- Tuesday
- May 5th, 2026
ದೇವ ಗೆಳೆಯರ ಬಳಗದ ವತಿಯಿಂದ ನಡೆಯಲಿರುವ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಂದು ನಡೆಯಿತು. ಈ ಸಂದರ್ಭದಲ್ಲಿ ಗೆಳೆಯರ ಬಳಗ (ರಿ.) ದೇವ ಇದರ ಅಧ್ಯಕ್ಷರಾದ ಮುಕುಂದ ಹಿರಿಯಡ್ಕ, ಗೌರವಾದಕ್ಷ ಯೋಗೀಶ ದೇವ, ಕಾರ್ಯದರ್ಶಿ ಜಯಂತ ದೇವ, ಉಪಾಧ್ಯಕ್ಷ ಚೇತನ ಪಡ್ಪು, ಕ್ರೀಡಾಕಾರ್ಯದರ್ಶಿ ರಕ್ಷಿತ್ ಕನ್ನಡಕಜೆ, ಸದಸ್ಯರಾದ ಪ್ರಶಾಂತ...
ಸಂಪಾಜೆ ಗ್ರಾಮದ ಎರಕಡುಪು ಎಂಬಲ್ಲಿ ನಿರ್ಮಿಸಿದ ಸೇತುವೆಗೆ ಕಿಂಡಿ ಅಣೆಕಟ್ಟು ವಾಹನ ಸಂಚಾರಕ್ಕೆ ದುಸ್ತರವಾಗಿರುವ ಬಗ್ಗೆ ಸ್ಥಳೀಯ ನಿವಾಸಿ ಮತ್ತು ಸಾಮಾಜಿಕ ಕಾರ್ಯಕರ್ತರಾದ ಕೆ.ಸೀತಾರಾಮ ಗೌಡರವರು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ, ಮಂಗಳೂರು ಇವರಿಂದ ಟೆಂಡರ್ ಪ್ರಕಾರ ರೂ.4 ಕೋಟಿಗಳಿಗೆ ಸೇತುವೆ ಕಂ.ಕಿಂಡಿ ಅಣೆಕಟ್ಟು ನಿರ್ಮಿಸಿದ ಬಗ್ಗೆ ಮಾಹಿತಿ ಹಕ್ಕಿನಡಿ ಪಡೆದ ವಿವರಗಳೊಂದಿಗೆ...
ಕಳೆದ ಮೂರು ದಿನಗಳಿಂದ ನಿರಂತರ ವಿದ್ಯುತ್ ಕಣ್ಣುಮುಚ್ಚಾಲೆ ಆಟದಂತಾಗಿದ್ದು, ನಿನ್ನೆ ಸಂಜೆ ಹೋದ ಕರೆಂಟ್ ಇಂದು ಮಧ್ಯಾಹ್ನ ಸುಳ್ಯಕ್ಕೆ ಆಗಮಿಸಿತ್ತು. ಇದೀಗ ಮತ್ತೆ ಇಂದು ಸಂಜೆ ಮತ್ತೆ 33 ಕೆ.ವಿ ಸುಳ್ಯ ಲೈನ್ ಕೈಕೊಟ್ಟಿದ್ದು, ವಿದ್ಯುತ್ ಸರಬರಾಜು ಸ್ಥಗಿತವಾಗಿದೆ. ವಿದ್ಯುತ್ ವಿಳಂಬವಾಗುವ ಸಾಧ್ಯತೆಯಿದೆ ಎಂದು ಮಾಹಿತಿ ಲಭ್ಯವಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸುಳ್ಯ ಇದರ 26 ನೇ ಶ್ರೀ ಗುರು ರಾಘವೇಂದ್ರ ಮಹಿಳಾ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ ಜಾಲ್ಸೂರಿನ ಶ್ರೀ ಗುರು ರಾಘವೇಂದ್ರ ಭಜನಾ ಮಂದಿರದಲ್ಲಿ ಇಂದು ನಡೆಯಿತು. ಇದರ ಉದ್ಘಾಟನೆಯನ್ನು ಶ್ರೀ ಗುರು ರಾಘವೇಂದ್ರ ಭಜನಾ ಮಂದಿರ ಅಧ್ಯಕ್ಷರಾದ ಜಯರಾಮ್ ರೈ ರವರು ಹಣ್ಣಿನ ಗಿಡವನ್ನು...
ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ಸುಳ್ಯ ಶಾಖೆಯಲ್ಲಿ ಜು.26 ರಂದು “ಆಟಿದ ಕೂಟ” ನಡೆಯಿತು.ಆಟಿ ತಿಂಗಳು ಹಾಗೂ ನಾಗರ ಪಂಚಮಿಯ ಪ್ರಯುಕ್ತ ಜಿ.ಎಲ್ ಗ್ರಾಹಕರಿಗೆ ಹಾಗೂ ಸಿಬ್ಬಂದಿಗಳಿಗೆ ವಿಶೇಷ ಆಟಿಯ ತಿಂಡಿ-ತಿನಿಸುಗಳಾದ ಪತ್ರೋಡೆ, ಗೇನಸಾಲೆ ಹಾಗೂ ಕಷಾಯದ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು.
ಸುಳ್ಯ ತಾಲೂಕು ಆಸ್ಪತ್ರೆಗೆ ನೂತನ ವೈದ್ಯಾಧಿಕಾರಿಯಾಗಿ ಈ ಹಿಂದೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ ಇದೀಗ ಸುಳ್ಯ ತಾಲೂಕು ಆಸ್ಪತ್ರೆಗೆ ವರ್ಗಾವಣೆಗೊಂಡು ಬಂದು ಆಡಳಿತ ವೈದ್ಯಾಧಿಕಾರಿಯಾಗಿ ನಿಯುಕ್ತರಾಗಿರುವ ಶ್ರೀ ನವೀನ್ ಎಸ್.ಎನ್ ಅವರಿಗೆ ಸುಳ್ಯ ಯುವ ಕಾಂಗ್ರೆಸ್ ವತಿಯಿಂದ ತಾಲೂಕು ಆಸ್ಪತ್ರೆಯಲ್ಲಿ ಭೇಟಿಯಾಗಿ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ...
ನಡುಗಲ್ಲು-ಹರಿಹರ ರಸ್ತೆ ಮಧ್ಯದ ಕೊರಂಬಠ ಎಂಬಲ್ಲಿ ಬೃಹತ್ ಮರವೊಂದು ಬಳ್ಳಿಗಳ ಸಹಿತವಾಗಿ ಬಿದ್ದ ಪರಿಣಾಮ ವಾಹನ ಸಂಚಾರವು ಸುಮಾರು ಎರಡು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಮೆಸ್ಕಾಂ ಸಿಬ್ಬಂದಿಗಳು ಹಾಗೂ ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿ ರಸ್ತೆಯನ್ನು ಪುನರ್ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಕಳೆದ 40 ವರ್ಷಗಳಿಂದ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ನಿವೃತ್ತರಾದ ಅನಂತರಾಮ ಮಣಿಯಾನಮನೆ ರವರಿಗೆ ಬೀಳ್ಕೊಡುವ ಸಮಾರಂಭ ಹಾಗೂ ಸಂಘದ 2024-25ನೇ ಸಾಲಿನ ನಿವೃತ್ತ ಸಿಬ್ಬಂದಿಗಳಿಗೆ ಸಾರ್ವಜನಿಕ ಸನ್ಮಾನ ಸಮಾರಂಭವು ಜು.26 ರಂದು ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ನಡೆಯಿತು. ನಿವೃತ್ತ ಮುಖ್ಯೋಪಾಧ್ಯಾಯರಾದ...
ಸುಳ್ಯ ಕಸಬಾ ಗ್ರಾಮದ ಕೊಯಿಂಗೋಡಿ ದಿ.ಭವಾನಿ ಪ್ರಸಾದ್ ರವರ ಪುತ್ರ ನಿತಿನ್ ಕೊಯಿಂಗೋಡಿ(35ವ) ಯವರು ಅಸೌಖ್ಯದಿಂದ ಜು.25 ರಂದು ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾದರು.ಅವರು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಜು.25 ರಂದು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.ಮೃತರು ತಾಯಿ ಕವಿತಾ, ಪತ್ನಿ ಶಿಲ್ಪ, ಪುತ್ರ ಪ್ರಿಯಂಷು, ಸಹೋದರ, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಜವಾನರ ಗೌರವಾರ್ಥವಾಗಿ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಪ್ರತಿ ವರ್ಷ ಇಂಡಿಯಾ ಗೇಟ್‍ನಲ್ಲಿರುವ ಅಮರ್ ಜವಾನ ಜ್ಯೋತಿಯಲ್ಲಿ ಸೈನಿಕರಿಗೆ ಪುಷ್ಪ ನಮನ ಸಲ್ಲಿಸುತ್ತಾರೆ, ಈ ಕಾರ್ಗಿಲ್ ಯುದ್ಧ ಭಾರತ ಮತ್ತು ಪಾಕಿಸ್ತಾನದ ನಡುವೆ 1999...
Loading posts...
All posts loaded
No more posts
