- Tuesday
- March 10th, 2026
ಎಸ್.ಕೆ.ಎಸ್.ಎಸ್.ಎಫ್. ಕಲ್ಲುಗುಂಡಿ ಶಾಖೆಯ ವತಿಯಿಂದ ಕಲ್ಲುಗುಂಡಿ ಪೇಟೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ. ಎಂ.ಶಹಿದ್ ತೆಕ್ಕಿಲ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಕೆ ಹನೀಫ್ ಮಾಜಿ ಅಧ್ಯಕ್ಷರಾದ ಜಿ ಕೆ. ಹಮೀದ್ ಗೂನಡ್ಕ, ಜಗದೀಶ್ ರೈ,...
ಬರಹಗಾರರು ಹಾಗೂ ಅಮರ ಸುದ್ದಿ ವಾರಪತ್ರಿಕೆಯ ವರದಿಗಾರರಾದ ಉಲ್ಲಾಸ್ ಕಜ್ಜೋಡಿ ರವರ ಚೊಚ್ಚಲ ಕೃತಿ “ಜೀವನಯಾನ” ಕವನ ಸಂಕಲನದ ಗೌರವ ಪ್ರತಿಯನ್ನು ಆಗಸ್ಟ್ 02 ರಂದು ಸುಳ್ಯದ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ನಡೆದ “ಸಿಂಧೂರ ವಿಜಯ” ಸಂವಾದ ಕಾರ್ಯಕ್ರಮದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರಿಗೆ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದ...
ಸುಬ್ರಹ್ಮಣ್ಯ : ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಸುಬ್ರಹ್ಮಣ್ಯ ಇದರ 2025ನೇ ಸಾಲಿನ ನೂತನ ಅಧ್ಯಕ್ಷರಾಗಿ ಶೀಲಾ ಗಣೇಶ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಸುಭಾಷಿಣಿ ಶಿವರಾಮ್ ಮತ್ತು ಕೋಶಾಧಿಕಾರಿಯಾಗಿ ತ್ರಿವೇಣಿ ದಾಮ್ಲೆ ನೇಮಕಗೊಂಡಿದ್ದಾರೆ. 2024ನೇ ಸಾಲಿನ ಸಮಿತಿ ಅಧ್ಯಕ್ಷೆ ಪೂಜಾ ಕಲ್ಲೂರಾಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಳಿದಂತೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಾರದಾ...
ಸ್ಥಳೀಯ ದೇಸಿ ಹಸುಗಳು ಮತ್ತು ಗೋಪಾಲಕ ಸಮುದಾಯಕ್ಕೆ ಬೆಂಬಲವಾಗಿ ಸ್ಥಾನೀಯ ದೇಶಿ ಹಸುಗಳನ್ನು ಸಾಕುವವರು ಮತ್ತು ಸಂರಕ್ಷಕರಿಗೆ ಗೋಪಾಲ್ಸ್ ಸಂಸ್ಥೆಯವರು ನೀಡುವ ರಾಷ್ಟ್ರಮಟ್ಟದ ಗೋಪಾಲ್ಸ್ ಪ್ರಶಸ್ತಿಯನ್ನು ಪ್ರವೀಣ್ ಬೆಳ್ಳಾರೆ ಅವರಿಗೆ ಬೆಂಗಳೂರಿನ ಮಲ್ಲೇಶ್ವರಂ ಚೌಡಯ್ಯ ಸ್ಮಾರಕ ಭವನ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳ ತಲಾ ಇಬ್ಬರು...
ಸುಳ್ಯ : ಗೌಡರ ಯುವ ಸೇವಾ ಸಂಘ, ಮಹಿಳಾ ಘಟಕ ಮತ್ತು ತರುಣ ಘಟಕ ಇವರ ಸಹಯೋಗದೊಂದಿಗೆ ಸುಳ್ಯ ನಗರ ಗೌಡ ಸಮಿತಿ, ಮಹಿಳಾ ಘಟಕ, ತರುಣ ಘಟಕಗಳ ನೇತೃತ್ವದಲ್ಲಿ 13ನೇ ವರ್ಷದ ಆಟಿಯ ಸಂಭ್ರಮ ಆಗಸ್ಟ್ 3 ರಂದು ಗೌಡ ಸಮುದಾಯ ಭವನ ಕೊಡಿಯಾಲಬೈಲು ನಲ್ಲಿ ನಡೆಯಿತು.ಸಮಾರಂಭ ಅಧ್ಯಕ್ಷತೆಯನ್ನು ಗೌಡರ ಯುವ ಸೇವಾ ಸಂಘದ...
