- Friday
- April 18th, 2025

ಶ್ರೀ ಶಾರದಾ ಮಹಿಳಾ ಕಾಲೇಜಿನಿನಲ್ಲಿ ನ. 26 ರಂದು ಸಂವಿಧಾನ ದಿನದ ಅಂಗವಾಗಿ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ನಡೆಯಿತು. ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿನಿಯರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರು ಇದರ 2021-22ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಪರಿಷತ್ ನ.24 ರಂದು ಉದ್ಘಾಟನೆಗೊಂಡಿತು. ಈ ವಿದ್ಯಾರ್ಥಿ ಪರಿಷತ್ ನ್ನು ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಉದ್ಘಾಟಿಸಿ, ಆರೋಗ್ಯವಂತ ಶಿಕ್ಷಣ ಹಾಗೂ ಸತತ ಪ್ರಯತ್ನಗಳಿಂದ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಚೆನ್ನಮ್ಮ.ಪಿ ಇವರು ರಾಷ್ಟ್ರಪತಿ...

ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಶಿಕ್ಷಕ – ರಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯು ಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾಗಿ ಪೆರುವಾಜೆಯ ಉಮೇಶ್ ಕೆ. ಎಂ. ಬಿ ಮತ್ತು ಉಪಾಧ್ಯಕ್ಷೆಯಾಗಿ ಶ್ರೀಮತಿ ಜ್ಞಾನೇಶ್ವರಿಯವರು ಆಯ್ಕೆಯಾದರು. ಕಾರ್ಯದರ್ಶಿಯಾಗಿ ಸಂಸ್ಥೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸರಸ್ವತಿ ಮತ್ತು ಪೋಷಕರು ಶಿಕ್ಷಕ- ರಕ್ಷಕ ಸಂಘದ...

ಜೇಸಿಐ ಪಂಜ ಪಂಚಶ್ರೀ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂತ್ಕುಂಜ ಇದರ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಪ್ರತಿಭಾ ಪುರಸ್ಕಾರ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ನ.17ರಂದು ಕೂತ್ಕುಂಜ ಸ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು. ಮಕ್ಕಳ ದಿನಾಚರಣೆಯ ಪ್ರಯುಕ್ತ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೆಲವೊಂದು ಸ್ಪರ್ಧೆಗಳನ್ನು ಏರ್ಪಡಿಸಿದ್ದು, ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಪಂಜ...

ಪೂದೆ ಶ್ರೀ ವಿಷ್ಣು ಮಹಾಗಣಪತಿ ದೇವಸ್ಥಾನ ಮುರುಳ್ಯ ಇಲ್ಲಿ ಇಂದು ನಡೆದ ನಿಧಿ ಕುಂಭ ಶಢಾದರ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದ ವಿದ್ಯಾರ್ಥಿಗಳು ಕುಣಿತ ಭಜನೆ ಸೇವೆ ನಡೆಸಿಕೊಟ್ಟರು. ತಂಡವನ್ನು ಶಿಕ್ಷಕ ಶಿವಪ್ರಸಾದ್.ಜಿ ಹಾಗೂ ಭಜನಾ ತರಬೇತುದಾರ ಸದಾನಂದ ಆಚಾರ್ಯ ಕಾಣಿಯೂರು ಇವರು ನಿರ್ದೇಶಿಸಿದ್ದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು ಸುಬ್ಬಯ್ಯ.ವೈ.ಬಿ,...

ಸುಬ್ರಹ್ಮಣ್ಯದ ಕೆಯಸ್‍ಯಸ್ ಕಾಲೇಜಿನ ರಂಗಘಟಕ ಕುಸುಮ ಸಾರಂಗದ ವತಿಯಿಂದ ಕಾಲೇಜಿನಲ್ಲಿ ರಂಗ ಬೆಳಕು ಎಂಬ ಹೆಸರಿನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಗೋವಿಂದ ಎನ್.ಎಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶೋಭಾ ಗಿರಿಧರ್ ಸ್ಕಂದ, ರಂಗ ನಿರ್ದೇಶಕ ಪ್ರವೀಣ್ ಎಡಮಂಗಲ, ಉಪನ್ಯಾಸಕ ವಿನ್ಯಾಸ್...

