- Sunday
- September 20th, 2026
ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವು ನ.16 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಲಿದ್ದು, ಸಮ್ಮೇಳನದ ಅಂಗವಾಗಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನ.09 ರಂದು ವಳಲಂಬೆ ದೇವಸ್ಥಾನದ ವಠಾರದಲ್ಲಿ ವಿವಿಧ ರೀತಿಯ ಸ್ಪರ್ಧೆಗಳು ನಡೆಯಲಿವೆ.ಪ್ರಾಥಮಿಕ ಶಾಲಾ ವಿಭಾಗ : ಕನ್ನಡ ಗೀತೆ ಗಾಯನ, ಕವಿ-ಸಾಹಿತಿಗಳ ಹೆಸರುಗಳನ್ನು ಬರೆಯುವುದು, ರಾಷ್ಟ್ರಧ್ವಜದ ಚಿತ್ರ...
ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ, ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ “ಚಂಪಾಷಷ್ಠಿ ಮಹೋತ್ಸವ”ವು ಸಮೀಪಿಸುತ್ತಿದ್ದು, ನವೆಂಬರ್ 16 ಆದಿತ್ಯವಾರದಂದು ಕೊಪ್ಪರಿಗೆ ಏರುವುದು, ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ, ನ.17 ಸೋಮವಾರದಂದು ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ, ನ.18 ಮಂಗಳವಾರದಂದು ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ, ನ.19 ಬುಧವಾರದಂದು...
ಸುಬ್ರಹ್ಮಣ್ಯ : ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಎಳೆಯುವ ರಥಗಳಿಗೆ ಗೂಟ ಪೂಜಾ ಮುಹೂರ್ತ ನ.06 ಬುಧವಾರದಂದು ನೆರವೇರಿತು. ಶ್ರೀ ದೇಗುಲದಲ್ಲಿ ಪೂಜೆ ನೆರವೇರಿದ ಬಳಿಕ ಜಾತ್ರಾ ಸಮಯದಲ್ಲಿ ಎಳೆಯುವ ಬ್ರಹ್ಮರಥ ಮತ್ತು ಪಂಚಮಿ ರಥಗಳನ್ನು ನಿರ್ಮಿಸಲು ಕಾರ್ತಿಕ ಹುಣ್ಣಿಮೆಯ...
ಬೆಳ್ಳಾರೆ ಗ್ರಾಮದ ಆದಿನಾಗ ಬ್ರಹ್ಮಮೊಗೇರ್ಕಳ ಗರಡಿಯಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ನ.05 ರಂದು ನಡೆಯಿತು.ಹಲವಾರು ಭಕ್ತಾಭಿಮಾನಿಗಳು ದೀಪಗಳನ್ನು ಬೆಳಗಿಸಿ ಕಣ್ಣು ತುಂಬಿಕೊಂಡರು.ಈ ಕ್ಷೇತ್ರದ ಕಾರಣಿಕ ಶಕ್ತಿಗಳಾದ ಗುಳಿಗ ದೈವ, ಪಂಜುರ್ಲಿ, ಕೊರಗಜ್ಜ ದೈವ ಮತ್ತು ಮೊಗೇರ್ಕಳ ದೈವಗಳಿಗೆ ದೀಪಾವಳಿ ತಂಬಿಲ ಸೇವೆಯು ನಡೆಯಿತು.ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಘಟಕ ಇದರ ಆಶ್ರಯದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆಯುವ “ಕನ್ನಡ ನಾಡು-ನುಡಿ ಕಲರವ ಸಾಹಿತ್ಯ ಸಂಭ್ರಮ-2025” ಕಾರ್ಯಕ್ರಮವು ವಿವಿಧ ಕಡೆಗಳಲ್ಲಿ ನಡೆಯುತ್ತಿದೆ.ಕನ್ನಡ ಸಾಹಿತ್ಯ ಪರಿಷತ್ತು ಪಂಜ ಹೋಬಳಿ ಘಟಕ ಹಾಗೂ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಪಿ.ಎಂ.ಶ್ರೀ ಮಾದರಿ ಹಿರಿಯ...
