ದ.ಕ ಜಿಲ್ಲಾ ಪಂಚಾಯತ್ ನೂತನ ಸಿ.ಇ.ಓ ವಿನಾಯಕ್ ಖರ್ಬಾರಿ ಸುಳ್ಯ ತಾಲೂಕು ಪಂಚಾಯತ್ ಕಚೇರಿಗೆ ಭೇಟಿ

ಸುಳ್ಯದ ಸಮಸ್ಯೆಗಳ ಬಗ್ಗೆ ಸಿ.ಇ.ಓ ಗಮನಕ್ಕೆ ತಂದ ರಾಧಾಕೃಷ್ಣ ಬೊಳ್ಳೂರು ನೇತೃತ್ವದ ಕಾಂಗ್ರೆಸ್ ನಿಯೋಗ

ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಪ್ರಥಮ ಬಾರಿಗೆ ಸುಳ್ಯ ತಾಲೂಕು ಪಂಚಾಯತ್ ಗೆ ಭೇಟಿ ನೀಡಿದ ಸಿ.ಇ.ಓ ವಿನಾಯಕ್ ಖರ್ಬಾರಿ ಯವರನ್ನು ಇಂದು ತಾಲೂಕು ಪಂಚಾಯತ್ ಕಚೇರಿಯಲ್ಲಿ ಭೇಟಿ ಮಾಡಿದ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರು ಹಾಗೂ ಬ್ಲಾಕ್ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷರಾದ ರಾಧಾಕೃಷ್ಣ ಬೊಳ್ಳೂರು, ಕೆ.ಪಿ.ಸಿ.ಸಿ ಪ್ರಧಾನ...

ಹರಿಹರಪಲ್ಲತ್ತಡ್ಕ :  ಭಾರತೀಯ ಮಜ್ದೂರ್ ಸಂಘದ ಸಂಸ್ಥಾಪನಾ ದಿನಾಚರಣೆ

ಆಟೋರಿಕ್ಷಾ ಚಾಲಕರ ಸಂಘ ಹರಿಹರಪಲ್ಲತ್ತಡ್ಕ ಇದರ ವತಿಯಿಂದ ಭಾರತೀಯ ಮಜ್ದೂರ್ ಸಂಘದ ಸಂಸ್ಥಾಪನಾ ದಿನಾಚರಣೆಯನ್ನು ಇಂದು ಆಚರಿಸಲಾಯಿತು.ಸಂಘದ ಹಿರಿಯ ಸದಸ್ಯರಾದ ಪರಮೇಶ್ವರ ರಾಗಿಯಡ್ಕ ದೀಪ ಬೆಳಗಿಸಿ ಭಾರತಾಂಬೆಯ ಭಾವಚಿತ್ರಕ್ಕೆ ಫಲಪುಷ್ಪ ಅರ್ಪಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಧು ಗೋಳ್ಯಾಡಿ, ಕಾರ್ಯದರ್ಶಿ ರಾಕೇಶ್ ಬೆಂಡೋಡಿ, ಕೋಶಾಧಿಕಾರಿ ಭರತ್ ಕೇಮಟಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
Ad Widget

ಪಂಜ ದೇವಸ್ಥಾನದಲ್ಲಿ ಆಟಿ ಅಮವಾಸ್ಯೆಯ ಅಂಗವಾಗಿ ನಾಳೆ(ಜು.24) ಹಾಲೆ ಮರದ ಕಷಾಯ ವಿತರಣೆ

ಆಟಿ ಅಮಾವಾಸ್ಯೆ ಪ್ರಯುಕ್ತ ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಾಳೆ ಜು.24 ರಂದು ಮುಂಜಾನೆ ಶ್ರೀ ದೇವರಿಗೆ ಪೂಜೆ ನಡೆದ ಬಳಿಕ ಮುಂಜಾನೆ ಗಂಟೆ 8 ರಿಂದ ಭಕ್ತರಿಗೆ ವಿಶೇಷ ತೀರ್ಥವಾಗಿ ಹಾಲೆ ಮರದ ಕಷಾಯ ವಿತರಣೆ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಬ್ರಹ್ಮಣ್ಯ :  ಭಾರತೀಯ ಮಜ್ದೂರ್ ಸಂಘದ ಸಂಸ್ಥಾಪನಾ ದಿನಾಚರಣೆ

ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕರ ಸಂಘದ  ಸುಬ್ರಹ್ಮಣ್ಯ ಘಟಕದ ವತಿಯಿಂದ ಭಾರತೀಯ ಮಜ್ದೂರ್ ಸಂಘದ ಸಂಸ್ಥಾಪನಾ ದಿನಾಚರಣೆಯು ಇಂದು ನಡೆಯಿತು.ಭಾರತಾಂಬೆಯ ಭಾವಚಿತ್ರಕ್ಕೆ ಫಲಪುಷ್ಪ ಅರ್ಪಿಸಲಾಯಿತು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸುಬ್ಬಪ್ಪ ಕುಲ್ಕುಂದ, ಗೌರವಾಧ್ಯಕ್ಷರಾದ ಗಿರಿಧರ ಹೊಸೊಳಿಕೆ, ಕಾರ್ಯದರ್ಶಿ ಅಜಿತ್ ಕಲ್ಲಾಜೆ, ಸಂಘಟನಾ ಕಾರ್ಯದರ್ಶಿ ದಿವಾಕರ ಪರ್ವತಮುಖಿ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.

ಎ.ಬಿ.ವಿ.ಪಿ ಮೈಸೂರು ಮಹಾನಗರ ಸಂಘಟನಾ ಕಾರ್ಯದರ್ಶಿಯಾಗಿ ಮಂದಾರ ಬಾಳುಗೋಡು ಆಯ್ಕೆ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಪ್ರಾಂತದ ಪೂರ್ಣಾವಧಿ ಕಾರ್ಯಕರ್ತರಾಗಿ ಮೈಸೂರು ಮಹಾನಗರ ಸಂಘಟನಾ ಕಾರ್ಯದರ್ಶಿಯಾಗಿ ಮಂದಾರ ಬಾಳುಗೋಡು ಆಯ್ಕೆಯಾಗಿದ್ದಾರೆ.

ಅಮರ ಸುದ್ದಿ ಸ್ಪೆಷಲ್ ರಿಪೋರ್ಟ್

ಹೆಚ್ಚುತ್ತಿವೆ ಸಾಕುಪ್ರಾಣಿಗಳನ್ನು ರಸ್ತೆ ಬದಿಯಲ್ಲಿ ತಂದು ಬಿಡುವ ಪ್ರಕರಣಗಳು…!

ಸಾಕುಪ್ರಾಣಿಗಳನ್ನು ರಸ್ತೆ ಬದಿಯಲ್ಲಿ ತಂದು ಬಿಡುವುದನ್ನು ತಡೆಗಟ್ಟಲು ಗ್ರಾಮ ಪಂಚಾಯತ್ ಗಳು ಹಾಗೂ ಸ್ಥಳೀಯರು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು…!?

ಇಲ್ಲಿದೆ ಉತ್ತರ…

✍️ಉಲ್ಲಾಸ್ ಕಜ್ಜೋಡಿ

ಇತ್ತೀಚಿನ ದಿನಗಳಲ್ಲಿ ಸಾಕುಪ್ರಾಣಿಗಳನ್ನು ರಸ್ತೆ ಬದಿಯಲ್ಲಿ ತಂದು ಬಿಡುವ ಪ್ರಕರಣಗಳು ಹೆಚ್ಚುತ್ತಲೇ ಹೋಗುತ್ತಿವೆ. ಈಗೀಗ ನಮಗೆ ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ನಾಯಿಗಳು, ಬೆಕ್ಕುಗಳು, ಚಿಕ್ಕಚಿಕ್ಕ ಮರಿಗಳು ಹಾಗೂ ಕೆಲವೊಮ್ಮೆ ದನ-ಕರುಗಳು ಕೂಡ ಕಾಣಸಿಗುತ್ತವೆ. ಅದರಲ್ಲಿ ಕೆಲವು ದನ-ಕರುಗಳು ಮೇಯಲು ಬಿಟ್ಟಿದ್ದೂ ಇರಬಹುದು, ಹಾಗೆಂದು ಎಲ್ಲಾ ದನ-ಕರುಗಳನ್ನು ಮೇಯಲು ಬಿಟ್ಟಿದ್ದು ಎಂದು ಹೇಳಲಾಗುವುದಿಲ್ಲ...ಈ ನಾಯಿ, ಬೆಕ್ಕು, ದನ-ಕರುಗಳನ್ನು...

