Ad Widget

ಕೆ.ವಿ.ಜಿ. ಅಮರಜ್ಯೋತಿ ಪದವಿ ಪೂರ್ವ ಕಾಲೇಜು ವತಿಯಿಂದ “ಎಜೆ ಮ್ಯಾರಥಾನ್” ; “ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗಿದ್ದು ಕೆವಿಜಿಯವರಿಗೆ ಸಂದ ಗೌರವ” : ಡಾ. ರೇಣುಕಾಪ್ರಸಾದ್ ಕೆ.ವಿ

ಸುಳ್ಯದ ಕೆವಿಜಿ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಿತ ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ದಶಮಾನೋತ್ಸವ ಪ್ರಯುಕ್ತ ಮ್ಯಾರಥಾನ್ ಸ್ಪರ್ಧೆಯು ಸುಳ್ಯದ ಪ್ರಮುಖ ರಸ್ತೆಯಲ್ಲಿ ಡಿ.26ರಂದು  ನಡೆಯಿತು.ಕಾಲೇಜಿನ ದಶಮಾನೋತ್ಸವದ ಪೂರ್ವಭಾವಿಯಾಗಿ ಕಾಲೇಜು ಸ್ಥಾಪಕರಾದ ಡಾ.ಕುರುಂಜಿ ವೆಂಕಟರಮಣ ಗೌಡರ 97ನೇ ಜನ್ಮದಿನಾಚರಣೆಯ ಪ್ರಯುಕ್ತ  "ಆರೋಗ್ಯಕ್ಕಾಗಿ ಓಟ" ಎಂಬ ಮ್ಯಾರಥಾನ್ ಗೆ ಎ.ಒ.ಎಲ್.ಇ ಕಮಿಟಿ 'ಬಿ' ಅಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ...

ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ಕ್ರೀಡೋತ್ಸವ ; “ಕ್ರೀಡೆ ದೈಹಿಕ  ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿ” : ಟಿ.ಎಂ ಶಹೀದ್

ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ ವಿಜೃಂಭಣೆಯಿಂದ ಜರುಗಿತು.ಕ್ರೀಡಾಕೂಟದ ಉದ್ಘಾಟನೆ ಯಯನ್ನು ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ಉದ್ಘಾಟಿಸಿ ಕ್ರೀಡಾಳುಗಳ ವಂದನೆ ಸ್ವೀಕರಿಸಿದರು. ನಂತರ ಮಾತನಾಡಿದ ಟಿ.ಎಂ. ಶಹೀದ್ ರವರು ಮಾತನಾಡಿ “ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಡೆ ಮಾನಸಿಕ ಮತ್ತು ದೈಹಿಕ ಕ್ಷಮತೆಗೆ  ಸಹಕಾರಿ” ಎಂದರು. ಅನ್ಸಾರಿಯಾ...
Ad Widget

ಇತ್ತೀಚೆಗೆ ನಿಧನರಾದ ಗಣೇಶ್ ನಾಯರ್ ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಇತ್ತೀಚೆಗೆ ನಿಧನರಾದ ಗಣೇಶ್ ನಾಯರ್ ರವರಿಗೆ ಪರಿವಾರ ಸಂಘಟನೆಗಳ ಕಾರ್ಯಕರ್ತರ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಸುಳ್ಯ ಸಿ.ಎ ಬ್ಯಾಂಕ್ ಸಭಾಭವನದಲ್ಲಿ ನಡೆಯಿತು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಭಜರಂಗದಳ, ಜಾಗರಣ ವೇದಿಕೆ ಮೂಲಕ ಅವರು ಮಾಡಿದ ಸಾಮಾಜಿಕ ಕಾರ್ಯಗಳನ್ನು ನೆನಪಿಸಿಕೊಂಡು, “ಅವರ ಕುಟುಂಬಕ್ಕೆ ಹಿಂದೂ ಸಮಾಜ ಬೆಂಬಲವಾಗಿ...

