಹಳೆಯದು. ಇದೀಗ ಇದೇ ಜೋಡಿಗೆ ಟ್ರಾವೆಲ್‌...

ಪಂಜ : ಜ.18ರಂದು “ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ಮತ್ತು ಸ್ಪರ್ಧೆ”

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ(ರಿ.) ಬೆಂಗಳೂರು, ದ.ಕ ಜಿಲ್ಲಾ ಯುವಜನ ಒಕ್ಕೂಟ(ರಿ.) ಮಂಗಳೂರು ಹಾಗೂ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇವುಗಳ ಸಹಯೋಗದೊಂದಿಗೆ ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಇದರ ಆಶ್ರಯದಲ್ಲಿ ಪರಿವಾರ ಪಂಜ ರೈತ ಉತ್ಪಾದಕ ಕಂಪೆನಿ ಲಿಮಿಟೆಡ್ ನ ಸಹಕಾರದೊಂದಿಗೆ “ರಾಜ್ಯ ಮಟ್ಟದ ಯುವ ಸಂಭ್ರಮ”ದ ಸಂದರ್ಭದಲ್ಲಿ...

ಸುಳ್ಯ : ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಅವಹೇಳನ – ಹರೀಶ್ ಕಂಜಿಪಿಲಿ ಖಂಡನೆ

“ಕಡುಬಡತನದ ನಡುವೆ ತನ್ನ ಕಠಿಣ ಪರಿಶ್ರಮದ ಮೂಲಕ ಓರ್ವ ಕಾರ್ಯಕರ್ತೆಯಾಗಿ ಪ್ರಾರಂಭಿಸಿ, ಗ್ರಾಮ ಪಂಚಾಯತ್ ,ಜಿಲ್ಲಾ ಪಂಚಾಯತ್ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ  ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ,  ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತಿರುವ ಶಾಸಕಿ ಕು. ಭಾಗೀರಥಿ ಮುರುಳ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಾಲಗೆ ಹರಿಬಿಟ್ಟ ಕಿಡಿಗೇಡಿಗಳ ವಿರುದ್ಧ ಜಿಲ್ಲಾ ಪೊಲೀಸರು ತಕ್ಷಣ...

ಗಾಂಧಿನಗರ ಆಟೋ ಮಾಲಕರ-ಚಾಲಕರ ಸಂಘದ ವತಿಯಿಂದ ಶರೀಫ್ ಕಂಠಿ ರವರಿಗೆ ಸನ್ಮಾನ ; ಮಂಜುನಾಥ್ ಭಂಡಾರಿಯವರಿಗೆ ಕೃತಜ್ಞತೆ – “ಎಲ್ಲರೊಡನೆ ಬೆರೆಯುವ ಗುಣ ಶರೀಫ್ ರಿಂದ ಕಲಿಯಬೇಕು” : ಎನ್.ಎ ರಾಮಚಂದ್ರ

ಸುಳ್ಯ ಗಾಂಧಿನಗರ ಗಾಂಧಿ ಪಾರ್ಕ್ ಬಳಿ ಸುಸಜ್ಜಿತವಾದ ಆಧುನಿಕ ಶೈಲಿಯ ಸರ್ವ ಋತು ಸುರಕ್ಷತೆಯ ಮಾಡು, ಸುಸಜ್ಜಿತ ಇಂಟರ್ ಲಾಕ್ ಅಳವಡಿಸಿದ ನೆಲ, ಉತ್ತಮ ಪಾರ್ಕಿಂಗ್ ಸೌಲಭ್ಯವನ್ನು ಒಳಗೊಂಡ ಆಟೋ ರಿಕ್ಷಾ ನಿಲ್ದಾಣವನ್ನು ವಿಧಾನ ಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿಯವರ ಅನುದಾನ, ನಗರ ಪಂಚಾಯತ್ ಸಹಕಾರವನ್ನು, ಸಂಪೂರ್ಣ ಸರ್ವಸನ್ನದ್ದವಾಗಿ ಲೋಕಾರ್ಪಣೆಗೊಳ್ಳುವವರೆಗೆ ಶ್ರಮ ವಹಿಸಿದ ಸುಳ್ಯ ನಗರ...

ಐವನ್ ಡಿ ಸೋಜಾ ಶಿಪಾರಸ್ಸಿನ ಮೇರೆಗೆ ಸಂಪಾಜೆಗೆ ರೂ. 40 ಲಕ್ಷ ಅನುದಾನ ಬಿಡುಗಡೆ

ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿ ಸೋಜರವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಸಂಪಾಜೆ ಗ್ರಾಮದ ಗೂನಡ್ಕ–ದರ್ಖಾಸ್ತು–ಕೊಪ್ಪದಕಜೆ ರಸ್ತೆ ಕಾಂಕ್ರೀಟಿಕರಣಕ್ಕೆ 20 ಲಕ್ಷ ರೂ.ಗಳು ಹಾಗೂ ಪೇರಡ್ಕ–ಪೆರುಂಗೋಡಿ ರಸ್ತೆ ಕಾಂಕ್ರೀಟಿಕರಣಕ್ಕೆ 20 ಲಕ್ಷ ರೂ.ಗಳು ಸೇರಿದಂತೆ ಒಟ್ಟು 40 ಲಕ್ಷ ರೂ.ಗಳ ಅನುದಾನ ಬಿಡುಗಡೆಗೊಂಡಿದೆ.  ದರ್ಖಾಸ್ತು ಮುಖ್ಯ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಸಂಪಾಜೆ...
Loading posts...

All posts loaded

No more posts

error: Content is protected !!