Ad Widget

ಬೆಳ್ಳಾರೆ : ಜ.25 ರಂದು ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ

ರೋಟರಿ ಕ್ಲಬ್ ಬೆಳ್ಳಾರೆ ಟೌನ್, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ, ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಬೆಳ್ಳಾರೆ ಸಹಭಾಗಿತ್ವದಲ್ಲಿ ಡಾ-ಅಶ್ವಿನ್ ಐ ಕೇರ್ ಸೆಂಟರ್ ಪುತ್ತೂರು ಸಹಕಾರದೊಂದಿಗೆ ಉಚಿತನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವು ಜ.25 ರಂದು ಬೆಳಿಗ್ಗೆ ಘಂಟೆ10:00 ರಿಂದ 1:00 ರವರೆಗೆ ಬೆಳ್ಳಾರೆ ಪ್ರಾಥಮಿಕ ಆರೋಗ್ಯ‌ ಕೇಂದ್ರದಲ್ಲಿ ನಡೆಯಲಿದೆ.ಈ ಶಿಬಿರದ‌ ವಿಶೇಷತೆ ಏನೆಂದರೆ ಶಿಬಿರದಲ್ಲಿ...

ಪಂಜ : ಜ.24 ರಿಂದ ಫೆ.9 ವರೆಗೆ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ – ಗೊನೆ ಮುಹೂರ್ತ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಜ.24 ರಿಂದ ಫೆ.9 ತನಕ ನಡೆಯಲಿದ್ದು, ಇದರ ಅಂಗವಾಗಿ ಜ.24 ರಂದು  ಗೊನೆ ಮುಹೂರ್ತ ನಡೆಯಿತು. ಕುದ್ವ ತೋಟದಲ್ಲಿ ಗೊನೆ ಕಡಿದು ಬ್ಯಾಂಡ್‌ ವಾಲಗದ ಮೆರವಣಿಗೆಯಲ್ಲಿ ದೇವಳಕ್ಕೆ ತಂದು ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ...
Ad Widget

ಸುಬ್ರಹ್ಮಣ್ಯ : ಜ.25 ರಿಂದ 28 ರವರೆಗೆ ಶ್ರೀ ಮಠದಲ್ಲಿ ಗುರುಕುಲ ವಿದ್ಯಾರ್ಥಿಗಳ ಘಟಿಕೋತ್ಸವ – ವಿಶ್ವ ಸಂಭ್ರಮ ಕಾರ್ಯಕ್ರಮ

ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಗುರುಗಳಾದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಬೆಂಗಳೂರಿನಲ್ಲಿ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಗುರುಕುಲವನ್ನು ಸ್ಥಾಪಿಸಿದ್ದಾರೆ.ಈ ಗುರುಕುಲದಲ್ಲಿ ಸಹಸ್ರಾರುಚ ವಿದ್ಯಾರ್ಥಿಗಳು ಶಾಸ್ತ್ರವನ್ನು ಅಭ್ಯಸಿಸುತ್ತಿದ್ದಾರೆ.ಇಲ್ಲಿ 12 ವರ್ಷ ಅಧ್ಯಾಯನ ಪೂರ್ತಿಗೊಳಿಸಿದ ವಿದ್ಯಾಥಿಗಳಿಗೆ ಘಟಿಕೋತ್ಸವವನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ನಡೆಸುತ್ತಾ ಬರಲಾಗಿದೆ.ಈ ವರ್ಷ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ...

ಸುಬ್ರಹ್ಮಣ್ಯದಲ್ಲಿ ತಾಲೂಕು ಭಜನೋತ್ಸವದ ಪೂರ್ವಭಾವಿ ಸಭೆ

ಸುಬ್ರಹ್ಮಣ್ಯ ಜನವರಿ 23 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕು, ಕುಕ್ಕೆ ಶ್ರೀ  ಸುಬ್ರಹ್ಮಣ್ಯೇಶ್ವರ ದೇವಸ್ಥಾನ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು, ಭಜನೋತ್ಸವ-2026 ಸಮಿತಿ ಸುಬ್ರಹ್ಮಣ್ಯ ವಲಯ ಮತ್ತು ಸ್ಥಳೀಯ ಎಲ್ಲಾ ಸಂಘ-ಸಂಸ್ಥೆಗಳ ಹಾಗೂ ಭಜಕರ ಸಹಯೋಗದಲ್ಲಿ ಜನವರಿ 8ರಂದು ಆದಿತ್ಯವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ರಥಬೀದಿ...

