- Thursday
- April 23rd, 2026
ಮರ್ಕಂಜದ ಬಿಎಸ್ಎನ್ಎಲ್ ಕೇಂದ್ರವು ಕಳೆದ ಕೆಲವು ವರ್ಷಗಳಿಂದ ಸ್ವಚ್ಚಗೊಳಿಸದೆ ಅರಣ್ಯ ಪ್ರದೇಶದ ಮಧ್ಯೆ ಇದ್ದಂತ್ತಿತ್ತು. ಇದನ್ನು ಮರ್ಕಂಜ ಗ್ರಾ.ಪಂ. ಸದಸ್ಯರಾದ ರಾಜೇಂದ್ರ ಕೊಚ್ಚಿ ನೇತೃತ್ವದಲ್ಲಿ ಸ್ವಚ್ಚಗೊಳಿಸಲಾಯಿತು. ಈ ಸಂದರ್ಭದಲ್ಲಿ ಡಿಲ್ಲಿಕುಮಾರ ಕಾಯರ,ಪುಂಡರೀಕ ನಾಯಕ್ ಗೂಡಂಬೆ,ಚೆನ್ನಕೇಶವ ದೋಳ,ಯತೀಶ್ ಕಂಜಿಪಿಲಿ,ಹರೀಶ್ ಕಾಯಿಪಳ್ಳ,ಗಗನ್ ಅಲ್ಪೆ,ಸೋಮಶೇಖರ್ ಅಡಿಗೈ ದೋಳ ಮೊದಲಾದವರು ಬೆಳೆದಿದ್ದ ಗಿಡ ಗಂಟೆ ಕಡಿದು ಸ್ವಚ್ಚ ಮಾಡಿದರು. ಗಿರಿಜಾ ಅಡಿಗೈ...
ಇಬ್ಬನಿ ಕ್ರಿಯೇಷನ್ ಯುಟ್ಯೂಬ್ ಚಾನೆಲ್ ನಲ್ಲಿ "ಪ್ರೇಮಯಾನ" ಆಲ್ಬಂ ಹಾಡು ಇಂದು ಬಿಡುಗಡೆಯಾಗಿದೆ. ಲೀಲಾಕುಮಾರಿ ತೊಡಿಕಾನರವರ ಸಾಹಿತ್ಯವನ್ನು ಮಹಾಲಿಂಗ ಮೈಸೂರುರವರು ಹಾಡಿದ್ದಾರೆ. ಸುಳ್ಯದ ಪ್ರತಿಭೆಗಳಾದ ಶರತ್ ಮಾಸ್ತಿ ಮತ್ತು ಸಾಯಿಶೃತಿ ನಟಿಸಿದ್ದಾರೆ.ಹಾಡನ್ನು ಕೇಳಲು ಈ ಕೆಳಗಿನ ಲಿಂಕ್ ಬಳಸಿ.https://youtu.be/JNfyOzLZZM0 https://youtu.be/JNfyOzLZZM0
ಕಿರಿಯ ವಯಸ್ಸಿನಲ್ಲೇ ಕ್ರೀಡಾ ಕ್ಷೇತ್ರದಲ್ಲಿ ಮತ್ತು ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ದಾವಣಗೆರೆ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಮೈಸೂರು ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕಿ, ಸುಳ್ಯದ ಗೀತಾ ಕಂದಡ್ಕ ಅವರನ್ನು ವಿ.ವಿ. ಕುಲಪತಿಗಳೂ ಆಗಿರುವ ರಾಜ್ಯಪಾಲರು ಮುಂದಿನ ಮೂರು ವರ್ಷಗಳ ಅವಧಿಗೆ ಈ ನೇಮಕ ಮಾಡಿದ್ದಾರೆ. ಕಾಲೇಜು ಜೀವನದಲ್ಲಿಯೇ...
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ಇದರ ವತಿಯಿಂದ ರಾಷ್ಟ್ರೀಯ ವಿದ್ಯಾರ್ಥಿ ದಿನದ ಅಂಗವಾಗಿ ಅಡ್ಕಾರು ವನವಾಸಿ ಕೇಂದ್ರದಲ್ಲಿ ಧ್ವಜಾರೋಹಣ ,ಸ್ವಚ್ಛತೆ ಮತ್ತು ಸಸಿ ಹಂಚುವ ಕಾರ್ಯಕ್ರಮ ಮಾಡಲಾಯಿತು ನಂತರ ವಿವೇಕಾನಂದ ಶಾಲೆಯ ಹೊರ ಆವರಣದಲ್ಲಿ ಕೆಲವು ಹಣ್ಣಿನ ಗಿಡಗಳನ್ನು ನೆಡಲಾಯಿತು.ಈ ಸಂಧರ್ಭದಲ್ಲಿ ವಿವೇಕಾನಂದ ಶಾಲೆಯ ಮುಖ್ಯ ಶಿಕ್ಷಕರು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್...
ಪುಟ್ಟ-ಪುಟ್ಟ ಮನಸುಗಳು,ಚಿಕ್ಕ-ಪುಟ್ಟ ಕನಸುಗಳು…ಬಾಲ್ಯದ ಜೀವನ ಎಷ್ಟೊಂದು ಚಂದ…ಬದುಕಿನ ತುಂಟಾಟ, ಗೆಳೆಯರ ಒಡನಾಟ…ಬಾಲ್ಯದ ಬದುಕಿನ ಆ ದಿನಗಳು,ಎಂದೂ ಮರೆಯದ ಆ ಕ್ಷಣಗಳು… ಅರಿಯದ ವಯಸ್ಸಿನಲ್ಲಿ, ತಿಳಿಯದ ಮನಸ್ಸಿನಲ್ಲಿಕಳೆದುಹೋದದ್ದೇ ಬಾಲ್ಯ….ಮರಳಿ ಬಾರದು ಆ ಬಾಲ್ಯ…ಸುಂದರ ದಿನಗಳಸವಿ-ಸವಿ ನೆನಪುಗಳ,ಎಂದೂ ಸವೆಯದ ಆ ಪಯಣ…ಬಾಲ್ಯದ ಬದುಕಿನ ಆ ಪಯಣ… ಶಾಲೆಯ ಮೊದಲ ದಿನ, ಗುರುಗಳ ಕಂಡ ಕ್ಷಣಮನದಲ್ಲಿ ಏನೋ ಒಂದು ಅಳುಕು…ದಿನಗಳು...
