ಕುರುಂಜಿಗುಡ್ಡೆ : ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಅವೈಜ್ಞಾನಿಕ ರಸ್ತೆ ಹಂಪ್ಸ್ ; ವಾಹನ ಸವಾರರಿಗೆ ಸಂಕಷ್ಟ

ಸುಳ್ಯದ ಕೋರ್ಟ್ ಹಿಂಭಾಗದಿಂದ ಕುರುಂಜಿಗುಡ್ಡೆ ಸಂಪರ್ಕಿಸುವ ರಸ್ತೆಯ ತಿರುವಿನ ಬಳಿಯಲ್ಲಿ ವೇಗನಿಯಂತ್ರಕ ಹಂಪ್ಸ್ ಅಳವಡಿಸಲಾಗಿತ್ತು.‌ ನಗರದಾದ್ಯಂತ ಕುಡಿಯುವ ನೀರಿನ ಪೈಪು ಅಳವಡಿಸುವ  ಕಾಮಗಾರಿ ಸಂದರ್ಭ ಇಲ್ಲಿ ರಸ್ತೆಯ ಅರ್ಧ ಭಾಗವನ್ನು ಅಗೆದು ಕಾಮಗಾರಿ ನಡೆಸಲಾಗಿದೆ.‌ ನಂತರದಲ್ಲಿ ರಸ್ತೆಗೆ ಕಾಂಗ್ರೆಟ್ ಹಾಕಿ ಸರಿಪಡಿಸಿದರೂ ವೇಗ ನಿಯಂತ್ರಕ ಹಂಪ್ಸ್ ಅನ್ನು ಪೂರ್ಣಗೊಳಿಸಿಲ್ಲ. ರಸ್ತೆಯ ಒಂದು ಭಾಗಕ್ಕೆ ಮಾತ್ರ ಹಂಪ್...

ಸುಳ್ಯ ಬೋರುಗುಡ್ಡೆ ರಸ್ತೆ ದುರಸ್ತಿಗೆ ಎಸ್.ಡಿ.ಪಿ.ಐ ಮನವಿ ; ಅಧಿಕಾರಿಯಿಂದ ಭರವಸೆ

ಸುಳ್ಯ, ಆಗಸ್ಟ್ 6 : ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಬೋರುಗುಡ್ಡೆ ಕಾಯರ್ತೋಡಿ ವಾರ್ಡ್ ನಲ್ಲಿ ಘನ ವಾಹನ ಸಂಚಾರದಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಂಪೂರ್ಣ ಕೆಸರುಮಯವಾಗಿದೆ. ಈ ಮೊದಲು ಹಲವು ಬಾರಿ ಮನವಿ ನೀಡಿದ್ದರೂ ಯಾವುದೇ ರೀತಿಯ ಸ್ಪಂದನೆ ಸಿಗಲಿಲ್ಲ. ಕೂಡಲೇ ರಸ್ತೆ ದುರಸ್ತಿ ಪಡಿಸಿ, ಸಂಚಾರ ಯೋಗ್ಯಗೊಳಿಸುವ ಬಗ್ಗೆ ಸುಳ್ಯ ನಗರ ಪಂಚಾಯತ್...
Ad Widget

“ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಬರುವ ಭಕ್ತಾದಿಗಳ ಸುರಕ್ಷತೆಗೆ ಪ್ರಥಮ ಆದ್ಯತೆ” : ಎಸ್.ಐ. ಕಾರ್ತಿಕ್

