“ಸಮಾಜ ಸೇವೆಯೇ ಜೀವನದ ಅತ್ಯುತ್ತಮ ಕಾರ್ಯ” : ಲಯನ್ಸ್  ಜಿಲ್ಲಾ ಗವರ್ನರ್ ಲl  ಕುಡುಪಿ ಅರವಿಂದ ಶೆಣೈ ; ಬಳ್ಪದಲ್ಲಿ ನೂತನ ಆಟೋರಿಕ್ಷಾ ನಿಲ್ದಾಣ ಉದ್ಘಾಟನೆ

ಸುಬ್ರಹ್ಮಣ್ಯ ಡಿಸೆಂಬರ್ 30 : “ಸಮಾಜದಲ್ಲಿರುವ ಅಶಕ್ತರಿಗೆ, ಬಡಬಗ್ಗರಿಗೆ, ಸೂರಿಲ್ಲದವರಿಗೆ ಸೂರು, ಒಂದು ಹೊತ್ತಿನ ಊಟ ಇಲ್ಲದವರಿಗೆ ಅನ್ನ ನೀಡುವುದು, ಬಟ್ಟೆ ಇಲ್ಲದವರಿಗೆ ಬಟ್ಟೆ ನೀಡುವುದು, ಹಾಗೆಯೇ ಸಾರ್ವಜನಿಕರ ಉಪಯೋಗಕ್ಕಾಗಿ ಮಾಡುವಂತಹ ಬಸ್ಸು ತಂಗುದಾಣ, ರಿಕ್ಷಾ ತಂಗುದಾಣ, ಶೌಚಾಲಯ  ಅಥವಾ ಯಾವುದೇ ಜನೋಪಯೋಗಿ ಕೆಲಸಗಳು ಅದು ನಿಜವಾದ ಸಮಾಜ ಸೇವೆ ಹಾಗೂ ದೇವರ ಸೇವೆಯಾಗಿರುತ್ತದೆ” ಎಂದು...

ಪೆರಾಜೆ : ಪುತ್ತೂರು ಮೆಸ್ಕಾಂ ಉದ್ಯೋಗಿ ಲಲಿತಾ ಮೃತ್ಯು

ಪುತ್ತೂರು ಮೆಸ್ಕಾಂ ನಲ್ಲಿ ಉದ್ಯೋಗಿಯಾಗಿದ್ದ ಪೆರಾಜೆ ಇಂದಿರಾ ಆವಾಜ್ ಕಾಲೋನಿ ನಿವಾಸಿ ಲಲಿತಾ(39) ಡಿ.29 ರಂದು ರಾತ್ರಿ ಅನಾರೋಗ್ಯಕ್ಕೆ ಒಳಗಾಗಿ ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆ ತರುವ ವೇಳೆಗೆ ಮೃತಪಟ್ಡ ಘಟನೆ ವರದಿಯಾಗಿದೆ. ಮೃತ ಮಹಿಳೆ ಕೆಲ ವರ್ಷಗಳಿಂದ ಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತಿ ಅಟೋ ಚಾಲಕ ಸತೀಶ್, ಒಂದುವರೆ ವರ್ಷದ ಪುತ್ರಿ...
Ad Widget

ಬಿಳಿನೆಲೆ : ಅಯ್ಯಪ್ಪ ಭಜನೆ ಹಾಗೂ ಕುಣಿತ ಭಜನೋತ್ಸವ

ಸುಬ್ರಹ್ಮಣ್ಯ : ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಮಿತಿ ಬಿಳಿನೆಲೆ, ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬಿಳಿನೆಲೆ, ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ, ಶ್ರೀಕೃಷ್ಣ ಭಜನಾ ಮಂಡಳಿ ಬಿಳಿನೆಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ  ಶ್ರೀ ಅಯ್ಯಪ್ಪ ಭಜನೆ, ಧಾರ್ಮಿಕ ಸಭೆ ಹಾಗೂ  ಭಜನೋತ್ಸವವು ಬಿಳಿನೆಲೆ ಶ್ರೀಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ನಡೆಯಿತು.ಸಭಾ ಕಾರ್ಯಕ್ರಮ ಮತ್ತು ಕುಣಿತ ಭಜನೆಯನ್ನು ಖ್ಯಾತ...

