“ಹಾಡಿನೊಂದಿಗೆ ತಿಳಿಸುವ ಜ್ಞಾನ ಮಕ್ಕಳ ಭವಿಷ್ಯದ ಉನ್ನತಿಗೆ ಸೋಪಾನ” –  ಲಕ್ಷ್ಮೀಶ ಗಬ್ಲಡ್ಕ

ಕಲಾವಿದ ಮಣಿ ನಾಲ್ಕೂರು ಅವರಿಗೆ ಸನ್ಮಾನ

ಸುಬ್ರಹ್ಮಣ್ಯ : “ವಿದ್ಯಾರ್ಥಿಗಳಿಗೆ ಎಳವೆಯಲ್ಲಿಯೇ ಬದುಕಿನ ವಿದ್ಯೆ ಅತ್ಯವಶ್ಯಕ. ಜನಪದ ಹಾಡುಗಳೊಂದಿಗೆ ಜೀವನದ ಸಾರವನ್ನು ಯುವ ಜನಾಂಗಕ್ಕೆ ನೀಡುವುದರಿಂದ ಅವರಿಗೆ ಬದುಕಿನ ಅರ್ಥ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ. ಜೀವನ ಕಟ್ಟಿಕೊಳ್ಳಲು ಬೇಕಾದ ವಿಚಾರಗಳನ್ನು ಹಾಡಿನ ಮೂಲಕ ತಿಳಿಸಿದಾಗ ವಿದ್ಯಾರ್ಥಿಗಳ ಮನಸಿನಲ್ಲಿ ಅವುಗಳು ಅಚ್ಚಳಿಯದೆ ನಿಲ್ಲುತ್ತದೆ. ಇಂತಹ ಕಾರ್ಯಕ್ರಮಗಳು ಮಕ್ಕಳ ಬದುಕಿಗೆ ತಿರುವನ್ನು ಒದಗಿಸುತ್ತದೆ” ಎಂದು ಜಿಲ್ಲಾ ಧಾರ್ಮಿಕ...

ಕೊಡಿಯಾಲ : ತುಂಡಾಗಿ ಬಿದ್ದಿದ್ದ ವಿದ್ಯುತ್ ವೈರ್ ತಗುಲಿ ಶಾಕ್ ; ವ್ಯಕ್ತಿ ಮೃತ್ಯು

ಕೊಡಿಯಾಲ ಗ್ರಾಮದ ಕಲ್ಲಪಣೆಯಲ್ಲಿ ವ್ಯಕ್ತಿಯೊಬ್ಬರು ವಿದ್ಯುತ್‌ ಶಾಕ್ ನಿಂದ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ.ಕಲ್ಲಪಣೆಯ ದಿವಾಕರ ಆಚಾರ್ಯ(45) ಎಂಬವರು ಮನೆಗೆ ಹೋಗುವ ದಾರಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ವೈರ್ ತಾಗಿ ಮೃತಪಟ್ಟ ಘಟನೆ ನಡೆದಿದ್ದು, ಅವರು ವೈರ್ ಅನ್ನು ಕೈಯಲ್ಲಿ ಹಿಡಿಕೊಂಡ ಸ್ಥಿತಿಯಲ್ಲಿದ್ದರು.ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಗಿದೆ.
Ad Widget

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ಗೃಹ ಸಚಿವರಾದ ಡಾ| ಜಿ.ಪರಮೇಶ್ವರ್

ಸ್ವಾಗತ ಕೋರಿದ ಅಧಿಕಾರಿಗಳು ಹಾಗೂ ಮುಖಂಡರು

“ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಾ ರೀತಿಯಲ್ಲೂ ಉತ್ತಮವಾಗಿದೆ” : ಡಾ| ಜಿ.ಪರಮೇಶ್ವರ್

ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಡಾ| ಜಿ.ಪರಮೇಶ್ವರ್ ಅವರು ಜು.08 ರಂದು ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದರು.ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಾ ರೀತಿಯಲ್ಲೂ ಉತ್ತಮವಾಗಿದೆ. ಕೇವಲ ಹೇಳಿಕೆಯಾಗಿ ನಾನು ಈ ರೀತಿಯಾಗಿ ಹೇಳುತ್ತಿಲ್ಲ. ಇತ್ತೀಚೆಗೆ ನಡೆದ ಕಾನ್ಫರೆನ್ಸ್...