ಪಂಜದಲ್ಲಿ ಮಯೂರ ಸಿವಿಲ್ ಕನ್ಸ್ಟ್ರಕ್ಷನ್ ಹಾಗೂ ಕನ್ಸಲ್ಟೆನ್ಸಿ ಸೇವಾಕೇಂದ್ರ ಶುಭಾರಂಭ

ಸುಬ್ರಹ್ಮಣ್ಯ ಜನವರಿ 23 : ಪಂಜದ ನಾಯರ್ಕೆರೆ ಸಿರಿ ಕಾಂಪ್ಲೆಕ್ಸ್ ನಲ್ಲಿ ಶುಕ್ರವಾರ ಅಭಿಷೇಕ್ ನಡುತೋಟ ಮಾಲಕತ್ವದ ಮಯೂರ ಸಿವಿಲ್ ಕನ್ಸ್ಟ್ರಕ್ಷನ್ಸ್ ಹಾಗೂ ಕನ್ಸಲ್ಟೆನ್ಸಿ ಸೇವಾ ಕೇಂದ್ರ ಶುಭಾರಂಭಗೊಂಡಿತು. ಸುಬ್ರಹ್ಮಣ್ಯ ದ ನಿವೃತ್ತ ಪ್ರಾಂಶುಪಾಲ ನೀಲಪ್ಪ ಗೌಡ ನಡುತೋಟ ಸೇವಾ ಕೇಂದ್ರವನ್ನು ದೀಪ ಬೆಳಗಿಸುವುದರ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಂಜ ಸಿಎ ಬ್ಯಾಂಕಿನ...

ಗುತ್ತಿಗಾರು : ಫೆ.08 ರಂದು “ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ” ಹಾಗೂ “9ನೇ ರಕ್ತದಾನ ಶಿಬಿರ”

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್(ರಿ.) ಗುತ್ತಿಗಾರು ಹಾಗೂ ಅಮರ ಯೋಗ ಕೇಂದ್ರ ಗುತ್ತಿಗಾರು ಇದರ 5ನೇ ವರ್ಷಾಚರಣೆ ಅಂಗವಾಗಿ ಜೆ.ಸಿ.ಐ ಪಂಜ ಪಂಚಶ್ರೀ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು ಹಾಗೂ ಸುಳ್ಯ ತಾಲೂಕು ಇವರುಗಳ ಸಹಯೋಗದೊಂದಿಗೆ ಫೆ.08 ಆದಿತ್ಯವಾರದಂದು ಬೆಳಿಗ್ಗೆ 9:00 ಗಂಟೆಯಿಂದ ಸುಳ್ಯ ತಾಲೂಕಿನ ಗುತ್ತಿಗಾರು ಮುಖ್ಯ ರಸ್ತೆಯಲ್ಲಿರುವ ಚಿಕ್ಮುಳಿ...

ಹರಿಹರ ಪಳ್ಳತ್ತಡ್ಕ : ಜ.31 ಹಾಗೂ ಫೆ.01 ರಂದು ಬಾಳುಗೋಡಿನಲ್ಲಿ “ದಿ| ದಿವಾಕರ ಮುಂಡಾಜೆ ಅವರ ಸ್ಮರಣಾರ್ಥ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಕೂಟ”

“ದಿ| ದಿವಾಕರ ಮುಂಡಾಜೆ ಅವರ ಸ್ಮರಣಾರ್ಥ” ಜ.31 ಹಾಗೂ ಫೆ.01 ರಂದು ಹರಿಹರ ಪಳ್ಳತ್ತಡ್ಕ ಗ್ರಾಮದ ಬಾಳುಗೋಡು ಬೆಟ್ಟುಮಕ್ಕಿ ಕ್ರೀಡಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ 11 ಜನರ 12 ತಂಡಗಳ ಸೂರ್ಯ ಬೆಳಕಿನ ಲೀಗ್ ಮಾದರಿಯ “ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಕೂಟ” ನಡೆಯಲಿದ್ದು, ಪ್ರಥಮ ಬಹುಮಾನ 50 ಸಾವಿರ ರೂಪಾಯಿ ಮತ್ತು ಟ್ರೋಫಿ, ದ್ವಿತೀಯ...