ಕಳೆದ ಆಗಸ್ಟ್ 22 ರಂದು ನಡೆದ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿಪೇಪರ್ 1 ಹಾಗೂ ಪೇಪರ್ 2 ಎರಡರಲ್ಲೂ ಪ್ರಥಮ ಪ್ರಯತ್ನದಲ್ಲಿ ಅರ್ಹತೆಯನ್ನು ಪಡೆದಿದ್ದಾರೆ. ಇವರು ಮರ್ಕಂಜ ಗ್ರಾಮದ ಮುಂಡೋಡಿ ಜನಾರ್ಧನ ಹಾಗೂ ಸರಸ್ವತಿ ದಂಪತಿಗಳ ಪುತ್ರಿ. ಪ್ರಸ್ತುತ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು ಇಲ್ಲಿ ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಐನೆಕಿದು ಗ್ರಾಮದ ನವಗ್ರಾಮ ಲೋಹಿತ್ ಕೆ. ಆಗಸ್ಟ್ 22 ರಂದು ನಡೆದ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಪತ್ರಿಕೆ 1 ಹಾಗೂ ಪತ್ರಿಕೆ 2 ರಲ್ಲಿ ತೇರ್ಗಡೆಯಾಗಿದ್ದಾರೆ. ಇವರು 2020ರಲ್ಲೂ 2 ಪತ್ರಿಕೆಗಳಲ್ಲಿ ತೇರ್ಗಡೆಯಾಗಿದ್ದರು. ಇವರು ಐನೆಕಿದು ಗ್ರಾಮದ ನವಗ್ರಾಮ ಲಿಂಗಪ್ಪ ಮತ್ತು ಪ್ರೇಮ ದಂಪತಿಗಳ ಪುತ್ರ. ಪ್ರಸ್ತುತ ಇವರು ಸ.ಹಿ.ಪ್ರಾ.ಶಾಲೆ ಹರಿಹರ ಪಲ್ಲತ್ತಡ್ಕ...

ಇತ್ತೀಚೆಗೆ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಜೀವನ್ ಕುಮಾರ್ ಟಿ. ಇವರು ಪತ್ರಿಕೆ-2 ರಲ್ಲಿ ಅರ್ಹತೆಯನ್ನು ಪಡೆದಿರುತ್ತಾರೆ. ಇವರು ತಳೂರು ಕುಶಾಲಪ್ಪ ಗೌಡ ಹಾಗೂ ಪುಷ್ಪಾವತಿ ರವರ ಪುತ್ರ. ಇವರು 2015 ರಲ್ಲಿ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆಯ ಪತ್ರಿಕೆ-1 ರಲ್ಲಿ ಅರ್ಹತೆ ಪಡೆದಿದ್ದರು.

ಮನಸಿನ ನೋವಿಗೆ ಕನ್ನಡಿಯೇತಕೆ, ನೋಡಲು ತಿಳಿಯುವುದು…ಕಾಣುವ ಕನಸಿಗೆ ಮುನ್ನುಡಿಯೇತಕೆ, ಕಣ್ಣಿಗೆ ಕಾಣುವುದು…ನೋವನು ಸಹಿಸಿದ ಮನಸ್ಸಿಗೆ ತಾನೇ ಛಲವು ಹುಟ್ಟುವುದು,ಕಂಡ ಕನಸನು ನನಸು ಮಾಡುವ ಛಲವು ಹುಟ್ಟುವುದು… ಎಲ್ಲವು ತಿಳಿದಿದೆ ಎನ್ನುವ ಸ್ವಾರ್ಥವು ನಿನ್ನನೇ ಕೊಲ್ಲುವುದು…ಶಾಂತವಾಗಿ ಸಾಧಿಸೋ ವ್ಯಕ್ತಿಯೇ ಬದುಕಲಿ ಗೆಲ್ಲುವುದು…ಮನಸಲಿ ನೋವು ಇದ್ದರೆ ಮಾತ್ರ ಛಲವು ಹುಟ್ಟುವುದು,ನಿನಗೆ ಸಾಧಿಸೋ ಛಲವು ಹುಟ್ಟುವುದು… ಸಾಧಿಸ ಹೊರಡುವ ವ್ಯಕ್ತಿಗೆ...

All posts loaded
No more posts