ಸುಳ್ಯ : ಶುಭಾಷಿನಿ ಕಾಮತ್ ನಿಧನ

ಸುಳ್ಯ ಹಲವಾರು ಸಂಘ-ಸಂಸ್ಥೆಯಲ್ಲಿ ಗುರುತಿಸಿಕೊಂಡಿರುವ ಜಯನಗರ ನಿವಾಸಿ ಸುರೇಶ್ ಕಾಮತ್ ಇವರ ಪತ್ನಿ ಶುಭಾಷಿನಿ ಕಾಮತ್ ಬೋಳುಗಲ್ಲು ಇಂದು ಮುಂಜಾನೆ ನಿಧನರಾದರು.  ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ಇಂದು ಮುಂಜಾನೆ ಸುಳ್ಯದ ಕೆ.ವಿ.ಜಿ ಆಸ್ಪತ್ರೆಯಲ್ಲಿ ನಿಧನರಾದರು.  ಇವರು ಮಂಡೆಕೋಲು ಬೋಳುಗಲ್ಲು ಪದ್ಮಾವತಿ-ಶಶಿಧರ್ ನಾಯಕ್ ದಂಪತಿಗಳ ಪುತ್ರಿಯಾಗಿದ್ದು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಮರ್ಕಂಜ : ಪ್ರೌಢಶಾಲಾ ಎಸ್.ಡಿ.ಎಂ.ಸಿ ರಚನೆ

ಅಧ್ಯಕ್ಷರಾಗಿ ನಿತ್ಯಾನಂದ ಭೀಮಗುಳಿ

ಮರ್ಕಂಜ ಪ್ರೌಢಶಾಲಾ ಎಸ್.ಡಿ.ಎಂ.ಸಿ ಯು ಇತ್ತೀಚೆಗೆ ರಚನೆಗೊಂಡಿತು.ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ನಿತ್ಯಾನಂದ ಭೀಮಗುಳಿ ಹಾಗೂ ಸದಸ್ಯರುಗಳಾಗಿ ಮಹಾವೀರ ಇಂದ್ರ, ದಿನಕರ ಕಾಳಮ್ಮನೆ, ಕುಶಾಲಪ್ಪ ಕಬ್ಬಿನಡ್ಕ, ಹೇಮಾಕುಮಾರ್ ಕಂಜಿಪಿಲಿ, ದಿನೇಶ್ ಕುದ್ಕುಳಿ, ಸುಚೇತಾ ರೈ ಪಟ್ಟೆ, ಲಿಂಗಮ್ಮ ಪನ್ನೆ ಹಾಗೂ ವಿಶಾಲಾಕ್ಷಿ ದೇಶಕೋಡಿ ಆಯ್ಕೆಯಾದರು.ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ವೀಣಾ ಉಪಸ್ಥಿತರಿದ್ದರು.

ಗುತ್ತಿಗಾರು :  ಹಣದಾಸೆಗೆ ಹೂಡಿಕೆ ಮಾಡಿದ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ

ಹಣ ಠೇವಣಿ ಮಾಡಿದರೆ ಕಮಿಷನ್ ನೀಡುವುದಾಗಿ ನಂಬಿಸಿ ಸುಳ್ಯ ತಾಲೂಕಿನ ಗುತ್ತಿಗಾರಿನ 30 ವರ್ಷದ ಮಹಿಳೆಯಿಂದ ಲಕ್ಷಾಂತರ ರೂ ಪಡೆದುಕೊಂಡು ವಂಚಿಸಿದ ಬಗ್ಗೆ  ವರದಿಯಾಗಿದೆ.ಮಾರ್ಚ್ 19ರಂದು ಮಹಿಳೆಗೆ ಟೆಲಿಗ್ರಾಂ ಆ್ಯಪ್‌ನಿಂದ ಏರ್‌ಫಝ್ ಎಂಬ ಕಂಪೆನಿಯಲ್ಲಿ ಹೂಡಿಕೆ ಮಾಡಿದರೆ ಕಮಿಷನ್ ನೀಡುವುದಾಗಿ ತಿಳಿಸಿ ಲಿಂಕ್ ಕಳುಹಿಸಲಾಗಿತ್ತು. ಆ ಲಿಂಕನ್ನು ಒತ್ತಿದಾಗ ಅದರಲ್ಲಿ ಟೆಲಿಗ್ರಾಂ ಅಕೌಂಟ್ ತೆರೆದು ಲಾಗಿನ್...