ಕೆ.ವಿ.ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಸಹಾಯಾನುದಾನದಲ್ಲಿ ನಿರ್ಮಿಸಿದ ಮನೆ ಹಸ್ತಾಂತರ ; “ಡಾ. ಕುರುಂಜಿಯವರ ನೆನಪು ಬಡವರ ಸೇವೆಯ ಮೂಲಕ ಅರ್ಥಪೂರ್ಣ” : ಜಯಪ್ರಕಾಶ್ ರೈ

ಡಾ. ಕುರುಂಜಿ ವೆಂಕಟ್ರಮಣ ಗೌಡರ 97ನೇ ಜಯಂತ್ಯೋತ್ಸವದ  ಅಂಗವಾಗಿ ಸಮಾಜ ಸೇವಾ ಕಾರ್ಯ ವಿಭಾಗದಲ್ಲಿ ಜಟ್ಟಿಪ್ಪಳ್ಳ ನಿವಾಸಿ ಕಮಲ ರವರಿಗೆ ಮನೆ ನಿರ್ಮಾಣ ಪೂರ್ತಿಗೊಳಿಸಲು ರೂ 1 ಲಕ್ಷ ಸಹಾಯಾನುದಾನ  ನೀಡಲಾಗಿದ್ದು, ಪೂರ್ಣ ಗೊಂಡ ಮನೆಯನ್ನು ಕೆ.ವಿ.ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷರಾದ ಎನ್.ಜಯಪ್ರಕಾಶ್ ರೈ ನಾಮಫಲಕ ಅನಾವರಣಗೊಳಿಸಿ ಲೋಕಾರ್ಪಣೆ ಗೊಳಿಸಿದರು. ಹಿರಿಯರಾದ...

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹುಟ್ಟು ಹಬ್ಬದ ಅಂಗವಾಗಿ  ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಡಿ.25 : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆಯ ಅಂಗವಾಗಿ ಸುಳ್ಯದ ಅಟಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಳ್ಯ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಎ.ವಿ.ತೀರ್ಥರಾಮ, ವೆಂಕಟ್ ದಂಬೆಕೋಡಿ, ಎಸ್.ಎನ್. ಮನ್ಮಥ, ಹರೀಶ್ ಕಂಜಿಪಿಲಿ, ವಿಕ್ರಂ ಅಡ್ಪಂಗಾಯ, ಸುಭೋದ್ ಶೆಟ್ಟಿ ಮೇನಾಲ,...

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ 30,000ಕ್ಕೂ ಅಧಿಕ ಭಕ್ತಾದಿಗಳಿಂದ ದೇವರ ದರ್ಶನ ಹಾಗೂ ಪ್ರಸಾದ ಸ್ವೀಕಾರ

ಸುಬ್ರಹ್ಮಣ್ಯ ಡಿಸೆಂಬರ್ 26 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಿರುಷಷ್ಠಿ  ಮಹೋತ್ಸವದ ಶುಕ್ರವಾರದ ದಿನದಂದು ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದು, ಅಂದಾಜು ಸುಮಾರು 30 ಸಾವಿರಕ್ಕೂ ಅಧಿಕ ಭಕ್ತಾದಿಗಳು ಶ್ರೀ ದೇವರ ದರ್ಶನ ಹಾಗೂ ಪ್ರಸಾದ ಸ್ವೀಕರಿಸಿದ್ದಾರೆ. ದೂರದ ಊರುಗಳಾದ ಬೆಂಗಳೂರು, ಮೈಸೂರು, ಕೋಲಾರ, ದೊಡ್ಡಬಳ್ಳಾಪುರ, ಕಾರವಾರ, ಹುಬ್ಬಳ್ಳಿ, ದಾವಣಗೆರೆ, ಧಾರವಾಡ,...

ಕುಕ್ಕೆ ಸುಬ್ರಹ್ಮಣ್ಯ : 58 ಭಕ್ತಾದಿಗಳಿಂದ ಎಡೆ ಸ್ನಾನ ಉರುಳು ಸೇವೆ

ಸುಬ್ರಹ್ಮಣ್ಯ ಡಿಸೆಂಬರ್ 26 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಿರುಷಷ್ಠಿ ಮಹೋತ್ಸವದ ಅಂಗವಾಗಿ ಇಂದು ಡಿ.26 ಶುಕ್ರವಾರದಂದು ದೇವಳದ ಹೊರಾಂಗಣದಲ್ಲಿ ನಡೆದ ಎಡೆ ಸ್ನಾನ ಉರುಳು ಸೇವೆಯಲ್ಲಿ 32 ಪುರುಷರು ಹಾಗೂ 26 ಮಹಿಳೆಯರನ್ನು ಒಳಗೊಂಡಂತೆ 58 ಹರಕೆ ಹೊತ್ತ ಮತ್ತು ಹರಕೆ ಸಲ್ಲಿಸುವ  ಭಕ್ತಾದಿಗಳು ಎಡೆಸ್ನಾನ  ಉರುಳು ಸೇವೆ ಸಲ್ಲಿಸಿದರು. ಚಂಪಾಷಷ್ಠಿ ಜಾತ್ರೋತ್ಸವದಲ್ಲಿ...