ಮಾತಿನಿಂದಲೇ ಗೆಲ್ಲಬಹುದು ಮನವ, ಆ ಮಾತಿನಿಂದಲೇ ಕೊಲ್ಲಬಹುದು ಮನವ...ಮಾತಿನಿಂದಲೇ ತರಿಸಬಹುದು ನಗುವ, ಆ ಮಾತಿನಿಂದಲೇ ನೀಡಬಹುದು ನೋವ...ಮಾತಿನಿಂದಲೇ ಉಳಿಸಬಹುದು ಸಂಬಂಧವ, ಆ ಮಾತಿನಿಂದಲೇ ಅಳಿಸಬಹುದು ಅನುಬಂಧವ...ಮಾತಿನಿಂದಲೇ ಕಲಿಸಬಹುದು ಒಳ್ಳೆಯ ಗುಣವ, ಆ ಮಾತಿನಿಂದಲೇ ತುಂಬಬಹುದು ಇತರರ ಮನದಲ್ಲಿ ವಿಷವ...ಎಲುಬಿಲ್ಲದ ನಾಲಿಗೆಯಿದು ನಮ್ಮಿಚ್ಛೆಯಂತೆ ಆಡುವುದು, ಒಳಿತು-ಕೆಡುಕು ನಮ್ಮಿಚ್ಛೆಯಲ್ಲೇ ಇರುವುದು, ನಾವಾಡಿಸಿದಂತೆ ನಮ್ಮ ನಾಲಿಗೆಯು ಆಡುವುದು, ಅಳಿವು-ಉಳಿವು ಎಲ್ಲವೂ...
ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ರೋಟರಿ ವಿದ್ಯಾಸಂಸ್ಥೆ ಮಿತ್ತಡ್ಕ ಸುಳ್ಯ ಇದರ ಆಶ್ರಯದಲ್ಲಿ ನ.03 ಮತ್ತು 04ರಂದು ನಡೆದ ಸುಳ್ಯ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ 14ರ ವಯೋಮಾನದ ಬಾಲಕರ ಹಾಗೂ ಬಾಲಕಿಯರ ವಿಭಾಗದ ತಂಡ ಪ್ರಶಸ್ತಿ ಹಾಗೂ ಶಾಲಾ ಸಮಗ್ರ ಪ್ರಶಸ್ತಿಯನ್ನು ಸುಳ್ಯದ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಶಾಲೆ ಪಡೆದುಕೊಂಡಿದೆ. ಚಂದನ್ 8ನೇ ತರಗತಿ 80...
ಬೆಳ್ಳಾರೆ ಗ್ರಾಮ ಪಂಚಾಯತ್ ಕಾರ್ಯಾಲಯದ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಒಂದು ಕೋಟಿ ಅನುದಾನ ಬಿಡುಗಡೆಗೊಳಿಸಬೇಕೆಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆಯವರಿಗೆ ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಹೆಚ್.ಎಂ.ಹಮೀದ್ ಬೆಳ್ಳಾರೆಯವರು ಮನವಿ ಸಲ್ಲಿಸಿದ್ದಾರೆ.
ಸುಬ್ರಹ್ಮಣ್ಯ ನ.05 : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೆ ಚಂಪಾಷಷ್ಠಿ ಮಹೋತ್ಸವ ರಥೋತ್ಸವ ಪೂರ್ವಭಾವಿ ಸಭೆ ಬುಧವಾರ ದೇವಸ್ಥಾನದ ಆಡಳಿತ ಕಚೇರಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ದರ್ಶನ್.ಹೆಚ್.ವಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಚಂಪಾಷಷ್ಠಿ ಮಹೋತ್ಸವದ ಬಗ್ಗೆ ಚರ್ಚೆ ನಡೆಯಿತು. ಜಿಲ್ಲಾಧಿಕಾರಿಗಳಾದ ದರ್ಶನ್ ಮಾತನಾಡಿ “ಬ್ರಹ್ಮರಥೋತ್ಸವ ಎಳೆಯುವ ವೇಳೆ ಯಾವುದೇ ಗೊಂದಲ ಉಂಟಾಗದಂತೆ...
ಕಡಬ ತಾಲೂಕಿನ ಕುಲ್ಕುಂದ ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನ.05 ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಿಂದ ಗೋವುಗಳನ್ನು ಕರೆತಂದು “ಗೋಪೂಜೆ ಮತ್ತು ಗೋಗ್ರಾಸ ಅರ್ಪಣೆ” ಹಾಗೂ ಶ್ರೀ ಕ್ಷೇತ್ರ ಬಸವನಮೂಲದಲ್ಲಿ ನಡೆಯುತ್ತಿದ್ದ “ಗೋಜಾತ್ರೆಯ ಸಾಂಕೇತಿಕ ಆಚರಣೆ” ನಡೆಯಿತು.ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶ್ ಇಂಜಾಡಿ ಹಾಗೂ ವ್ಯವಸ್ಥಾಪನಾ...
Loading posts...
All posts loaded
No more posts
