Ad Widget

ಮರ್ಕಂಜ : ಪ್ರೌಢಶಾಲಾ ಎಸ್.ಡಿ.ಎಂ.ಸಿ ರಚನೆ

ಅಧ್ಯಕ್ಷರಾಗಿ ನಿತ್ಯಾನಂದ ಭೀಮಗುಳಿ

ಮರ್ಕಂಜ ಪ್ರೌಢಶಾಲಾ ಎಸ್.ಡಿ.ಎಂ.ಸಿ ಯು ಇತ್ತೀಚೆಗೆ ರಚನೆಗೊಂಡಿತು.ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ನಿತ್ಯಾನಂದ ಭೀಮಗುಳಿ ಹಾಗೂ ಸದಸ್ಯರುಗಳಾಗಿ ಮಹಾವೀರ ಇಂದ್ರ, ದಿನಕರ ಕಾಳಮ್ಮನೆ, ಕುಶಾಲಪ್ಪ ಕಬ್ಬಿನಡ್ಕ, ಹೇಮಾಕುಮಾರ್ ಕಂಜಿಪಿಲಿ, ದಿನೇಶ್ ಕುದ್ಕುಳಿ, ಸುಚೇತಾ ರೈ ಪಟ್ಟೆ, ಲಿಂಗಮ್ಮ ಪನ್ನೆ ಹಾಗೂ ವಿಶಾಲಾಕ್ಷಿ ದೇಶಕೋಡಿ ಆಯ್ಕೆಯಾದರು.ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ವೀಣಾ ಉಪಸ್ಥಿತರಿದ್ದರು.

ಗುತ್ತಿಗಾರು :  ಹಣದಾಸೆಗೆ ಹೂಡಿಕೆ ಮಾಡಿದ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ

ಹಣ ಠೇವಣಿ ಮಾಡಿದರೆ ಕಮಿಷನ್ ನೀಡುವುದಾಗಿ ನಂಬಿಸಿ ಸುಳ್ಯ ತಾಲೂಕಿನ ಗುತ್ತಿಗಾರಿನ 30 ವರ್ಷದ ಮಹಿಳೆಯಿಂದ ಲಕ್ಷಾಂತರ ರೂ ಪಡೆದುಕೊಂಡು ವಂಚಿಸಿದ ಬಗ್ಗೆ  ವರದಿಯಾಗಿದೆ.ಮಾರ್ಚ್ 19ರಂದು ಮಹಿಳೆಗೆ ಟೆಲಿಗ್ರಾಂ ಆ್ಯಪ್‌ನಿಂದ ಏರ್‌ಫಝ್ ಎಂಬ ಕಂಪೆನಿಯಲ್ಲಿ ಹೂಡಿಕೆ ಮಾಡಿದರೆ ಕಮಿಷನ್ ನೀಡುವುದಾಗಿ ತಿಳಿಸಿ ಲಿಂಕ್ ಕಳುಹಿಸಲಾಗಿತ್ತು. ಆ ಲಿಂಕನ್ನು ಒತ್ತಿದಾಗ ಅದರಲ್ಲಿ ಟೆಲಿಗ್ರಾಂ ಅಕೌಂಟ್ ತೆರೆದು ಲಾಗಿನ್...
Ad Widget