ಸುಬ್ರಹ್ಮಣ್ಯದಲ್ಲಿ ವಸತಿಗೃಹ ಮಾಲಕ-ನಿರ್ವಾಹಕರ ಸಭೆ

ಸುಬ್ರಹ್ಮಣ್ಯ ಆಗಸ್ಟ್ 6 : “ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದಿನನಿತ್ಯ ಸಾವಿರಾರು ಭಕ್ತಾದಿಗಳು ದೇವರ ದರ್ಶನ ಹಾಗೂ ಹರಕೆ ತೀರಿಸಲು ಬರುತ್ತಾರೆ, ಭಕ್ತಾದಿಗಳಿಗೆ ರಾತ್ರಿ ತಂಗಲು ಈ ದೇವಳದ ವಸತಿಗೃಹಗಳು ಕಡಿಮೆ ಇರುವುದರಿಂದ ಖಾಸಗಿ ವಸತಿಗೃಹಗಳು ಕೊಠಡಿ ನೀಡಿ ತಂಗಲು ವ್ಯವಸ್ಥೆ ಕಲ್ಪಿಸಿರುವುದು ಸರ್ವೇಸಾಮಾನ್ಯ. ಆದರೆ ಖಾಸಗಿ ಅನಧಿಕೃತ ವಸತಿಗೃಹಗಳು ಭಕ್ತಾದಿಗಳಿಗೆ ಕಿರುಕುಳ ನೀಡುವುದು,...

ಏನೆಕಲ್ಲು : ಸಂಜೀವಿನಿ ಒಕ್ಕೂಟದ ವತಿಯಿಂದ ಆಟಿ ಆಚರಣೆ

ಸುಬ್ರಹ್ಮಣ್ಯ ಆಗಸ್ಟ್ 05 : ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಟ್ಟದ ಸುಬ್ರಹ್ಮಣ್ಯ ಏನೆಕಲ್ಲು ಹಾಗೂ ಕುಲ್ಕುಂದದ ಓಂ ಶ್ರೀ ಸಂಜೀವಿನಿ ಒಕ್ಕೂಟದ ವತಿಯಿಂದ ಏನೆಕಲ್ ನಲ್ಲಿ ಆಟಿ  ಆಚರಣೆ ಕಾರ್ಯಕ್ರಮವನ್ನು ಮಂಗಳವಾರ ಏರ್ಪಡಿಸಲಾಯಿತು.ಸಭಾಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಾತ ಕಲ್ಲಾಜೆ ವಹಿಸಿದ್ದರು.ಕಾರ್ಯಕ್ರಮವನ್ನು ದೀಪ ಬೆಳಗಿಸಿ ಚೆನ್ನಮಣೆ ಆಟ ಆಡುವುದರ ಮೂಲಕ ಉದ್ಘಾಟಿಸಿದ ಸುಬ್ರಹ್ಮಣ್ಯದ ನಿವೃತ್ತ...

ಸುಳ್ಯ : 27ನೇ ವರ್ಷದ ಭಜನಾ ಕಮ್ಮಟದ ಪೂರ್ವಭಾವಿ ಸಭೆ

“ಭಜನಾ ಸಂಸ್ಕಾರ ಉಳಿಯಬೇಕು ಎಂಬುದು ಪೂಜ್ಯರ ಕನಸು” : ಸುಬ್ರಹ್ಮಣ್ಯ ಪ್ರಸಾದ್

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ 27ನೇ ವರ್ಷದ ಭಜನಾ ಕಮ್ಮಟದ ಪೂರ್ವಭಾವಿ ಸಭೆಯು ಸೋಮಶೇಖರ ಪೈಕ ಇವರ ಅಧ್ಯಕ್ಷತೆಯಲ್ಲಿ ಸುಳ್ಯ ಯೋಜನ ಕಛೇರಿಯ ಸಭಾಂಗಣದಲ್ಲಿ ನಡೆಯಿತು.ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಧರ್ಮಸ್ಥಳ ಇದರ ರಾಜ್ಯ ಸಂಚಾಲಕರಾದ ಸುಬ್ರಹ್ಮಣ್ಯ ಪ್ರಸಾದ್ ಇವರು ಕಾರ್ಯಕ್ರಮವನ್ನು...

ಗುತ್ತಿಗಾರು : ಆ.16 ರಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

(ವರದಿ : ಉಲ್ಲಾಸ್ ಕಜ್ಜೋಡಿ)ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್(ರಿ.) ಗುತ್ತಿಗಾರು, ಅಮರಸೇನಾ ರಕ್ತದಾನಿಗಳ ತಂಡ ಗುತ್ತಿಗಾರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ತಾಲೂಕು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು, ಗ್ರಾಮ ಪಂಚಾಯತ್ ಗುತ್ತಿಗಾರು, ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ, ಅಮರ...

