- Friday
- June 19th, 2026
ಕಾಲವದು ತಲೆಕೆಳಗಾಗಿದೆ, ಚಳಿಗಾಲ ಮಳೆಗಾಲವಾಗಿದೆ...ದೀಪಾವಳಿ ಹಬ್ಬವು ಕಳೆದಿತ್ತು, ಇನ್ನೇನು ಚಳಿಗಾಲ ಶುರುವಾಗಲೆಬೇಕಿತ್ತು, ಆದರೆ ಮಳೆಗಾಲ ಹೊರಟು ಹೋಗಲು ಒಲ್ಲೇ ಎನ್ನುತ್ತಿತ್ತು, ಚಳಿಗಾಲವದು ಯಾಕೋ ದೂರವೇ ಉಳಿದಿತ್ತು...ಸಮಯವದು ಸೂತ್ರವ ತಪ್ಪಿದೆ, ಕಾಲವದು ತಲೆಕೆಳಗಾಗಿದೆ...ಮನುಷ್ಯನ ಬದುಕಿನ ದುರಾಸೆಯು ಈಗ ಮಿತಿಯನ್ನು ಮೀರಿದೆ, ಪರಿಸರದ ನಿಯಮವ ಮೀರಿ ಮನುಜನ ಯೋಚನೆಯು ಸಾಗಿದೆ, ದೂರಾಲೋಚನೆಯು ಸಾಗಿದೆ...ಕಾಲ-ಕಾಲಕ್ಕೆ ಮಳೆ-ಬೆಳೆಯಾಗುವ ಕಾಲವು ಇಂದು ಕಾಣೆಯಾಗಿದೆ,...
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ಆರಂಭವಾಗಲಿರುವ ಸಂಸ್ಕಾರ ಅಧ್ಯಯನ ಕಾರ್ಯಕ್ರಮವನ್ನು ಶ್ರೀಕೃಷ್ಣ ವೈಲಾಯ ಉದ್ಘಾಟನೆ ಮಾಡಿದರು.ಸಭಾಧ್ಯಕ್ಷತೆಯನ್ನು ಶ್ರೀಮುಖ ಪ್ರತಿಷ್ಠಾನ ಅಧ್ಯಕ್ಷ ಉದಯ ಶಂಕರ್ ಅಡ್ಕ ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್, ಪಂಜ ವನಿತಾ ಸಮಾಜದ ಅಧ್ಯಕ್ಷೆ ಶ್ರೀಮತಿ ಸುಮಾ ಕುದ್ವ, ಪಂಜ...
ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಯುವಕ ಮಂಡಲ(ರಿ.) ಮಡಪ್ಪಾಡಿ ಇದರ ಆಶ್ರಯದಲ್ಲಿ "ಪಂಚಸಪ್ತತಿ ಸ್ವಚ್ಛತಾ ಅಭಿಯಾನ-2025(75 ದಿನಗಳ ಸ್ವಚ್ಛತಾ ಅಭಿಯಾನ)" ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ನಾಲ್ಕನೇ ಸ್ವಚ್ಛತಾ ಕಾರ್ಯಕ್ರಮದಲ್ಲಿ, ಇವತ್ತು ದಿನಾಂಕ 24/10/25ರ ಶುಕ್ರವಾರದಂದು ರಾತ್ರಿ ಗಂಟೆ 7.30ರಿಂದ ಮಡಪ್ಪಾಡಿಯ "ರಾತ್ರಿ ನಿಲುಗಡೆ ಬಸ್" ನ್ನು ಸ್ವಚ್ಛಗೊಳಿಸಲಾಯಿತು.ಬಸ್ಸನ್ನು ತೊಳೆದು, ಶುಚಿಗೊಳಿಸಿ, ಅಲಂಕರಿಸಿ ವಿಭಿನ್ನ ರೀತಿಯಲ್ಲಿ...
ಸುಬ್ರಹ್ಮಣ್ಯ ಅಕ್ಟೋಬರ್ 24 : ಸುಬ್ರಹ್ಮಣ್ಯದ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್, ರೋಟರಿ ಕ್ಲಬ್ ಸುಬ್ರಹ್ಮಣ್ಯ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಹ್ಮಣ್ಯ ಲೀಜನ್ ವತಿಯಿಂದ ಖ್ಯಾತ ಉದ್ಯಮಿ, ಸಮಾಜಸೇವಕ, ಚಲನಚಿತ್ರ ನಟ, ನಿರ್ಮಾಪಕ, ಅಖಿಲ ಭಾರತ ಬಿಲ್ಲವ ಮಹಾಮಂಡಲದ ಮುಲ್ಕಿಯ ಅಧ್ಯಕ್ಷ ಡಾ.ರಾಜಶೇಖರ ಕೋಟ್ಯಾನ್ ಅವರನ್ನು ಸುಬ್ರಹ್ಮಣ್ಯದ ದೋಣಿಮಕ್ಕಿ ಕುಕ್ಕೆ ಶ್ರೀ ನಿಲಯದ ...
ಕಸ ಎಸೆದವರ ಬೆಂಬೆತ್ತಿ ಜಾಗೃತಿ…!