ಸುಬ್ರಹ್ಮಣ್ಯ : ಮರ ಬಿದ್ದು ಹಾನಿಯಾಗಿದ್ದ ವಿದ್ಯುತ್ ಲೈನ್ ದುರಸ್ತಿ

ಮಳೆಯ ನಡುವೆಯೇ ವಿದ್ಯುತ್ ಲೈನ್ ದುರಸ್ತಿಗೊಳಿಸಿದ ಮೆಸ್ಕಾಂ ಸಿಬ್ಬಂದಿಗಳ ಶ್ರಮಕ್ಕೆ ಶ್ಲಾಘನೆ

ಕುಕ್ಕೆ ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ಭಾನುವಾರ ಸಂಜೆ ಸಂಭವಿಸಿದ ಭಾರೀ ಗಾಳಿ ಮಳೆಗೆ ವಿದ್ಯುತ್ ಸಂಪರ್ಕ ತೊಂದರೆಗೆ ಒಳಗಾದ ಹಿನ್ನೆಲೆಯಲ್ಲಿ ಮೆಸ್ಕಾಂ ಸಿಬ್ಬಂದಿಗಳು ಭಾರೀ ಮಳೆಯ ನಡುವೆಯೇ ಪರಿಶ್ರಮದೊಂದಿಗೆ 11 ಕೆ.ವಿ. ವಿದ್ಯುತ್ ಲೈನ್‌ನ್ನು ದುರಸ್ತಿಪಡಿಸಿ, ಕುಕ್ಕೆ ಸೇರಿದಂತೆ ಹಲವು ಗ್ರಾಮೀಣ ಭಾಗಗಳಿಗೆ ಮತ್ತೆ ವಿದ್ಯುತ್ ಪೂರೈಕೆ ಮಾಡಲು ಯಶಸ್ವಿಯಾಗಿದ್ದಾರೆ.ಆದಿತ್ಯವಾರ ಸಂಜೆ 4 ಗಂಟೆ ಸುಮಾರಿಗೆ...

ಮಾತೃಭೂಮಿ ಯುವ ವೇದಿಕೆ (ರಿ.) ಮಾಣಿಲ ಸಂಘದ ವತಿಯಿಂದ ವನಮಹೋತ್ಸವ ಹಾಗೂ ಸ್ವಚ್ಛತಾ ಅಭಿಯಾನ

ಮಾತೃಭೂಮಿ ಯುವ ವೇದಿಕೆ(ರಿ.) ಮಾಣಿಲ ಸಂಘದ ವತಿಯಿಂದ ವನಮಹೋತ್ಸವ ಕಾರ್ಯಕ್ರಮದ ಜೊತೆಗೆ ಪರಿಸರ ಜಾಗೃತಿ ಹಾಗೂ ಸ್ವಚ್ಛತಾ ಅಭಿಯಾನವು ಸರಕಾರಿ ಪ್ರೌಢಶಾಲೆ ಮಾಣಿಲದಲ್ಲಿ ಯಶಸ್ವಿಯಾಗಿ ನಡೆಯಿತು.  ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಗಿಡಗಳ ವಿತರಣೆ ಮತ್ತು ನೆಡುವಿಕೆ ಗಣ್ಯರ ಸಮ್ಮುಖದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪರಿಸರದ ಜೀವಿಗಳ ಬದುಕಿನ ಬಗ್ಗೆ ಅದರಲ್ಲೂ ಮುಖ್ಯವಾಗಿ ಉರಗಗಳ(ಹಾವುಗಳ) ಗುಣಲಕ್ಷಣಗಳ ಕುರಿತು ವಿಶೇಷವಾಗಿ...

ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ರವರಿಗೆ ಸನ್ಮಾನ

ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘ(ರಿ.) ಬೆಂಗಳೂರು ಸುಳ್ಯ ತಾಲೂಕು ಇದರ ವತಿಯಿಂದ ಜು.05 ರಂದು ಪುತ್ತೂರು ಹಾಗೂ ಸುಳ್ಯ ತಾಲೂಕಿನಲ್ಲಿ ಸುಮಾರು 31 ವರ್ಷಗಳ ಕಾಲ ಅತಿಥಿ ಶಿಕ್ಷಕಿಯಾಗಿ, ಅಂತಿಮವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಜಡ್ಕ ಇಲ್ಲಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ...