ಬಸ್ಮಡ್ಕ : ಬರೆ ಕುಸಿತ

ವಾಹನ ಸಂಚಾರ ನಿಷೇಧಿಸಿ ಪಟ್ಟಣ ಪಂಚಾಯತ್ ಪ್ರಕಟಣೆ

ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಬಸ್ಮಡ್ಕ ಕುರುಂಜಿ ದೈವಸ್ಥಾನದ ಸಮೀಪದಲ್ಲಿ ರಸ್ತೆಯ ಬದಿ ಕುಸಿತವಾಗಿದ್ದು, ರಸ್ತೆ ಅಪಾಯದ ಸ್ಥಿತಿಯಲ್ಲಿದೆ. ಗುಡ್ಡ ಕುಸಿತವಾಗಿರುವುದರಿಂದ ವಾಹನ ಸಂಚಾರ ನಿಷೇಧಿಸಿ ಸುಳ್ಯ ಪಟ್ಟಣ ಪಂಚಾಯತ್ ಸೂಚನಾ ಫಲಕವನ್ನು ಪ್ರಕಟಿಸಿದೆ.

ಸಂಪಾಜೆ : ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ

ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಪರಿಶೀಲನೆ ನಡೆಸಿದರು.  ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನರವಾಡೆ ವಿನಾಯಕ್ ಕಾರ್ಬಾರಿ ಐ.ಎ.ಎಸ್ ಭೇಟಿ ನೀಡಿ ಗೂನಡ್ಕ ಕುಡಿಯುವ ನೀರಿನ ಟ್ಯಾಂಕ್, ಕುಡಿಯುವ ನೀರಿನ ಮೀಟರ್, ಮೀಟರ್ ಇರುವ ಸ್ಥಳ ಪರಿಶೀಲನೆ ನಡೆಸಿ ಮೀಟರ್ ದರದಲ್ಲಿ...

ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಸುಬ್ರಹ್ಮಣ್ಯ ಶಾಲೆಗೆ ಪ್ರಿಂಟರ್ ಕೊಡುಗೆ

ಸುಬ್ರಹ್ಮಣ್ಯ ಜುಲೈ 23 : ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಬ್ರಹ್ಮಣ್ಯ ಇಲ್ಲಿಗೆ ಸ್ಕ್ಯಾನಿಂಗ್, ಜೆರಾಕ್ಸ್ ಹಾಗೂ ಪ್ರಿಂಟ್‌ ಗಳನ್ನು ಒಳಗೊಂಡ ಪ್ರಿಂಟರ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಸುಬ್ರಹ್ಮಣ್ಯದ ಬ್ಯಾಂಕ್ ಆಫ್ ಬರೋಡ ಶಾಖೆಯವರು ಪ್ರಿಂಟರ್ ನ ಪ್ರಾಯೋಜಕರಾಗಿದ್ದರು.ಸಭಾಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷರಾದ ಜಯಪ್ರಕಾಶ್ ವಹಿಸಿದ್ದರು....

ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷರಾದ ಜಯಪ್ರಕಾಶ್ ಅವರಿಗೆ ಎಂ.ಪಿ.ಎಚ್.ಎಫ್ ಪದವಿ

ಸುಬ್ರಹ್ಮಣ್ಯ ಜುಲೈ 23 : ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷರಾದ ಜಯಪ್ರಕಾಶ್ ಅವರು ರೋಟರಿ ಅಂತರರಾಷ್ಟ್ರೀಯ ಸ್ಥಾಪಕರಾದ ಪೌಲ್ ಹ್ಯಾರಿಸ್ ಅವರ ನೆನಪಿನಲ್ಲಿ ನೀಡಲಾಗುವ ಎಂ.ಪಿ.ಎಚ್.ಎಫ್ ಪದವಿಯನ್ನು ಪಡೆದಿರುತ್ತಾರೆ. ಜಯಪ್ರಕಾಶ್ ಅವರು ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಪ್ರಾರಂಭದಿಂದ ಕಳೆದ 23 ವರ್ಷಗಳಲ್ಲಿ ಪ್ರಪ್ರಥಮವಾಗಿ ಎಂ.ಪಿ.ಎಚ್.ಎಫ್ ಪಡೆದವರಾಗಿದ್ದಾರೆ.ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ರಸಾಯನಶಾಸ್ತ್ರ ಉಪನ್ಯಾಸಕರಾಗಿರುವ...
Loading posts...

All posts loaded

No more posts

error: Content is protected !!