ಭಕ್ತಿಗೀತೆಗಳ ಲೋಕಕ್ಕೆ ಮತ್ತೊಂದು ಭಕ್ತಿಯ ಮಧುರ ಗೀತೆ ಇಂದು ಸೇರ್ಪಡೆಯಾಗಿದೆ. ಫೆ.02ರಂದು ಮಂಗಳೂರಿನ ಶ್ರೀ ನವದುರ್ಗಾ ಮಂತ್ರಾಮೂರ್ತಿ ಕ್ಷೇತ್ರದಲ್ಲಿ ಕ್ಷೇತ್ರದ ತಂತ್ರಿಗಳಾದ ಕೆ.ಯೋಗೀಶ್ ಭಟ್ ಚಿಂತನೆಯಲ್ಲಿ ಬಿಡುಗಡೆಗೊಳಿಸಿದರು. ಕುಣಿತ ಭಜನೆ ಹಾಗೂ ಭಜಕರಿಗಾಗಿಯೇ ಭಕ್ತಿಪದ ಬಿಡುಗಡೆಗೊಂಡಿದೆ. ಈ ಸಂದರ್ಭದಲ್ಲಿ ಬಹರೇನ್ ನಿಂದ ಆಗಮಿಸಿದ ನವೀನ್ ಮಾವಜಿ ಹಾಗೂ ಹನುಮಾನ್ ಭಟ್, ರಾಜೇಂದ್ರ ಮಂಗಳೂರು, ಪ್ರಗತ್ ಪುತ್ತೂರು...
ಕುಶಾಲನಗರದ ಆನೆಕಾಡು ಸಮೀಪ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ನಡೆದು ಬೈಕ್ ಸವಾರ ಪೆರುವಾಜೆಯ ಕಾರ್ತಿಕ್ ಭಟ್ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಅವಿವಾಹಿತರಾಗಿದ್ದ ಅವರು ಮೈಸೂರಿನ ಇನ್ಫೋಸಿಸ್ ಉದ್ಯೋಗಿಯಾಗಿದ್ದು, ಅರ್ನಾಡಿ ವಿಷ್ಣು ಭಟ್ ರವರ ಪುತ್ರ. ಮಡಿಕೇರಿಯಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಕಾರು ಚಾಲಕ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಬೈಕ್...
ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲ್ಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ಅರಂತೋಡು ಮತ್ತು ದುರ್ಗಾಮಾತಾ ಸಂಜೀವಿನಿ ಒಕ್ಕೂಟ ಅರಂತೋಡು ಇವುಗಳ ಸಂಯುಕ್ತ ಆಶ್ರಯದಲ್ಲಿ ಅರಂತೋಡು ಗ್ರಾಮ ಪಂಚಾಯತ್ ವಠಾರದಲ್ಲಿ ಸಂಜೀವಿನಿ ಮಾಸಿಕ ಸಂತೆ ನಡೆಯಿತು. ಸಭಾ...
ಸುಬ್ರಹ್ಮಣ್ಯ : ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಸುಳ್ಯ ಹಾಗೂ ಸುಬ್ರಹ್ಮಣ್ಯ ಉಪ ವಿಭಾಗ ಮಟ್ಟದ ಜನಸಂಪರ್ಕ ಸಭೆಯು ಆಗಸ್ಟ್ 07 ಗುರುವಾರದಂದು ಸುಬ್ರಹ್ಮಣ್ಯ ಉಪ ವಿಭಾಗ ಕಚೇರಿಯಲ್ಲಿ ಜರಗಲಿರುವುದು. ಮಂಗಳೂರು ಮೆಸ್ಕಾಂ ಕಾರ್ಪೊರೇಟ್ ಕಚೇರಿಯ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ ಅವರು ಅಧ್ಯಕ್ಷತೆ ವಹಿಸಲಿರುವರು.ಗ್ರಾಹಕರು ತಮ್ಮ ಕುಂದು ಕೊರತೆಗಳನ್ನು ದೂರವಾಣಿ ಕರೆ ಸಂಖ್ಯೆ(08257-200699) ಮೂಲಕ ಸಲ್ಲಿಸಬಹುದೆಂದು...
Loading posts...
All posts loaded
No more posts