ಪುತ್ತೂರು-ಪೆರ್ಲಂಪಾಡಿ-ಪೈಲಾರು ಬಸ್ಸಿನ ಮಾರ್ಗದ ವಿಸ್ತರಣೆ

ಎಲಿಮಲೆ : ಪೈಲಾರಿನಿಂದ ಪೆರ್ಲಂಪಾಡಿ ಮಾರ್ಗವಾಗಿ ಪುತ್ತೂರಿಗೆ ಸಂಚರಿಸುವ ಧರ್ಮಸ್ಥಳ ಡಿಪೋದ ಬಸ್ಸು ಈವರೆಗೆ ಪೈಲಾರಿನಲ್ಲಿ ರಾತ್ರಿ ತಂಗುತ್ತಿತ್ತು. ಪೈಲಾರು-ಎಲಿಮಲೆ ಮಧ್ಯೆ ಸೀಮಿತ ಸಾರಿಗೆ ವ್ಯವಸ್ಥೆ ಇರುವುದನ್ನು ಮನಗಂಡಂತಹ ಚೈತನ್ಯ ದೀಕ್ಷಿತ್ ಕೆಳಪಾರೆ ಮತ್ತು ಬೆಟ್ಟ ಜಯರಾಮ್ ಭಟ್ ಇವರುಗಳು ಸಂಬಂಧಪಟ್ಟ ಇಲಾಖೆಗಳನ್ನು ಸಂಪರ್ಕಿಸಿ ಬಸ್ ಸಂಚಾರದ ವಿಸ್ತರಣೆಯನ್ನು ಮಾಡಿಸಿರುತ್ತಾರೆ. ಜುಲೈ 2ರಂದು ಬಂದಂತಹ ಬಸ್ಸನ್ನು...

ಸುಬ್ರಹ್ಮಣ್ಯ : ಮರ ಬಿದ್ದು ನೆಲಕ್ಕುರುಳಿದ 11 ಕೆ.ವಿ ವಿದ್ಯುತ್ ಕಂಬಗಳು

ಸುಬ್ರಹ್ಮಣ್ಯ, ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರು, ಐನೆಕಿದು, ಕಲ್ಮಕಾರು ಭಾಗದಲ್ಲಿ ವಿದ್ಯುತ್ ವ್ಯತ್ಯಯ : ಮಾಹಿತಿ ನೀಡಿದ ಸುಬ್ರಹ್ಮಣ್ಯ ಮೆಸ್ಕಾಂ ಅಧಿಕಾರಿಗಳು

ಸುಬ್ರಹ್ಮಣ್ಯ ಕಾಶಿಕಟ್ಟೆ ಬಳಿಯಲ್ಲಿ ಇಂದು ಮರವೊಂದು ವಿದ್ಯುತ್ ಲೈನ್ ಮೇಲೆ ಬಿದ್ದಿದ್ದು, ಪರಿಣಾಮವಾಗಿ 11 ಕೆ.ವಿ ವಿದ್ಯುತ್ ಕಂಬಗಳು ನೆಲಕ್ಕುರುಳಿದ ಘಟನೆ ನಡೆದಿದೆ.11 ಕೆ.ವಿ ವಿದ್ಯುತ್ ಕಂಬಗಳು ನೆಲಕ್ಕುರುಳಿದ ಕಾರಣ ಸುಬ್ರಹ್ಮಣ್ಯ ಪೇಟೆ, ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರು, ಐನೆಕಿದು, ಕಲ್ಮಕಾರು ಸೇರಿದಂತೆ ಹಾಲೆಮಜಲು ವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಸುಬ್ರಹ್ಮಣ್ಯ ಮೆಸ್ಕಾಂ ನ ಅಧಿಕಾರಿಗಳು...