ಕುಕ್ಕೆ ಸುಬ್ರಹ್ಮಣ್ಯ : ಕುಮಾರಧಾರೆಗೆ ತ್ಯಾಜ್ಯ ಎಸೆದ ಬೆಂಗಳೂರಿನ ಪ್ರವಾಸಿಗರಿಗೆ ದಂಡ
ಸುಬ್ರಹ್ಮಣ್ಯ ಅ.23 : ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿಗೆ ತ್ಯಾಜ್ಯ ಎಸೆದು ಯಾರೂ ನೋಡಿಲ್ಲವೆಂದು ಭಾವಿಸಿಕೊಂಡು ತೆರಳಿದ ಪ್ರವಾಸಿಗರ ಬೆನ್ನುಹಿಡಿದು ಬೆಂಗಳೂರಿನಲ್ಲಿ ಪತ್ತೆಹಚ್ಚಿ ಅವರಿಂದ ದಂಡ ವಸೂಲಿ ಮಾಡಿ ಜಾಗೃತಿ ಮೂಡಿಸಿದ ಘಟನೆ ಸುಬ್ರಹ್ಮಣ್ಯದಲ್ಲಿ ಗುರುವಾರ ನಡೆದಿದೆ.ಕುಕ್ಕೆಗೆ ಬಂದಿದ್ದ ಯಾತ್ರಿಕರು ಅ.23ರಂದು ಬೆಳಿಗ್ಗೆ ಕಾರಿನಲ್ಲಿ ಮರಳಿ ಹೋಗುವಾಗ ತ್ಯಾಜ್ಯದ ಕಟ್ಟೊಂದನ್ನು ನದಿಗೆ ಎಸೆದು ಹೋಗಿದ್ದರು. ಇದನ್ನು...
ಕಳೆದ ಮೂರು ವರುಷಗಳಿಂದ “ಕಮರಿದ ಕನಸು-ಮಿಡಿಯುವ ಮನಸ್ಸು” ಎಂಬ ಧ್ಯೇಯದೊಂದಿಗೆ ನವರಾತ್ರಿಯ ಒಂದು ದಿನ ವೇಷ ಧರಿಸಿ ಸಂಗ್ರಹಿಸಿದ ಧನವನ್ನು ಬಡ ಅಶಕ್ತ ಕುಟುಂಬಗಳಿಗೆ ನೀಡುತ್ತಾ ಬಂದಿರುವ ಫ್ರೆಂಡ್ಸ್ ಬೆಳ್ಳಾರೆ ತಂಡವು ಈ ವರುಷ ಕಣ್ಣಿನ ಚಿಕಿತ್ಸೆಗಾಗಿ ಬೆಳ್ಳಾರೆ ಗ್ರಾಮದ ದರ್ಖಾಸ್ತು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಬಡ ಅಶಕ್ತ ಕುಟುಂಬವೊಂದಕ್ಕೆ ನೀಡಿರುತ್ತದೆ.ತಾಯಿ ಮತ್ತು ಇಬ್ಬರು...
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಳಲಂಬೆಯಲ್ಲಿ ನವೆಂಬರ್ ತಿಂಗಳಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪಂಜ ಹೋಬಳಿ ಘಟಕ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ “ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ” ನಡೆಯಲಿದ್ದು, ಇದರ ಸಂಘಟನಾ ಸಮಿತಿ ಹಾಗೂ ಉಪಸಮಿತಿಗಳ ರಚನೆಯು ಇತ್ತೀಚೆಗೆ ನಡೆಯಿತು.ಸಂಘಟನಾ...
ಜವಾಹರ್ ಯುವಕ ಮಂಡಲ(ರಿ.) ನಡುಗಲ್ಲು, ಇದರ ವತಿಯಿಂದ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿನ ಕ್ರೀಡಾ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಯುವಕ ಮಂಡಲ ವತಿಯಿಂದ ಕೊಡುಗೆಯಾಗಿ ನೀಡಲಾಯಿತು.ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದವನಜಾಕ್ಷಿ ಮುತ್ಲಾಜೆ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಿವರಾಮ ಉತ್ರಂಬೆ, ಯುವಕ ಮಂಡಲದ ಅಧ್ಯಕ್ಷರಾದ ಕುಶನ್ ಉತ್ರಂಬೆ ಹಾಗೂ ಯುವಕ ಮಂಡಲದ ಪದಾಧಿಕಾರಿಗಳು, ಶಾಲಾಭಿವೃದ್ಧಿ ಸಮಿತಿಯ...
16 ವರ್ಷದ ವಯೋಮಾನದ ವಿಭಾಗ ದಲ್ಲಿ ಕ್ಯಾಲ್ಕುಲೇಟರ್ನಲ್ಲಿ 1 ರಿಂದ 10 ರ ವರೆಗೆ 10 ಬಾರಿ 42 ಸೆಕೆಂಡ್ಸ್ ಗಳಲ್ಲಿ ಅತೀ ವೇಗವಾಗಿ ಬಳಸಿ ಬುಕ್ಸ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲೆ ಯ ಸಾಧನೆ ಮಾಡಿದ ಕೇರಳ ದ ಅಂತಾರಾಷ್ಟ್ರೀಯ ಶೈಕ್ಷಣಿಕ ಕೇಂದ್ರ ಪುನೂರ್ ಗಾರ್ಡನ್ ನ ವಿದ್ಯಾರ್ಥಿ ಸುಳ್ಯ ಜಟ್ಟಿಪ್ಪಳ್ಳ ನಿವಾಸಿ...
Loading posts...
All posts loaded
No more posts