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ,ಸುಬ್ರಹ್ಮಣ್ಯ ಇಲ್ಲಿ 18 ವರ್ಷ ತುಂಬಿದ ವಿದ್ಯಾರ್ಥಿಗಳಿಗೆ ಜೂ.30 ಹಾಗೂ ಜುಲೈ 2 ರಂದು ಕೊರೊನಾ ಲಸಿಕೆಯನ್ನು ಹಾಕಲಾಯಿತು. ಈ ಸಂದರ್ಭದಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಿ, ನೋಡಲ್ ಅಧಿಕಾರಿ ವಿಶ್ವನಾಥ ನಡುತೋಟ, ಉಪನ್ಯಾಸಕರುಗಳಾದ ಶ್ರೀಧರ್, ಪ್ರವೀಣ್ , ಸೌಮ್ಯ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಹೇಮಲತಾ, ಕವಿತಾ ಮತ್ತು...
ಕರ್ನಾಟಕದ ಅದರಲ್ಲಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಪಠ್ಯಪುಸ್ತಕ, ಇಂಗ್ಲಿಷ್ ಟೀಚಿಂಗ್ ಒಮ್ಮೊಮ್ಮೆ ಕಷ್ಟವೆಂದೆನಿಸುತ್ತದೆ. ಅಯ್ಯೋ ಕ್ಲಾಸ್ನಲ್ಲಿ ಏನು ಹೇಳ್ತರಪ್ಪ. ಒಂದು ಪದನೂ ಅರ್ಥ ಆಗೋದಿಲ್ಲ ಎನ್ನುವುದು ಬಹುತೇಕ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಗೋಳು. ಅದರಲ್ಲಿಯೂ ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಆರೋಗ್ಯಸೇವೆಯ ಇತರೆ ಕೋರ್ಸ್‌ಗಳನ್ನು ಕಲಿಯಲು ಎಸ್ಎಸ್ಎಲ್ಸಿ, ಪಿಯುಸಿ ಬಳಿಕ ಸೇರಿದ ವಿದ್ಯಾರ್ಥಿಗಳಿಗೆ ಟೀಚಿಂಗ್ ಅರ್ಥವಾಗದೆ...
ಎಬಿವಿಪಿ ಕರ್ನಾಟಕ ಹಾಗೂ ಎಸ್.ಎಫ್.ಡಿ ವತಿಯಿಂದ ಜೂನ್ 5 ರಿಂದ 5 ದಿನ 5 ಗಿಡ ನೆಡುವ ಮೂಲಕ 'ಆಕ್ಸಿಜನ್ ಚಾಲೆಂಜ್'ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಕುಕ್ಕೆ ಸುಬ್ರಹ್ಮಣ್ಯ ಶಾಖೆಯ ವತಿಯಿಂದ ಜೂ.8 ರಂದು ಕೆ.ಎಸ್.ಎಸ್ ಕಾಲೇಜಿನಲ್ಲಿ 5 ಗಿಡ ನೆಡುವ ಮೂಲಕ 4 ದಿನದ 'ಆಕ್ಸಿಜನ್ ಚಾಲೆಂಜ್'...
ಜೂನ್ 21 ರಿಂದ ಪ್ರಾರಂಭವಾಗಬೇಕಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ. ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳು, ವಿದ್ಯಾರ್ಥಿ-ಪೋಷಕರ, ವಿವಿಧ ಶಾಲಾ ಸಂಘಟನೆಗಳ ಆತಂಕಗಳನ್ನು ಗಮನದಲ್ಲಿರಿಸಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ಕೋವಿಡ್19ರ ಎರಡನೇ ಅಲೆಯ ಪ್ರಸರಣ ನಿಯಂತ್ರಣಕ್ಕೆ ಬಂದ ಸಂದರ್ಭದಲ್ಲಿ, ಸಾಕಷ್ಟು ಮುಂಚಿತವಾಗಿ ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸಲಾಗುತ್ತದೆ...
ಕಲಾಮಾಯೆ (ರಿ) ಏನೆಕಲ್ ಆಶ್ರಯದಲ್ಲಿಸೋಲಾರ್ ಪಾಯಿಂಟ್ ನಿಂತಿಕಲ್ಲು ಮತ್ತುಬ್ಲಾಕ್ ವಿಂಡ್ ಸೋಲಾರ್ ಬೆಳ್ತಂಗಡಿ ಅರ್ಪಿಸುವಅಮರ ಸುದ್ದಿಸಹಕಾರದೊಂದಿಗೆಹಾಡು ಬಾ ಕನಸುಆನ್ಲೈನ್ ಭಾವಗೀತೆಗಳ ಗಾಯನ ಸ್ಪರ್ಧೆರಚನೆ :- ಜಿ ಎಸ್ ಶಿವರುದ್ರಪ್ಪಸ್ಪರ್ಧಿ :- ಪವಿತ್ರ ಆರ್.ಹಾಡುಗಳನ್ನು ಕೇಳಿ, ಲೈಕ್ ಕೊಡುವುದರ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ https://youtu.be/jMsBErA1EYE
Loading posts...
All posts loaded
No more posts