“ಕೇಸರಿ ಕಂಡರೆ ಕಿಡಿಕಾರುವ ಕಾಂಗ್ರೆಸ್ ನ ಹಿಂದೂ ವಿರೋಧಿ ಧೋರಣೆ ಅತಿರೇಕಕ್ಕೆ ಹೋಗಿದೆ” : ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ

ಮಂಗಳೂರು : “ಉಡುಪಿ ಪರ್ಯಾಯ ಮಹೋತ್ಸವದಲ್ಲಿ ಜಿಲ್ಲಾಧಿಕಾರಿಯವರು ಸಂಪ್ರದಾಯಿಕವಾಗಿ ಭಗವಾಧ್ವಜ ಹಾರಾಡಿಸಿರುವುದನ್ನು ವಿರೋಧಿಸಿರುವುದು ನೋಡಿದರೆ ಕಾಂಗ್ರೆಸ್‌ನವರ ಹಿಂದೂ ವಿರೋಧಿ ಮಾನಸಿಕತೆ ಹಾಗೂ ತುಷ್ಟೀಕರಣ ರಾಜಕಾರಣ ಯಾವ ಮಟ್ಟಕ್ಕೆ ಹೋಗಿದೆ ಎನ್ನುವುದು ಗೊತ್ತಾಗುತ್ತದೆ” ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್‌ ಚೌಟ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.“ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಮತೀಯ ಹಾಗೂ ಮೂಲಭೂತವಾದಿಗಳನ್ನು...

“ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರದ ಹೋರಾಟಕ್ಕೆ ಸಂದ ಜಯ, ಬಸ್ ವ್ಯವಸ್ಥೆಗೆ ಎ.ಬಿ.ವಿ.ಪಿ ಹೋರಾಟವೇ ಕಾರಣ” – ಮುಳಿಯ ಸಾತ್ವಿಕ್

“ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎ.ಬಿ.ವಿ.ಪಿ) ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಅಗತ್ಯ ಬಸ್ ಸೇವೆಯನ್ನು ಒದಗಿಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಿಗೂ ಹಾಗೂ ಕೆ.ಎಸ್‌.ಆರ್‌.ಟಿ.ಸಿ ಸುಳ್ಯ ಡಿಪೋ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತದೆ. ಈ ಬಸ್ ಸೇವೆ ಎ.ಬಿ.ವಿ.ಪಿ ನಡೆಸಿದ ಪ್ರತಿಭಟನೆ, ನಿರಂತರ ಹೋರಾಟ ಹಾಗೂ ಶಾಸಕರಿಗೆ ಸಲ್ಲಿಸಿದ ಮುಂದುವರಿದ ಮನವಿಗಳ ನೇರ ಫಲಿತಾಂಶವಾಗಿಯೇ...

ಜಿ.ಎಲ್ ಆಚಾರ್ಯ ಜ್ಯುವೆಲ್ಲ‌ರ್ಸ್‌ನಲ್ಲಿ “ರಿಪಬ್ಲಿಕ್ ಸೇಲ್ ಕೊಡುಗೆ”

ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಗಣರಾಜ್ಯೋತ್ಸವ ಹಬ್ಬದ ಪ್ರಯುಕ್ತ ಜನವರಿ 22ರಿಂದ 26ರವರೆಗೆ ರಿಪಬ್ಲಿಕ್ ಸೇಲ್ ವಿಶೇಷ ರಿಯಾಯಿತಿ ಕೊಡುಗೆಗಳನ್ನು ಪ್ರಕಟಿಸಲಾಗಿದೆ. ಚಿನ್ನ ಹಾಗೂ ವಜ್ರಾಭರಣಗಳ ವಿಶೇಷ ಸಂಗ್ರಹವೇ ಗ್ರಾಹಕರಿಗೆ ಹಬ್ಬದ ವಾತಾವರಣ ಸೃಷ್ಟಿಸಿದೆ. 24ಕ್ಯಾರೆಟ್ ಚಿನ್ನದ ದರ 15,000 ದಾಟಿದೆ. ಈ ಫೆಸ್ಟಿವ್ ಶಾಪಿಂಗ್ ಸೀಸನ್‌ನಲ್ಲಿ ಚಿನ್ನದ ದರ ಬೆಲೆ...
Loading posts...

All posts loaded

No more posts

error: Content is protected !!