ಸುಬ್ರಹ್ಮಣ್ಯ : ಡಿ.28ರಂದು ಕೆ.ಎಸ್.ಎಸ್ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿ ಸಂಘದ “ಕುಸುಮ ಸ್ನೇಹ ಸಂಗಮ” ಕಾರ್ಯಕ್ರಮ

ಸುಬ್ರಹ್ಮಣ್ಯದ ಕೆ.ಎಸ್.ಎಸ್ ಕಾಲೇಜಿನಲ್ಲಿ ಡಿ.28ರಂದು “ಕುಸುಮ ಸ್ನೇಹ ಸಂಗಮ” ಎಂಬ ಕಾರ್ಯಕ್ರಮ ನಡೆಯಲಿದ್ದು, ನಿವೃತ್ತ ಪ್ರಾಂಶುಪಾಲರಾದ ದಿನೇಶ್ ಕಾಮತ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶ್ ಇಂಜಾಡಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.ಕಾಲೇಜಿನ ಹಳೆ ವಿದ್ಯಾರ್ಥಿಗಳೆಲ್ಲಾ ಒಂದುಗೂಡಿ ಕಾಲೇಜು ದಿನಗಳ...

ಸುಳ್ಯದ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದಿ| ಡಾ.ಕುರುಂಜಿ ವೆಂಕಟ್ರರಮಣ ಗೌಡರ 97ನೇ ವರ್ಷದ ಜನ್ಮ ದಿನಾಚರಣೆ

ಆಧುನಿಕ ಸುಳ್ಯದ ನಿರ್ಮಾತೃ, ಶಿಕ್ಷಣ ಬ್ರಹ್ಮ,ಕೆ.ವಿ.ಜಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾದ ದಿವಂಗತ ಡಾ. ಕುರುಂಜಿ ವೆಂಕಟರಮಣ ಗೌಡರ 97ನೇ ವರ್ಷದ ಜನ್ಮ ದಿನಾಚರಣೆಯ ಪ್ರಯುಕ್ತ ಪುಷ್ಪ ನಮನ ಕಾರ್ಯಕ್ರಮವು ಸುಳ್ಯದ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಡಿಸೆಂಬರ್ 26ರಂದು ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ| ಲೀಲಾದರ್ ಡಿ.ವಿ ಯವರು ಕುರುಂಜಿ ವೆಂಕಟರಮಣ ಗೌಡರ...

ಬೆಳ್ಳಾರೆ ಕೆ.ಪಿ.ಎಸ್ ನಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ – “ಚಿತ್ರಕಲೆ ಮಕ್ಕಳ ಮನಸ್ಸನ್ನು ಅರಳಿಸುತ್ತದೆ” :  ಶಮಿತಾ.ಪಿ ರೈ ಪನ್ನೆ

ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿ ಮತ್ತು ಸ್ನೇಹಿತರ ಕಲಾ ಸಂಘ ಆಶ್ರಯದಲ್ಲಿ "75 ದಿನಗಳ ಸ್ವಚ್ಛತಾ ಅಭಿಯಾನ ಪಂಚ ಸಪ್ತತಿ 2025" ಅಂಗವಾಗಿ  "ನಮ್ಮ ಗ್ರಾಮ ಸ್ವಚ್ಛ ಗ್ರಾಮ, ಸ್ವಚ್ಛತೆಯೆಡೆಗೆ ನಮ್ಮ ನಡಿಗೆ" ಯೋಜನೆಯಂತೆ, “ಶಾಲೆಯತ್ತ ನಮ್ಮ ಚಿತ್ತ” ಬೆಳ್ಳಾರೆ ಶಾಲಾ ವಿದ್ಯಾರ್ಥಿಗಳಿಗೆ ಸ್ವಚ್ಛ ಪರಿಸರಕ್ಕಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಚಿತ್ರವನ್ನು ಬಿಡಿಸಿ ಎಂಬ ವಿಷಯದ...
Loading posts...

All posts loaded

No more posts

error: Content is protected !!