ಮಡಪ್ಪಾಡಿ : ಶ್ರಮದಾನ

ಮಡಪ್ಪಾಡಿ ಯುವಕ ಮಂಡಲದ ವತಿಯಿಂದ ಪಾರೆಪ್ಪಾಡಿ, ಜೇಡಿಗುಂಡಿ, ಬಲ್ಕಜೆ, ಬಾಳಿಕಳ ಭಾಗದಲ್ಲಿ ವಿದ್ಯುತ್ ಲೈನ್ ಗೆ ತಾಗುವಂತಹ ಮರದ ಗೆಲ್ಲುಗಳನ್ನು ತೆರವುಗೊಳಿಸಲು ಶ್ರಮದಾನ ನಡೆಯಿತು. ಮೆಸ್ಕಾಂ ಸಿಬ್ಬಂದಿಗಳು ಸಹಕರಿಸಿದರು.

ಸುಳ್ಯ ನಗರದಲ್ಲಿ ರ‌್ಯಾಪಿಡ್ ಆ್ಯಕ್ಷನ್ ಪೋರ್ಸ್ ನಿಂದ ಪಥಸಂಚಲನ

https://youtu.be/m9eexYXsq44?si=GV3FLJ_lBZ65_Zyq ಸುಳ್ಯ ನಗರದಲ್ಲಿ ಹಳೆಗೇಟು ನಿಂದ ಗಾಂಧಿನಗರದವರೆಗೆ ರ‌್ಯಾಪಿಡ್ ಆ್ಯಕ್ಷನ್ ಪೋರ್ಸ್  (RAF) ಮತ್ತು ಸುಳ್ಯ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು. ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಭರವಸೆ ಮೂಡಿಸುವ ಸಲುವಾಗಿ ಈ ಪಥಸಂಚಲನ ನಡೆಯಿತು.

ಸಂಪಾಜೆ ಸೊಸೈಟಿ ಮಹಾಸಭೆ

ಶೇ.15 ಡಿವಿಡೆಂಡ್ ಘೋಷಣೆ

27 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.04 ರಂದು ಸಂಘದ ಸಂಘದ ಸಮನ್ವಯ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.‌ ಸಭೆಯಲ್ಲಿ ಮೊಳಹಳ್ಳಿ ಶಿವರಾಂರವರ ಜನ್ಮ ದಿನಾಚರಣೆ ಆಚರಿಸಿ ಪುಷ್ಪಾರ್ಚನೆ ಮಾಡಲಾಯಿತು.ಸಭೆಯಲ್ಲಿ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಕಲ್ಲುಗುಂಡಿ ಡಿ.ಸಿ.ಸಿ ಬ್ಯಾಂಕ್ ಮ್ಯಾನೇಜರ್ ಉಪಸ್ಥಿತರಿದ್ದರು.ಸಭೆಯಲ್ಲಿ ಮಾತನಾಡಿದ...

ಮಾನ್ಯ ಡೆವಲಪರ್ಸ್ ವತಿಯಿಂದ ದೇವ ಸ.ಕಿ.ಪ್ರಾ ಶಾಲೆ ಮತ್ತು ಅಂಗನವಾಡಿ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳ ವಿತರಣೆ

ದೇವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರ ಇದರ ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಮಾಡಲಾಯಿತು. ಪುಸ್ತಕವನ್ನು ಕೊಡುಗೆಯಾಗಿ ಸುಳ್ಯ ಮಾನ್ಯ ಡೆವಲಪರ್ಸ್  ಇದರ ಮಾಲಕರಾದ ಯತೀಶ್ ಗಟ್ಟಿಗಾರು ಮತ್ತು ಶ್ರೀಮತಿ ಮಣಿಶ್ರೀ ಇವರು ನೀಡಿದರು.ಈ ಸಂದರ್ಭದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಜಯಪ್ರಕಾಶ್ ಮುತ್ಲಾಜೆ, ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ವಲಯ ಒಕ್ಕೂಟಗಳ...
Loading posts...

All posts loaded

No more posts

error: Content is protected !!