ಪುಸ್ತಕ ಪರಿಚಯ : ಉಲ್ಲಾಸ್ ಕಜ್ಜೋಡಿ ಯವರ “ಜೀವನಯಾನ” ಕವನ ಸಂಕಲನ

“ಜೀವನಯಾನ” ಕವನ ಸಂಕಲನದ ಮೂಲಕ ಸಾರಸ್ವತ ಲೋಕಕ್ಕೆ ಬರುತ್ತಿರುವ ‘ಉಲ್ಲಾಸ್ ಕಜ್ಜೋಡಿ’ ತುಂಬು ಜೀವನೋತ್ಸಾಹದ ಯುವಕ. ದಿವ್ಯಾಂಗಚೇತನರಾದ ಉಲ್ಲಾಸ್ ಈಗ ನಮಗೆಲ್ಲಾ ಆದರ್ಶವಾಗಿ ತಮ್ಮ ಸಂವೇದನಾಶೀಲ ಕವಿತೆಗಳ ಮೂಲಕ ಎಲ್ಲರನ್ನೂ ಎದುರಾಗಿದ್ದಾರೆ. “ಜೀವನಯಾನ” ಎಂಬ ಶೀರ್ಷಿಕೆಗೆ ತಕ್ಕಂತೆ ತನ್ನ ಜೀವನಪಯಣದ ತಲ್ಲಣಗಳನ್ನೇ ಕವಿತೆಗಳನ್ನಾಗಿಸಿ ನಮ್ಮನ್ನೆಲ್ಲ ಬೆರಗುಗೊಳಿಸಿದ್ದಾರೆ. “ಕ್ಷಣಿಕ ಬದುಕುವ ಹೂವಿಗಿರದ ಸ್ವಾರ್ಥ ಅದೆಷ್ಟೋ ವರ್ಷ ಬದುಕುವ...

ಎಸ್.ಕೆ.ಎಸ್.ಎಸ್.ಎಫ್ ವಿಖಾಯ ವತಿಯಿಂದ ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

ಸುಳ್ಯ ವಲಯ ಎಸ್.ಕೆ.ಎಸ್.ಎಸ್.ಎಫ್ ವಿಖಾಯ  ತಂಡದಿಂದ ಸುಳ್ಯ ಸಾರ್ವಜನಿಕ ಆಸ್ಪತ್ರೆಯ ಸುತ್ತಲೂ ಸ್ವಚತೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ  ಸುಳ್ಯ ತಾಲೂಕು ವೈದ್ಯಾಧಿಕಾರಿ ಡಾ.ಕರುಣಾಕರ,ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಶಾಹಿದ್ ಪಾರೆ,ಚಂದ್ರನ್ ಕೂಟೀಲು ಇದ್ದರು. ಸ್ವಚ್ಛತೆಯಲ್ಲಿ ಸುಳ್ಯ ವಿಜಲೆಂಟ್ ವಿಖಾಯ ಹಾಗೂ  ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಅಧ್ಯಕ್ಷರಾದ ಅಬೂಬಕ್ಕರ್ ಪೂಪಿವಿಖಾಯ ಅಧ್ಯಕ್ಷರಾದ...

ಚಂದನ ಸಾಹಿತ್ಯ ವೇದಿಕೆಯ ವತಿಯಿಂದ ಹಾಸ್ಯ ಕವನ ಸ್ಪರ್ಧೆ

ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಹಾಸ್ಯ ಕವನ ಸ್ಪರ್ಧೆಯು ಇತ್ತೀಚೆಗೆ ಜರುಗಿತು. ಈ ಹಾಸ್ಯ ಕವನ ಸ್ಪರ್ಧೆಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಶ್ರೀ ನಾರಾಯಣ ರೈ ಕುಕ್ಕುವಳ್ಳಿ ಆವರು ವಹಿಸಿದ್ದರು. ಹಾಸ್ಯ ಕವನ ಸ್ಪರ್ಧೆಯಲ್ಲಿ ಜ್ಯೋತಿಭಾ ಚಿಲ್ಲಣ್ಣವರ್ ಅವರ ಕಕ್ಕಾಬಿಕ್ಕಿ ಕವಿತೆ, ಅಪ್ಪಯ್ಯ ಯಾದವ್ ಬೆಂಗಳೂರು ಅವರ ಕಣ್ಣಿಲ್ಲದ ಕನ್ಯೆ, ಕೆ. ಎ. ಅಬ್ದುಲ್...
Loading posts...

All posts loaded

No more posts

error: Content is protected !!