ಸುಬ್ರಹ್ಮಣ್ಯ : ಮರ ಬಿದ್ದು ಹಾನಿಯಾಗಿದ್ದ ವಿದ್ಯುತ್ ಲೈನ್ ದುರಸ್ತಿ

ಮಳೆಯ ನಡುವೆಯೇ ವಿದ್ಯುತ್ ಲೈನ್ ದುರಸ್ತಿಗೊಳಿಸಿದ ಮೆಸ್ಕಾಂ ಸಿಬ್ಬಂದಿಗಳ ಶ್ರಮಕ್ಕೆ ಶ್ಲಾಘನೆ

ಕುಕ್ಕೆ ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ಭಾನುವಾರ ಸಂಜೆ ಸಂಭವಿಸಿದ ಭಾರೀ ಗಾಳಿ ಮಳೆಗೆ ವಿದ್ಯುತ್ ಸಂಪರ್ಕ ತೊಂದರೆಗೆ ಒಳಗಾದ ಹಿನ್ನೆಲೆಯಲ್ಲಿ ಮೆಸ್ಕಾಂ ಸಿಬ್ಬಂದಿಗಳು ಭಾರೀ ಮಳೆಯ ನಡುವೆಯೇ ಪರಿಶ್ರಮದೊಂದಿಗೆ 11 ಕೆ.ವಿ. ವಿದ್ಯುತ್ ಲೈನ್‌ನ್ನು ದುರಸ್ತಿಪಡಿಸಿ, ಕುಕ್ಕೆ ಸೇರಿದಂತೆ ಹಲವು ಗ್ರಾಮೀಣ ಭಾಗಗಳಿಗೆ ಮತ್ತೆ ವಿದ್ಯುತ್ ಪೂರೈಕೆ ಮಾಡಲು ಯಶಸ್ವಿಯಾಗಿದ್ದಾರೆ.ಆದಿತ್ಯವಾರ ಸಂಜೆ 4 ಗಂಟೆ ಸುಮಾರಿಗೆ...

ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ವತಿಯಿಂದ ವನಮಹೋತ್ಸವ ಹಾಗೂ ಸ್ವಚ್ಛತಾ ಅಭಿಯಾನ

ಮಾತೃಭೂಮಿ ಯುವ ವೇದಿಕೆ(ರಿ.) ಮಾಣಿಲ ಸಂಘದ ವತಿಯಿಂದ ವನಮಹೋತ್ಸವ ಕಾರ್ಯಕ್ರಮದ ಜೊತೆಗೆ ಪರಿಸರ ಜಾಗೃತಿ ಹಾಗೂ ಸ್ವಚ್ಛತಾ ಅಭಿಯಾನವು ಸರಕಾರಿ ಪ್ರೌಢಶಾಲೆ ಮಾಣಿಲದಲ್ಲಿ ಯಶಸ್ವಿಯಾಗಿ ನಡೆಯಿತು.  ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಗಿಡಗಳ ವಿತರಣೆ ಮತ್ತು ನೆಡುವಿಕೆ ಗಣ್ಯರ ಸಮ್ಮುಖದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪರಿಸರದ ಜೀವಿಗಳ ಬದುಕಿನ ಬಗ್ಗೆ ಅದರಲ್ಲೂ ಮುಖ್ಯವಾಗಿ ಉರಗಗಳ(ಹಾವುಗಳ) ಗುಣಲಕ್ಷಣಗಳ ಕುರಿತು ವಿಶೇಷವಾಗಿ...

ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ರವರಿಗೆ ಸನ್ಮಾನ

ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘ(ರಿ.) ಬೆಂಗಳೂರು ಸುಳ್ಯ ತಾಲೂಕು ಇದರ ವತಿಯಿಂದ ಜು.05 ರಂದು ಪುತ್ತೂರು ಹಾಗೂ ಸುಳ್ಯ ತಾಲೂಕಿನಲ್ಲಿ ಸುಮಾರು 31 ವರ್ಷಗಳ ಕಾಲ ಅತಿಥಿ ಶಿಕ್ಷಕಿಯಾಗಿ, ಅಂತಿಮವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಜಡ್ಕ ಇಲ್ಲಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ...

ಪುತ್ತೂರು-ಪೆರ್ಲಂಪಾಡಿ-ಪೈಲಾರು ಬಸ್ಸಿನ ಮಾರ್ಗದ ವಿಸ್ತರಣೆ

ಎಲಿಮಲೆ : ಪೈಲಾರಿನಿಂದ ಪೆರ್ಲಂಪಾಡಿ ಮಾರ್ಗವಾಗಿ ಪುತ್ತೂರಿಗೆ ಸಂಚರಿಸುವ ಧರ್ಮಸ್ಥಳ ಡಿಪೋದ ಬಸ್ಸು ಈವರೆಗೆ ಪೈಲಾರಿನಲ್ಲಿ ರಾತ್ರಿ ತಂಗುತ್ತಿತ್ತು. ಪೈಲಾರು-ಎಲಿಮಲೆ ಮಧ್ಯೆ ಸೀಮಿತ ಸಾರಿಗೆ ವ್ಯವಸ್ಥೆ ಇರುವುದನ್ನು ಮನಗಂಡಂತಹ ಚೈತನ್ಯ ದೀಕ್ಷಿತ್ ಕೆಳಪಾರೆ ಮತ್ತು ಬೆಟ್ಟ ಜಯರಾಮ್ ಭಟ್ ಇವರುಗಳು ಸಂಬಂಧಪಟ್ಟ ಇಲಾಖೆಗಳನ್ನು ಸಂಪರ್ಕಿಸಿ ಬಸ್ ಸಂಚಾರದ ವಿಸ್ತರಣೆಯನ್ನು ಮಾಡಿಸಿರುತ್ತಾರೆ. ಜುಲೈ 2ರಂದು ಬಂದಂತಹ ಬಸ್ಸನ್ನು...
Loading posts...

All posts loaded

No more posts

error: Content is protected !!