ಸುಳ್ಯ ತಾಲೂಕಿಗೆ ಕ್ರೀಡಾ ಇಲಾಖೆಯಿಂದ ಹೈ ಜಂಪ್ ಬೆಡ್ ಒದಗಿಸುವಂತೆ ಸ್ಪೀಕರ್ ರವರಿಗೆ ಸೂಡ ಅಧ್ಯಕ್ಷ ಕೆ.ಎಂ. ಮುಸ್ತಫ ಮನವಿ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಗ್ರಾಮೀಣ ಪ್ರದೇಶವಾಗಿದ್ದು ಜಿಲ್ಲಾ ಕೇಂದ್ರದಿಂದ ಸುಮಾರು 90 ಕಿಲೋಮೀಟರ್ ದೂರದಲ್ಲಿದೆ. ಕೊಡಗು ಜಿಲ್ಲೆ ಮತ್ತು ಕೇರಳ ರಾಜ್ಯದ ಗಡಿ ಪ್ರದೇಶವಾಗಿದ್ದು, ಕ್ರೀಡಾಕೂಟಗಳು ಆಗಾಗ ನಡೆಯುತ್ತಿರುತ್ತದೆ. ತಾಲೂಕು ಮಟ್ಟದ, ಜಿಲ್ಲಾ ಮಟ್ಟದ ಕ್ರೀಡಾಕೂಟಗಳು ನಡೆಯುವ ಸಂದರ್ಭದಲ್ಲಿ ತಾಲೂಕಿಗೆ ಹೈ-ಜಂಪ್ ಬೆಡ್ ಇಲ್ಲದೆ ಲಭ್ಯತೆಗೆ ಅನುಗುಣವಾಗಿ ಪುತ್ತೂರು ಅಥವಾ ಮಂಗಳೂರಿನಿಂದ ತರಬೇಕಾಗಿದೆ....

ಜ.6 ಮತ್ತು 7 ರಂದು ಬೆಳ್ಳಾರೆಯ ಕೊಳಂಬಳದಲ್ಲಿ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ನೇಮೋತ್ಸವ

ಬೆಳ್ಳಾರೆ ನಗರದ ಕೊಳಂಬಳ ದೇವಿನಗರದ ಶ್ರೀ ರಕ್ತೇಶ್ವರಿ ದೇವಿ ಮತ್ತು ಪರಿವಾರ ದೈವಗಳಾದ ವರ್ಣಾರ ಪಂಜುರ್ಲಿ, ಕಲ್ಲುರ್ಟಿ, ಕುಪ್ಪೆ ಪಂಜುರ್ಲಿ ಹಾಗೂ ಗುಳಿಗ ದೈವಗಳ ನೇಮೋತ್ಸವವು ದೇರೇಬೈಲು ತಂತ್ರಿ ಶ್ರೀ ಪತಂಜಲಿ ಶಾಸ್ತ್ರಿ ಮುಕ್ಕೂರು ಇವರ ನೇತೃತ್ವದಲ್ಲಿ ಜ.6 ಮತ್ತು 7 ರಂದು ರಾತ್ರಿ 8:00 ರಿಂದ ನಡೆಯಲಿದೆ.ಜ.6ರಂದು ಪ್ರಾತ:ಕಾಲ ಗಂಟೆ 8:00ಕ್ಕೆ ಸ್ವಸ್ತಿ ಪುಣ್ಯಾಹ,...

ನಾಳೆ(ಡಿ.30) ಸುಳ್ಯ ತಾಲೂಕಿನ ವಿವಿಧ ಕಡೆ ವಿದ್ಯುತ್ ವ್ಯತ್ಯಯ

110/33/11ಕೆವಿ ಮಾಡಾವು ವಿದ್ಯುತ್ ಉಪಕೇಂದ್ರದಲ್ಲಿ ಡಿ.30 ರಂದು ಬೆಳಿಗ್ಗೆ 10:00 ರಿಂದ ಸಂಜೆ ಗಂಟೆ 4:00 ರ ತನಕ ನಿಯತಕಾಲಿಕ ಪಾಲನಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಮಾಡಾವು 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ  33/11ಕೆವಿ ಸವಣೂರು, ಬೆಳ್ಳಾರೆ, ಗುತ್ತಿಗಾರು, ಕಾವು ಮತ್ತು ಸುಳ್ಯ ವಿದ್ಯುತ್ ಉಪಕೇಂದ್ರಕ್ಕೆ ಸರಬರಾಜು ಕಡಿತವಾಗಲಿದ್ದು, ಇಲ್ಲಿಂದ ಹೊರಡುವ ಎಲ್ಲಾ 11 ಕೆವಿ...

ಸುಳ್ಯ : ಕ್ಯಾಂಪ್ಕೋ ಸಂಸ್ಥೆಯ “ಸಾಂತ್ವನ” ಯೋಜನೆಯಡಿಯಲ್ಲಿ ಆರ್ಥಿಕ ನೆರವಿನ ಚೆಕ್ ಹಸ್ತಾಂತರ

ಕ್ಯಾಂಪ್ಕೋ  ಸಂಸ್ಥೆಯ “ಸಾಂತ್ವನ” ಯೋಜನೆಯಡಿಯಲ್ಲಿ  ಆರ್ಥಿಕ ನೆರವಿನ ಚೆಕ್ ಹಸ್ತಾಂತರ ಕಾರ್ಯಕ್ರಮವು ಡಿ.29 ರಂದು ಸುಳ್ಯ ಶಾಖೆಯಲ್ಲಿ ನಡೆಯಿತು. ಕ್ಯಾಂಪ್ಕೋ  ಸಂಸ್ಥೆ ಸುಳ್ಯ ಶಾಖೆಯ ಸಕ್ರೀಯ  ಸದಸ್ಯರಾದ  ಕೆ.ಆರ್.ಶೀನಪ್ಪ ಗುತ್ತಿಗಾರು ಇವರ ಆಂಜಿಯೋಪ್ಲ್ಯಾಸ್ಟಿ ಶಸ್ತ್ರಕ್ರಿಯೆಗೆ ಸಹಾಯಧನದ ಮೊತ್ತ ರೂ. 50,000/-(ರೂಪಾಯಿ ಐವತ್ತು ಸಾವಿರ) ಚೆಕ್ ಅನ್ನು ಕ್ಯಾಂಪ್ಕೋ ಸಂಸ್ಥೆಯ  ನಿರ್ದೇಶಕರಾದ ಎ.ವಿ ತೀರ್ಥರಾಮರವರು ಡಿ.29ರಂದು ಕೆ.ಆರ್...

ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗೆ ಲಯನ್ಸ್ ಪುತ್ತೂರು ಕಾವಿನಲ್ಲಿ “ಗ್ರಾಮೀಣ ಸಾಧಕ ಪುರಸ್ಕಾರ”

“ಲಯನ್ಸ್ ಕ್ಲಬ್ ಎಂದಾಗ ಇದು ಪಟ್ಟಣಕ್ಕೆ ಅಷ್ಟೇ ಸೀಮಿತ ಎಂದು ಭಾವಿಸುವ ಕಾಲವೊಂದಿತ್ತು ಅದನ್ನು ಗ್ರಾಮೀಣ ಮಟ್ಟದಲ್ಲಿ ಸ್ಥಾಪಿಸಿದ ಕಾವು ಹೇಮನಾಥ ಶೆಟ್ಟಿ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಇದೊಂದು ಸೇವಾ ಸಂಸ್ಥೆ ಅಷ್ಟೇ ಆಗಿ ಅಲ್ಲದೆ ಆಗಿದ್ದು ಎಲ್ಲರೂ ತಮ್ಮ ತಮ್ಮ ಸ್ವಾರ್ಥಗಳನ್ನು ತ್ಯಾಗ ಮಾಡಿದಾಗಲೇ ಇದಕ್ಕೊಂದು ಅರ್ಥ ಸಿಗುತ್ತದೆ” ಎಂದು ಸನ್ಮಾನವನ್ನು ಸ್ವೀಕರಿಸಿದ ಕುಮಾರ್...

ಕಡಬ : ಉಚಿತ ಕಿವಿಯ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣಾ ಕಾರ್ಯಕ್ರಮ ; “ಶ್ರವಣ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಸಾರ್ವಜನಿಕರು ಕಾಲಕಾಲಕ್ಕೆ ಕಿವಿ ಪರೀಕ್ಷೆ ಮಾಡಿಸಿಕೊಳ್ಳಬೇಕು” : ಹಿರಿಯ ವೈದ್ಯ ಡಾ| ಸಿ.ಕೆ ಶಾಸ್ತ್ರಿ

ಕಡಬ, ಡಿ.28 : “ಶ್ರವಣ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಸಾರ್ವಜನಿಕರು ಕಾಲಕಾಲಕ್ಕೆ ಕಿವಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಶಿಬಿರವನ್ನು ಆಯೋಜಿಸಿದ ಕಡಬದ ಪತ್ರಕರ್ತರ ಸಂಘ ಮತ್ತು ಟೀಮ್ ಈಶ್ವರ ಮಲ್ಪೆ ಅವರ ಕಾರ್ಯ ಶ್ಲಾಘನೀಯ” ಎಂದು ಕಡಬದ ಹಿರಿಯ ವೈದ್ಯರಾದ ಡಾ| ಸಿ.ಕೆ. ಶಾಸ್ತ್ರಿಯವರು ಕರೆ ನೀಡಿದರು.ಅವರು ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಟೀಮ್ ಈಶ್ವರ್...

ನಾಳೆ(ಡಿ.30) ಚೊಕ್ಕಾಡಿಯಲ್ಲಿ ನಡೆಯಲಿರುವ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ತಾಲೂಕಿನ ಆಸಕ್ತ ಶಿಕ್ಷಕರಿಗೆ ಒ.ಒ.ಡಿ ಸೌಲಭ್ಯ

ನಾಳೆ(ಡಿ.30) ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ನಡೆಯಲಿರುವ ಸುಳ್ಯ ತಾಲೂಕು ಮಟ್ಟದ 28ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಭಾಗವಹಿಸುವ ಸುಳ್ಯ ತಾಲೂಕಿನ ಕನ್ನಡ ಭಾಷಾ ಶಿಕ್ಷಕರು ಹಾಗೂ ಇತರೆ ಆಸಕ್ತ ಶಿಕ್ಷಕರಿಗೆ ಅನ್ಯ ಕಾರ್ಯ ನಿಮಿತ್ತ(ಒ.ಒ.ಡಿ) ಸೌಲಭ್ಯ ನೀಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಿಂದ ಅನುಮತಿ ದೊರೆತಿದ್ದು, ಹಾಜರಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ...
Loading posts...

All posts loaded

No more posts

error: Content is protected !!